The Public Spot
ಅಪರಾಧ

ಬ್ಯಾಂಕ್ ಮ್ಯಾನೇಜರ್‌ನ ಮರ್ಡರ್ ಮಾಡಿದ್ಯಾಕೆ ಗಂಡ.. ಇಬ್ಬರು ಇಲ್ಲ ಇಬ್ಬರೂ ಅನಾಥ..

ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಅನೈತಿಕ ಸಂಬಂಧ ಆರೋಪದ ಬಳಿಕ ಸುತ್ತು ಗುಂಡು ಹಾರಿಸಿ ಹೆಂಡತಿಯನ್ನು ಹತ್ಯೆ ಮಾಡಿದ್ದಾನೆ. ಬಸವೇಶ್ವರ ನಗರದ ವೆಸ್ಟ್ ಇನ್ ಹೋಟೆಲ್ ಬಳಿ ಈ ದುರ್ಘಟನೆ ನಡೆದಿದೆ. ಮಂಗಳವಾರ ಕೋರ್ಟ್‌ನಲ್ಲಿ ಡಿವೋರ್ಸ್‌ ಕೇಸ್‌ ಮುಗಿಸಿ ಬಂದಿದ್ದ ದಂಪತಿ ನಡುವೆ ಜಗಳ ಶುರುವಾಗಿತ್ತು. ಜಗಳ ತಾರಕಕ್ಕೇರಿದ ವೇಳೆ ಗುಂಡು ಹಾರಿಸಿದ ಗಂಡ ಹೆಂಡತಿಯನ್ನು ಕೊಂದು ನೇರವಾಗಿ ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ. ತಮಿಳುನಾಡಿನ ಸೇಲಂ ಮೂಲದ ದಂಪತಿ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿತ್ತು. ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಬಾಲಮುರುಗನ್ ಹಾಗೂ ಬಸವೇಶ್ವರ ನಗರದ ಯೂನಿಯನ್‌ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದ ಭುವನೇಶ್ವರಿ ಮದುವೆ ಆಗಿದ್ದರು. ಆದರೆ ಹೆಂಡತಿ ಮೇಲೆ ಅನುಮಾನ ಜಾಸ್ತಿಯಾಗಿತ್ತು. ಇಷ್ಟೆಲ್ಲಾ ಕೃತ್ಯಗಳಿಗೆ ಆ ಅನುಮಾನವೇ ಮೂಲ ಎನ್ನಲಾಗ್ತಿದೆ.

ಬಾಲಮುರುಗನ್ ಹೆಂಡತಿ ಮೇಲೆ ಗುಂಡು ಹಾರಿಸಿದ ಬಳಿಕ ಭುವನೇಶ್ವರಿ ಗುಂಡೇಟು ತಿಂದು ಸ್ಥಳದಲ್ಲೇ ಕುಸಿದು ಬಿದ್ದರೆ, ಹೆಂಡತಿ ಮೇಲೆ ಗುಂಡು ಹಾರಿಸಿದ ಬಳಿಕ ನೇರವಾಗಿ ಠಾಣೆಗೆ ನಡೆದುಕೊಂಡು ಹೋಗಿ ಸರೆಂಡರ್ ಆಗಿದ್ದಾನೆ. ಅಕ್ರಮವಾಗಿ ಪಿಸ್ತೂಲ್ ಖರೀದಿ ಮಾಡಿದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ಮಾಡ್ತಿದ್ದಾರೆ. ನಿನ್ನೆ ಸಂಜೆ 6.30 ರ ವೇಳೆಯಲ್ಲಿ ಈ ಘಟನೆ ನಡೆದಿದೆ. ಫೈರಿಂಗ್ ಆದ ಬಳಿಕ ಸ್ಥಳೀಯರು ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಿದ್ದಾರೆ. ಆದರೆ ಅಷ್ಟು ಹೊತ್ತಿಗೆ ಮಹಿಳೆ ಭುವನೇಶ್ವರಿ ಸಾವನ್ನಪ್ಪಿದ್ದರು. ಬಾಲಮುರುಗನ್ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದರು. ಆದರೆ ಕೌಟುಂಬಿಕ ಕಲಹ ಜೋರಾದ ಬಳಿಕ ಕೆಲಸಕ್ಕೆ ರಿಸೈನ್ ಮಾಡಿದ್ದ. ಕೊಲೆಯಾದ ಭುವನೇಶ್ವರಿ ಬಸವೇಶ್ವರ ನಗರದ ಯೂನಿಯನ್‌ ಬ್ಯಾಂಕ್ ಉದ್ಯೋಗಿ ಆಗಿದ್ದರು. ಪತ್ನಿ ಮೇಲಿನ ಅನುಮಾನವೇ ಕೊಲೆಗೆ ಕಾರಣ ಆಗಿದೆ.

ರಾಜಾಜಿನಗರದಲ್ಲಿ ಇಬ್ಬರು ಮಕ್ಕಳೊಂದಿಗೆ ಭುವನೇಶ್ವರಿ ವಾಸವಾಗಿದ್ದರು. 2011ರಲ್ಲಿ ಮದುವೆಯಾಗಿದ್ದ ದಂಪತಿ. 2018ರಲ್ಲಿ ಬೆಂಗಳೂರಿಗೆ ಬಂದಿದ್ದ ದಂಪತಿ, ಒಂದೂವರೆ ವರ್ಷದ ಹಿಂದೆ ಇಬ್ಬರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಅಂತಾ ಅನುಮಾನಗೊಂಡಿದ್ದ ಗಂಡ ಬಾಲಮುರುಗನ್​. ಗಂಡನ ಅನುಮಾನದ ಕಿರಿಕಿರಿ ಬಳಿಕ ಭುವನೇಶ್ವರಿ ವಿಚ್ಚೇದನ ಕೇಳಿದ್ದರು. ವಿಚ್ಛೇದನಕ್ಕೆ ಒಪ್ಪದೆ ಗಂಡ ಬಾಲಮುರುಗನ್​ ನಿರಾಕರಿಸಿದ್ದನು. ಆರು ತಿಂಗಳ ಹಿಂದೆ ವೈಟ್ ಫೀಲ್ಡ್​ ಬ್ರಾಂಚ್​ನಿಂದ ವರ್ಗಾವಣೆಯಾಗಿತ್ತು. ಆ ನಂತರ ಹೆಂಡತಿ ಹಾಗೂ ಮಕ್ಕಳು ಎಲ್ಲಿದ್ದಾರೆ ಅಂತಾ ತಿಳಿಯದೆ ಕಂಗಾಲಾಗಿದ್ದ. ಆ ನಂತರ ವಿಳಾಸ ಪತ್ತೆ ಹಚ್ಚಿದ ಗಂಡ, ನಾಲ್ಕು ತಿಂಗಳ ಹಿಂದೆ ಕೆಪಿ ಆಗ್ರಹಾರದ ಚೋಳರಪಾಳ್ಯಕ್ಕೆ ಶಿಫ್ಟ್ ಆಗಿದ್ದ. ಒಂದು ವಾರದ ಹಿಂದೆ ಡೈವೋರ್ಸ್ ನೋಟಿಸ್ ಕೊಟ್ಟಿದ್ದ ಹೆಂಡತಿ ಮೇಲೆ ಕೋಪಗೊಂಡಿದ್ದ ಬಾಲಮುರುಗನ್​, ಕೊಲೆ ಮಾಡುವ ನಿರ್ಧಾರ ಮಾಡಿದ್ದ.

ಕೊಲೆ ಮಾಡಿದ ಬಳಿಕ ಆರೋಪಿ ಪೊಲೀಸರ ಮುಂದೆ ಶರಣಾಗಿರುವುದು ಶಿಕ್ಷೆ ಪ್ರಮಾಣ ಕಡಿಮೆ ಮಾಡಲು ಸಹಕಾರಿ ಆಗಲಿದೆ. ಆದರೆ ಪಿಸ್ತೂಲ್​ ಲೈಸೆನ್ಸ್​ ಹೊಂದಿಲ್ಲ. ಅಕ್ರಮವಾಗಿ ಪಿಸ್ತೂಲ್​ ಖರೀದಿ ಮಾಡಿರುವ ಬಗ್ಗೆ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಪಿಸ್ತೂಲ್​ ಖರೀದಿ ಮಾಡಿದ್ದು ಎಲ್ಲಿ..? ಕೊಲೆ ಮಾಡುವ ಉದ್ದೇಶದಿಂದಲೇ ಪಿಸ್ತೂಲ್​ ಖರೀದಿ ಮಾಡಿದ್ದ..? ಕೊಲೆಗೆ ಸಂಚು ರೂಪಿಸಿ ಹೆಂಡತಿಗೆ ಶೂಟ್​ ಮಾಡಿರುವ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸುಖ ಸಂಸಾರದಲ್ಲಿ ಅಕ್ರಮ ಸಂಬಂಧ ಎನ್ನುವುದು ಯಮನಾಗಿ ಧಾವಿಸಿಬಂದಿದ್ದು ಟೆಕ್ಕಿ ಕುಟುಂಬವೇ ಸರ್ವನಾಶ ಆದಂತಾಗಿದೆ. ಇಬ್ಬರು ಮಕ್ಕಳಿಗೆ ಅತ್ತ ಅಮ್ಮನೂ ಇಲ್ಲದೆ, ಇತ್ತ ತಂದೆಯೂ ಇಲ್ಲದೆ ಅನಾಥರಾಗಿದ್ದಾರೆ.

Related posts

Youtuber Mukaleppa Love Zihad; ಮುಕಳೆಪ್ಪ ವಿರುದ್ಧ ಲವ್‌ ಜಿಹಾದ್‌ ಕೇಸ್‌.. ಪತ್ನಿ ಪೊಲೀಸ್‌ ವಶಕ್ಕೆ..

Publicspot

ಧರ್ಮಸ್ಥಳದಲ್ಲಿ ಇವತ್ತು ಹೈಟೆಕ್​ ತಂತ್ರಜ್ಞಾನದ ಜೊತೆಗೆ ಅಸ್ಥಿ ಆಪರೇಷನ್​..!!

Publicspot

ಪ್ರಜ್ವಲ್​ ರೇವಣ್ಣ ಕೇಸ್​​, 25 ಲಕ್ಷ ಬಹುಮಾನ ಘೋಷಿಸಿದ ಸರ್ಕಾರ..!

Publicspot

30 ಲಕ್ಷ ಚಿನ್ನಾಭರಣ ಜೊತೆಗೆ ನಾಪತ್ತೆ.. ಕುಣಿಗಲ್‌ನಲ್ಲಿ ಮಹಿಳೆ ಪತ್ತೆ ಆಗಿದ್ಹೇಗೆ..?

Publicspot

ಅಮಾವಾಸ್ಯೆ ದಿನ 9 ಬಲಿ ಪಡೆದ ಜವರಾಯ.. 24 ಗಂಟೆಯಲ್ಲಿ 17 ಜನರ ದುರ್ಮರಣ..

Publicspot

ಧರ್ಮಸ್ಥಳ ಮೂಳೆ ರಹಸ್ಯ.. SIT ತನಿಖಾ ವರದಿ ಮತ್ತು ಅನುಮಾನದ ಹುತ್ತ..

Publicspot