The Public Spot
ಅಪರಾಧ

MASK MEN FRIEND: ಅನಾಮಿಕ ಹೇಳ್ತಿರೋದೆಲ್ಲಾ ಸುಳ್ಳಾ..? ಫ್ರೆಂಡ್‌ ಬಿಚ್ಚಿಟ್ಟ ರಹಸ್ಯ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದಿದ್ದ ಅನಾಮಿಕ ದೂರು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕನ ಸ್ನೇಹಿತ ಎನ್ನಲಾದ ರಾಜು ಎಂಬಾತ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರಿನ ವೈದ್ಯನಾಥಪುರದಲ್ಲಿರುವ ರಾಜು, ಅನಾಮಿಕ ಇಲ್ಲೀವರೆಗೂ ನೀಡಿರುವ ಹೇಳಿಕೆಯನ್ನ ಅಲ್ಲಗಳೆದಿದ್ದಾರೆ. ಆತ ಯಾಕೆ ಈ ರೀತಿ ಹೇಳಿಕೆ ನೀಡಿದ್ದಾನೋ ನನಗೆ ಗೊತ್ತಿಲ್ಲ. ಯಾರೋ ಅವನಿಗೆ ದುಡ್ಡಿನ ಆಸೆ ತೋರಿಸಿರಬೇಕು. ನಾನು ಯಾವತ್ತೂ ಪೊಲೀಸರ ಅನುಮತಿ ಇಲ್ಲದೇ ಯಾವುದೇ ಶವ ಸಂಸ್ಕಾರ ಮಾಡಿಲ್ಲ. ನಮಗೆ ಯಾರೂ ಅಪರಿಚಿತ ಶವ ಹೂಳುವಂತೆ ಹೇಳಿಲ್ಲ. ಯಾರದ್ದೋ ಮಾತು ಕೇಳಿಕೊಂಡು ಆಮಿಷಕ್ಕೆ ಒಳಗಾಗಿ ಈ ರೀತಿ ಮಾಡುತ್ತಿರಬಹುದು ಎಂದು ರಾಜು ಹೇಳಿಕೊಂಡಿದ್ದಾರೆ.

ಮುಸುಕುಧಾರಿ ನೀಡಿರುವ ಎಲ್ಲಾ ದೂರುಗಳು ಸುಳ್ಳು ಎಂದಿದ್ದಾನೆ ಅನಾಮಿಕನ ಸ್ನೇಹಿತ.ಅನಾಮಿಕನ ಜೊತೆ ಧರ್ಮಸ್ಥಳದ ದೇವಸ್ಥಾನದ ಬಳಿ ಸ್ವಚ್ಚತಾ ಕೆಲಸ ಮಾಡ್ತಿದ್ದ ರಾಜು. ನಾವು ಯಾವತ್ತೂ ಪೊಲೀಸರ ಅನುಮತಿ ಪಡೆಯದೆ ಯಾವುದೇ ಶವ ಸಂಸ್ಕಾರ ಮಾಡಿಲ್ಲ. ನಮಗೆ ಯಾರು ಕೂಡ ಬಂದು ಅಪರಿಚಿತ ಶವ ಹೂಳುವಂತೆ ಹೇಳಿಲ್ಲ. ಧರ್ಮಸ್ಥಳದಲ್ಲಿ ಅವರದ್ದೇ ನಾಲ್ಕು ಕುಟುಂಬಗಳು ಅಲ್ಲಿ ಕೆಲಸ ಮಾಡ್ತಿದ್ರು. ಅನ್ನ ಹಾಕಿ ಸಾಕಿ ಸಲಹಿದ ಧಣಿಗಳ ಮೇಲೆ ಈಗ ಈ ರೀತಿ ಆರೋಪ ಮಾಡ್ತಿರೋದು ಸರಿಯಿಲ್ಲ‌. ಈತ ಅನಾಥ ಶವಗಳ ಮೇಲಿದ್ದ ಚಿನ್ನಾಭರಣವನ್ನೂ ಕಳವು ಮಾಡುತ್ತಿದ್ದ ಎಂದು ಆರೋಪ ಮಾಡಿದ್ದಾರೆ.

ಧರ್ಮಸ್ಥಳದ ವಿರುದ್ಧ ದೂರು ನೀಡಿರುವ ಅನಾಮಿಕನ ಸ್ನೇಹಿತನೇ ಆಗಿರುವ ರಾಜು, ಧರ್ಮಸ್ಥಳದಲ್ಲಿ ಕೆಲಸ ಮಾಡ್ತಿದ್ರು. ಈ ವೇಳೆ ಪ್ರಕರಣವೊಂದರಲ್ಲಿ ರಾಜುಗೆ ಜೈಲು ಶಿಕ್ಷೆಯಾಗಿ ಧರ್ಮಸ್ಥಳದಲ್ಲಿ ಕೆಲಸ ಬಿಟ್ಟು ಹುಟ್ಟೂರಿನಲ್ಲಿ ಉಳಿದುಕೊಂಡೆ ಎನ್ನುವ ವಿಚಾರವನ್ನೂ ಸ್ವತಃ ರಾಜು ಅವರೇ ಹೇಳಿಕೊಂಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ರಾಜು, ಧರ್ಮಸ್ಥಳದಲ್ಲಿ ಕೆಲಸ ಮಾಡುವಾಗಲೇ ಆರೇಳು ವರ್ಷ ಜೈಲು ಶಿಕ್ಷೆ ಆಗಿತ್ತು. ಸುಮಾರು 7 – 8 ವರ್ಷ ಧರ್ಮಸ್ಥಳದಲ್ಲಿ ಕೆಲಸ ಮಾಡಿದ್ದೇನೆ. ಆಗ ಪ್ರಕರಣವೊಂದರಲ್ಲಿ ಆರೇಳು ವರ್ಷ ಜೈಲು ಶಿಕ್ಷೆ ಆಗಿತ್ತು. ಜೈಲು ವಾಸ ಅನುಭವಿಸಿದ ಬಳಿಕ ವಾಪಸ್ ಧರ್ಮಸ್ಥಳದ ಕೆಲಸಕ್ಕೆ ಹೋಗಲಿಲ್ಲ. ಮಂಡ್ಯದ ಮದ್ದೂರಿನಲ್ಲೇ ಉಳಿದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

Related posts

Hassan Ganesha Tragedy: ಹಾಸನದಲ್ಲಿ ಗಣೇಶ ಮೆರವಣಿಗೆ ದುರಂತ.. 9 ಸಾವು.. 20ಕ್ಕೂ ಹೆಚ್ಚು ಗಾಯ..

Publicspot

DHARMASTHALA BJP RALLY: ಧರ್ಮಸ್ಥಳಲ್ಲಿ ಶುರುವಾಗಿದೆ ಧರ್ಮ ರಾಜಕಾರಣ..

Publicspot

ದಾವಣಗೆರೆ SP ಉಮಾ ಪ್ರಶಾಂತ್​​ ಬಗ್ಗೆ ಕೀಳು ಮಾತು.. ಅರೆಸ್ಟ್​ ಆಗ್ತಾರಾ ಶಾಸಕ..?

Publicspot

ತಂದೆ ತಾಯಿಗೆ ಚಾಕು ಇರಿದ ಮಗ.. ಅಮೆರಿಕದಲ್ಲಿ ಓದಿಸಿದ್ದಕ್ಕೂ ಸಾರ್ಥಕ..

Publicspot

ಅಕ್ರಮ ಸಂಬಂಧ ಬೇಡ ಎಂದಿದ್ದಕ್ಕೆ ಅಟ್ಯಾಕ್​​ ಮಾಡಿದ್ದ ಅಡಕಮಾರನಹಳ್ಳಿ ಆಂಟಿ ಅರೆಸ್ಟ್​..

Publicspot

2023 Video Leak; ಚಿನ್ನಯ್ಯ ಹೇಳಿದ ಮಾತುಗಳು ಎಷ್ಟು ಸತ್ಯ..? ಎಷ್ಟು ಸುಳ್ಳು.. ಹೊಸ ವಿಡಿಯೋ ಲೀಕ್‌..

Publicspot