The Public Spot
ಅಪರಾಧ

Man Stab a Girl for ; ಲೈಂಗಿಕ ಕ್ರಿಯೆಗೆ ಒಪ್ಪದ ಯುವತಿಗೆ ಚಾಕುವಿನಿಂದ ಇರಿತ!!

ಬೆಂಗಳೂರಿನಲ್ಲಿ ಒಂದು ಅಚ್ಚರಿಯ ಪ್ರಕರಣ ನಡೆದಿದೆ. ವೈಟ್ ಫೀಲ್ಡ್‌ನಲ್ಲಿರುವ ಕೋ ಲಿವಿಂಗ್ ಪಿಜಿಯಲ್ಲಿ ವ್ಯಕ್ತಿಯೊಬ್ಬ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ. ಒಂದೇ ಪಿಜಿಯಲ್ಲಿ ವಾಸವಿದ್ದ ಯುವತಿಗೆ ಬಾಬು ಎಂಬಾತ ಚಾಕು ಇರಿದಿದ್ದಾನೆ. ಇಂಜಿನಿಯರ್ ಆಗಿರುವ ಆಸಾಮಿಗೆ ಮದುವೆಯಾಗಿ ಈಗಾಗಲೇ ಒಂದು ಮಗು ಇದೆ. ಆದರೂ ಒಬ್ಬನೇ ಬಂದು ಪಿಜಿಯಲ್ಲಿ ವಾಸವಾಗಿದ್ದ. ಎರಡು ತಿಂಗಳ ಹಿಂದೆ ಅದೇ ಪಿಜಿಗೆ ಬಂದು ವಾಸವಿದ್ದ ಯುವತಿಯ ಪರಿಚಯ ಮಾಡಿಕೊಂಡಿದ್ದ ಆರೋಪಿ ಬಾಬು, ಆಕೆಯ ಮೊಬೈಲ್‌ ನಂಬರ್ ಪಡೆದುಕೊಂಡು ಸಂಪರ್ಕದಲ್ಲಿದ್ದ. ಯುವತಿಗೆ ಕಳೆದ ಮೂರು ದಿನದ ಹಿಂದೆ ಲೈಂಗಿಕ ಕ್ರಿಯೆಗೆ ಪೀಡಿಸಿದ್ದ ಆರೋಪಿ ಬಾಬು. ಆದರೆ ಲೈಂಗಿಕ ಕ್ರಿಯೆಗೆ ಯುವತಿ ಒಪ್ಪಿರಲಿಲ್ಲ ಎನ್ನಲಾಗಿದೆ. ಆದರೆ ಆಕೆಯ ಖಾಸಗಿ ಫೋಟೊ ಇಟ್ಟು ಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.

ಯುವತಿಯ ಖಾಸಗಿ ಫೋಟೋ ಇಟ್ಟುಕೊಂಡು 70 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿ. ಆಗ ನನ್ನ ಬಳಿ ಹಣ ಇಲ್ಲ, ಸ್ನೇಹಿತರ ಬಳಿ ಸಾಲ ಮಾಡಿಕೊಡುವುದಾಗಿ ಹೇಳಿದ್ದಳು. ಆಕೆಯ ಮೊಬೈಲ್ ಪಡೆದು 14 ಸಾವಿರ ಹಣವನ್ನೂ ಟ್ರಾನ್ಸ್‌ಫರ್ ಮಾಡಿಕೊಂಡಿದ್ದ ಆರೋಪಿ ಬಾಬು. ಈ ವೇಳೆ ಗಲಾಟೆ ಮಾಡಿ ಯುವತಿಗೆ ಬೆನ್ನಿಗೆ ಚಾಕುವಿನಿಂದ ಇರಿದು ಪರಾರಿ ಆಗುತ್ತಿದ್ದವನನ್ನು ಹಿಡಿದು ಸ್ಥಳೀಯರು ಗೂಸಾ ಕೊಟ್ಟಿದ್ದಾರೆ. ಗಾಯಾಳು ಯುವತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿ ಬಾಬುವನ್ನು ವೈಟ್ ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.

ವೈಟ್ ಫೀಲ್ಡ್ ಠಾಣೆ ವ್ಯಾಪ್ತಿಯಲ್ಲಿ ಯುವತಿಯ ಮೇಲೆ ಕೊಲೆ ಯತ್ನ ನಡೆದಿರುವ ಬಗ್ಗೆ ಪೂರ್ವ ವಲಯದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಸ್ಪಷ್ಟನೆ ನೀಡಿದ್ದು, ಬ್ಯಾಂಕ್‌ನಲ್ಲಿ ಕೆಲಸ ಮಾಡ್ತಿದ್ದ 24 ವರ್ಷದ ಯುವತಿ ಪಿಜಿಯಲ್ಲಿ ವಾಸವಿದ್ದಳು. ಅದೇ ಪಿಜಿಯಲ್ಲಿ ವಾಸವಿದ್ದ ಮತ್ತೋರ್ವ ವ್ಯಕ್ತಿ ಆಕೆಗೆ ಪರಿಚಯ ಆಗಿದ್ದ. ಆತ ಆಕೆಗೆ ಲೈಂಗಿಕವಾಗಿ ಸಹಕರಿಸಲು ಕೇಳಿದ್ದಾನೆ. ಆದರೆ ಈ ಯುವತಿ ಆತನಿಗೆ ಪ್ರತಿರೋಧ ಒಡ್ಡಿದ್ದಾಳೆ. ಆಗ ಆಕೆಗೆ ಚಾಕು ಇರಿದು ಆಕೆಯ ಬಳಿ ಹಣ ಕೇಳಿದ್ದಾನೆ. ಸುಮಾರು ಎಪ್ಪತ್ತು ಸಾವಿರ ಹಣ ಕೇಳಿದ್ದಾನೆ. ನಂತರ ಆಕೆಯ ಸ್ನೇಹಿತರು ಆಕೆಯನ್ನ ಆಸ್ಪತ್ರೆಗೆ ಸೇರಿಸಿದ್ದರು. ಪ್ರಕರಣ ದಾಖಲಿಸಿ ಆರೋಪಿಯನ್ನ ಬಂಧಿಸಲಾಗಿದೆ ಎಂದಿದ್ದಾರೆ.

ಆರೋಪಿ ಬಾಬು ಈ ಹಿಂದೆ ಕೂಡ ಈ ರೀತಿ ಬೇರೆ ಯುವತಿಯರಿಗೆ ಕೃತ್ಯ ಎಸಗಿದ್ದ ಅಂತಾ ಮಾಹಿತಿ ಇದೆ. ಆಂಧ್ರ ಮೂಲದ ಆರೋಪಿ ಬಾಬುಗೆ ಮದುವೆಯಾಗಿ ಒಂದು ಮಗು ಇದೆ. ಕುಟುಂಬ ಬಿಟ್ಟು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದಾನೆ. ಪಿಜಿಯಲ್ಲಿ ಇದ್ಕೊಂಡು ಈ ರೀತಿ ಕೃತ್ಯ ಎಸಗುತ್ತಿದ್ದ ಅಂತಾ ಗೊತ್ತಾಗಿದೆ. ಸದ್ಯ ಆರೋಪಿಯನ್ನ ಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗ್ತಿದೆ. ಆರೋಪಿ ಕೃತ್ಯ ಎಸಗಿದಾಗ ಅಲ್ಲಿನ ಸ್ಥಳೀಯರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಆತ ಕೂಡ ಹಲ್ಲೆ ನಡೆಸಿದವರ ವಿರುದ್ಧ ದೂರು ಕೊಟ್ಟಿದ್ದಾನೆ. ಸದ್ಯ ಎರಡೂ ಪ್ರಕರಣ ದಾಖಲಿಸಿ ತನಿಖೆ‌ ನಡೆಸಲಾಗ್ತಿದೆ ಎಂದಿದ್ದಾರೆ.

Related posts

Dam Death; ಮಾರ್ಕೋನಹಳ್ಳಿ ಡ್ಯಾಂನಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ದುರ್ಮರಣ..

Publicspot

ಕಾನ್ಫಿಡೆಂಟ್‌ ಗ್ರೂಪ್‌ ಮಾಲೀಕನ ಸಾವಿಗೆ ಕಾರಣ ಏನು..? ಅದೂ ಕೂಡ ಈ ರೀತಿ ಸಾವಾ..?

Publicspot

ಶಿವಮೊಗ್ಗದಲ್ಲಿ SSLC ಸ್ಪೆಷಲ್ ಕ್ಲಾಸ್‌ ಮುಗಿಸಿ ಬರ್ದತಿದ್ದ ಹುಡುಗನನ್ನು ಹತ್ಯೆ!

Publicspot

ಕಮಲಾಕರ ಭಟ್‌ಗೆ ಬಲೆ ಬೀಸಿದಾಕೆ ಸುಚಿತ್ರಾ ಅಲ್ಲ.. ಸುಳ್ಳು ಹೆಸರಿನ ಹಿಂದಿನ ರಹಸ್ಯ ಏನು..?

Publicspot

Seven Year Dreams End; 7 ವರ್ಷದ ಬಳಿಕ ತಾಯಿ ಆಗುವ ಆಸೆಗೆ ಹುಳಿ ಹಿಂಡಿದ್ದು ಯಾರು..?

Publicspot

ಶಾಸಕ ಚಂದ್ರು ಲಮಾಣಿಯನ್ನು ಟ್ರ್ಯಾಪ್‌ನಲ್ಲಿ ಸಿಲುಕಿಸಿದ್ರಾ..? ಬಂಜಾರ ಬೆಂಬಲ..!!

Publicspot