The Public Spot
ರಾಜಕೀಯ

ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಭಾಷಣ ಹಗ್ಗಾಜಗ್ಗಾಟ..!

ಇಂದಿನಿಂದ ವಿಧಾನಸಭಾ ಅಧಿವೇಶನ ಆರಂಭ ಆಗಲಿದ್ದು, ಇವತ್ತು ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಬೇಕಿತ್ತು. ಆದರೆ ಸರ್ಕಾರ ಸಿದ್ಧಪಡಿಸಿದ ಭಾಷಣದ ಪ್ರತಿಯಲ್ಲಿ 11ನೇ ಪ್ಯಾರ ಬಿಡಲು ರಾಜ್ಯಪಾಲರು‌ ಸೂಚಿಸಿದ್ರು. ಇಲ್ಲದಿದ್ದರೆ ಭಾಷಣಕ್ಕೆ ಬರಲ್ಲ ಅನ್ನೋ ಸಂದೇಶವನ್ನೂ ರವಾನಿಸಿದ್ರು. ಆ ಬಳಿಕ ಕಾನೂನು ಸಚಿವ ಹೆಚ್‌.ಕೆ ಪಾಟೀಲ್‌ ರಾಜ್ಯಪಾಲರನ್ನು ಭೇಟಿ ಮಾಡಿ ಮಾತನಾಡಿದ್ರು. ಆ ಬಳಿಕ ಸಿಎಂ ನಿವಾಸಕ್ಕೆ ಭೇಟಿ ಕೊಟ್ಟು ಕಾನೂನು ವಿಚಾರಗಳ ಬಗ್ಗೆ ಚರ್ಚೆಯನ್ನೂ ನಡೆಸಿದ್ರು. ಆ ಬಳಿಕ ಮಾತನಾಡಿದ ಕಾನೂನು ಸಚಿವರು, ಕೆಲವು ಮಾರ್ಪಾಡಿಗೆ ಮಾತ್ರ ಸಮ್ಮತಿಸಿದ್ದೇವೆ. ಮನ್‌ರೇಗಾ ವಿಚಾರವನ್ನು ಯಾವುದೇ ಕಾರಣಕ್ಕೂ ಕೈ ಬಿಡಲ್ಲ. ರಾಜ್ಯದ ಹಿತ ಕಾಪಾಡುವ ಅಂಶವನ್ನ ನಾವು ಕೈ ಬಿಡುವ ಪ್ರಶ್ನೆಯೇ ಇಲ್ಲ. ಕ್ಯಾಬಿನೆಟ್ ನಿರ್ಧಾರ ಏನಿದೆ. ಆ ಭಾಷಣವನ್ನೇ ರಾಜ್ಯಪಾಲರು ಓದಬೇಕು ಎನ್ನುವುದು ನಿರ್ಧಾರ ಅಗಿದೆ. 11 ಪ್ಯಾರದಲ್ಲಿನ 7 ಅಂಶವನ್ನ ತಿದ್ದುಪಡಿ ಮಾಡಲು ತಿರ್ಮಾನ ಮಾಡಿದ್ದೇವೆ ಇದನ್ನು ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣನವರು ರಾಜ್ಯಪಾಲರಿಗೆ ಮಾಹಿತಿ ನೀಡುತ್ತಾರೆ ಅಂದ್ರು.

ಸಿಎಂ ನಿವಾಸದಲ್ಲಿ ನಡೆದ ಚರ್ಚೆ ಮತ್ತು, ಸರ್ಕಾರ 7 ಅಂಶಗಳನ್ನು ತಿದ್ದುಪಡಿ ಮಾಡಲು ನಿರ್ಧಾರ ಮಾಡಿದ ವಿಚಾರವನ್ನು ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ರಾಜ್ಯಪಾಲರಿಗೆ ತಿಳಿಸಿದ್ರು. ಆ ಬಳಿಕ ಮಾತನಾಡಿ, ರಾಜ್ಯಪಾಲರನ್ನು ಭೇಟಿ ಮಾಡಿದ್ದೇನೆ. ಸಿಎಂ ಹಾಗೂ ಕಾನೂನು ಸಚಿವರು ಚರ್ಚೆ ನಡೆಸಿರುವ ಕುರಿತು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ನಾನೇ ಬಂದು ಜಂಟಿ ಅಧಿವೇಶನಕ್ಕೆ ರಾಜ್ಯಪಾಲರನ್ನು ಕರೆದುಕೊಂಡು ಹೋಗುತ್ತೇನೆ. ಬೆಳಗ್ಗೆ 10.15ಕ್ಕೆ ಬರುತ್ತೇನೆ ಎಂದಿದ್ದಾರೆ. ಸಂವಿಧಾನ ಏನು ಹೇಳುತ್ತದೆ, ತೀರ್ಪು ಏನು ಇದೆ ಅನ್ನೋದನ್ನು ತಿಳಿಸಿದ್ದೇನೆ. ಅಧಿವೇಶನಕ್ಕೆ ಬಂದೇ ಬರ್ತಾರೆ ಅನ್ನೊ‌ ವಿಶ್ವಾಸ ಇದೆ.. ಭಾಷಣದಲ್ಲಿ ಯಾವುದೇ ಬದಲಾವಣೆ ಮಾಡಲಿಕ್ಕೆ ಆಗೋದಿಲ್ಲ, ಅದನ್ನೇ ಓದಬೇಕು ಅಂತ ಹೇಳಿದ್ದೇವೆ.. ಕೆಲ ಬದಲಾವಣೆ ಮಾಡಲು ಹೇಳಿದ್ರು, ಅದು ಸಾಧ್ಯವಿಲ್ಲ ಅಂತ ತಿಳಿಸಿದ್ದೇವೆ.. ಇದು ರಾಜ್ಯಪಾಲರ ಸ್ವಂತ ಭಾಷಣ ಅಲ್ಲ, ಸರ್ಕಾರದ ನಿಲುವನ್ನು ಹೇಳುವ ಭಾಷಣ. ರಾಜ್ಯಪಾಲರ ಹುದ್ದೆಯಲ್ಲಿ ಇದ್ದು ಭಾಷಣ ಮಾಡಬೇಕು, ಸಂವಿಧಾನ ಇದೇ ಹೇಳುತ್ತದೆ ಎಂದಿದ್ದಾರೆ.

ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಬಿಕ್ಕಟ್ಟು ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿದ್ದು, ಈ ಬೆಳವಣಿಗೆಗೆ ಕಾರಣ ಕಾಂಗ್ರೆಸ್ ಸರ್ಕಾರ. ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೆ ಅದರದ್ದೆ ಆದ ಗೌರವ ಇದೆ. ರಾಜ್ಯಪಾಲರು ಅಧಿವೇಶನದ ಭಾಷಣ ಅವರ ಹಕ್ಕು. ಹೀಗೆ ಓದಬೇಕು ಅಂತ 175 ವಿಧಿಯಲ್ಲಿ ಎಲ್ಲೂ ಇಲ್ಲ. ಪ್ರಧಾನಮಂತ್ರಿ, ರಾಷ್ಟ್ರಪತಿ ಬಗ್ಗೆ ಕೀಳು ಭಾಷೆಗೆ ಅವಕಾಶ ಇಲ್ಲ. ಸಿದ್ದರಾಮಯ್ಯ ಏಕವಚನದಲ್ಲಿ ಮಾತಾನಾಡುತ್ತಾರೆ. ಹಾಗೇ ಇಲ್ಲಿ ಆಗಲ್ಲ. ಗವರ್ನರ್ ಮುಖಾಂತರ ಹೇಳಿಸುವ ಅವಕಾಶ ಯಾರಿಗೂ ಇಲ್ಲ ಎಂದಿದ್ದಾರೆ.

ಈ ಅಂಶ ತೆಗೆಯಿರಿ ಅಂದಿದ್ದಾರೆ, ತೆಗೆಯಿರಿ ಅದರಲ್ಲೇನಿದೆ..? ನೀವು ಸೋನಿಯ ಗಾಂಧಿಗೋ ರಾಹುಲ್ ಗಾಂಧಿಗೋ ಬರೆದು ಕೊಡಿ. ಸಂತೆಯಲ್ಲಿ ಭಾಷಣ ಮಾಡಲಿ. ಈಗ ಅಧಿವೇಶನದ ಅವಶ್ಯಕತೆ ಏನಿತ್ತು..? ನಾವು, ಜೆಡಿಎಸ್ ಇದಕ್ಕೆ ವಿರೋಧ ಮಾಡುತ್ತೇವೆ. ಕಾಂಗ್ರೆಸ್ ಶಾಸಕರು, ಸಂಸದರನ್ನ ಕರೆದು ಸಹಿ ಮಾಡಿ ಕಳಿಹಿಸಬೇಕಿತ್ತು. ಇಷ್ಟು ಕೋಟಿ ಖರ್ಚು ಮಾಡುವ ಅವಶ್ಯಕತೆ ಏನಿದೆ. ರಾಜ್ಯಪಾಲರು ಕೇಂದ್ರ ರಾಜ್ಯಗಳ ಸೇತುವೆಯಾಗಿ ಕೆಲಸ ಮಾಡುವವರು. ಈ ಹಿಂದೆ ನಮ್ಮ ಸರ್ಕಾರ ಕೂಡ ಇತ್ತು. ಕಾವೇರಿ ನೀರು, ಮಳೆ ಅವಾಂತರದಲ್ಲಿ ನಮಗೂ ಅನ್ಯಾಯ ಆಯ್ತು. ನಿಮ್ಮ ರಾಜ್ಯಪಾಲರು ಹೇಗೆ ನಡೆದುಕೊಂಡರು. ಯಡಿಯೂರಪ್ಪರನ್ನ ಜೈಲಿಗೆ ಹಾಕಿದ್ರು. ನೀವೆ ಹೇಗೆ ನಡೆದುಕೊಂಡಿದ್ದೀರಿ ಅನ್ನೋದು ಗೊತ್ತಿದೆ‌. ಸಂವಿಧಾನದ ಅಡಿಯಲ್ಲಿ ಕೆಲಸ ಮಾಡೋದು ಹೇಗೆ..? ಅನ್ನೋದು ಇಂದಿನ ರಾಜ್ಯಪಾಲರಿಗೆ ಗೊತ್ತಿದೆ. ಹೀಗೆ ಓದಬೇಕು ಅಂತ ಎಲ್ಲೂ ಬರೆದಿಲ್ಲ. ಬರೆದುಕೊಟ್ಟದನ್ನ ಓದಬೇಕು ಅಂತ ಎಲ್ಲೂ ಬರೆದಿಲ್ಲ. ರಾಜ್ಯಪಾಲರನ್ನ ಗೌರವವಾಗಿ ನಡೆಸಿಕೊಳ್ಳಿ. ರಾಜ್ಯಪಾಲರ ನಡೆಯಲ್ಲಿ ತಪ್ಪಿಲ್ಲ ಎಂದಿದ್ದಾರೆ.

ರಾಜ್ಯಪಾಲರ ನಡೆ ನೋಡಿ ಕಾನೂನು ಸಮರ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ರಾಜ್ಯಪಾಲರು ಜಂಟಿ ಅಧಿವೇಶನ ಭಾಗಿ ನಿರೀಕ್ಷೆ ಇದ್ದು, ಜಂಟಿ ಅಧಿವೇಶನಕ್ಕೆ ಒಂದು ವೇಳೆ ಗೈರಾದರೆ ಕಾನೂನು ಸಮರ ನಡೆಸಲು ನಿರ್ಧಾರ ಮಾಡಲಾಗಿದೆ. ಈ ಹಿನ್ನೆಲೆ ಕಾನೂನು ಸಮರಕ್ಕೆ ತಯಾರಾಗಿರುವಂತೆ ಅಡ್ವೋಕೇಟ್ ಜನರಲ್‌ಗೆ ಸರ್ಕಾರ ಸೂಚನೆ ನೀಡಿದೆ. ಸರ್ಕಾರ ಸೂಚನೆ ಹಿನ್ನೆಲೆಯಲ್ಲಿ ಇವತ್ತು ನವದೆಹಲಿ ತೆರಳಲು ಸಜ್ಜಾಗಿದ್ದಾರೆ ಎಜಿ ಶಶಿಕಿರಣ ಶೆಟ್ಟಿ. ಈ ನಡುವೆ ರಾಜ್ಯಪಾಲರ ಆಗಮನದ ಬಗ್ಗೆ ಸ್ಪೀಕರ್ ಕಚೇರಿಗೆ ಮಾಹಿತಿ ಸಿಕ್ಕಿದೆ. ನಾಳೆ ಸರಿಯಾದ ಸಮಯಕ್ಕೆ ಹಾಜರಾಗುವುದಾಗಿ ಲೋಕಭವನ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

Related posts

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸಿಡಿದೆದ್ದ ಉತ್ತರ ಕರ್ನಾಟಕ ಶಾಸಕರು..! ಪ್ರತ್ಯೇಕ ರಾಜ್ಯ..

Publicspot

ಬಳ್ಳಾರಿಯಲ್ಲಿ ಆಯ್ತು.. ಈಗ ಬೀದರ್ ಸರದಿ.. ರಾಜ್ಯದಲ್ಲಿ ಎತ್ತ ಸಾಗುತ್ತಿದೆ ರಾಜಕಾರಣ..?​

Publicspot

ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ಹೆಕಮಾಂಡ್‌ಗೆ ಡೈನಾಮೇಟ್‌..

Publicspot

ಮುಂದಿನ ಮುಖ್ಯಮಂತ್ರಿ ಯಾರು..? ಕಾಂಗ್ರೆಸ್‌ ನಾಯಕರೇ ಕುಮಾರಣ್ಣ ಎಂದಿದ್ಯಾಕೆ..?

Publicspot

CM Finally; ಸಿಎಂ ಆಗಲು ಪಟ್ಟು ಹಿಡಿದು ಕುಳಿತ ಡಿ.ಕೆ ಶಿವಕುಮಾರ್​.. ಶಕ್ತಿ ವೃದ್ಧಿಗೆ ಸರ್ಕಸ್​..

Publicspot

ಕಾಂಗ್ರೆಸ್‌ನಲ್ಲಿ ಮತ್ತೆ ಸಿಎಂ ಕುರ್ಚಿ ಫೈಟ್‌.. ಯತೀಂದ್ರ ಮಾತಾಡಿದ್ರೆ ಡಿಕೆ ಸೈಲೆಂಟ್‌ ಯಾಕೆ..?

Publicspot