The Public Spot
ರಾಜ್ಯ

Veerashaiva Lingayat; ಲಿಂಗಾಯತ ಬೇರೆ ಅಲ್ಲ.. ವೀರಶೈವ ಬೇರೆ ಅಲ್ಲ.. ನಾವಿಬ್ಬರೂ ಒಂದೇ.. ಮತ್ತೆ ಗೊಂದಲ

ಹುಬ್ಬಳ್ಳಿಯಲ್ಲಿ ನಡೆದ ವೀರಶೈವ ಲಿಂಗಾಯತ ಏಕತಾ ಸಮಾವೇಶದಲ್ಲಿ ರಂಬಾಪುರಿ ಜಗದ್ಗುರುಗಳು ಮಾತನಾಡಿ, ಹೊಸ ಧರ್ಮ ಹುಟ್ಟು ಹಾಕೋದಕ್ಕಿಂತ ಇರೋ ಧರ್ಮವನ್ನು ಬೆಳೆಸೋದು ಉತ್ತಮ ಎಂದಿದ್ದಾರೆ. ಸಮಾಜದ ಏಕತೆಗಾಗಿ ಮಹಾಸಭೆ ಕರೆದಾಗ ಸ್ಥಾನಮಾನ ಗಮನಿಸಿಲ್ಲ. ಸಮಾಜದ ಹಿತದೃಷ್ಟಿಯಿಂದ ಅಮೂಲ್ಯ ಸಲಹೆಗಳನ್ನು ಪಂಚಪೀಠಗಳು ನೀಡುತ್ತಾ ಬಂದಿವೆ. ಒಬ್ಬಿಬ್ಬರಿಂದ ಸಮಾಜವನ್ನು ಕಟ್ಟಿ ಬೆಳೆಸಲು ಸಾಧ್ಯವಿಲ್ಲ. ಎಲ್ಲರೂ ಒಗ್ಗೂಡಿದಾಗ ಸಮಾಜ ಕಟ್ಟಲು ಸಾಧ್ಯ. ವೀರಶೈವ ಲಿಂಗಾಯತ ಎರಡು ಒಂದೇ. ಇತ್ತೀಚೆಗೆ ಕೆಲವರು ಒಡಕಿನ ಧ್ವನಿ ಹುಟ್ಟು ಹಾಕಿದ್ದಾರೆ ಅಷ್ಟೆ ಎಂದಿದ್ದಾರೆ.

ನಡೆಯುವ ದಾರಿಯಲ್ಲಿ ಸ್ವಲ್ಪ ಏರು ಪೇರಾಗಿರಬಹುದು ಅಷ್ಟೆ. ಅದನ್ನು ಸರಿಮಾಡಿಕೊಂಡು ಹೋದ್ರೆ ಸಮಾಜಕ್ಕೆ ಉಜ್ವಲ ಭವಿಷ್ಯವಿದೆ. ಸಂವಿಧಾನದಲ್ಲಿ ಆರು ಧರ್ಮಗಳಿಗೆ ಮಾನ್ಯತೆ ನೀಡಿದ್ದಾರೆ. ವೀರಶೈವ ಲಿಂಗಾಯತ ಸ್ವತಂತ್ರ ಧರ್ಮವಾಗಬೇಕು ಅಂತ ಪ್ರಯತ್ನ ನಡೆದಿದೆ. ಈ ಪ್ರಯತ್ನಕ್ಕೆ ಇನ್ನು ಕೇಂದ್ರ ಸರ್ಕಾರ ಮಾನ್ಯತೆ ನೀಡಿಲ್ಲ. ರಾಜ್ಯ ಸರ್ಕಾರದ ಗಣತಿ ನೋಡಿ ಎದೆ ದಸಕ್ ಅಂತಿದೆ. ಜಾತಿಗಳ ಹೆಸರನ್ನೇ ನಾವು ಇಲ್ಲಿವರೆಗೆ ಕೇಳಿಲ್ಲ.
ಹೊಸ ಜಾತಿಗಳು ಸೇರಿದ್ದು ಎಲ್ಲರ ತಲೆ ಬಿಸಿ ಮಾಡಿದೆ. ಹಿಂದೂ ಸಮಾಜವನ್ನು ಜಾತಿ ಜಾತಿಗಳಾಗಿ ವಿಂಗಡಿಸೋ ಯತ್ನ ನಡೆದಿದೆ. ಆ ಮೂಲಕ ವೀರಶೈವ ಲಿಂಗಾಯತರ ಸಂಖ್ಯೆ ಕಡಿಮೆ ಮಾಡೋಕೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ದೂರಿದ್ದಾರೆ.

ಮಾನ್ಯತೆಯೇ ಇಲ್ಲದೇ ಇರೋ ಧರ್ಮವನ್ನು ಜಾತಿಗಣತಿಯಲ್ಲಿ ಬರೆಸಿದ್ರೆ ಅದು ಮಾನ್ಯತೆ ಬರಲ್ಲ. ಹೀಗಾಗಿ ಮಹಾಸಭೆ ಕಾನೂನು ತಜ್ಞರ ಜೊತೆ ಚರ್ಚಿಸಿ ನಿರ್ಧರಿಸಬೇಕು. ವೀರಶೈವ ಪಂಚಪೀಠಗಳ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಿದ್ದಾರೆ. ನಾವು ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲು ಬರಲ್ಲ ಅಂತ ಅಲ್ಲ. ಬಸವೇಶ್ವರರು ಕೊಟ್ಟ ಕೊಡುಗೆಯನ್ನು ಮುಕ್ತಕಂಠದಿಂದ ಮಾತನಾಡುತ್ತೇವೆ. ಆದ್ರೆ ವಿರಕ್ತ ಸ್ವಾಮಿಗಳು ರೇಣುಕಾರಾಧ್ಯರ ಹೆಸರನ್ನು ಅಪ್ಪಿತಪ್ಪಿಯೂ ಹೇಳಲ್ಲ ಎಂದಿದ್ದಾರೆ ರಂಭಾಪುರಿ ಶ್ರೀಗಳು.

ಇನ್ನು ನಾವು ಕಸ ಆಗೋದು ಬೇಡ, ಕಸಬರಿಗೆ ಆಗೋಣ ಎಂದಿದ್ದಾರೆ ಫಕೀರ ದಿಂಗಾಲೇಶ್ವರ ಶ್ರೀಗಳು. ಕಸಬರಿಗೆಯಿಂದ ಒಂದು ಕಡ್ಡಿ ಹೋದರೆ ಅದು ಕಸ ಆಗುತ್ತದೆ. ಅದೇ ಕಡ್ಡಿಯನ್ನು ವಾಪಸ್ ಇಟ್ಟರೆ ಕಸಬರಿಗೆ ಆಗುತ್ತದೆ. ಕಸವನ್ನು ಸ್ವಚ್ಛಗೊಳಿಸಲು ಅಣಿ ಆಗುತ್ತದೆ. ಈ ರೀತಿಯ ಸಂಘಟನೆ ಅವಶ್ಯಕತೆ ಇದೆ. ಎಲ್ಲರೂ ವೀರಶೈವ – ಲಿಂಗಾಯತ ಧರ್ಮ ಅಂತ ಬರೆಯಿಸಲು ಕರೆ ನೀಡಿದ್ದಾರೆ ದಿಂಗಾಲೇಶ್ವರ ಶ್ರೀಗಳು.

ಹುಬ್ಬಳ್ಳಿಯಲ್ಲಿ ಫಕೀರ ದಿಂಗಾಲೇಶ್ವರ ಶ್ರೀ ನೇತೃತ್ವದಲ್ಲಿ ನಡೆದ ವೀರಶೈವ – ಲಿಂಗಾಯತ ಶಕ್ತಿ ಪ್ರದರ್ಶನದಲ್ಲಿ ರಂಭಾಪುರಿ ಶ್ರೀಗಳು, ಶ್ರೀಶೈಲ ಜಗದ್ಗುರು, ಕಾಶಿ, ಉಜ್ಜೈನಿ ಜಗದ್ಗುರುಗಳು, ಸಿದ್ಧಾಂಗಂಗಾ ಶ್ರೀಗಳು, ಮೂರು ಸಾವಿರ ಮಠ ಶ್ರೀಗಳ ಸಾನಿಧ್ಯವಿತ್ತು. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಸಚಿವರಾದ ಶರಣಬಸಪ್ಪ ದರ್ಶನಾಪುರ್, ಈಶ್ವರ್ ಖಂಡ್ರೆ, ಶಂಕರ್ ಬಿದರಿ ಮತ್ತಿತರರು ಭಾಗಿಯಾಗಿದ್ದರು. ಶಿವ ಲಿಂಗಕ್ಕೆ ಮಾಲಾರ್ಪಣೆ ಮಾಡೋ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು.

==============

Related posts

Lingayath; ಲಿಂಗಾಯತ ಸಮಾವೇಶದಲ್ಲಿ ಭಾಗಿಯಾದ್ರೆ ಸರಿಯಿರಲ್ಲ.. ಸಿಎಂಗೆ ಎಚ್ಚರಿಕೆ

Publicspot

ರಾಜ್ಯದಲ್ಲಿ ವರುಣಾರ್ಭಟ.. ಅಲ್ಲಲ್ಲಿ ಸಮಸ್ಯೆ.. ಬರ ನೀಗಿಸುತ್ತಾ ಮಳೆ..?

Publicspot

ಕೊಲ್ಲಿ ರಾಷ್ಟ್ರದ ಯುದ್ಧ ಕರ್ನಾಟಕದಲ್ಲಿ ಭಾರೀ ಸಂಕಷ್ಟ..!

Publicspot

ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವಕ್ಕೆ ಇರುವ ಅಧಿಕೃತ ದಾಖಲೆ

admin

RSS Ban War; ಕರ್ನಾಟಕದ ನೆಲದಲ್ಲೇ ನಿಂತು ಸರ್ಕಾರಕ್ಕೆ ಮೋಹನ್‌ ಭಾಗವತ್‌ ತಿರುಗೇಟು..

Publicspot

Rain Alert: ರಾಜ್ಯದಲ್ಲಿ ಎರಡು ದಿನ ಮಳೆಯಬ್ಬರ.. ಯಾವೆಲ್ಲಾ ಜಿಲ್ಲೆಗಳಿಗೆ ಅಲರ್ಟ್‌..!?

Publicspot