September 10, 2026
The Public Spot
ರಾಜ್ಯ

ಮಂಡ್ಯದಲ್ಲಿ ಒಂದೇ ಕುಟುಂಬದ ಮೂರು ಸಾವು.. ಅನುಮಾನದ ಹುತ್ತ..

ಮಂಡ್ಯ ಜಿಲ್ಲೆಯಲ್ಲಿ ಸಾಲದ ಶೂಲಕ್ಕೆ ಸಿಕ್ಕ ವ್ಯಕ್ತಿ ಇಬ್ಬರನ್ನು ಕೊಲೆ ಮಾಡಿ, ತಾನೂ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಒಂದು ತಿಂಗಳ ಹಿಂದಷ್ಟೇ ಮಗನ ಮದುವೆ ಮಾಡಲಾಗಿತ್ತು. ಇದೀಗ ಸೊಸೆ ಗಾಢ ನಿದ್ರೆಯಲ್ಲಿದ್ದಾಗ ಅಪ್ಪ-ಅಮ್ಮ ಹಾಗೂ ಮಗ ಸಾವಿನ ಮನೆ ಸೇರಿದ್ದಾರೆ. ಮಂಡ್ಯದ ನೆಹರು ನಗರದಲ್ಲಿ ಒಂದೇ ಕುಟುಂಬದ ಮೂವರು ಹೆಣವಾಗಿದ್ದನ್ನ ಕಂಡ ಜನ ಆತಂಕಕ್ಕೆ ಒಳಗಾಗಿದ್ದಾರೆರ. ಒಬ್ಬನೇ ಮಗನಿಗೆ ಮದುವೆ ಮಾಡಿ ಕುಟುಂಬಸ್ಥರು ಸಂಭ್ರಮದಲ್ಲಿ ಇದ್ದರು. ಆದರೆ ಈಗ ಈ ರೀತಿಯ ಘಟನೆ ಇಡೀ ಏರಿಯಾ ಜನರಿಗೆ ಆಶ್ಚರ್ಯ ತರಿಸಿದೆ.

ಪ್ರಭಾಕರ್ ಬಟ್ಟೆ ಅಂಗಡಿ ಇಟ್ಕೊಂಡು ಜೀವನ ನಡೆಸ್ತಿದ್ದರು. ದಂಪತಿಗೆ ಇದ್ದಿದ್ದು ಇಬ್ಬರು ಮಕ್ಕಳು. ಅದರಲ್ಲಿ ಒಬ್ಬಳು ಮಗಳು, ಮತ್ತೊಬ್ಬ ಮಗ. ಮಗಳು ಬೆಂಗಳೂರಲ್ಲಿದ್ರೆ, ಅಪ್ಪ-ಅಮ್ಮ ಮಗನ ಜೊತೆಗೆ ಮಂಡ್ಯದಲ್ಲೇ ವಾಸ ಆಗಿದ್ದರು. ಏಪ್ರಿಲ್‌ ತಿಂಗಳಲ್ಲಿ ಮಗನಿಗೆ ಮದುವೆ ಮಾಡಲಾಗಿತ್ತು. ಸೊಸೆ ಮೇಘನಾ ಹೇಳುವ ಪ್ರಕಾರ, ಮಧ್ಯರಾತ್ರಿ ಏನಾಯ್ತು ಅನ್ನೋದು ಗೊತ್ತಿಲ್ಲ. ನಾವು ಊಟ ಮಾಡಿ ಅತ್ತೆ ಮಾವ ಬೇರೆ ರೂಮಲ್ಲಿ ಮಲಗಿದ್ರು. ನಾವು ಗಂಡ ಹೆಂಡತಿ ಇನ್ನೊಂದು ರೂಮಲ್ಲಿ ಮಲಗಿದ್ದೆವು. ಯಾವಾಗ ಎದ್ದು ಹೋದ್ರು ಅನ್ನೋದು ಗೊತ್ತಿಲ್ಲ. ನನಗೆ ಯಾವ ಸೌಂಡ್‌ ಕೂಡ ಕೇಳಿಲ್ಲ ಎಂದಿದ್ದಾರೆ.

ಬಟ್ಟೆ ಅಂಗಡಿ ನಡೆಸುತ್ತಿದ್ದ ಪ್ರಭಾಕರ್‌ ಬಟ್ಟೆ ಅಂಗಡಿಯಲ್ಲೇ ನೇಣಿಗೆ ಶರಣಾಗಿದ್ದಾರೆ. ಸಾಯುವ ಮುನ್ನ ಡೆತ್‌ ನೋಟ್‌ ಕೂಡ ಬರೆದಿಟ್ಟಿದ್ದಾರೆ. ಅದರಲ್ಲಿ ಹೆಂಡತಿಯನ್ನು ನಾನೇ ಕೊಲೆ ಮಾಡಿದ್ದೇನೆ ಎಂದು ಡೆತ್‌ ನೋಟ್‌ನಲ್ಲಿ ಬರೆದಿರುವ ಪ್ರಭಾಕರ್‌, ಮಗನನ್ನು ಕೊಂದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಇನ್ನು ಮಗ ಹಾಗೂ ಹೆಂಡತಿ ಬೇರೆ ರೂಮಲ್ಲಿ ಮಲಗಿದ್ದವರು ಅಪ್ಪ ಅಮ್ಮನ ರೂಮಿಗೆ ಯಾಕೆ ಬಂದರು ಅನ್ನೋದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಮೊದಲಿಗೆ ಹೆಂಡತಿಯನ್ನು ಕೊಂದು, ಆ ಬಳಿಕ ಮಗನನ್ನು ಕರೆಸಿಕೊಂಡು ಕೊಲೆ ಮಾಡಿದ್ರಾ..? ಅನ್ನೋ ಅನುಮಾನವೂ ಇದೆ. ಆದರೆ ಮಗ ತಂದೆ ಕೊಲೆ ಮಾಡುವಾಗ ಪ್ರತಿರೋಧ ತೋರಲಿಲ್ಲವೇ..? ಈ ಡೌಟ್‌ ಕೂಡ ಕಾಡುತ್ತಿದೆ.

ಪ್ರಭಾಕರ್‌ ಸಾಲ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ. ಆದರೆ ಮಗಳು ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಕಂಪನಿಯಲ್ಲೊಇ ಕೆಲಸ ಮಾಡ್ತಿದ್ದು, ಸರ್ಕಾರದ ಶಕ್ತಿ ಯೋಜನೆಯೂ ಆತ್ಮಹತ್ಯೆಗೆ ಕಾರಣ ಎಂದು ಬರೆದಿದ್ದಾರೆ ಎಂದು ಮಂಡ್ಯ ಎಸ್‌ಪಿ ಡಾ ಶೋಭಾರಾಣಿ ಮಾಹಿತಿ ನೀಡಿದ್ದಾರೆ. ಆದರೆ ಶಕ್ತಿ ಯೋಜನೆ ಈ ಕುಟುಂಬದ ಸಾವಿಗೆ ಹೇಗೆ ಕಾರಣ ಅನ್ನೋ ಬಗ್ಗೆ ಸ್ಪಷ್ಟನೆ ಇಲ್ಲ. ಒಟ್ಟಾರೆ ಈ ಮೂವರ ಸಾವು ಹತ್ತಾರು ಅನುಮಾನಕ್ಕೆ ಕಾರಣವಾಗಿದ್ದು, ತಿಂಗಳ ಹಿಂದಷ್ಟೇ ಹಸೆಮಣೆ ಏರಿದ್ದ ಯುವತಿ ಮೇಘನಾ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

Related posts

ಕೇರಳಂ ವಿಚಾರ ಅಂದ್ರೆ ಕಾಂಗ್ರೆಸ್​ ತಲೆ ಮೇಲೆ ಹೊತ್ತು ಮಾಡೋದ್ಯಾಕೆ..?

Publicspot

ಒಳ ಮೀಸಲಾತಿ ನಡುವೆ ಸುಪ್ರೀಂನಲ್ಲಿ ಆದಾಯ ಆಧಾರಿತ ಮೀಸಲಾತಿ ಸದ್ದು..!

ಯಶವಂತಿ

ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವಕ್ಕೆ ಇರುವ ಅಧಿಕೃತ ದಾಖಲೆ

admin

ಪಂಚಮಸಾಲಿ ಪೀಠದಿಂದ ಬಸವಜಯ ಮೃತ್ಯುಂಜಯ ಶ್ರೀ ಕಿಕ್​ಔಟ್! ಸಿಡಿ ಬಾಂಬ್​..

Publicspot

SC INTERNAL RESERVATION; ಒಳ ಮೀಸಲಾತಿ ಜಾರಿ ಮಾಡಿದ ರಾಜ್ಯ ಸರ್ಕಾರ, ಯಾರದ್ದು ಮೇಲುಗೈ..?

Publicspot

ಶಿಕ್ಷಕರ ನೇಮಕಾತಿ & ಕಡ್ಡಾಯ ನಿಯಮಗಳು.. BE, BSc, BCA ಗೂ ಚಾನ್ಸ್​​

Publicspot