The Public Spot
ಅಪರಾಧ

ಮದುವೆ ಆಗಿ 15 ದಿನ ಕಳೆದರೂ ಮಂಚಕ್ಕೆ ಬರಲಿಲ್ಲ.. ಕೊಂದೇ ಬಿಟ್ಟ ಗಂಡ..!!

ಮದುವೆ ಅನ್ನೋದು ಬ್ರಹ್ಮಲಿಖಿತ ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತೆ ಅನ್ನೋದೊಂದು ಮಾತಿದೆ. ಮದುವೆಗೂ ಮುಂಚೆ ಹತ್ತಾರು ಕಡೆ ವಿಚಾರಿಸ್ತಾರೆ. ಕುಲ ಗೋತ್ರ ನೋಡಿ ಜಾತಕ ಹೊಂದಾಣಿಕೆ ಆಗುತ್ತಾ ಅಂತಾನೂ ನೋಡ್ತಾರೆ. ಅಷ್ಟೆಲ್ಲಾ ಆದ್ಮೇಲೆ ಒಂದೊಳ್ಳೆ ಮುಹೂರ್ತ ನೋಡಿ ಸರಿಯಾದ ಗಳಿಯಲ್ಲೇ ತಾಳಿ ಕಟ್ಟಿಸಿ ಸತಿಪತಿಗಳನ್ನಾಗಿ ಮಾಡ್ತಾರೆ. ಆ ಬಳಿಕ ಸಪ್ತಪದಿ ತುಳಿಸಿ ಗಂಡ ಹೆಂಡತಿ ಸುಖವಾಗಿ ಸಂಸಾರ ಮಾಡಿ ಮುದ್ದಾದ ಮಕ್ಕಳನ್ನು ಹಡೆದು ವಂಶಾಭಿವೃದ್ಧಿ ಮಾಡಿ ಅಂತಾ ಹಾರೈಸ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮೀಡಿಯಾ ಆರ್ಭಟ ಶುರುವಾದ ಬಳಿಕ ಮದುವೆ ಅನ್ನೋ ವಿಚಾರವೇ ಮಾನ್ಯತೆ ಕಳೆದುಕೊಳ್ತಿದೆ. ಜಾಲತಾಣಗಳಿಂದಲೇ ಮದುವೆ ಸಂಬಂಧ ಏರ್ಪಾಡು ಆಗ್ತಿದೆ. ಪೋಸ್ಟ್​ ಡಿಲೀಟ್​ ಮಾಡೋ ಸ್ಪೀಡ್​ನಲ್ಲೇ ಮದುವೆಗಳು ಮುರಿದು ಬೀಳ್ತಿವೆ.

ಮದುವೆಗೆ ಹಾಕಿದ್ದ ಚಪ್ಪರ ತೆಗೆದಿರಲ್ಲ. ಹುಡುಗಿ ಕೈನಲ್ಲಿದ್ದ ಕಪ್ಪು ಬಳೆಯನ್ನೂ ಬದಲಿಸಿರಲ್ಲ. ಒಬ್ಬರಿಗೊಬ್ಬರು ಇನ್ನೂ ಮನಸ್ಸು ಬಿಚ್ಚಿಯೂ ಮಾತಾಡಿರಲ್ಲ. ಅಷ್ಟರಲ್ಲೇ ಮದುವೆ ಅನ್ನೋ ಸಂಬಂಧವನ್ನ ಕಡಿದುಕೊಳ್ಳಳು ಮುಂದಾಗಿದ್ದಳು. ಚಿಕ್ಕಮಗಳೂರು ತಾಲೂಕಿನ ಹವ್ವಳ್ಳಿ ಗ್ರಾಮದ ನೇತ್ರಾವತಿ, ವರನಿಗಾಗಿ ಮ್ಯಾಟ್ರಿಮೋನಿಯಲ್ಲಿ ಹುಡುಕಾಡ್ತಿದ್ದಾಗ ಹಾಸನ ಜಿಲ್ಲೆ ಸಕಲೇಶಪುರ‌ ಮೂಲದ ನವೀನ್ ಪ್ರೊಫೈಲ್​ ಕಣ್ಣಿಗೆ ಬಿದ್ದಿತ್ತು. ಇಬ್ಬರ ಕಡೆಗೂ ಈ ಮದುವೆ ಒಪ್ಪಿಗೆ ಆಗಿತ್ತು. ಕಳೆದ 5 ತಿಂಗಳ ಹಿಂದೆ ಧರ್ಮಸ್ಥಳದಲ್ಲಿ ಮದುವೆಯನ್ನೂ ಆಗಿದ್ರು. ಇನ್ನೇನು ಸಂಸಾರ ಶುರುವಾಗಬೇಕು ಅನ್ನೋ ಹೊತ್ತಲ್ಲಿ ನೇತ್ರಾವತಿ ತವರು ಸೇರಿಕೊಂಡಿದ್ದಳು. ಮದುವೆಯಾದ 15 ದಿನಕ್ಕೇ ನನಗೆ ಗಂಡ ಬೇಡ, ಡಿವೋರ್ಸ್‌ ಬೇಕು ಅಂತಾ ಆಲ್ದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.

ಮ್ಯಾಟ್ರಿಮೋನಿ ಮೂಲಕ ಹುಡುಗನನ್ನ ಮೆಚ್ಕೊಂಡು ಮದುವೆ ಆದ ಹುಡುಗಿ ಕೇವಲ ಹದಿನೈದು ದಿನಕ್ಕೆ ತವರು ಮನೆ ಸೇರಿಕೊಂಡಿದ್ದಳು. ಗಂಡನೂ ಬೇಡ, ಸಂಸಾರವೂ ಬೇಡ, ನನಗೆ ಡಿವೋರ್ಸ್‌ ಬೇಕು ಅಂತಾ ಪಟ್ಟು ಹಿಡಿದ ಹುಡುಗಿ ಪೊಲೀಸ್ ಠಾಣೆಗೆ ಹೋಗಿ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಳು. ಗಂಡ ಹೆಂಡತಿ ಜಗಳ ಆಗಿದ್ರಿಂದ ಇವರಿಬ್ಬರ ನಡುವಿನ ಪ್ರಕರಣವನ್ನು ಸಖಿ ಕೇಂದ್ರಕ್ಕೆ ಶಿಫ್ಟ್‌ ಮಾಡಿದ್ರು. ಅಲ್ಲೂ ಕೂಡಾ ನನಗೆ ಗಂಡ ಬೇಡ ಅಂತಾ ನೇತ್ರಾವತಿ ಹಠಕ್ಕೆ ಬಿದ್ದಿದ್ದಳು. ಇಷ್ಟೇ ಅಲ್ಲ ನವೀನ್‌ ಮನೆಯವ್ರ ಮೇಲೆ ವರದಕ್ಷಿಣೆ ಕಿರುಕುಳದ ಕೇಸ್‌ ಸಹ ದಾಖಲಿಸಿದ್ದಳು. ಅರಿಶಿಣದ ಮೈ ಆರೋದಕ್ಕೂ ಮೊದಲೇ ಕೈಕೊಟ್ಟು ಹೋದ ಹೆಂಡತಿ ಮೇಲೆ ಸಿಡಿದೆದ್ದ ಗಂಡ, ರಣರಾಕ್ಷಸನಾಗಿದ್ದ. ವರದಕ್ಷಿಣೆ ಕಿರುಕುಳದ ಕೇಸ್‌ ಕೊಟ್ಟ ಹೆಂಡತಿಯನ್ನು ಕೊಂದು ಬಿಸಾಡಿದ್ದಾನೆ.

ಮದ್ವೆಯಾದ ಹದಿನೈದು ದಿನಕ್ಕೇ ದೂರ ಆಗುವಂತದ್ದು ಏನ್​ ಆಗಿತ್ತು ಅನ್ನೋದಕ್ಕೆ ಹುಡುಗಿ ನೇತ್ರಾವತಿ ಹೇಳಿಕೊಂಡಿದ್ದಳೋ ಇಲ್ಲವೋ ಗೊತ್ತಿಲ್ಲ. ಆದರೆ ನವೀನ್​ ನನಗೆ ಬೇಡ ಅಂತಾ ನೇತ್ರಾವತಿ ತವರು ಮನೆಗೆ ವಾಪಸ್​ ಆಗಿದ್ದಳು. ತವರಲ್ಲಿ ಇದ್ದುಕೊಂಡು ವರದಕ್ಷಿಣೆ ಕೇಸ್‌ ಕೊಟ್ಟಿದ್ದಕ್ಕೆ ನವೀನ್‌‌, ಕೆಂಡಾಮಂಡಲ ಆಗಿದ್ದ. ನನ್ನ ಬಾಳಲ್ಲಿ ಆಟ ಆಡಿದವ್ಳಿಗೆ ತಕ್ಕ ಶಾಸ್ತಿ ಮಾಡ್ಬೇಕು ಅಂತಾ ಮುಹೂರ್ತ ಫಿಕ್ಸ್‌ ಮಾಡಿದ್ದ. ನಿನ್ನೆ ಸಂಜೆ ಹವ್ವಳ್ಳಿ ಗ್ರಾಮಕ್ಕೆ ಹೋದವ ತನ್ನ ಹೆಂಡ್ತಿ ಹೊರಗೆ ಬರೋದನ್ನೇ ಕಾಯ್ತಿದ್ದ. ಮನೆ ಮುಂದೆಯೇ ಅಡಗಿ ಕೂತಿದ್ದವ ಯಾರೊಬ್ಬರ ಕಣ್ಣಿಗೂ ಬಿದ್ದಿರ್ಲಿಲ್ಲ. ಕತ್ತಲ ರಾತ್ರಿಯಲ್ಲಿ ನೇತ್ರಾವತಿ ಹೊರಗೆ ಬರ್ತಿದ್ದಂತೆ ಅಟ್ಟಹಾಸ ಮೆರೆದಿದ್ದಾನೆ. ಕುತ್ತಿಗೆಗೆ ಮಚ್ಚೇಟು ಕೊಡ್ತಿದ್ದಂತೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಳು. ರಕ್ತದ ಮಡುವಲ್ಲಿ ಬಿದ್ದು ಒದ್ದಾಡ್ತಿದ್ದ ನೇತ್ರಾವತಿಯನ್ನು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಿಲ್ಲ. ನೇತ್ರಾವತಿ ಕೊಂದ ಗಂಡ ನಾಪತ್ತೆ ಆಗಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸ್ರು ನಾಪತ್ತೆ ಆಗಿರೋ ನವೀನ್‌ ಬಂಧನಕ್ಕೆ ಬಲೆ ಬೀಸಿದ್ದಾರೆ. ಹಸೆಮಣೆ ಏರಿದ 15 ದಿನಕ್ಕೇ ಮದ್ವೆ ಮುರಿದು ಬಿದ್ದಿತ್ತು.. ಗಂಡ ಹೆಂಡತಿ ನಡುವೆ ಮೊದಲ ರಾತ್ರಿಯೂ ನಡೆದಿರಲಿಲ್ಲ. ಹೆಂಡತಿ ವರದಕ್ಷಿಣೆ ಕಿರುಕುಳ ದೂರು ದಾಖಲು ಮಾಡ್ತಿದ್ದ ಹಾಗೆ ಎಸ್‌ಪಿ ದೂರು ಕೊಟ್ಟಿದ್ದ ನವೀನ್ ನಮ್ಮಿಬ್ಬರ ನಡುವೆ ಮೊದಲ ರಾತ್ರಿಯೇ ಆಗಿಲ್ಲ ಎಂದು ಹೇಳಿದ್ದ. ನನ್ನ ಜೊತೆಗೆ ಮಲಗುವುದಕ್ಕೇ ನಿರಾಕರಿಸಿದ್ದಾಳೆ. ಈಗ ದೂರು ಕೊಟ್ಟಿದ್ದಾಳೆ ಎಂದು ದೂರಿದ್ದ. ಅಷ್ಟೆಲ್ಲಾ ಆದ ಬಳಿಕ ದೂರು ಕೊಟ್ಟವಳನ್ನು ಕೊಂದು ಬಿಸಾಡಿದ್ದಾನೆ.

Related posts

Girl Sale Like a Sex Toy; ಋತುಮತಿಯಾದ ಹೆಣ್ಣು.. ಪುರುಷತ್ವ ಹೆಚ್ಚಳ ಶಕ್ತಿ.. 20 ಲಕ್ಷಕ್ಕೆ ಬಾಲಕಿ ಮಾರಾಟ..!!

Publicspot

MASK MEN FRIEND: ಅನಾಮಿಕ ಹೇಳ್ತಿರೋದೆಲ್ಲಾ ಸುಳ್ಳಾ..? ಫ್ರೆಂಡ್‌ ಬಿಚ್ಚಿಟ್ಟ ರಹಸ್ಯ

Publicspot

ನಿನ್ನೆ ಆಯ್ತು.. ಇವತ್ತೂ ಕೊಲೆ ಕೇಸ್‌ ವಿಚಾರಣೆ.. ನಟ ದರ್ಶನ್‌ಗೆ ಢವಢವ..

Publicspot

husband Suicide : ಗಂಡನ ಮನೆ ಬಿಟ್ಟ ಹೆಂಡತಿ ತವರು ಸೇರಿದ್ಲು.. ನದಿಗೆ ಹಾರಿದ ಗಂಡ..

Publicspot

Husband Murder: ನನಗೆ ಗಂಡ ಬೇಡ.. ನೀನೇ ಬೇಕು ಅಂದಳು.. ಬಾಲ್ಯ ಸ್ನೇಹಿತನ ಕೊಂದವನ ಮಾತು.. ಖಾಕಿ ಶಾಕು..

Publicspot