The Public Spot
ರಾಜಕೀಯ

ನಾನೊಬ್ಬನೇ ಸಿಎಂ ಆಗ್ಬೇಕು ಅಂತ ದೇವರು ಬರೆದಿದ್ದಾನಾ..? ತಪ್ಪಲ್ವಾ..? ಸಿಎಂ ಪ್ರಶ್ನೆ..

ಕನಕ ಕಾವ್ಯ ದೀವಿಗೆ ಕನ್ನಡ ನಾಡ ನುಡಿ ಉತ್ಸವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಜರಾಗಿದ್ರು. ಬೆಂಗಳೂರಿನ ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ‌ ಸಿದ್ದರಾಮಯ್ಯ, ಸಚಿವ ಶಿವರಾಜ್ ತಂಗಡಗಿ, ಶಾಸಕ ಮುನಿರತ್ನ ಉಪಸ್ಥಿತರಿದ್ರು. ಮೂರು ದಿನಗಳ ಕಾಲ‌ ನಡೆಯಲಿರೋ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅತ್ಯಂತ ಸಂತೋಷದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಕನಕದಾಸರು ಬಹಳ ಮುಖ್ಯವಾಗಿ ಪರಿಚಾಯವಾಗಬೇಕು. ಪಾಳೆಗಾರರಾಗಿ ಅವರು ಹುಟ್ಟಿದ್ರು. ನಂತರದಲ್ಲಿ ಕನಕದಾಸರು ಸಂತರಾಗುತ್ತಾರೆ. ಕನಕದಾಸರು ತಂಬೂರಿ ಹಿಡಿದು ಕೀರ್ತನೆ ಹಾಡ್ತಿದ್ದರು. ಅವರು ಕೇವಲ ಭಕ್ತರಾಗಿರಲಿಲ್ಲ. ದಾರ್ಶನಿಕರಾಗಿದ್ದವರು, ಸಮಾಜ‌ ಸುಧಾರಕರಾಗಿದ್ದವರು. ಅವರು ಮಾನವತಾವಾದಿ ಆಗಿದ್ದರು. ಜಾತಿ ವ್ಯವಸ್ಥೆ, ಅನೇಕ ಧರ್ಮ, ಇದನೆಲ್ಲ ನೋಡಿ‌ ಅವರ ವಿರುದ್ಧ ಭಂಡಾಯ ಹೂಡಿದ್ದರು. ಬುದ್ದ. ಬಸವ. ಅಂಬೇಡ್ಕರ್. ನಾರಾಯಣ ಗುರು ಇವರೆಲ್ಲ ಸಮ ಸಮಾಜ ನಿರ್ಮಾಣದ ಗುರಿ ‌ಹೊಂದಿದ್ದರು ಎಂದಿದ್ದಾರೆ.

ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ, ಜಾತಿ ವ್ಯವಸ್ಥೆ ಎಷ್ಟರ ಮಟ್ಟಿಗೆ ಬೇರೂರಿದೆ ಅನ್ನೋ ಮಾತನಾಡಿದ್ರು. ಪಟ್ಟ ಭದ್ರ ಹಿತಾಸಕ್ತಿಗಳು ಹಿಂದೆಯೂ ಇದ್ರೂ ಈಗಲೂ ಇದ್ದಾರೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಇರಬೇಕು. ವೈಚಾರಿಕತೆ ಇಲ್ಲದೇ ಹೋದರೆ ಅದನ್ನ ಓದಿ‌ ಪ್ರಯೋಜನವೇನು..? ಎಂದು ಪ್ರಶ್ನಿಸಿದ್ದಾರೆ. ಕಂದಾಚಾರಗಳನ್ನ ಮೌಢ್ಯವನ್ನ ಸರಿಯಿಲ್ಲ ಎಂದಾದರೂ ಹೇಳಬೇಕಲ್ಲ, ಹಿಂದಿನ‌ ಜನ್ಮ, ಹಣೆಬರೆಹವನ್ನೆಲ್ಲಾ ನಂಬುತ್ತೀರಾ? ಯಾವ ನರಕನೂ ಇಲ್ಲ, ಸ್ವರ್ಗನೂ ಇಲ್ಲ. ನಾನು ಮಾತ್ರ ಸಿಎಂ ಆಗು ಎಂದು ದೇವರು ಬರೆದಿದ್ನಾ..? ಆ ತರದ್ದು ಬರೆದರೆ ತಾರತಮ್ಯ ಆದಂತೆ ಅಲ್ವಾ..? ದೇವರ ದೃಷ್ಟಿಯಿಂದ ಎಲ್ಲರೂ ಸಮಾನರು ಹೇಗೆ..? ರಾಮಧ್ಯಾನ ಚರಿತೆ ಇದೆ ಎಂದು ಇಟ್ಕೊಳ್ಳಣ, ಕಾಯಕ ಮತ್ತು ದಾಸೋಹದ ಬಗ್ಗೆ ಬಸವಣ್ಣ ಹೇಳಿದ್ರು. ಪ್ರತಿಯೊಬ್ಬರು ಕಾಯಕ ಮಾಡಬೇಕು. ಶ್ರೀರಾಮ ಚಂದ್ರನ ಕೈಯಲ್ಲಿ ಮಾತಾಡಿಸುತ್ತಾರೆ. ಇವರು ಈ ಕಾರಣಕ್ಕೆ ದಾರ್ಶನಿಕರಾಗ್ತಾರೆ. ಇತಿಹಾಸ ಗೊತ್ತಿಲ್ಲದಿದ್ರೆ ಭವಿಷ್ಯ ನಿರ್ಮಾಣ ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಹೇಳ್ತಾರೆ. ಕನಕದಾಸರನ್ನ ಜೀವನದಲ್ಲಿ ಅಳವಡಿಸಿಕೊಳ್ಳುವ ಕೆಲಸ ಮಾಡಿ ಎಂದು ಕರೆ ನೀಡಿದ್ದಾರೆ.

ಕೇರಳದಲ್ಲಿ ಶೂದ್ರರನ್ನು ದೇವಸ್ಥಾನದಲ್ಲಿ ಬಿಡ್ತಿರಲಿಲ್ಲ, ಹೀಗಾಗಿ ನಾರಾಯಣ ಗುರು ಅವರು ನೀವೇ ದೇವಸ್ಥಾನ ಕಟ್ಟಿ ಎಂದು ಕರೆ ನೀಡಿದರು. ಯಾವ ದೇವರನ್ನಾದರೂ ನೀವೆ ಸ್ಥಾಪಿಸಿ, ನಿಮ್ಮದೆ ಸ್ವಂತ ದೇವಸ್ಥಾನ ಕಟ್ಟಿ ಎಂದರು. ಎಲ್ಲಿ ಬಿಡುವುದಿಲ್ಲವೋ ಅಲ್ಲಿ ಹೋಗಬೇಡಿ ಎಂದರು. ಆ ಬಳಿಕ ಶಾಸಕ ಮುನಿರತ್ನ ಬಗ್ಗೆ ಮಾತನಾಡಿ, ನಮ್ಮ ಜೊತೆ ಇದ್ದವರು ಅಲ್ಲೋಗಿ ಸೇರ್ಕೊಂಡಿದ್ದೀಯ. ನಮ್ಮ ಜೊತೆ ಇದ್ದಾಗ ಪಾಪಾ ಒಳ್ಳೆಯನಾಗಿದ್ದ ಮೊದಲು ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಹೇಳ್ತಿದ್ದಂತೆ ಈಗಲೂ ಒಳ್ಳೆಯವರೇ ಎಂದು ಕೂಗಿದ್ದಾರೆ ವೇದಿಕೆ ಮುಂಭಾಗ ಇದ್ದ ಜನ. ವೈಯಕ್ತಿಕವಾಗಿ ನಮ್ಮ ಪರವಾಗಿದ್ದಾನೆ. ಅವನು ನನ್ನ ಪರವಾಗಿರಲು ಬಿಡಲ್ಲ. ಅವರ ಪಕ್ಷ ಅಸಮಾನತೆ ಹೊಂದಿರುವ ಪಕ್ಷ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ. ನಿನು ಈ ಕ್ಷೇತ್ರದ ಶಾಸಕ ಅಭಿವೃದ್ಧಿ ಕೆಲಸ ಮಾಡಿಕೊಡೊಣ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಇದಕ್ಕೂ ಮೊದಲು ಮಾತನಾಡಿದ ಶಾಸಕ ಮುನಿರತ್ನ, ನೆಚ್ಚಿನ ಸಿಎಂ ಸಿದ್ದರಾಮಯ್ಯ ಅಣ್ಣನನ್ನು ನೋಡಬೇಕು ಎಂದು ಸಂಜೆ 5 ಗಂಟೆಗೆ ಬಂದಿದ್ದೆ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಉದ್ದೇಶಿಸಿ ಮಾತನಾಡಿದ ಮುನಿರತ್ನ, ಜ್ಯೋತಿ ಹೊರತಾಗಿ ಬೆಂಕಿಯ‌ ಜೊತೆ ಬದುಕಲ್ಲ ಆಗಲ್ಲ, ಇವತ್ತು ಜ್ಯೋತಿಗೆ ನಾವು ಎಣ್ಣೆ ಹಾಕ್ತೇವೆ. ಆದರೆ ಬೆಂಕಿಗೆ ಫೈರ್ ಇಂಜಿನ್ ತರ್ತೇವೆ. ಸಿದ್ದರಾಮಯ್ಯ ಸರ್ ನೀವು ಜ್ಯೋತಿ ಇದ್ದಂತೆ. ನೀವು ಬೆಳಗುತ್ತಿರಬೇಕು, ಒಳ್ಳೆಯ ಕೆಲಸ ಮಾಡ್ತಿದ್ದೀರಿ. ಅಣ್ಣ ನಮ್ಮ ಕ್ಷೇತ್ರದಲ್ಲಿ ಹಲವು ಕೆಲಸ ನಿಂತೋಗಿದೆ. ನನ್ನ ಕ್ಷೇತ್ರದ ಕೆಲವು ಕೆಲಸ ನಿಂತು ಹೋಗಿದೆ. ನನ್ನ ಕ್ಷೇತ್ರಕ್ಕೆ ಸಹಾಯ ಮಾಡಿ. ನನ್ನ ಕ್ಷೇತ್ರಕ್ಕೆ ಅನುದಾನ ಕೊಡಿ. ನನಗೆ ಗನ್ ಮ್ಯಾನ್ ಕೊಟ್ಟಿಲ್ಲ. ನಾನು ಓಡಾಡಬಾರದು‌ ಎಂದು‌ ಗನ್ ಮ್ಯಾನ್ ಕೊಟ್ಟಿಲ್ಲ. ಮನೆಯಲ್ಲಿ ಇರಲಿ, ಹೊರಗೆ ಬಂದರೆ ಮೊಟ್ಟೆಯಲ್ಲಿ ಹೊಡಿಬಹುದು ಎಂದು ಹೀಗೆ ಮಾಡಿದ್ದಾರೆ. ಪ್ರಜಾಪ್ರಭುತ್ವ ರಾಜ್ಯ ಇದು. ನನಗೆ ಗನ್ ಮ್ಯಾನ್ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ ಶಾಸಕ ಮುನಿರತ್ನ.

Related posts

2 ದಿನದಲ್ಲಿ ಹೊಸ ವರ್ಷ.. ಹೊಸ ಮನೆ ಕೊಡ್ತೀವಿ.. ಸಿಂಗಲ್‌ ರೂಮ್‌ ಮನೆ..

Publicspot

ಚುನಾವಣೆಗೆ ಸಜ್ಜಾಗ್ತಿದ್ಯಾ JDS..? ಇವತ್ತಿನ ಸಮಾವೇಶದ ಉದ್ದೇಶ ಏನು..?

Publicspot

ಕಾಂಗ್ರೆಸ್​ನಲ್ಲಿ ಡಿನ್ನರ್​ ಪಾಲಿ‘ಟ್ರಿಕ್ಸ್​’ ಡಿಕೆಶಿ ಉದ್ದೇಶ ಏನು..? ಸಿಎಂ ಆಗ್ತಾರಾ..?

Publicspot

ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಭಾಷಣ ಹಗ್ಗಾಜಗ್ಗಾಟ..!

Publicspot

ವಾಲ್ಮೀಕಿ ಪ್ರತಿಮೆ ನೆಪದಲ್ಲಿ ಬಳ್ಳಾರಿಯಲ್ಲಿ ರಕ್ತ ರಾಜಕೀಯ.. ತಪ್ಪು ಯಾರದ್ದು..?

Publicspot

ಸತ್ಯ ಹೇಳಿದ್ದಕ್ಕೆ ಸಚಿವ ಸ್ಥಾನ ಕಿತ್ಕೊಳ್ತಾ ಕಾಂಗ್ರೆಸ್​ ಹೈಕಮಾಂಡ್​..?

Publicspot