The Public Spot
ದೇಶ-ವಿದೇಶ

ತಮಿಳುನಾಡಿನಲ್ಲಿ 23ಕ್ಕೂ ಹೆಚ್ಚು ಬಲಿ ಪಡೆದ ಪಟಾಕಿ ಫ್ಯಾಕ್ಟರಿ..

ತಮಿಳುನಾಡಿನ ವಿರುಧುನಗರ ಜಿಲ್ಲೆಯಲ್ಲಿ ಪಟಾಕಿ ದುರಂತವೊಂದು ನಡೆದಿದೆ. ಪಟಾಕಿ ಉತ್ಪಾದನಾ ಘಟಕದಲ್ಲಿ ಸ್ಫೋಟ ಸಂಭವಿಸಿ ಬರೋಬ್ಬರಿ 23ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಮಡಿದ್ದಾರೆ. ಕತ್ತನಾರಪಟ್ಟಿ ಪ್ರದೇಶದಲ್ಲಿರುವ ಪಟಾಕಿ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಸುತ್ತಮುತ್ತಲ ನಾಲ್ಕು ಘಟಕಗಳಿಗೂ ಕ್ಷಣಾರ್ಧದಲ್ಲಿ ಬೆಂಕಿ ಆವರಿಸಿಕೊಂಡಿದೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ಕೆನ್ನಾಲಿಗೆಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಲು ಹರಸಾಹಸ ಮಾಡಿದರು. ಅದೇ ಸಮಯದಲ್ಲಿ ದುರಾದೃಷ್ಟವಶಾತ್​ ಘಟನೆ ನಡೆದಿದ್ದು, ಮತ್ತೊಮ್ಮೆ ಸ್ಫೋಟ ಸಂಭವಿಸಿದ್ದು, ರಕ್ಷಣೆಗೆ ಬಂದವರೂ ಅಪಘಾತಕ್ಕೆ ಸಿಲುಕಿದ್ದಾರೆ.

ಪಟಾಕಿ ಫ್ಯಾಕ್ಟರಿ ಸ್ಫೋಟದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ರವಾನೆ ಮಾಡಲಾಗಿದ್ದು, 20ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅದರಲ್ಲಿ 13ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಟಾಕಿ ಉತ್ಪಾದಕ ಘಟಕದ ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ತಯಾರಿಕೆ ಸಮಯದಲ್ಲಿ ಸುರಕ್ಷತಾ ಮಾನದಂಡಗಳನ್ನ ಪಾಲಿಸಿಲ್ಲ ಅಂತ ಹೇಳಲಾಗ್ತಿದೆ. ದುರಂತದಲ್ಲಿ ಸಾವನ್ನಪ್ಪಿರುವ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಸಾಂತ್ವನ ಹೇಳಿದ್ದಾರೆ.

ತಮಿಳುನಾಡಿನಲ್ಲಿ 2010 ರಿಂದ 2020ರ ನಡುವೆ ಸುಮಾರು 140ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಅಪಘಾತಗಳು ಸಂಭವಿಸಿದ್ದು, 230ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ. 2012ರಲ್ಲಿ ತಮಿಳುನಾಡಿನ ಶಿವಕಾಶಿಯ ಓಂ ಶಕ್ತಿ ಫೈರ್‌ವರ್ಕ್ಸ್‌ನಲ್ಲಿ ಸ್ಫೋಟ ಸಂಭವಿಸಿ, ಬರೋಬ್ಬರಿ 40 ಕಾರ್ಮಿಕರು ಸಜೀವ ದಹನ ಆಗಿದ್ದರು. 70ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದರು. ಅದೇ ರೀತಿ 1991ರಲ್ಲೂ ಶಿವಕಾಶಿಯಲ್ಲಿ 39 ಮಂದಿ ಸಾವು ಸಂಭವಿಸಿತ್ತು. ಹಲವರು ಗಾಯಗೊಂಡಿದ್ದರು. 2009ರಲ್ಲೂ ಶಿವಕಾಶಿಯ ಶ್ರೀ ಕೃಷ್ಣ ಫೈರ್‌ವರ್ಕ್ಸ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು 40 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದರು.

2021ರಲ್ಲಿ ತಮಿಳುನಾಡಿನ ಅಚಂಕುಲಂನಲ್ಲಿ ಸಂಭವಿಸಿದ ಪಟಾಕಿ ದುರಂತದಲ್ಲಿ 19 ಮಂದಿ ಸಜೀವ ದಹನ ಆಗಿದ್ದರು. 2023ರ ಅಕ್ಟೋಬರ್ 7ರಂದು ಬೆಂಗಳೂರು ಹೊರವಲಯ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿಗೆ ಬೆಂಕಿ ತಗುಲಿ 17 ಕಾರ್ಮಿಕರು ಸಾವನ್ನಪ್ಪಿದ್ದರು. ಇದಿಗ ತಮಿಳುನಾಡಿನ ವಿರುಧುನಗರ ಜಿಲ್ಲೆಯಲ್ಲಿ ಪಟಾಕಿ ದುರಂತ ಸಂಭವಿಸಿದೆ. 2 ಭಾರಿ ಸ್ಫೋಟ ಸಂಭವಿಸಿ 23ಕ್ಕೂ ಹೆಚ್ಚು ಮಂದಿಯ ದುರ್ಮರಣಕ್ಕೆ ಕಾರಣವಾಗಿದೆ. ನಾಲ್ಕು ಘಟಕಗಳಿಗೂ ಕ್ಷಣಾರ್ಧದಲ್ಲಿ ಬೆಂಕಿ ಆವರಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಆದರೆ ಬೇಸಿಗೆ ಬಿಸಿಗೆ ಬೆಂಕಿ ತಾಗಿರುವ ಸಾಧ್ಯತೆಯಿದೆ ಎನ್ನುವ ಮಾತು ಕೇಳಿ ಬಂದಿದೆ.

Related posts

ಇರಾನ್‌ ಮೇಲೆ ಅಮೆರಿಕ, ಇಸ್ರೇಲ್‌ ದ್ವೇಷಕ್ಕೆ ಕಾರಣ ಏನು..? ಖಮೇನಿ ಕೊಂದಿದ್ಯಾಕೆ..?

Publicspot

ನಾಳೆಯೇ ನಟ ವಿಜಯ್‌ ಪ್ರಮಾಣ ವಚನ.. ಇಂದು ಹಕ್ಕು ಮಂಡನೆ..!

Publicspot

ಇಂದಿನಿಂದ ಏನೆಲ್ಲಾ ಬದಲಾವಣೆ ಆಗುತ್ತೆ ಅನ್ನೋದು ಗೊತ್ತಿದ್ಯಾ..?

Publicspot

ರಾಹುಲ್‌ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್‌..! ಕಾರಣ ಏನು..?

Publicspot

ತಮಿಳರ ಮನ ಗೆದ್ದ ವಿಜಯ್‌ ಕೊಟ್ಟ ಮಾತು ಉಳಿಸಿಕೊಳ್ತಾರಾ..?

Publicspot

ಇರಾನ್​ ಇನ್ಮುಂದೆ ಒಂಟಿಯಲ್ಲ.. ಚೀನಾ, ರಷ್ಯಾ ಬೆಂಬಲ.. ಯುದ್ಧ ಮತ್ತಷ್ಟು ತೀವ್ರ..

Publicspot