ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಜಿಬಿಎ ಕೇಂದ್ರ ಕಚೇರಿಯಲ್ಲಿ ಮಹತ್ವದ ಸಭೆ ಮಾಡಿದ್ದಾರೆ. ಬೆಂಗಳೂರಿನ ಕಸ ವಿಲೇವಾರಿ ಸಂಬಂಧ ಸಭೆ ವಿಭಾಗವಾರು ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿದ್ದಾರೆ. ಕಸದ ಟೆಂಟರ್ ಹಾಗು ಗಾರ್ಬೆಜ್ ವಿಲೇವಾರಿ ಪ್ರಕ್ರಿಯೆಗಳ ಕುರಿತ ವಿಷಯಗಳ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿದ್ದಾರೆ. ಸಭೆಯಲ್ಲಿ BSWML ಅಧಿಕಾರಿಗಳು ಸೇರಿದಂತೆ ಐದು ನಗರ ಪಾಲಿಕೆಗಳ ಆಯುಕ್ತರ ಉಪಸ್ಥಿತರಿದ್ದು, ನಗರದಲ್ಲಿ ಕಸ ಸರಿಯಾದ ರೀತಿ ನಿರ್ವಹಣೆ ಆಗದಿರೋ ಬಗ್ಗೆ ಹಾಗೂ ಸಾರ್ವಜನಿಕರ ದೂರುಗಳ ಬಗ್ಗೆಯೂ ಚರ್ಚೆ ಮಾಡಲಾಗಿದೆ.

ಕಸ ವಿಲೇವಾರಿ ಸಭೆಯಲ್ಲಿ ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಜಿಬಿಎ ಮುಖ್ಯ ಅಯುಕ್ತ ಮಹೇಶ್ವರ ರಾವ್, ಘನತ್ಯಾಜ್ಯ ನಿರ್ವಹಣ ಘಟಕದ ಮುಖ್ಯಸ್ಥ ಕರಿಗೌಡ, ಐದು ನಗರಪಾಲಿಕೆ ಅಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ನಗರದಲ್ಲಿ ಇದುವರೆಗೆ ಕಸದ ಸಮಸ್ಯೆ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಚಿವರು ಚರ್ಚೆ ನಡೆಸಿದ್ದು, ಹೊಸದಾಗಿ ಟೆಂಡರ್ ಕರೆದಿರುವ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ. ಪೊಲೀಸರು ಕೊಟ್ಟ ಬ್ಲಾಕ್ ಸ್ವಾಟ್ಗಳನ್ನು ಕೂಡಲೇ ಕ್ಲಿಯರ್ ಮಾಡುವಂತೆ ಅಧಿಕಾರಿಗಳಿಗೆ ಕೃಷ್ಣಬೈರೇಗೌಡರು ಸೂಚನೆ ಕೊಟ್ಟಿದ್ದಾರೆ.
ನಗರದ ಕಸದ ಸಮಸ್ಯೆ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದು, ಮುಂದಿನ ದಿನಗಳಲ್ಲಿ ಕಸದ ಸಮಸ್ಯೆ ಪರಿಹಾರಕ್ಕೆ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸಚಿವರು ಸೂಚನೆ ಕೊಟ್ಟಿದ್ದಾರೆ. ಕೆಲವು ಕಡೆ ಕಸದ ಅಟೋ ಹೋಗುತ್ತಿಲ್ಲ ಅನ್ನೋ ಅರೋಪದ ಬಗ್ಗೆ ಸಚಿವರು ಕೇಳಿದಾಗ ಅಧಿಕಾರಿಗಳು ಅರೋಪ ತಳ್ಳಿಹಾಕಿದ್ದಾರೆ. ಎಲ್ಲೆಂದರಲ್ಲಿ ಕಸ ಎಸೆಯುವರ ಬಗ್ಗೆ ಕಠಿಣ ಕ್ರಮಕ್ಕೆ ಸಚಿವರು ಸೂಚನೆ ಕೊಟ್ಟಿದ್ದು, ಮಾರ್ಷಲ್ಗಳನ್ನು ಬಳಕೆ ಮಾಡಿಕೊಂಡು ದಂಡ ವಿಧಿಸಲು ಸೂಚನೆ ಕೊಟ್ಟಿದ್ದಾರೆ. ಆದಷ್ಟೂ ಬೇಗ ನಗರದಲ್ಲಿರೋ ಬ್ಲಾಕ್ ಸ್ಪಾಟ್‌ಗೆ ಮುಕ್ತಿ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ನಗರ ಪಾಲಿಕೆ ವತಿಯಿಂದ ಮನೆ ಮನೆಗೆ ತೆರಳಿ ಕಸ ಸಂಗ್ರಹಣೆಗೆ ಅಟೋ ಖರೀದಿಸಲು ಸೂಚನೆ ಕೊಟ್ಟಿರುವ ಸಚಿವರು, ಹೈಕೋರ್ಟ್ ನಿರ್ದೆಶನದಂತೆ ಘನತ್ಯಾಜ್ಯ ಘಟಕದಿಂದ ಮನೆ ಮನೆ ಕಸ ಸಂಗ್ರಹಿಸಬೇಕು. ಪೌರಕಾರ್ಮಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಬೇಕು. ಬೆಂಗಳೂರು ನಗರವನ್ನು ಸ್ವಚ್ಚ ಕಾಪಾಡಲು ಪೌರಕಾರ್ಮಿಕರು ಶ್ರಮವಹಿಸ್ತಿರೋ ಬಗ್ಗೆ ಸಚಿವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಬೆಂಗಳೂರು ಅಭಿವೃದ್ಧಿ ಸಚಿವರಾದ ಬಳಿಕ ಕೃಷ್ಣಬೈರೇಗೌಡರು, ಕೆಲಸದಲ್ಲಿ ಚುರುಕುತನ ತೋರಿಸಿದ್ದರಾರೆ. ಬೆಂಗಳೂರಿನ ಸಮಸ್ಯೆಗಳಲ್ಲಿ ಒಂದಾದ ಕಸಕ್ಕೆ ಮುಕ್ತಿ ನೀಡಲು ಮೊದಲಿಗೆ ನಿರ್ಧಾರ ಮಾಡಿದ್ದಾರೆ.


