The Public Spot
ಅಪರಾಧ

Drunk Drive; ಪೊಲೀಸರ ದಂಡ ದಾಹಕ್ಕೆ ಆಟೋ ಡ್ರೈವರ್​ ಆತ್ಮಹತ್ಯೆ ಯತ್ನ..

ಚಿತ್ರದುರ್ಗ: ಡ್ರಂಕ್ ಅಂಡ್ ಡ್ರೈವ್ ಕೇಸ್ ವಿಚಾರಕ್ಕೆ ಆಟೋ ಡ್ರೈವರ್ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ನಡೆದಿದೆ. ಆಟೋ ಡ್ರೈವರ್ ತಿಪ್ಪೇಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಪೊಲೀಸರು ಆಟೋ ಹಿಡಿದಿದ್ದರು, ಆಗ ನಾನು ಕೋರ್ಟ್​ಗೆ ಫೈನ್ ಕಟ್ಟುತ್ತೇನೆ ಎಂದು ಹೇಳಿದೆ. ಆಗ ಗಾಂಧಿ ಸರ್ಕಲ್​ನಲ್ಲಿ ನನ್ನ ಮೇಲೆ ಟ್ರಾಫಿಕ್ ಪೊಲೀಸರು ಹಲ್ಲೆ ಮಾಡಿದರು. ಪೊಲೀಸರು ನನ್ನ ಮೇಲೆ ದೌರ್ಜನ್ಯ ಮಾಡಿದರು, ನನ್ನ ಮರ್ಯಾದೆ ತೆಗೆದರು. ನನ್ನ ಮರ್ಯಾದೆ ಹೋಯ್ತು ಅನ್ನೋ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದೇನೆ. ನಾನೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದೇನೆ ಎಂದಿದ್ದಾರೆ.

ನಾನು ಆತ್ಮಹತ್ಯೆಗೆ ಯತ್ನಿಸಿದಾಗಲೂ ನನ್ನ ಸಹಾಯಕ್ಕೆ ಪೊಲೀಸರು ಬರ್ಲಿಲ್ಲ, ಸಾರ್ವಜನಿಕರು ಸಹಾಯಕ್ಕೆ ಬಂದ್ರು. ನನ್ನ ಆಟೋ ಹಿಡಿದ್ದರು, ಆ ಕಾರಣಕ್ಕೆ ಈ ತರ ಮಾಡಿದರು. ನನ್ನ ಸಾವಿಗೆ ಪೊಲೀಸರು ಮಾತ್ರ ಕಾರಣ ಎಂದಿದ್ದಾರೆ. ಆಟೋ ಡ್ರೈವರ್ ತಿಪ್ಪೆಸ್ವಾಮಿ ಮೇಲೆ ಟ್ರಾಫಿಕ್ ಪೊಲೀಸರು ಹಲ್ಲೆ ಮಾಡಿದ ಆರೋಪ ಕೇಳಿಬಂದಿದ್ದು, ಟ್ರಾಫಿಕ್ ಪೊಲೀಸರು ಹಾಗೂ ತಿಪ್ಪೇಸ್ವಾಮಿ ವಾಗ್ವಾದ ನಡೆಸುತ್ತಿರುವ ವಿಡಿಯೋ ವೈರಲ್​ ಆಗಿದೆ. ಈ ವೇಳೆ ಆಟೋ ಡ್ರೈವರ್​ ತಿಪ್ಪೇಸ್ವಾಮಿಯನ್ನು ಟ್ರಾಫಿಕ್ ಪೊಲೀಸರು ತಳ್ಳಾಡಿದ್ದಾರೆ. ಆಗಲೂ ನಾನು ಫೈನ್ ಕಟ್ತೀನಿ ಅಂತಿದ್ದಾರೆ ತಿಪ್ಪೇಸ್ವಾಮಿ. ಆದರೂ ಆಟೋ ಬಳಿ ನಡಿ ಅಂತಾ ತಿಪ್ಪೇಸ್ವಾಮಿ ಶರ್ಟ್ ಹಿಡಿದು ಎಳೆದಾಡಿದ್ದಾರೆ ಟ್ರಾಫಿಕ್ ಪೊಲೀಸರು. ಈ ಘಟನೆ ನಂತರ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ತಿಪ್ಪೇಸ್ವಾಮಿ.

ಆಟೋ ಚಾಲಕ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ ಮಾಡಿದ ಬಳಿಕ ತಿಪ್ಪೇಸ್ವಾಮಿಯನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಗಾಯಾಳು ತಿಪ್ಪೇಸ್ವಾಮಿಯನ್ನು ದಾವಣಗೆರೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತಿಪ್ಪೇಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ‌ನ್ಯಾಯಕ್ಕಾಗಿ ಆಗ್ತಹಿಸಿ ಆಟೋ ಡ್ರೈವರ್ಸ್​​ ಪೊಲೀಸ್​ ಠಾಣೆ ಎದುರು ಜಮಾವಣೆ ಆಗಿದ್ದರು. ಇನ್ನೊಂದು ಕಡೆ ತಿಪ್ಪೆಸ್ವಾಮಿ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ ಮಾಡ್ತಿರುವಾಗ ಬೇರೊಬ್ಬ ಬೆಂಕಿ ಹಚ್ಚಿರುವ ವಿಡಿಯೋ ಕೂಡ ವೈರಲ್​ ಆಗಿದೆ.

ಪೆಟ್ರೋಲ್ ಸುರಿದುಕೊಂಡ ತಿಪ್ಪೇಸ್ವಾಮಿಗೆ ಕಿಡಿಗೇಡಿಯೊಬ್ಬ ಬೆಂಕಿ ಇಟ್ಟಿದ್ದಾನೆ eನ್ನಲಾಗ್ತಿದೆ. ಪೆಟ್ರೋಲ್ ಸುರಿದುಕೊಳ್ತಿದ್ದ ತಿಪ್ಪೇಸ್ವಾಮಿ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಆತನನ್ನು ತಡೆಯಲು ಯತ್ನಿಸಿದ್ದಾನೋ..? ಬೆಂಕಿ ಹಚ್ಚಿದ್ದಾನೋ..? ಅನ್ನೋದು ಖಚಿತವಾಗಿಲ್ಲ. ಆದರೆ ಈ ವಿಚಾರ ತಿಪ್ಪೆಸ್ವಾಮಿ ಗಮನಕ್ಕೆ ಬಂದಿಲ್ಲ, ತಾನೇ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರಿಂದ ತಾನೇ ಬೆಂಕಿ ಹಚ್ಚಿಕೊಂಡಿದ್ದೇನೆ ಎಂದು ಭಾವಿಸಿದ್ದು, ನಾನೇ ಆತ್ಮಹತ್ಯೆಗೆ ಯತ್ನಿಸಿದೆ ಎಂದಿದ್ದಾರೆ. ಆದರೆ ಬೇರಯವರು ಬೆಂಕಿ ಹಚ್ಚಿದ್ದಾರಾ..? ಅನ್ನೋದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ. ಆದರೆ, ಪೊಲೀಸರು ದಂಡ ಕಟ್ಟಿಸಿಕೊಳ್ಳುವುದಕ್ಕಾಗಿ ಆಟೋದಲ್ಲಿ ಕೂರುವಂತೆ ಹಿಂಸೆ ಕೊಟ್ಟಿರುವುದು ದುರಾದೃಷ್ಟಕರ.

Related posts

Byrathi Basavaraj; ನಿರೀಕ್ಷಣಾ ಜಾಮೀನು ಅರ್ಜಿ ವಜಾ.. ಮುಂದಿರುವ ಮಾರ್ಗ ಏನು..?

Publicspot

ಹಾಡಹಗಲೇ ಬರ್ತಾರೆ.. ಪೊಲೀಸರೇ ದರೋಡೆ ಮಾಡಿಕೊಂಡು ಹೋಗ್ತಾರೆ..!!?

Publicspot

DARSHAN JAIL SHIFT: ದರ್ಶನ್‌ ಇವತ್ತು ಬಳ್ಳಾರಿ ಜೈಲಿಗೆ ಶಿಫ್ಟ್‌ ಆಗೋದು ಪಕ್ಕಾನಾ..?

Publicspot

ಧರ್ಮಸ್ಥಳದಲ್ಲಿ ಇವತ್ತು ಹೈಟೆಕ್​ ತಂತ್ರಜ್ಞಾನದ ಜೊತೆಗೆ ಅಸ್ಥಿ ಆಪರೇಷನ್​..!!

Publicspot

Lectuer – Student Love: ಮನೆಯಲ್ಲಿ ಮದುವೆ ತಯಾರಿ.. ಮಗಳು ಪ್ರಾಧ್ಯಾಪಕನ ಜೊತೆ ಪರಾರಿ..

ಯಶವಂತಿ

ತರಬೇತಿ ಸರ್ಟಿಫಿಕೇಟ್‌‌ ಪಡೆಯಲು ಹೋದ ವೈದ್ಯೆ ಕೊಂದಿದ್ಯಾರು..?

Publicspot