The Public Spot
ಅಪರಾಧ

Insta Love: ಏಕಾಂತದ ಸರಸಕ್ಕೆ ಅಡ್ಡಿ ಅಂತಾ ಮಲ-ಮಗಳನ್ನೇ ಕೊಂದ ತಂದೆ ಅರೆಸ್ಟ್‌!

ಬೆಂಗಳೂರಿನ ಕುಂಬಳಗೋಡಿನ ರಾಮಸಂದ್ರದಲ್ಲಿ ಶುಕ್ರವಾರ ಸಂಜೆ 7 ವರ್ಷದ ಬಾಲಕಿಯನ್ನು ಮಲತಂದೆಯೇ ಕೊಲೆ ಮಾಡಿದ್ದ ಘಟನೆ ನಡೆದಿತ್ತು. ಮಲ ಮಗಳನ್ನ ಕೊಲೆ ಮಾಡಿದ್ದ ಕಿರಾತಕ ತಂದೆ ಅರೆಸ್ಟ್ ಆಗಿದ್ದಾನೆ. ಹಂತಕ ದರ್ಶನ್ ಬಾಲಕಿಯ ಕೊಲೆ ಹಿಂದಿನ ಸಿಕ್ರೇಟ್ ಬಿಚ್ಚಿಟ್ಟಿದ್ದಾನೆ. ಗಂಡ – ಹೆಂಡತಿ ಏಕಾಂತಕ್ಕೆ ಮಲ ಮಗಳು ಅಡ್ಡಿ ಆಗಿದ್ದಾಳೆ ಅಂತಾ ಕೊಲೆ ಮಾಡಿದೆ ಅನ್ನೋದನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಮಲತಂದೆ ದರ್ಶನ್‌ನನ್ನ ಕುಂಬಳಗೋಡು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಕೊಲೆ ರಹಸ್ಯ ಬಿಚ್ಚಿಟ್ಟಿರುವ ಆರೋಪಿ ದರ್ಶನ್, ನಾನು ನನ್ನ ಹೆಂಡತಿ ಜೊತೆಗೆ ಏಕಾಂತ ಸಮಯ ಕಳೆಯಲು ಅಡ್ಡಿಯಾಗಿದ್ದಳು. ಅದೇ ಕಾರಣಕ್ಕೆ 7 ವರ್ಷದ ಬಾಲಕಿ ಸಿರಿಯನ್ನ ಕೊಲೆ ಮಾಡುವ ನಿರ್ಧಾರ ಮಾಡಿದ್ದೆ ಎಂದಿದ್ದಾನೆ ಎನ್ನಲಾಗಿದೆ.

7 ವರ್ಷದ ಆರೋಪಿ ದರ್ಶನ್ ಮತ್ತು ಬಾಲಕಿ ತಾಯಿ‌ ಶಿಲ್ಪಾ ಇಬ್ಬರು ಇನ್‌‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ. ಆ ಬಳಿಕ ಶಿಲ್ಪಾಳನ್ನ ಎರಡನೇ ಮದುವೆಯಾಗಿದ್ದನು. ಆರೋಪಿ ದರ್ಶನ್‌‌ಗೆ ಗಂಡ ಹೆಂಡತಿ‌ ನಡುವಿನ ಪ್ರೈವೆಸಿ ಬೇಕು ಅಂತಾ ಅನ್ನಿಸಿತಂತೆ. ಬಾಲಕಿ ಸಿರಿ ಅಜ್ಜಿ ಇರೋ ತನಕ ಯಾವುದೇ ಕಿರಿಕ್ ಮಾಡದೆ ಬಾಲಕಿಯನ್ನ ಚೆನ್ನಾಗಿ ನೋಡಿಕೊಳ್ತಿದ್ನಂತೆ ಆರೋಪಿ. ಇತ್ತೀಚಿಗೆ ಸಿರಿ ಅಜ್ಜಿ ಮೃತಪಟ್ಟ ಬಳಿಕ ತನ್ನ ಕ್ರೂರ ಬುದ್ಧಿ ತೋರಿಸಲು ಶುರು ಮಾಡಿದ್ನಂತೆ. ಬಾಲಕಿಗೆ ನಿತ್ಯ ಹೊಡೆದು ಬಡಿಯುತ್ತ ಚಿತ್ರಹಿಂಸೆ ಕೊಟ್ಟಿದ್ನಂತೆ. ಈ ಹಿಂಸೆಯೇ ಕೊನೆಗೆ ಬಾಲಕಿಯ ಪ್ರಾಣಕ್ಕೂ ಕುತ್ತು ತಂದಿದೆ.

ಕಳೆದ ಶುಕ್ರವಾರ ಸಂಜೆ ಬಾಲಕಿ ತಾಯಿ ಶಿಲ್ಪಾ ಕೆಲಸಕ್ಕೆ ಹೋಗಿ ಮನೆಗೆ ವಾಪಸ್‌ ಬಂದಿರಲಿಲ್ಲ. ಶಾಲೆಯಿಂದ ವಾಪಸ್‌ ಬಂದ ಬಾಲಕಿ ಸಿರಿ, ಮಲತಂದೆ ದರ್ಶನ್‌ಗೆ ಹೆದರಿ ಮನೆಗೆ ಹೋಗದೆ ಪರಿಚಯಸ್ಥರ ಅಂಗಡಿ ಬಳಿ ನಿಂತಿದ್ದಳು. ಈ ವೇಳೆ ಮನೆಯಲ್ಲಿದ್ದ ದರ್ಶನ್ ಬಾಲಕಿಯನ್ನ ಹುಡುಕಿಕೊಂಡು ಬಂದಿದ್ದ. ಅಂಗಡಿ ಬಳಿ ಇದ್ದ ಬಾಲಕಿ ಸಿರಿಯನ್ನ ಮನೆಗೆ ಕರೆದಾಗ, ಬಾಲಕಿ ಮನೆಗೆ ಹೋಗಲು ಹಿಂದೇಟು ಹಾಕಿದ್ದಳಂತೆ. ಈತ ನನಗೆ ಹೊಡೀತಾನೆ ಅಂತ ಎಲ್ಲರ ಎದುರು ಹೇಳಿದ್ದಳಂತೆ. ಆದರೂ ಬಲವಂತವಾಗಿ ಬಾಲಕಿಯನ್ನ ಮನೆಗೆ ಕರೆದುಕೊಂಡು ಹೋಗಿದ್ದ ದರ್ಶನ್, ಕೋಪದಲ್ಲಿ ಭೀಕರವಾಗಿ ಹಲ್ಲೆ‌ ಮಾಡಿ, ಕತ್ತು ಹಿಸುಕಿ ಕೊಲೆ ಮಾಡಿದ್ನಂತೆ.

ಬಾಲಕಿ ಸಿರಿ ಮೂಗು, ಬಾಯಲ್ಲಿ ರಕ್ತ ಬಂದಾಗ ಬಾತ್ ರೂಮ್‌ನಲ್ಲಿ ರಕ್ತ ವಾಶ್ ಮಾಡಿದ್ದಾನೆ. ಬಳಿಕ ತಾಯಿ ಮನೆಗೆ ಬಂದಾಗ ಮಗಳ ಸ್ಥಿತಿ ನೋಡಿ ಕಿರುಚಿಕೊಂಡಿದ್ದಾಳೆ. ಈ ವೇಳೆ ಆಕೆಯನ್ನ ರೂಮಿನಲ್ಲಿ ಕೂಡಿಹಾಕಿ ದರ್ಶನ್ ಎಸ್ಕೇಪ್ ಆಗಿದ್ದನು. ಆ ಬಳಿಕ ನೆಲಮಂಗಲ ಬಳಿ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಹೆಡೆಮುರಿ‌ ಕಟ್ಟಿದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಉಂಟಾದ ಪ್ರೀತಿ ಮದುವೆಯಲ್ಲಿ ಒಂದಾಗಿತ್ತು. ಆದರೆ ಹೆಂಡತಿ ಜೊತೆಗೆ ಸರಸ ಆಡುವ ಸಮಯದಲ್ಲಿ ಮಗಳು ಅಡ್ಡಿಯಾಗ್ತಿದ್ದಳು ಅನ್ನೋ ಕಾರಣಕ್ಕೆ ಮಲ-ಮಗಳನ್ನು ಕೊಲೆ ಮಾಡಿದ್ದಾನೆ. ಇದೀಗ ಪೊಲೀಸ್ರು ಆರೋಪಿ ದರ್ಶನ್‌ನನ್ನು ಅರೆಸ್ಟ್‌ ಮಾಡಿ ವಿಚಾರಣೆ ನಡೆಸಿದ್ದಾರೆ.

Related posts

ಲಿವ್‌ ಇನ್‌ ರಿಲೇಷನ್‌ಶಿಪ್‌‌‌ನಲ್ಲಿ ಯುವತಿಯನ್ನು ಕೊಂದನಾ ಅಂಕಲ್‌..?

Publicspot

ಧರ್ಮಸ್ಥಳಕ್ಕೆ ಇಂದು Car Rally : ಜೈನರನ್ನು ಟೀಕಿಸಿದ್ದಕ್ಕೆ ಅರೆಸ್ಟ್…!

Publicspot

ಜಾರ್ಖಂಡ್​ ಮೂಲದ ಯುವತಿಯ ಬೆತ್ತಲೆ ದೇಹ ಪತ್ತೆ..! ಕೊಲೆ ಶಂಕೆ..

Publicspot

Darshan And Police Officers: ರೇಣುಕಾಸ್ವಾಮಿ ಕೊಲೆ ಕೇಸ್​ ಮತ್ತು ಖಡಕ್​ ಅಧಿಕಾರಿಗಳ ಪಾತ್ರ..

ಯಶವಂತಿ

Priyanka Upendra; ಪ್ರಿಯಾಂಕಾ ಉಪೇಂದ್ರಗೆ ವಂಚಿಸಿದ್ದ ಬಿಹಾರಿ ಬಾಬು ಅಂದರ್​..

Publicspot

ಗಿಳಿ ಹಿಡಿಯಲು ಹೋದ ಯುವಕ, ಕರೆಂಟ್​ ಶಾಕ್​ನಿಂದ ಸಾವು..!

Publicspot