ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ನ ಬಂಧನ ಮಾಡಿದ್ದು, ತನಿಖೆ ಮಾಡಿದ್ದು ಎಲ್ಲವನ್ನೂ ಗಮನಿಸಿದೆ ಪೊಲೀಸ್ ಅಧಿಕಾರಿಗಳು ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಂಡರೆ ಕಾನೂನು ಎಷ್ಟು ಸುಂದರವಾಗಿ ಕಾಣಲಿದೆ ಅನ್ನೋದಕ್ಕೆ ದರ್ಶನ್ ಅಂಡ್ ಗ್ಯಾಂಗ್ ಕೇಸ್ ಸ್ಪಷ್ಟ ಉದಾಹರಣೆಯಾಗಿ ಕಾಣಿಸುತ್ತದೆ. ದರ್ಶನ್ ಕೇಸ್ ನಲ್ಲಿ ಅಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿದ್ದ ಬಿ ದಯಾನಂದ್ ಮತ್ತು ತನಿಖಾಧಿಕಾರಿ ಆಗಿದ್ದ ಚಂದನ್ ಕುಮಾರ್ ಮತ್ತು ಡಿಸಿಪಿ ಗಿರೀಶ್ ಅವರ ಪಾತ್ರ ಸ್ಮರಣೀಯ ಎನ್ನಬಹುದು. ಇಂದು ಕಠಿಣ ಕ್ರಮಗಳನ್ನು ಕೈಗೊಳ್ಳಲಾಯಿತು.
ಇದೀಗ ದರ್ಶನ್ ಅಂಡ್ ಗ್ಯಾಂಗ್ ಗೆ ಶರಣಾಗತಿಗೆ ಅವಕಾಶವಿಲ್ಲ. ನೇರವಾಗಿ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮಾಡಲಾಗ್ತಿದೆ. ನೇರವಾಗಿ ಬಂಧನಕ್ಕೆ ಸೂಚಿಸಿರುವ ಸುಪ್ರೀಂ ಕೋರ್ಟ್. ಹೀಗಾಗಿ ಏಳು ಆರೋಪಿಗಳ ಬಂಧನಕ್ಕೆ ಮುಂದಾಗಿರುವ ಪೊಲೀಸರು. ತಕ್ಷಣ ಬಂಧನಕ್ಕೆ ಸೂಚಿಸಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ. ಆರೋಪಿಗಳು ಇದ್ದಲ್ಲಿಯೇ ತೆರಳಿ ಬಂಧನಕ್ಕೆ ಮುಂದಾಗಿದ್ದಾರೆ. ಸಂಜೆ ನಾಲ್ಕು ಗಂಟೆ ಸುಮಾರಿಗೆ ಎಲ್ಲಾ ಆರೋಪಿಗಳನ್ನು ಕೋರ್ಟ್ ಹಾಜರು ಪಡಿಸಲು ಪೊಲೀಸರ ಪ್ರಯತ್ನ.

ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ದರ್ಶನ್ ಸೇರಿ ಎಲ್ಲರನ್ನ ವಶಕ್ಕೆ ಪಡೆದು ಕೋರ್ಟ್ ಮುಂದೆ ಹಾಜರು ಪಡಿಸಲು ಪೊಲೀಸರ ಕಾರ್ಯಾಚರಣೆ ಮಾಡುತ್ತಿದ್ದಾರೆ. ವಿಶೇಷ ಅಂದರೆ ಅಂದು ದರ್ಶನ್ ಅಂಡ್ ಗ್ಯಾಂಗ್ ಅರೆಸ್ಟ್ ಮಾಡಲು ಆದೇಶ ಮಾಡಿದ್ದೇ ಎಡಿಜಿಪಿ ದಯಾನಂದ್. ದರ್ಶನ್ ಕೊಲೆಯಲ್ಲಿ ಭಾಗಿಯಾಗಿದ್ದು ಖಾತ್ರಿಯಾಗ್ತಿದ್ದಂತೆ ಮುಲಾಜಿಲ್ಲದೆ ಅರೆಸ್ಟ್ ಮಾಡಿ ಎಂದು ದಯಾನಂದ್ ಸೂಚನೆ ಕೊಟ್ಟಿದ್ದರು. ಇಂದು ಮತ್ತೆ ಅದೇ ದಯಾನಂದ್ ಜೈಲಿನ ಮುಖ್ಯಸ್ಥರಾಗಿದ್ದಾರೆ. ಸದ್ಯ ಬಿ ದಯಾನಂದ್ ಜೈಲಿನ ಎಡಿಜಿಪಿಯಾಗಿದ್ದಾರೆ. ಅಂದು ದಯಾನಂದ್ ಕೈಗೆ ಸಿಲುಕಿ ಕಾನೂನು ಕುಣಿಕೆಗೆ ಸಿಲುಕಿ ಒದ್ದಾಡಿದ್ದ ದರ್ಶನ್, ಇಂದು ಮತ್ತೆ ಅದೇ ದಯಾನಂದ್ ಕೈ ಕೆಳಗೆ ಸಿಲುಕಿದ್ದಾರೆ.
ಸುಪ್ರೀಂಕೋರ್ಟ್ ಆದೇಶಕ್ಕೆ ಕುಟುಂಬಸ್ಥರು ಶಾಕ್ ಆಗಿದ್ದು, ಅರ್ ಅರ್ ನಗರ ದರ್ಶನ ನಿವಾಸದ ಬಳಿ ನೀರವ ಮೌನ ಆವರಿಸಿದೆ. ಕೋರ್ಟ್ ತೀರ್ಪಿನಿಂದ ಶಾಕ್ನಲ್ಲಿರೋ ವಿಜಯಲಕ್ಷ್ಮಿ ದರ್ಶನ್, ವಿನೀಶ್, ಸಹೋದರ ದಿನಕರ್ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ದರ್ಶನ್ನನ್ನು ಬಹುತೇಕ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಿದ್ದಾರೆ ಎನ್ನಲಾಗ್ತಿದೆ. ಮಾಧ್ಯಮಗಳ ಜೊತೆಗೆ ಮಾತನಾಡಿರುವ ನಟಿ ರಕ್ಷಿತಾ ಪ್ರೇಮ್, ಇಷ್ಟೆಲ್ಲಾ ಹರಕೆ, ಪೂಜೆ ಫಲಿಸಲಿಲ್ಲ ಅಂತ ಕಣ್ಣೀರು ಹಾಕಿದ್ದಾರೆ. ದರ್ಶನ್ಗೆ ಆಪ್ತ ಸ್ನೇಹಿತೆ ಆಗಿರುವ ನಟಿ ರಕ್ಷಿತಾ ಬೇಲ್ ರದ್ದು ಆಗಲ್ಲ ಎನ್ನುವ ನಂಬಿಕೆಯಲ್ಲಿ ಇದ್ದರು ಎನಿಸುತ್ತದೆ. ಆದರೆ ಕಾನೂನು ಎಲ್ಲರಿಗೂ ಒಂದೇ ಎನ್ನುವ ಸಂದೇಶ ಸಾರಿರುವ ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿ ಕಾನೂನು ಮತ್ತು ನ್ಯಾಯಾಲಯದ ಬಗ್ಗೆ ಮೇಲ್ಪಂಕ್ತಿ ಹಾಕಿದೆ.


