The Public Spot
ಅಪರಾಧ

BigBoss Ranjith Case; ಇರೋಕೆ ಮನೆ ಕೊಟ್ರೆ ನಂದೇ ಅಂದ್ರಂತೆ ನಟ ರಂಜಿತ್​..!!

ಬಿಗ್​ಬಾಸ್​ ಸ್ಪರ್ಧಿ ಆಗಿದ್ದ ನಟ ರಂಜಿತ್​ ಲಾಯರ್​ ಜಗದೀಶ್​ ಮೇಲೆ ಹಲ್ಲೆ ಮಾಡಿ ಬಿಗ್​ಬಾಸ್​ ಸ್ಪರ್ಧೆಯಿಂದ ಅರ್ಧಕ್ಕೆ ವಾಪಸ್​ ಬಂದಿದ್ರು. ಆ ಬಳಿಕ ಮದುವೆ ಕೂಡ ಆಗಿದ್ರು. ಜಗಳವಾಡಿಕೊಂಡು ಹೊರಕ್ಕೆ ಬಂದಿದ್ದ ಲಾಯರ್​ ಜಗದೀಶ್​ ಜೊತೆಗೆ ವೈಮನಸ್ಸು ಮರೆತು ಮಾತನಾಡಿದ್ದರು. ಇದೀಗ ಸ್ವಂತ ಅಕ್ಕನಿಗೆ ಧಮ್ಕಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಅಮೃತಹಳ್ಳಿ ಪೊಲೀಸ್​ ಠಾಣೆಗೆ ದೂರು ಸಲ್ಲಿಕೆಯಾಗಿದೆ.

ಏನಿದು ಅಕ್ಕ-ತಮ್ಮನ ಗಲಾಟೆ..?

ಬಿಗ್​ಬಾಸ್ ಸ್ಪರ್ಧಿಯಾಗಿದ್ದ ರಂಜಿತ್ ಬಾವ ಜಗದೀಶ್ ದೂರು ನೀಡಿದ್ದಾರೆ. ಅಮೃತಹಳ್ಳಿ ಠಾಣೆಯಲ್ಲಿ ಜೀವ ಬೆದರಿಕೆ ಆರೋಪದಡಿ ದೂರು ದಾಖಲಿಸಿದ್ದು, 2018 ರಿಂದ ಅಮೃತಹಳ್ಳಿಯ ಫ್ಲ್ಯಾಟ್​ನಲ್ಲಿ ವಾಸವಿದ್ದೇವೆ. 2025 ರಿಂದ ಇದೇ ಫ್ಲ್ಯಾಟ್​ನಲ್ಲಿ ಅಕ್ಕ, ಬಾವನ ಜೊತೆ ರಂಜಿತ್ ಕೂಡ ವಾಸವಿದ್ದು, ಇದೀಗ ಮನೆ ನಂದು ಅಂತ ಅಕ್ಕನಿಗೆ ಧಮ್ಕಿ ಹಾಕ್ತಿದ್ದಾರೆ ಎಂದು ಆರೋಪಿಸಲಾಗಿದೆ. ರಂಜಿತ್ ಹಾಗೂ ರಂಜಿತ್ ಪತ್ನಿ ಇಬ್ಬರೂ ಸೇರಿಕೊಂಡು ರಂಜಿತ್ ಅಕ್ಕನ ಜೊತೆಗೆ ಜಗಳ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ. ಈ ಬಗ್ಗೆ ಅಮೃತಹಳ್ಳಿ ಠಾಆಣೆಯಲ್ಲಿ NCR ದಾಖಲಾಗಿದೆ.

ಠಾಣೆಗೆ ಕರೆಸಿ ವಾರ್ನ್​ ಮಾಡಿದ ಪೊಲೀಸ್!

ಗಲಾಟೆ ವೇಳೆ ಒಬ್ಬರಿಗೊಬ್ಬರು ಹಲ್ಲೆ ನಡೆಸಿರೋ ಆರೋಪ ಕೇಳಿ ಬಂದಿದೆ. ನಮ್ಮ ಮನೆಯಲ್ಲಿ ಇದ್ದುಕೊಂಡು ನನ್ನದೇ ಮನೆ ಎನ್ನುತ್ತ ಮನೆ ಬಿಟ್ಟು ಹೋಗದೆ ರಂಜಿತ್ ಜೀವ ಬೆದರಿಕೆ ಹಾಕಿದ್ದಾರೆ ಅಂತಾ ದೂರು ಕೊಡಲಾಗಿದೆ. ಮನೆಯಲ್ಲಿ ಒಬ್ಬರಿಗೊಬ್ಬರು ಬೈದಾಡಿಕೊಳ್ಳುವ ವೀಡಿಯೊ ಸೆರೆ ಮಾಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​​ ಆಗಿದೆ. ನಟ ರಂಜಿತ್‌ನನ್ನು ಠಾಣೆಗೆ ಕರೆಸಿದ್ದ ಅಮೃತಹಳ್ಳಿ ಪೊಲೀಸ್ರು, ಹೇಳಿಕೆ ಪಡೆದು ವಾಪಸ್​ ಕಳುಹಿಸಿದ್ದಾರೆ. ಮತ್ತೊಮ್ಮೆ ಗಲಾಟೆ ಮಾಡಿಕೊಳ್ಳಬಾರದು, ಕೋರ್ಟ್​ನಲ್ಲಿ ವಿವಾದ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿ ವಾಪಸ್​ ಕಳುಹಿಸಿದ್ದಾರೆ ಪೊಲೀಸ್ರು.

Related posts

ಬ್ಯಾಂಕ್ ಮ್ಯಾನೇಜರ್‌ನ ಮರ್ಡರ್ ಮಾಡಿದ್ಯಾಕೆ ಗಂಡ.. ಇಬ್ಬರು ಇಲ್ಲ ಇಬ್ಬರೂ ಅನಾಥ..

Publicspot

ಪ್ರೀತಿಯಲ್ಲಿ ಮುಳುಗಿದ್ದವಳು ಮದುವೆ ಆಗಿ ಮಾಡಿದ ಎಡವಟ್ಟು.. ಎರಡು ಸಾವು

Publicspot

ಪ್ರೀತಿ ಮಾಡು.. ಇಲ್ಲದಿದ್ರೆ ನೋಡು.. ಇದು ಪ್ರೇಮಿಗಳ ದಿನದ ವಿಶೇಷ..

Publicspot

You Tuber Sameer house Raid: ಸಮೀರ್​ ಬಗ್ಗೆ ಮಟ್ಟಣ್ಣವರ್​ ಕೊಟ್ಟ ಸ್ಪಷ್ಟನೆ ಏನು..?

Publicspot

ATM ವಾಹನದಲ್ಲಿ 7.11 ಕೋಟಿ ಕಳವು.. ಬೆಂಗಳೂರು ಪೊಲೀಸ ಬಲೆಗೆ ಬಿದ್ದ 6 ಜನ..

Publicspot

DARSHAN JAIL SHIFT: ದರ್ಶನ್‌ ಇವತ್ತು ಬಳ್ಳಾರಿ ಜೈಲಿಗೆ ಶಿಫ್ಟ್‌ ಆಗೋದು ಪಕ್ಕಾನಾ..?

Publicspot