The Public Spot
ಅಪರಾಧ

2023 Video Leak; ಚಿನ್ನಯ್ಯ ಹೇಳಿದ ಮಾತುಗಳು ಎಷ್ಟು ಸತ್ಯ..? ಎಷ್ಟು ಸುಳ್ಳು.. ಹೊಸ ವಿಡಿಯೋ ಲೀಕ್‌..

ಮಾಸ್ಕ್ ಮ್ಯಾನ್ ಚಿನ್ನಯ್ಯ ಎರಡು ವರ್ಷದ ಹಿಂದೆ ಪತ್ನಿ ಜೊತೆ ತಿಮರೋಡಿ ಮನೆಗೆ ಬಂದಿದ್ದ ವಿಡಿಯೋ ಬಿಡುಗಡೆ ಆಗಿದೆ. 2023ರ ಅಗಸ್ಟ್ ತಿಂಗಳಲ್ಲಿ ಮಹೇಶ್‌ ಶೆಟ್ಟಿ ತಿಮರೋಡಿ ಮನೆಗೆ ಬಂದಿದ್ದ ಚಿನ್ನಯ್ಯ ವಿಡಿಯೋ ವೈರಲ್‌ ಆಗಿದೆ. ತನ್ನ ಪತ್ನಿ ಜೊತೆ ಚಿನ್ನಯ್ಯ ಮಹೇಶ್ ತಿಮರೋಡಿ ಭೇಟಿಯಾಗಿ ಚರ್ಚೆ ನಡೆಸಿದ್ದ. ಪತ್ನಿ ಜೊತೆ ಧರ್ಮಸ್ಥಳಕ್ಕೆ ಬಂದಾಗ ವಿಠಲಗೌಡನಿಗೆ ಸಿಕ್ಕಿದ್ದ. ಆಗ ಚಿನ್ನಯ್ಯನನ್ನು ವಿಠಲಗೌಡ ಮಹೇಶ್‌ ತಿಮರೋಡಿ ಮನೆಗೆ ಕರೆದೊಯ್ದು ಭೇಟಿ ಮಾಡಿಸಿದ್ದರು. ಈ ವೇಳೆ ಹೆಣಗಳನ್ನು ಹೂತು ಹಾಕಿರುವ ಬಗ್ಗೆ ಹೇಳಿದ್ದ ಎನ್ನಲಾಗಿದೆ.

ನಾನು ಧರ್ಮಸ್ಥಳದಲ್ಲಿ ಕರ್ಮಚಾರಿ ಕೆಲಸ ಮಾಡುತ್ತಿದೆ. ಆ ಗುಂಡಿ ತಗೆದು ಸಾಕಷ್ಟು ಹೆಣ ಹೂಳುತ್ತಿದ್ದೆ. ನೇತ್ರಾವತಿ ಸ್ನಾನಘಟ್ಟ ಸರ್ಕಾರಿ ಜಾಗ ಎಂದವರಿಗೆ ರಕ್ತ ಬರೋ ಹಾಗೆ ನನ್ನ ಕೈಯಿಂದ ಹೊಡೆಸುತ್ತಿದ್ದರು ಅಂತಾನೂ ಹೇಳಿಕೊಂಡಿದ್ದಾನೆ. ಒಂದು ಹೆಣವನ್ನು ಹೂಳುವಾಗ ಡಾಕ್ಟರ್ ಬರದೇ ಕಾಂಪೌಂಡರ್ ಪೋಸ್ಟ್ ಮಾರ್ಟಮ್ ಮಾಡಿದ್ದರು ಅಂತಾ ಹೇಳುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋದಲ್ಲಿ ಸಾಕಷ್ಟು ಜನರ ಹೆಸರನ್ನು ನೇರವಾಗಿಯೇ ಚಿನ್ನಯ್ಯ ಹೇಳಿದ್ದಾನೆ.

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ವಿಚಾರವನ್ನು ನಾವು ಬೇರೆ ಕಡೆ ಮಾತನಾಡುತ್ತೇವೆ ಅಂತಾ ನಮ್ಮನ್ನು ಧರ್ಮಸ್ಥಳದಿಂದ ಜಾಗ ಖಾಲಿ ಮಾಡಿಸಿದ್ದರು. ನನಗೆ ಧರ್ಮಸ್ಥಳದಿಂದ ಒಟ್ಟು 3.5 ಲಕ್ಷ ರೂಪಾಯಿ ಕೊಡಬೇಕಿತ್ತು. ಒಮ್ಮೆ 500 ಮುಖಬೆಲೆಯ 6 ಕಟ್ಟು ಹಣ ತಂದು ಅದರಲ್ಲಿ ಸ್ವಲ್ಪ ಸ್ವಲ್ಪ ಕೊಟ್ಟು ವಾಪಸ್‌ ಕಳುಹಿಸಿದರು. ನಮ್ಮನ್ನು ಧರ್ಮಸ್ಥಳದಿಂದಲೇ ಜಾಗ ಖಾಲಿ ಮಾಡಿಸಿದ್ರು. ತುಂಬಾ ಅನ್ಯಾಯ ಮಾಡಿದ್ರು ಅಂತಾ ತಿಮರೋಡಿ ಬಳಿ ಹೇಳಿಕೊಂಡಿದ್ದಾನೆ ಚಿನ್ನಯ್ಯ. ನೇತ್ರಾವತಿ ಸ್ನಾನಘಟ್ಟ ಸರ್ಕಾರಿ ಜಾಗ ಎಂದವರಿಗೆ ರಕ್ತ ಬರೋ ಹಾಗೆ ನನ್ನ ಕೈನಿಂದ ಹೊಡೆಸುತ್ತಿದ್ದರು ಅಂತಾನೂ ಹೇಳಿದ್ದಾನೆ.

ಆದರೆ ಈ ವಿಡಿಯೋ ಬಿಡುಗಡೆ ಮಾಡಿದ್ಯಾರು..? 2023ರಲ್ಲೇ ಚಿನ್ನಯ್ಯ ಬರುವ ಮುಂಚೆಯೇ ಆ ವಿಡಿಯೋ ರೆಕಾರ್ಡ್‌ ಮಾಡಿರೋ ಉದ್ದೇಶ ಏನಿತ್ತು ಅನ್ನೋ ಬಗ್ಗೆ ತನಿಖೆ ನಡೆಯಬೇಕಿದೆ. ಆದರೆ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಆಗಲೇ ಸಾಕಷ್ಟು ವಿಚಾರಗಳನ್ನು ಹೇಳುತ್ತಾನೆ ಅನ್ನೋದು ಗೊತ್ತಿದ್ದೇ ಮಹೇಶ್‌ ಶೆಟ್ಟಿ ತಿಮರೋಡಿ ವಿಡಿಯೋ ರೆಕಾರ್ಡ್‌ ಮಾಡಿಟ್ಟುಕೊಂಡಿದ್ರಾ..? ಮುಂದಿನ ದಿನಗಳಲ್ಲಿ ನಾನೇ ಹೇಳಿಕೊಟ್ಟು ಹೀಗೆಲ್ಲಾ ಮಾಡಿಸಿದ್ದೇನೆ ಅನ್ನೋ ಅಪಕೀರ್ತಿ ಬರಬಾರದು ಅನ್ನೋ ಕಾರಣಕ್ಕೆ ಈ ವಿಡಿಯೋ ಮಾಡಿಟ್ಟುಕೊಂಡಿದ್ರಾ..? ಅನ್ನೋ ಬಗ್ಗೆ ಮಹೇಶ್‌ ಶೆಟ್ಟಿ ತಿಮರೋಡಿಯೇ ಉತ್ತರ ಕೊಡಬೇಕಿದೆ. ಅಥವಾ ಈ ವಿಡಿಯೋ ಬೇರೆ ಮೂಲಗಳಿಗೆ ತಲುಪಿದ್ದು, ಇದೊಂದು ಕುತುಂತ್ರದ ಭಾಗ ಎನ್ನುವ ರೀತಿಯಲ್ಲಿ ವಿಡಿಯೋ ಹರಿಯಬಿಡಲಾಗಿದ್ಯಾ..? ಅನ್ನೋ ಬಗ್ಗೆಯೂ ಮುಂದಿನ ದಿನಗಳಲ್ಲಿ ಗೊತ್ತಾಗ್ಬೇಕಿದೆ.

Related posts

ಸಿನಿಮಾ ನಟಿಯ ಆರೋಪದ ಬಗ್ಗೆ ಅರವಿಂದ್‌ ರೆಡ್ಡಿ ಬಿಚ್ಚಿಟ್ಟ ಸೀಕ್ರೆಟ್‌ ಏನು..?

Publicspot

Drunk Drive; ಪೊಲೀಸರ ದಂಡ ದಾಹಕ್ಕೆ ಆಟೋ ಡ್ರೈವರ್​ ಆತ್ಮಹತ್ಯೆ ಯತ್ನ..

Publicspot

ಬೆಂಗಳೂರಲ್ಲಿ ಪ್ರಿಯಕರನ ಕೊಂದಿದ್ಯಾಕೆ ಪ್ರೇಯಸಿ..? ಹೆತ್ತವರ ಪ್ರಶ್ನೆ..

Publicspot

ಹೊಲಕ್ಕೆ ಹೊದವರನ್ನು ಗುಂಡಿಟ್ಟು ಕೊಂದಿದ್ಯಾಕೆ ಅರಣ್ಯ ಸಿಬ್ಬಂದಿ..?

Publicspot

ನಾಳೆ ಮದುವೆ ಆಗಬೇಕಿದ್ದು ಮನೆ ಮಗಳು, ಕುಟುಂಬದ ಜೊತೆಗೆ ಹೆಣವಾದ ಕಥೆ..

Publicspot

Suprem Court Guiding: ದರ್ಶನ್‌ ಬೇಲ್‌ ರದ್ದು ಮಾಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು..?

ಯಶವಂತಿ