The Public Spot
ರಾಜಕೀಯ

‘ಕರ್ನಾಟಕದಲ್ಲಿ ಒಂದು ಕ್ಷೇತ್ರವನ್ನು ಕಳವು ಮಾಡಿದೆ ಬಿಜೆಪಿ’

ಲೋಕಸಭಾ ಚುನಾವಣೆಯಲ್ಲಿ ಮತಗಳ ಕಳ್ಳತನ ಆಗಿದೆ ಅನ್ನೋದು ಲೋಕಸಭಾ ವಿಪಕ್ಷ ನಾಯಕ ರಾಹುಲ್​ ಗಾಂಧಿ ಅವರ ಆರೋಪ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಆಯೋಗ ಬಿಜೆಪಿ ಪಕ್ಷದ ಜೊತೆಗೆ ಸೇರಿಕೊಂಡು ನಕಲಿ ವೋಟರ್‌ಗಳನ್ನು ಸೃಷ್ಟಿಸಿ ಮತ ಕಳ್ಳತನ ಮಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲೂ ವೋಟ್‌ ಕಳ್ಳತನ ಆಗಿದೆ ಅಂತ ವಾಗ್ದಾಳಿ ಮಾಡಿದ್ದಾರೆ.

ರಾಹುಲ್‌ ಗಾಂಧಿ ಗುರುವಾರ ದೆಹಲಿಯಲ್ಲಿ 7 ಅಡಿಗಳಷ್ಟು ಎತ್ತರದ ದಾಖಲೆಗಳನ್ನು ಪ್ರದರ್ಶನ ಮಾಡಿ ನಕಲಿ ಮತದಾರರನ್ನು ಗುರುತು ಮಾಡಿ ಸಾಕ್ಷಿ ಸಮೇತ ಮಾತನಾಡಿದ್ದರು. ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರದಲ್ಲೂ ಗೋಲ್‌ಮಾಲ್‌ ಆಗಿದೆ ಅಂತ ದಾಖಲೆಗಳ ಪ್ರದರ್ಶನ ಮಾಡಿದ್ದರು. ಮಹದೇವಪುರ ವಿಧಾನಭಾ ಕ್ಷೇತ್ರ ಒಂದರಲ್ಲೇ ಮತಗಳ್ಳತನ ಹೇಗೆ ನಡೆದಿದೆ ಅನ್ನೋದನ್ನು ಬಿಡಿಸಿ ಬಿಡಿಸಿ ಹೇಳಿದ್ರು. ಇವತ್ತು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಮತಗಳ್ಳತನ ಆರೋಪದ ಬಗ್ಗೆ ರಾಹುಲ್‌ಗಾಂಧಿ ರಣಕಹಳೆ ಮೊಳಗಿಸಿ ವಾಪಸ್ ಆಗಿದ್ದಾರೆ.

ಸಾವಿರಾರು ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನಾ ಸಮಾವೇಶಕ್ಕೆ ಸಾಕ್ಷಿಯಾಗಿದ್ರು. ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಸೇರಿದಂತೆ ಇಡೀ ಕಾಂಗ್ರೆಸ್‌ ಪಾಳಯ ಫ್ರೀಡಂಪಾರ್ಕ್‌ನಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಮತ ನಮ್ಮ ಹಕ್ಕು, ಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ ಹೆಸ್ರಲ್ಲಿ ಸಮಾವೇಶ ಮಾಡಲಾಗಿದೆ. ಸಮಾವೇಶದುದ್ದಕ್ಕೂ ರಾಹುಲ್‌ಗಾಂಧಿ ಸೇರಿದಂತೆ ಎಲ್ಲರೂ ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ವಾಕ್‌ಪ್ರಹಾರ ನಡೆಸಿದ್ದಾರೆ.

ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್​ ಸಮೀಕ್ಷೆ ಮಾಡಿಸಿತ್ತು. ಕರ್ನಾಟಕದಲ್ಲಿ 15-16 ಸ್ಥಾನ ಗೆಲ್ಲುವ ಬಗ್ಗೆ ಸಮೀಕ್ಷೆ ಮಾಹಿತಿ ಬಂದಿತ್ತು. ಆದರೆ ನಾವು ಕೇವಲ 9 ಸ್ಥಾನಗಳನ್ನು ಮಾತ್ರ ಗೆದ್ದಿದ್ದು. ನಾವು ಚುನಾವಣಾ ಆಯೋಗಕ್ಕೆ ಪ್ರಶ್ನೆ ಮಾಡಲು ಶುರು ಮಾಡಿದೆವು. ಮತದಾರರ ಪಟ್ಟಿ, ಸಿಸಿಟಿವಿ ದೃಶ್ಯಗಳನ್ನು ಕೇಳಿದೆವು. ಆದ್ರೆ ವಿಡಿಯೋ ಕೊಡದೇ ಕಾನೂನನ್ನೇ ಬದಲಿಸಿಬಿಟ್ರು. 45 ದಿನದಲ್ಲೇ ವಿಡಿಯೋ ಡಿಲೀಟ್‌‌‌ ನಿಯಮ ಜಾರಿ ಮಾಡಿದ್ರು ಎಂದು ದೂರಿದ್ದಾರೆ.

ಬೆಂಗಳೂರಿನ ಮಹದೇವಪುರದಲ್ಲಿ ಪ್ರತೀ 6 ಮತದಲ್ಲಿ 1 ಕಳ್ಳ ವೋಟು ಇದೆ. ನಾವು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಆಯ್ಕೆ ಮಾಡಿಕೊಂಡು ಪರಿಶೀಲನೆ ಮಾಡಿದ್ದೇವೆ. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 6.5 ಲಕ್ಷ ಮತಗಳಿವೆ. ಅದರಲ್ಲಿ 1 ಲಕ್ಷದ 250 ಮತಗಳನ್ನ ಬಿಜೆಪಿ ಕಳ್ಳತನ ಮಾಡಿದೆ. ಅಂದರೆ ಬಿಜೆಪಿ ಪ್ರತಿ 6 ಮತಗಳ ಪೈಕಿ 1 ಮತವನ್ನು ಕಳವು ಮಾಡಿದೆ ಎಂದಿದ್ದಾರೆ. ಕರ್ನಾಟಕದ ಈ ದತ್ತಾಂಶವೇ ಅಪರಾಧಕ್ಕೆ ದೊಡ್ಡ ಪುರಾವೆ ಎಂದಿದ್ದಾರೆ.

ಕರ್ನಾಟಕದ 1 ಕ್ಷೇತ್ರದ ಮತಕಳ್ಳತನ ಸಾಬೀತು ಮಾಡಿದ್ದೀವಿ. ಕರ್ನಾಟಕದ ಇನ್ನೂ ಹಲವು ಕ್ಷೇತ್ರಗಳಲ್ಲಿ ಮತಕಳ್ಳತನ ನಡೆದಿದೆ. ಕರ್ನಾಟಕದ ಈ ದತ್ತಾಂಶವು ಅಪರಾಧಕ್ಕೆ ದೊಡ್ಡ ಪುರಾವೆ. ಈ ದತ್ತಾಂಶ ಸಂಗ್ರಹಿಸೋಕೆ ನಮಗೆ 6 ತಿಂಗಳು ಬೇಕಾಗಿದೆ. 1 ಫೋಟೋನಾ ಲಕ್ಷಾಂತರ ಫೋಟೋ ಜೊತೆ ಚೆಕ್‌ ಮಾಡಿದ್ವಿ, ಈ ದತ್ತಾಂಶ ನಾಶವಾದ್ರೆ ಅಪರಾಧದ ಸಾಕ್ಷಿ ನಾಶ ಮಾಡಿದಂತೆ ಎಂದು ಟೀಕಿಸಿದ್ದಾರೆ. ಕರ್ನಾಟಕದ 1 ಲೋಕಸಭಾ ಸ್ಥಾನವನ್ನು ಕದ್ದಿದ್ದಾರೆ. ಇದು ಜನರ ವಿರುದ್ಧ ಬಿಜೆಪಿ ಮಾಡಿದ ಘೋರ ಅಪರಾಧ. ಕರ್ನಾಟಕ ಸರ್ಕಾರ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು. ಚುನಾವಣಾ ಆಯೋಗದ ಅಧಿಕಾರಿಗಳನ್ನು ಪ್ರಶ್ನಿಸಿ, ಮಹದೇವಪುರ ಅಕ್ರಮ ಬಗ್ಗೆ ಸತ್ಯವನ್ನು ಕಂಡುಕೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ.

Related posts

ರಾಜಣ್ಣನ ಬಳಿ ರಾಜೀನಾಮೆ ಕೇಳಿದ್ರೂ ಕೊಡ್ತಿದ್ರು.. ಆದರೆ ವಜಾ ಮಾಡಿದ್ಯಾಕೆ..?

Publicspot

ಮಾಜಿ ಮಿನಿಸ್ಟರ್​ ರಾಜಣ್ಣ.. ಮತ್ತು ಆ ಮೂರು ತಪ್ಪುಗಳು.. ಡಿಕೆಶಿಗೆ ಕೈ ಜೋಡಿಸಿದ್ರಾ ಸಿಎಂ..?

Publicspot

ಅಧಿಕಾರ ಹಸ್ತಾಂತರ ಬೆನ್ನಲ್ಲೇ ದಲಿತ ನಾಯಕರ ಒಗ್ಗಟ್ಟು.. ಯಾರು ಏನಂದ್ರು..?

Publicspot

ಸತ್ಯ ಹೇಳಿದ್ದಕ್ಕೆ ಸಚಿವ ಸ್ಥಾನ ಕಿತ್ಕೊಳ್ತಾ ಕಾಂಗ್ರೆಸ್​ ಹೈಕಮಾಂಡ್​..?

Publicspot

ಬೃಹತ್ ಇ-ಖಾತಾ ಮೇಳಕ್ಕೆ ಇಂದು ಚಾಲನೆ ನೀಡಿ ಮಾತನಾಡಿದ ಅವರು ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವ

admin

BJP ಬಾಣವನ್ನು ಬಿಜೆಪಿಗೇ ತಿರುಗಿಸಿದ ಸಚಿವ ಕೃಷ್ಣಬೈರೇಗೌಡ..!

Publicspot