The Public Spot
ಅಪರಾಧ

ಗಂಡನ ಜೊತೆ ವಿರಸ.. ಪ್ರಿಯಕರನ ಜೊತೆ ಸರಸ.. ಕೊಂದು ಹೋದ ರಫೀಕ್‌..

ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ಗಂಡನಿಂದ ದೂರವಿದ್ದು ಸಹಜೀವನ ನಡೆಸ್ತಿದ್ದ ಮಹಿಳೆಯನ್ನ ಆಕೆಯ ಪ್ರಿಯಕರನೇ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಮದುವೆಯಾಗಿ ಗಂಡನಿಂದ ದೂರವಿದ್ದ ರಂಜಿತಾ, ಕಳೆದ ಕೆಲ ವರ್ಷಗಳಿಂದ ರಫೀಕ್‌ ಜತೆ ವಾಸಿಸುತ್ತಿದ್ದಳು. ಆದ್ರೆ ಕ್ಷುಲ್ಲಕ ಕಾರಣಕ್ಕೆ ರಂಜಿತಾಳ ಕತ್ತು ಸೀಳಿ ರಫೀಕ್ ಪರಾರಿಯಾಗಿದ್ದಾನೆ. ಘಟನೆ ಬಳಿಕ ಹಿಂದೂ ಸಂಘಟನೆಗಳು ಯಲ್ಲಾಪುರ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತರ ಕನ್ನಡ ಜಿಲ್ಲೆ ಯುಲ್ಲಾಪುರದಲ್ಲಿ ವಿವಾಹಿತ ಮಹಿಳೆಯನ್ನು ಕೊಲೆ ಮಾಡಿರುವ ಸಂಬಂಧ ಇಂದು ಯಲ್ಲಾಪುರ ಬಂದ್​ಗೆ ಕರೆ ನೀಡಲಾಗಿದೆ. ಹಿಂದೂಪರ ಸಂಘಟನೆಗಳು ಯಲ್ಲಾಪುರ ಬಂದ್ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಅಕ್ರಮ ಸಂಬಂಧ ಹಿನ್ನಲೆಯಲ್ಲಿ ರಂಜಿತಾ ಎಂಬಾಕೆಯನ್ನು ಕೊಲೆ ಮಾಡಿದ್ದ ಪ್ರಿಯಕರ ರಫೀಕ್ ಪರಾರಿಯಾಗಿದ್ದ. ಕೊಲೆ ಪ್ರಕರಣ ಸಂಬಂಧ ಆಕ್ರೋಶ ಭುಗಿಲೆದ್ದಿದ್ದು, ಹಿಂದೂಪರ ಸಂಘಟನೆ ಕಾರ್ಯಕರ್ತರು, ಯಲ್ಲಾಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಘಟನೆ ಕೋಮುದ್ವೇಷಕ್ಕೆ ತಿರುಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಯಲ್ಲಾಪುರದಲ್ಲಿ ಹಿಂದೂ ಯುವತಿ ಕೊಲೆ ಪ್ರಕರಣ ಸಂಬಂಧ ಕಿಮ್ಸ್ ಶವಾಗಾರಕ್ಕೆ ರಂಜಿತಾಳ ಶವವನ್ನು ಶಿಫ್ಟ್ ಮಾಡಲಾಗಿದೆ. ಮೃತ ರಂಜಿತಾಳ ಸಹೋದರ ಕಣ್ಣೀರು ಹಾಕಿದ್ದು, ಹಣಕಾಸಿನ ವಿಚಾರದಲ್ಲಿ ಆರೋಪಿ ರಫೀಕ್ ಮತ್ತು ರಂಜಿತಾಳ ನಡುವೆ ಪರಿಚಯ ಆಗಿತ್ತು. ರಫೀಕ್​ಗೆ ಲವರ್ ಕೈಕೊಟ್ಟಿದ್ದರಿಂದ, ನನ್ನ ತಂಗಿಗೆ ಗಂಟು ಬಿದ್ದಿದ್ದ.. ಈಗ ಕೊಲೆ ಮಾಡಿದ್ದಾನೆ. ಕೊಲೆ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ರಂಜಿತಾ ಸಹೋದರ ವೀರಭದ್ರ ಆಗ್ರಹಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ಹಿಂದೂ ಮಹಿಳೆ ಕೊಲೆ ಪ್ರಕರಣ ಸಂಬಂಧ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನೈತಿಕ ಸಂಬಂಧ ಮೂಲಕ ರಫೀಕ್ ಅನ್ನೋನು ಕೊಲೆ ಮಾಡಿದ್ದಾನೆ. ಇದುವರೆಗೂ ಕೊಲೆಗಾರನ ಬಂಧನವಾಗಿಲ್ಲ. ಆತನ ಮನೆಯವರನ್ನು ಬಂಧಿಸಿ ತನಿಖೆ ಮಾಡಬೇಕು. ಆಗ ಆರೋಪಿ ಬಗ್ಗೆ ಗೊತ್ತಾಗುತ್ತದೆ. ಆರೋಪಿ ಮುಸ್ಲಿಂ ಆದಾಗ ಹಿಂದೇಟು ಹಾಕಬಾರದು. ಕಾಂಗ್ರೆಸ್ ಸರ್ಕಾರದಲ್ಲಿ ಈ ರೀತಿ ಪೊಲೀಸರಿಗೆ ಒತ್ತಡ ಆಗಬಾರದು. ಪೊಲೀಸರು ನ್ಯಾಯದ ಪರ ಕೆಲಸ ಮಾಡಬೇಕು ಅಂತಾ ಆಗ್ರಹಿಸಿದ್ದಾರೆ. ರಂಜಿತಾಳ ಸಾವಿಗೆ ಶ್ರದ್ದಾಂಜಲಿ ಸಲ್ಲಿಸಿರುವ ಮುತಾಲಿಕ್‌ ಅವರು, ಆರೋಪಿ ರಫೀಕ್‌ ಬಂಧನ ಆಗುವ ತನಕ ರಂಜಿತಾ ಶವ ಸಂಸ್ಕಾರ ಮಾಡಬಾರದು ಎಂದು ಆಗ್ರಹ ಮಾಡಿದ್ದಾರೆ.

Related posts

ವರ್ಷದ ಹಿಂದೆ DOCTOR ಮದುವೆ.. 6 ತಿಂಗಳ ಹಿಂದೆ ಕೊಲೆ.. ಈಗ ರಹಸ್ಯ ಬಯಲು..!

Publicspot

ಅಮ್ಮನ ಹುಟ್ಟು ಹಬ್ಬದ ದಿನವೇ ಮಗಳ ಕೊಲೆ.. ಅಮ್ಮ ನೀನೆಷ್ಟು ಕ್ರೂರಿ..!!

Publicspot

DHARMASTHALA BJP RALLY: ಧರ್ಮಸ್ಥಳಲ್ಲಿ ಶುರುವಾಗಿದೆ ಧರ್ಮ ರಾಜಕಾರಣ..

Publicspot

ಕಾಯೋ ದೈವವೇ ಕ್ರೂರವಾದರೆ.. ರಕ್ಷಣೆ ಎಲ್ಲಿದೆ..? ಅಯ್ಯೋ ದೇವರೇ..?

Publicspot

Darshan-Pavithra ಮದುವೆ ಫೋಟೋ ವೈರಲ್‌.. ಕೋರ್ಟ್‌ನಲ್ಲಿ ಕಟ್ಟ ಕಡೇ ಎಚ್ಚರಿಕೆ

Publicspot

ಕೊಲೆಗಾರ ವಿನಯ್​ ಕುಲಕರ್ಣಿ ಮುಂದಿರುವ ಆಯ್ಕೆಗಳು ಏನು..?

Publicspot