The Public Spot
ರಾಜ್ಯ

ಅಪರೂಪದ ಸಮಾಗಮ, ಅಚ್ಚರಿಯ ಬೆಳವಣಿಗೆಗೆ ಕಾರಣವಾದ ಮೋದಿ..!

ಬೆಂಗಳೂರಿನಲ್ಲಿ ಇಂದು ಮೂರು ಕಾರ್ಯಕ್ರಮಗಳ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ರಾಜಧಾನಿಗೆ ಆಗಮಿಸಿದ್ದರು. ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್​ ರೈಲುಗಳಿಗೆ ಚಾಲನೆ ನೀಡಿದ ಬಳಿಕ ರಾಗಿಗುಡ್ಡ ಮೆಟ್ರೋ ರೈಲ್ವೆ ನಿಲ್ವಾಣದಿಂದ ಎಲೆಕ್ಟ್ರಾನಿಕ್​ ಸಿಟಿ ಮೆಟ್ರೋ ನಿಲ್ದಾಣದ ತನಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್​, ತೇಜಸ್ವಿ ಸೂರ್ಯ, ಬಿ.ವೈ ವಿಜಯೇಂದ್ರ ಜೊತೆಗೂಡಿ ಮೆಟ್ರೋದಲ್ಲಿ ಸಂಚಾರ ಮಾಡಿದ್ರು. ಆ ನಂತರ ಎಲೆಕ್ಟ್ರಾನಿಕ್​ ಸಿಟಿಯ ಐಐಐಟಿ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ನಾಯಕರು ವೇದಿಕೆ ಹಂಚಿಕೊಂಡಿದ್ದು ವಿಶೇಷ ಎನಿಸುವಂತಿತ್ತು.

ಹಳದಿ ಮೆಟ್ರೋ ಕ್ರೆಡಿಟ್​ಗಾಗಿ ಡಿಸಿಎಂ ಡಿ.ಕೆ ಶಿವಕುಮಾರ್​ ಹಾಗೂ ಸಂಸದ ತೇಜಸ್ವಿ ಸೂರ್ಯ ನಡುವೆ ಟಾಕ್​ ವಾರ್ ನಡೆದಿತ್ತು. ಆ ಬಳಿಕ ಇಬ್ಬರೂ ನಾಯಕರು ಮೆಟ್ರೋದಲ್ಲಿ ಪ್ರಯಾಣ ಮಾಡುವ ವೇಳೆ ಎದುರು ಬದರು ಕೂತಿದ್ದರು. ಪ್ರಧಾನಿ‌ ನರೇಂದ್ರ ಮೋದಿ ಅಕ್ಕಪಕ್ಕದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್​ ಕುಳಿತು ಉಭಯ ಕುಷಲೋಪರಿ ವಿಚಾರ ಮಾಡಿದರು. ಪ್ರಧಾನಿ ಮಾತಿಗೆ ಸಿಎಂ ಸಿದ್ದರಾಮಯ್ಯ ಗಹಗಹಿಸಿ ನಕ್ಕಿದ್ದು ಕಂಡು ಬಂತು. ಇನ್ನು ಡಿ.ಕೆ ಶಿವಕುಮಾರ್​ ನರೇಂದ್ರ ಮೋದಿಯವರ ಡ್ರೆಸ್​ಗೆ ಮ್ಯಾಚ್​ ಮಾಡಿದ್ದೂ ಕಂಡು ಬಂತು. ಮೋದಿ ಬಿಜೆಪಿಯವರೇ ಆದರೂ ರಾಜ್ಯ ಕಾಂಗ್ರೆಸ್​ ನಾಯಕರು ಬಿಜೆಪಿ ನಾಯಕರನ್ನೂ ಓವರ್​ ಟೇಕ್​ ಮಾಡಿ ಮೋದಿ ಜೊತೆಗೆ ಹೆಚ್ಚು ಕಾಲ ಕಳೆದಿದ್ದು ಕಂಡು ಬಂತು.

ರಾಜ್ಯ ರಾಜಕೀಯದಲ್ಲಿ ಬದ್ಧ ವೈರಿಗಳು ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತು ಕಾರ್ಯಕ್ರಮ ನಡೆಸಿದ್ದೂ ಕಂಡು ಬಂತು. ಪ್ರಧಾನಿ ನರೇಂದ್ರ ಮೋದಿ ಜೊತೆ ಅಕ್ಕ ಪಕ್ಕದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ಆಸೀನರಾಗಿದ್ದರು. ಕುಮಾರಸ್ವಾಮಿ ಪಕ್ಕದಲ್ಲಿ ಕೇಂದ್ರ ರಾಜ್ಯ ಖಾತೆ ರೈಲ್ವೆ ಸಚಿವ ವಿ ಸೋಮಣ್ಣ, ಸೋಮಣ್ಣ ಪಕ್ಕದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್​ಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಹಳದಿ ಮೆಟ್ರೋ ರೈಲು ಉದ್ಘಾಟನೆ ಕಾರ್ಯಕ್ರಮ ಅಪರೂಪದ ಸಂಗತಿಗಳಿಗೆ ವೇದಿಕೆ ಆಗಿದ್ದು ಮಾತ್ರ ಸ್ಪಷ್ಟವಾಗಿ ಕಂಡು ಬಂತು. ಅಪರೂಪದ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಹಾಗೂ ರಾಜಕೀಯ ಬದ್ಧ ವೈರಿಗಳು ಸಾಕ್ಷಿಯಾದರು.

ಮೆಟ್ರೋ ರೈಲು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೊದಲಿಗೆ ಕರ್ನಾಟಕ ಸರ್ಕಾರದ ವತಿಯಿಂದ ಪ್ರಧಾನಿ‌ ಮೋದಿ ಅವರಿಗೆ ಸ್ವಾಗತ ಬಯಸುತ್ತೇನೆ. ಮೆಟ್ರೋ ರೈಲು ಹಳದಿ ಮಾರ್ಗ ಉದ್ಘಾಟನೆ ಮತ್ತು ಮೆಟ್ರೋ 3ನೇ ಹಂತದ ಶಂಕುಸ್ಥಾಪನೆಗೆ ಬಂದಿದ್ದಕ್ಕೆ 7 ಕೋಟಿ ಕನ್ನಡಿಗರ ಪರವಾಗಿ ಸ್ವಾಗತ ಬಯಸುತ್ತೇನೆ ಎಂದಿದ್ದಾರೆ. ಇನ್ನು ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆ, ಮೆಟ್ರೋ 3ನೇ ಹಂತದ ಶಂಕುಸ್ಥಾಪನೆ ಆಗ್ತಿದೆ. ಬೆಂಗಳೂರು ಮೆಟ್ರೋ ಪ್ರಾರಂಭವಾದದ್ದು 2005 ರಲ್ಲಿ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಆರಂಭಿದ್ರು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ‌ ನಡೆಯುತ್ತಿರುವ ಕಾರ್ಯಕ್ರಮ ಇದು. ರಾಜ್ಯ ಹಾಗು ಕೇಂದ್ರ ಸರ್ಕಾರಗಳ ನಡುವೆ 50-50 ಅನುಪಾತದಲ್ಲಿ ಒಪ್ಪಂದ ಆಗಿರುವಂತಹ ಕಾರ್ಯಕ್ರಮ ಎಂದು ತಿಳಿಸಿದ್ರು.

ಆದರೆ ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರ ಹೆಚ್ಚು ಖರ್ಚು ಮಾಡ್ತಿದೆ. 7463.86 ಕೋಟಿ ಮಾತ್ರ ಕೇಂದ್ರ ಖರ್ಚು ಮಾಡಿದೆ. ಕೇಂದ್ರ ಸಾಲ ಕೊಡುತ್ತೆ, ಅದಕ್ಕೆ ಬಡ್ಡಿ ಸಮೇತ ಕೊಡಬೇಕು. 3900 ಕೋಟಿ ಹಣವನ್ನ ಮರುಪಾವತಿ ಮಾಡಿದ್ದೇವೆ. ಹಳದಿ ಮಾರ್ಗ ಇಂದು ಉದ್ಘಾಟನೆ ಆಗಿದೆ. 19.15ಕಿಮಿ ಉದ್ದ ಇದಕ್ಕೆ 7160 ಕೋಟಿ‌ ಖರ್ಚಾಗಿದೆ. ಇದರಿಂದ ಸುಮಾರು 3.5ಲಕ್ಷ ಪ್ರಯಾಣಿಕರು ಪ್ರಯಾಣಿಸಲು ಸಾಧ್ಯವಾಗುತ್ತದೆ. ಈಗಾಗಲೇ 9ಲಕ್ಷ ಜನ ಪ್ರತಿ ದಿನ ಮೆಟ್ರೋದಲ್ಲಿ ಓಡಾಡ್ತಿದ್ದಾರೆ. ಇದನ್ನುಸೇರಿದರೆ 12.5ಲಕ್ಷ ಮೆಟ್ರೋ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಇದೇ ವೇಳೆ 4ನೇ ಹಂತದ ಮೆಟ್ರೋಗೂ ಅನುಮೋದನೆ ನೀಡುವಂತೆ ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ. ಗುಜರಾತ್​, ಮಹಾರಾಷ್ಟ್ರದಂತೆ ಕರ್ನಾಟಕಕ್ಕೂ ಒತ್ತು ಕೊಡಿ ಎಂದು ಮನವಿ ಮಾಡಿದ್ದಾರೆ.

Related posts

Veerashaiva Lingayat; ಲಿಂಗಾಯತ ಬೇರೆ ಅಲ್ಲ.. ವೀರಶೈವ ಬೇರೆ ಅಲ್ಲ.. ನಾವಿಬ್ಬರೂ ಒಂದೇ.. ಮತ್ತೆ ಗೊಂದಲ

Publicspot

Rain Alert: ರಾಜ್ಯದಲ್ಲಿ ಎರಡು ದಿನ ಮಳೆಯಬ್ಬರ.. ಯಾವೆಲ್ಲಾ ಜಿಲ್ಲೆಗಳಿಗೆ ಅಲರ್ಟ್‌..!?

Publicspot

ಕುರುಬರಿಗೆ ಎಸ್ಟಿ ಮೀಸಲಾತಿ ಕೇಂದ್ರ ವಾಪಸ್‌ ಕಳುಹಿಸಿದೆ.. ನಾನು ಮತ್ತೆ ಕಳುಹಿಸುತ್ತೇನೆ..

Publicspot

17.50 ಲಕ್ಷ ಜನರ ಆರೋಗ್ಯ ಖಾತ್ರಿಪಡಿಸುವ ಶುದ್ಧ ಕುಡಿಯುವ ನೀರಿನ ಯೋಜನೆ ಉದ್ಘಾಟಿಸಿದ ಸಿಎಂ

admin

ಜನರು ಫ್ಲೋರೈಡ್ ಯುಕ್ತ ನೀರನ್ನು ಕುಡಿಯುವ ಅನಿವಾರ್ಯತೆ ಇತ್ತು. ಇದರಿಂದ ಜನರಿಗೆ ಆರೋಗ್ಯದ ತೊಂದರೆ

admin

ರಾಜ್ಯಮಟ್ಟದ ಸ್ವಾತಂತ್ರ‍್ಯ ದಿನಾಚರಣೆಗೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಿ: ಮಹೇಶ್ವರ್ ರಾವ್.

admin