The Public Spot
ಅಪರಾಧ

Darshan And Pavitra Gowda Tension: ದರ್ಶನ್​ ಪಾಲಿಗೆ ಮಂಗಳವಾರ ಶುಭವೋ..? ಅಶುಭವೋ..?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ ಆರೋಪಿಗಳಾಗಿರುವ ನಟ ದರ್ಶನ್‌ ಹಾಗು ಪವಿತ್ರಾಗೌಡಗೆ ಮಂಗಳವಾರ ಅತ್ಯಂತ ನಿರ್ಣಾಯಕ ದಿನ ಆಗಿದೆ. ದರ್ಶನ್ ಸೇರಿದಂತೆ ಡಿ-ಗ್ಯಾಂಗ್​ನ 7 ಜನ ಕೊಲೆ ಆರೋಪಿಗಳ ಜಾಮೀನು ಸುಪ್ರೀಂಕೋಟರ್ಟ್ ನಲ್ಲಿ ‌ ರದ್ದು ಆದ ಬಳಿಕ ಎಲ್ಲರನ್ನೂ ವಶಕ್ಕೆ ಪಡೆದಿದ್ದ ಪೊಲೀಸರು, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್‌ ಮಾಡಿದ್ದರು. ಆ ಬಳಿಕ ಜೈಲು ಅಧಿಕಾರಿಗಳು ಎಸ್‌ಪಿಪಿ ಮೂಲಕ ದರ್ಶನ್‌ನನ್ನು ಬಳ್ಳಾರಿ ಜೈಲು ಸೇರಿದಂತೆ ಉಳಿದ ಐವರನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್‌ ಮಾಡುವಂತೆ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದರು. 64ನೇ CCH ಕೋರ್ಟ್‌ ವಿಚಾರಣೆ ನಡೆಸಿದ್ದು, ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲು ಮನವಿ ಮಾಡಿರುವುದಕ್ಕೆ ದರ್ಶನ್‌ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದರ್ಶನ್ ತಾಯಿ ಅನಾರೋಗ್ಯ ಒಪ್ಪುತ್ತಾ ಕೋರ್ಟ್..?

ನಟ ದರ್ಶನ್‌ನನ್ನು ಯಾವುದೇ ಕಾರಣಕ್ಕೂ ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಬಾರದು ಅಂತಾ ದರ್ಶನ್‌ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ. ಕೊಲೆ ಪ್ರಕರಣದ ಟ್ರಯಲ್ ಇನ್ನೇನು ಶೀಘ್ರದಲ್ಲಿ ಪ್ರಾರಂಭ ಆಗಲಿದೆ. ಒಂದು ವೇಳೆ ಬಳ್ಳಾರಿ ಜೈಲಿಗೆ ದರ್ಶನ್​ ಶಿಫ್ಟ್ ಮಾಡಿದ್ರೆ ವಕೀಲರ ತಂಡ ಭೇಟಿ ಮಾಡಲು ಸಮಸ್ಯೆ ಆಗಲಿದೆ. ಪ್ರತಿ ಬಾರಿ ವಿಚಾರಣೆಗೆ ಕೋರ್ಟ್​ ಗೆ ಹಾಜರು ಮಾಡಲೂ ಸಾಧ್ಯವಾಗುವುದಿಲ್ಲ. ಇನ್ನೂ ದರ್ಶನ್ ತಾಯಿ ಅನಾರೋಗ್ಯದಿಂದ ಬಳಲುತಿದ್ದು, ಮಗನನ್ನು ನೋಡಲು ಪ್ರತಿಬಾರಿ ಬಳ್ಳಾರಿ ಜೈಲಿಗೆ ಹೋಗಲು ಕಷ್ಟವಾಗುತ್ತದೆ ಅನ್ನೋ ಕಾರಣಗಳನ್ನು ಮುಂದಿಟ್ಟು ಆಕ್ಷೇಪಣೆ ಸಲ್ಲಿಸಲಾಗಿದೆ.

ಹಾಸಿಗೆ ದಿಂಬು ಇಲ್ಲದೆ ದಾಸನ ಪರದಾಟ..?

ಈ ನಡುವೆ ಕೊಲೆ ಆರೋಪಿ ನಟ ದರ್ಶನ್‌ಗೆ ಬೆಡ್ ಶಿಟ್, ತಲೆದಿಂಬು ಎರಡೆರಡು ಬೇಕು. ಮಲಗಲು ದಟ್ಟ/ಕೌದಿ ನೀಡಬೇಕು ಎಂದು ಮನವಿ ಮಾಡಿ ಕೋರ್ಟ್​ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜೈಲಿನ ಮ್ಯಾನ್ಯುಯಲ್‌ನಲ್ಲಿರೋ ಮೂಲಭೂತ ಸೌಕರ್ಯಗಳನ್ನ ಸಹ ಜೈಲಾಧಿಕಾರಿಗಳು ನೀಡ್ತಿಲ್ಲ. ಸುಪ್ರಿಂಕೋರ್ಟ್ ಆದೇಶವಿದೆ‌ ಅಂತ ಸಬೂಬು ಹೇಳ್ತಿದ್ದಾರೆ. ಜೈಲಾಧಿಕಾರಿಗಳಿಗೆ ಮನವಿ ಮಾಡಿದ್ರೂ, ತೆಳುವಾದ ಬೆಡ್ ಶೀಟ್ ಮತ್ತು ಕಾಟ್ ಮಾತ್​ರ ಕೊಟ್ಟಿದ್ದಾರೆ. ಮಳೆ, ಚಳಿ ಹೆಚ್ಚಿದ್ದು, ಕನಿಷ್ಠ ಸೌಲಭ್ಯ ನೀಡಬೇಕೆಂದು ಮನವಿ ಮಾಡಲಾಗಿದೆ. ಪ್ರಾಸಿಕ್ಯೂಷನ್ ಪರ ವಕೀಲರು ಸೆಪ್ಟೆಂಬರ್ 2 ರಂದು ಜೈಲು ಶಿಫ್ಟ್‌ ವಿಚಾರವಾಗಿ ವಾದ ಹಾಗೂ ಜೈಲಿನ ಮ್ಯಾನ್ಯುಯಲ್ ಬಗ್ಗೆ ಆಕ್ಷೇಪಣೆ ಸಲ್ಲಿಕೆ ಮಾಡುವುದಾಗಿ ತಿಳಿಸಿದ್ದು, ಸೆಪ್ಟೆಂಬರ್ 2 ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಆಗಿದೆ.

ಪವಿತ್ರಾಗೌಡಗೆ ಜಾಮೀನು.. ಯಾವ ಕಾರಣಕ್ಕೆ..?

ಈ ನಡುವೆ ಪವಿತ್ರಗೌಡಗೆ ಜಾಮೀನು ನೀಡುವಂತೆ ಹಿರಿಯ ವಕೀಲ ಬಾಲನ್ ಅರ್ಜಿ ಸಲ್ಲಿಸಿದ್ದು, CrPC ಮತ್ತು BNS ನಡುವೆ ಇರುವ ವ್ಯತ್ಯಾಸದ ಬಗ್ಗೆ ವಾದ ಮಂಡಿಸಿದ್ದಾರೆ. ಪ್ರಾಸಿಕ್ಯೂಷನ್ CrPC ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ‌. ನಿಯಮದ ಪ್ರಕಾರ BNS ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಬೇಕಿತ್ತು. CrPC 173 ಈಗ ಅಮಾನ್ಯವಾಗಿದೆ. BNS ಬಂದ ಬಳಿಕ ಹಳೇ ಸೆಕ್ಷನ್‌ಗಳು ಇಲ್ಲ ಎಂದು ಪಂಜಾಬ್ – ಹರಿಯಾಣ ಹೈ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ ವಾದ ಮಾಡಿದ್ದಾರೆ. CrPC ಅಡಿಯಲ್ಲಿ ಕಾನೂನು ಬಾಹಿರವಾಗಿ ಆಗಿರುವುದರಿಂದ ಜಾಮೀನು ಪಡೆಯಲು ನನ್ನ ಕಕ್ಷಿದಾರರು ಅರ್ಹರು ಎಂದು ವಾದಿಸಿದ್ದಾರೆ. ಈ ಬಗ್ಗೆಯೂ ಕೋರ್ಟ್‌ ಸೆಪ್ಟೆಂಬರ್‌ 2ಕ್ಕೆ ಆದೇಶ ಹೊರಡಿಸಲಿದೆ. ಒಟ್ಟಾರೆ ಮಂಗಳವಾರ ದರ್ಶನ್​, ಪವಿತ್ರಾ ಪಾಲಿಗೆ ಶುಭವೋ..? ಅಶುಭವೋ..? ಅನ್ನೋದು ಮಂಗಳವಾರವೇ ಗೊತ್ತಾಗಲಿದೆ.

Related posts

Minor Pregnent: 16 ವರ್ಷದ ಅಮ್ಮ.. 17 ವರ್ಷದ ಅಪ್ಪ.. ಎಲ್ಲಿಗೆ ಬಂತು ಸಮಾಜ..?

Publicspot

Drunk Drive; ಪೊಲೀಸರ ದಂಡ ದಾಹಕ್ಕೆ ಆಟೋ ಡ್ರೈವರ್​ ಆತ್ಮಹತ್ಯೆ ಯತ್ನ..

Publicspot

DARMASTHALA SIT ವರದಿ ಸಲ್ಲಿಸಿ: ಸದನದಲ್ಲಿ ಇವತ್ತು ಧರ್ಮಸ್ಥಳ ರಿಪೋರ್ಟ್.. ಏನಿದೆ..?

Publicspot

Man Stab a Girl for ; ಲೈಂಗಿಕ ಕ್ರಿಯೆಗೆ ಒಪ್ಪದ ಯುವತಿಗೆ ಚಾಕುವಿನಿಂದ ಇರಿತ!!

Publicspot

ಗಂಡನ ಜೊತೆ ವಿರಸ.. ಪ್ರಿಯಕರನ ಜೊತೆ ಸರಸ.. ಕೊಂದು ಹೋದ ರಫೀಕ್‌..

Publicspot

2023 Video Leak; ಚಿನ್ನಯ್ಯ ಹೇಳಿದ ಮಾತುಗಳು ಎಷ್ಟು ಸತ್ಯ..? ಎಷ್ಟು ಸುಳ್ಳು.. ಹೊಸ ವಿಡಿಯೋ ಲೀಕ್‌..

Publicspot