The Public Spot
ಅಂಕಣ

JDS-BJP ಮೈತ್ರಿಗೆ ಜನರ ಬೆಂಬಲ ಸಿಗುತ್ತಾ..? ಇದೆನಾ 2028ರ ಮುನ್ನಡಿ

ವಿಧಾನಪರಿಷತ್​ ಚುನಾವಣಾ ಮತ ಎಣಿಕೆ ಮುಗಿದಿದ್ದು, ನಾಲ್ಕೂ ಕ್ಷೇತ್ರಗಳಲ್ಲೂ ಬಿಜೆಪಿ-ಜೆಡಿಎಸ್​ ಮೈತ್ರಿಕೂಟದ ಅಭ್ಯರ್ಥಿಗಳು ವಿಜಯದ ಪತಾಕೆ ಹಾರಿಸಿದ್ದಾರೆ. 2 ಪದವೀಧರ ಕ್ಷೇತ್ರ ಹಾಗೂ 2 ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್​ಗೆ ನಡೆದ ಚುನಾವಣೆಯಲ್ಲಿ ಘಟಾನುಘಟಿ ನಾಯಕರನ್ನೇ ಸೋಲಿಸಿ ದೋಸ್ತಿ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್​ ಪಾಲಿಗೆ ಈ ಸೋಲು ಅರಗಿಸಿಕೊಳ್ಳಲಾಗದ ಆಹಾರ ಎನ್ನುವಂತಾಗಿದೆ. ಇನ್ನೇನು ಒಂದೂವರೆ ವರ್ಷದಲ್ಲಿ ವಿಧಾನಸಭೆ ಚುನಾವಣೆ ಎದುರಾಗುತ್ತಿದ್ದು, ವಿದ್ಯಾವಂತ ಮತದಾರರು ಜೆಡಿಎಸ್​-ಬಿಜೆಪಿ ಬೆಂಬಲಿಸುವ ನಿರ್ಣಯ ಮಾಡಿದ್ದಾರೆ ಅನ್ನೋ ಸಂದೇಶ ರವಾನೆ ಮಾಡಿದ್ದಾರೆ.

ಗ್ಯಾರಂಟಿ ಯೋಜನೆಗಳಿಂದಲೇ ಕಾಂಗ್ರೆಸ್​ ಪಕ್ಷ 2023ರಲ್ಲಿ ಚುನಾವಣೆ ಜಯಿಸಿದ್ದು ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಕಾಂಗ್ರೆಸ್​ ಸೇರಿದಂತೆ ಎಲ್ಲಾ ತಿಳುವಳಿಕೆ ಉಳ್ಳವರಿಗೂ ಗೊತ್ತಿತ್ತು ಗ್ಯಾರಂಟಿ ಯೋಜನೆ ರಾಜ್ಯದ ಅರ್ಥ ವ್ಯವಸ್ಥೆಯನ್ನು ಅಲುಗಾಡಿಸುತ್ತದೆ ಎಂದು. ಕಳೆದ ಮೂರೂವರೆ ವರ್ಷದಲ್ಲಿ ಅಭಿವೃದ್ಧಿ ಮರೆತಿರುವ ಸರ್ಕಾರ, ಬೆಲೆ ಏರಿಕೆ ಮಾಡಿಕೊಂಡು, ಸೆಸ್ ತೆರಿಗೆ ಹೆಚ್ಚಳ ಮಾಡಿಕೊಂಡು ಗ್ಯಾರಂಟಿಯೇ ಸಾಧನೆ ಅಂದುಕೊಳ್ತಿರೋದನ್ನು ವಿದ್ಯಾವಂತ ಮತದಾರರು ವಿರೋಧಿಸಿದ್ದಾರೆ. ಶಿಕ್ಷಕರೂ ಸೇರಿದಂತೆ ಪದವೀಧರರು ಸರ್ಕಾರವನ್ನು ಸೈಡ್​ಗೆ ಇಟ್ಟಿದ್ದಾರೆ.

ಬಡವರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಡುವುದು ಸಾಮಾಜಿಕ ನ್ಯಾಯದ ಒಂದು ಭಾಗ. ಇದನ್ನು ಯಾರೂ ಕೂಡ ಅಲ್ಲಗಳೆಯೋದಕ್ಕೆ ಸಾಧ್ಯವಿಲ್ಲ. ಆದರೆ ಯಾರಿಗೆ..? ಎಷ್ಟು ಪ್ರಮಾಣದಲ್ಲಿ ಕೊಡಬೇಕು ಅನ್ನೋದನ್ನು ಆಳುವ ಸರ್ಕಾರವೇ ನಿರ್ಧಾರ ಮಾಡಬೇಕು. ಆಸೆ ತೋರಿದಷ್ಟು ಜನರು ಮರುಳಾಗಿ ಮತ ನೀಡ್ತಾರೆ ಅನ್ನೋದನ್ನು ರಾಜಕೀಯ ಪಕ್ಷಗಳು ಮಾಡುತ್ತಾ ಹೋದರೆ ಮುಂದಿನ ದಿನಗಳು ಕಿತ್ತು ತಿನ್ನವ ಬಡ ರಾಷ್ಟ್ರ ಆದರೂ ಅಚ್ಚರಿಯಿಲ್ಲ ಎನ್ನುತ್ತಾರೆ ಆರ್ಥಿಕ ತಜ್ಞರು. ಜನರು ಕೆಲಸವನ್ನೇ ಮಾಡದೆ ತಿಂಗಳಿಗೆ 50 ಸಾವಿರದಂತೆ ಸರ್ಕಾರವೇ ಕೊಟ್ಟರೆ ತಪ್ಪೇನು..? ಹೀಗೆ ಕೊಟ್ಟರೆ ಜನರಿಗೆ ಲಾಭ ಆಗುತ್ತದೆ. ಆದರೆ ಈ 50 ಸಾವಿರ ಕೊಡುವ ಸರ್ಕಾರ 70 ಸಾವಿರವನ್ನು ಜನರಿಂದಲೇ ಕಿತ್ತುಕೊಳ್ಳುತ್ತದೆ ಅನ್ನೋ ಅರಿವು ಮತದಾರರಲ್ಲಿ ಇರಬೇಕು.

ಈಗ ವಿದ್ಯಾವಂತ ಮತದಾರರು ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಎ.ಪಿ ರಂಗನಾಥ್​ ಅವರನ್ನು ಗೆಲ್ಲಿಸಿ 5 ಬಾರಿ ಗೆದ್ದು ಬೀಗಿದ್ದ ಕಾಂಗ್ರೆಸ್​ನ ಪುಟ್ಟಣ್ಣ ಅವರನ್ನು ಮಣಿಸಿದ್ದಾರೆ. ಅದೇ ರೀತಿ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲೂ ಮೈತ್ರಿ ಅಭ್ಯರ್ಥಿ ಶಶೀಲ್​ ನಮೋಶಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್​ನ ಶರಣಪ್ಪ ಮಟ್ಟೂರಗೆ ಸೋಲುಣಿಸಿದ್ದಾರೆ. ಇನ್ನೂ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ S.V ಸಂಕನೂರ ಗೆಲುವು ಸಾಧಿಸಿದ್ರೆ, ಆಗ್ನೇಯ ಪದವೀಧರ ಕ್ಷೇತ್ರದಲ್ಲೂ ಮೈತ್ರಿ ಅಭ್ಯರ್ಥಿ ಕೆ.ಎಂ ಸುರೇಶ್​ ಭರ್ಜರಿ ಜಯ ದಾಖಲಿಸಿದ್ದಾರೆ. ಹಣಬಲ ತೋಳ್ಬಲ ಎಂದು ಆರೋಪ ಮಾಡುವಂತಿಲ್ಲ. ಯಾಕಂದ್ರೆ ಯಾವುದೇ ಚುನಾವಣೆ ನಡೆದಾಗಲೂ ಆಳುವ ಸರ್ಕಾರದ್ದೇ ಮೇಲುಗೈ ಆಗಿರುತ್ತದೆ. ಇನ್ನು EVM ಮೇಲೂ ಆರೋಪ ಮಾಡುವಂತಿಲ್ಲ. ಯಾಕಂದ್ರೆ ಬ್ಯಾಲೆಟ್​ ಪೇಪರ್​ನಲ್ಲೇ ಚುನಾವಣೆ ನಡೆದಿದೆ. ಮುಂದಿನ ದಿನಗಳಲ್ಲಿ ಎದುರಾಗುವ ಚುನಾವಣೆಗೆ ಮುನ್ನುಡಿನಾ..? ಅನ್ನೋ ಚರ್ಚೆ ಆರಂಭ ಆಗಿದೆ.

Related posts

ಸಿಎಂ ಮನದಾಳದ ಮಾತು ಯತೀಂದ್ರ ಮಾತಲ್ಲಿ ಹೊರ ಬೀಳ್ತಿದ್ಯಾ..?

Publicspot

Cm Change Talks; ಸಿದ್ದರಾಮಯ್ಯ ರಾಜೀನಾಮೆ ಕೊಟ್ರೆ ಸತೀಶ್‌ ಜಾರಕಿಹೊಳಿ ಸಿಎಂ ಆಗ್ತಾರಾ..?

Publicspot

ಕಾಂಗ್ರೆಸ್​​ನಲ್ಲಿ ಸ್ಟ್ಯಾಂಡಿಂಗ್​ ಮೀಟಿಂಗ್​.. ಬಗೆಹರಿಯುತ್ತಾ ಸಂಕ್ರಾಂತಿ ಸಂಕಷ್ಟ..!

Publicspot

ಗ್ಯಾರಂಟಿ ಕೊಡಲು ಸಾಧ್ಯವಾಗ್ತಿಲ್ವಾ..? ಇನ್ಮುಂದೆ ಗ್ಯಾರಂಟಿ ನಿಂತೇ ಹೋಗುತ್ತಾ..?

Publicspot

ರಾಜ್ಯದಲ್ಲಿ ಶುರುವಾಯ್ತು ಆಶಾ ಮಿಡ್‌ನೈಟ್‌ ಹೋರಾಟ.. ಹೇಗಿದೆ ಕಿಚ್ಚು..?

ಯಶವಂತಿ

Cricket and Politics; ಕ್ರೀಡೆ ಮತ್ತು ಸ್ನೇಹ.. ಕ್ರಿಕೆಟ್​ ಮತ್ತು ರಾಜಕೀಯ.. ಭಾರತ ತಪ್ಪು ಮಾಡಿದ್ದೆಲ್ಲಿ..?

Publicspot