The Public Spot
ಅಪರಾಧ

ATM ವಾಹನದಲ್ಲಿ 7.11 ಕೋಟಿ ಕಳವು.. ಬೆಂಗಳೂರು ಪೊಲೀಸ ಬಲೆಗೆ ಬಿದ್ದ 6 ಜನ..

ಬೆಂಗಳೂರಿನಲ್ಲಿ ATM ವಾಹನ ತಡೆದು 7 ಕೋಟಿ 11 ಲಕ್ಷ ಹಣವನ್ನು ದರೋಡೆ ಮಾಡಿದ್ದ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಬರೋಬ್ಬರಿ 6.45 ಕೋಟಿ ರೂಪಾಯಿ ಹಣವನ್ನ ಜಪ್ತಿ ಮಾಡಿದ್ದಾರೆ. ಕೋಟಿ ಕೋಟಿ ಹಣವನ್ನು ಮಾಸ್ಟರ್ ಮೈಂಡ್‌ ಆಗಿದ್ದ ಮೂವರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದರು. ಆ ಬಳಿಕ 5.76 ಕೋಟಿ ಹಣವನ್ನು ಜಪ್ತಿ ಮಾಡಿದ್ದರು. ಆ ಬಳಿಕ ಹೈದ್ರಾಬಾದ್‌ನಲ್ಲಿ ಮೂವರನ್ನು ಬಂಧಿಸಿದ್ದು, 70 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ. ಒಟ್ಟಾರೆ 6.45 ಕೋಟಿ ಹಣವನ್ನ ಸೀಜ್‌‌ ಮಾಡಿದ್ದು, ಉಳಿದ ಹಣವನ್ನು ಸೀಜ್‌ ಮಾಡುವತ್ತ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಬುಧವಾರ ಬೆಂಗಳೂರು ಮಾತ್ರವಲ್ಲ ಇಡೀ ಕರ್ನಾಟಕ ಪೊಲೀಸರೇ ಒಂದು ಕ್ಷಣ ಅವಕ್ಕಾಗಿದ್ದರು. ಈ ಪ್ರಕರಣ ಇಡೀ ಪೊಲೀಸ್‌ ಇಲಾಖೆಗೆ ದೊಡ್ಡ ತಲೆನೋವು ತರಿಸಿತ್ತು. ದರೋಡೆ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಬೆಂಗಳೂರು ಪೊಲೀಸರು ಹಗಲು – ರಾತ್ರಿ ಎನ್ನದೆ ಶೋಧ ನಡೆಸಿ 54 ಗಂಟೆಯೊಳಗೆ 6.45 ಕೋಟಿ ಹಣವನ್ನ ಸೀಜ್‌‌ ಮಾಡಿದ್ದಾರೆ. ಇಡೀ ದರೋಡೆ ಪ್ರಕರಣದಲ್ಲಿ ಮಾಸ್ಟರ್‌‌ ಮೈಂಡ್‌ ಆಗಿದ್ದ ಪೊಲೀಸ್ ಕಾನ್ಸ್‌ಟೇಬಲ್‌ ಅಣ್ಣಪ್ಪ ನಾಯಕ್, ಗೋಪಿ ಹಾಗೂ ಜೇವಿಯರ್ ಪ್ಲ್ಯಾನ್‌ನಂತೆಯೇ ಇಡೀ ಪ್ರಕರಣ ನಡೆದಿತ್ತು. ಈ ಮೂವರನ್ನು ಪೊಲೀಸರು ಕೋರ್ಟ್‌ ಎದುರು ಹಾಜರು ಮಾಡಿ 10 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.

CMS ಕಂಪನಿಯಲ್ಲಿ ವೆಹಿಕಲ್ ಟ್ರಾನ್ಸ್‌ಪೋರ್ಟ್ ಇನ್‌ಚಾರ್ಜ್ ಆಗಿದ್ದ. ಮತ್ತೋರ್ವ ಆರೋಪಿ ಜೇವಿಯರ್ ಕೂಡಾ ಹಲವು ತಿಂಗಳುಗಳ ಕಾಲ CMS‌ ಸಂಸ್ಥೆಯಲ್ಲಿ ಕೆಲಸ ಮಾಡಿದ್ದ. ಆ ಬಳಿಕ ಅಪಘಾತದಲ್ಲಿ ಪೆಟ್ಟು ಬಿದ್ದಿದ್ದ ಕಾರಣಕ್ಕೆ ಕೆಲಸ ಬಿಟ್ಟು ಮನೆಯಲ್ಲಿದ್ದ. ಒಟ್ಟಿಗೆ ಕೆಲಸ ಮಾಡ್ತಿದ್ದ ಗೋಪಿ ಹಾಗೂ ಜೇವಿಯರ್‌ ಆತ್ಮೀಯ ಸ್ನೇಹಿತರಾಗಿದ್ದರು. ಹೇಗಾದ್ರು ಮಾಡಿ ಹಣ ಮಾಡ್ಬೇಕು ಅಂತಾ ಅಡ್ಡದಾರಿಗೆ ಇಳಿಯುವ ಪ್ಲ್ಯಾನ್‌ ಮಾಡಿದ್ದರು. ಪೊಲೀಸ್ ಕಾನ್ಸ್‌ಟೇಬಲ್‌ ಅಣ್ಣಪ್ಪ ನಾಯಕನನ್ನು ಸೇರಿಸಿಕೊಂಡು ದರೋಡೆ ಸಂಚು ರೂಪಿಸಿದ್ದರು. ಬರೋಬ್ಬರಿ 3 ತಿಂಗಳ ಕಾಲ ಸ್ಕೇಚ್ ಹಾಕಿದ್ದರು. ಬ್ಯಾಂಕ್ ಬಳಿ ಹೋಗಿ ಎಟಿಎಂ ವಾಹನದ ಮಾಹಿತಿಯನ್ನೂ ಕಲೆ ಹಾಕಿದ್ದರು. ಸಿಸಿಟಿವಿ ಇಲ್ಲದ ಮಾರ್ಗವನ್ನು ನೋಡಿ ಪಕ್ಕಾ ಪ್ಲ್ಯಾನ್‌ ಮಾಡಿದ್ದರು.

ATM ವಾಹನದಿಂದ ಹಣವನ್ನು ಲೂಟಿ ಮಾಡಿದ ಬಳಿಕ ಸಿಸಿಟಿವಿ ಹಾಗೂ ಟೋಲ್‌ಗಳಿಲ್ಲದ ಮಾರ್ಗದಲ್ಲಿ ತೆರಳಿದರು. ಬೂದಿಗೆರೆ ಕ್ರಾಸ್ ತಲುಪಿದ ಬಳಿಕ ಅಲ್ಲಿಂದ ಚಿತ್ತೂರಿಗೆ ತೆರಳಿದ್ರು. ಅಷ್ಟೊತ್ತಿಗೆ ಖದೀಮರ ಹಿಂದೆ ಬಿದ್ದಿದ್ದ ಪೊಲೀಸರು ಮೂಲೆ ಮೂಲೆ ಜಾಲಾಡೋದಕ್ಕೆ ಶುರು ಮಾಡಿದ್ರು. ಈ ವಿಷ್ಯ ಗೊತ್ತಾಗ್ತಿದ್ದಂತೆ ಇನ್ನೋವಾ ಕಾರನ್ನ ಬಿಟ್ಟು ಎಸ್ಕೇಪ್‌ ಆಗಿದ್ದರು. ದರೋಡೆಕೋರರನ್ನು ಇಂಚಿಂಚು ಜಾಲಾಡಿದ ಖಾಕಿ ಪಡೆ ಕುಪ್ಪಂನಲ್ಲಿ ತಲೆಮರೆಸಿಕೊಂಡಿದ್ದ ಜೇವಿಯರ್‌ನನ್ನು ಖೆಡ್ಡಾಗೆ ಕೆಡವಿದ್ರು. ಯಾವಾಗ ಜೇವಿಯರ್‌‌ ಲಾಕ್‌ ಆದನೋ ಬೆಂಗಳೂರಲ್ಲೇ ಇದ್ದ ಕಾನ್ಸ್‌ಟೇಬಲ್‌ ಅಣ್ಣಪ್ಪ ಹಾಗೂ ಗೋಪಿ ಕೂಡಾ ಪೊಲೀಸರ ಬಲೆಗೆ ಬಿದ್ದಿದ್ದರು. ಆ ಬಳಿಕ ಮತ್ತೆ ಮೂವರು ಅರೆಸ್ಟ್‌ ಆಗಿದ್ದಾರೆ. ಹೈದ್ರಾಬಾದ್‌ನಿಂದ ಕರೆತರಲಾಗ್ತಿದೆ.

Related posts

ಹೆಣ್ಣು ಮಗು ಬಲಿ; ಏಳು ವರ್ಷದ ಮಗುವನ್ನು ಕೊಂದೇ ಬಿಟ್ಟಳು ಮಲತಾಯಿ.. ಕಾರಣ ಗೊತ್ತಾ..?

Publicspot

Love Death; ಬೆಲೆ ಕಳೆದುಕೊಂಡ ಪ್ರೀತಿ.. ಗರ್ಭಿಣಿ ಆದ ಯುವತಿಗೆ ಕೈಕೊಟ್ಟ ಪ್ರೇಮಿ..!

Publicspot

7 ಕೋಟಿ ಲೂಟಿ ಮಾಡಿದವರು ಸಿಕ್ಕಿ ಬೀಳೋದು ಪಕ್ಕಾನಾ..?

Publicspot

Mahesh Thimarodi Arrest: ಮಹೇಶ್‌ ತಿಮರೋಡಿ ಅರೆಸ್ಟ್‌.. ಕಾರಣ ಏನು ಗೊತ್ತಾ..?

Publicspot

ಮದುವೆ ಆಗಿ 15 ದಿನ ಕಳೆದರೂ ಮಂಚಕ್ಕೆ ಬರಲಿಲ್ಲ.. ಕೊಂದೇ ಬಿಟ್ಟ ಗಂಡ..!!

Publicspot

PU ಫಲಿತಾಂಶ ನೆಪದಲ್ಲಿ ಮಗಳನ್ನು ಕೊಂದಳಾ ಹೆತ್ತಮ್ಮ..? ತನುಶ್ರೀ ಸಾವಿಗೆ ಕಾರಣ ಏನು..?

Publicspot