The Public Spot
ರಾಜ್ಯ

ನಾಳೆ ಬೆಂಗಳೂರಿಗೆ ಬರ್ತಿದ್ದಾರೆ ಪ್ರಧಾನಿ ಮೋದಿ.. ಏನೆಲ್ಲಾ ಬದಲಾವಣೆ..?

ನಾಳೆ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಪೊಲೀಸ್​ ಇಲಾಖೆ ಬಿಗಿ ಬಂದೋಬಸ್ತ್​ ಮಾಡಿಕೊಳ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಿ ಭದ್ರತೆಗೆ ವ್ಯವಸ್ಥೆ ಮಾಡಿಕೊಂಡಿದೆ. ಮೆಜೆಸ್ಟಿಕ್​ನ KSR ರೈಲ್ವೇ ನಿಲ್ದಾಣದಲ್ಲಿ ಬೆಂಗಳೂರು ಟು ಬೆಳಗಾವಿ ನಡುವಿನ ವಂದೇ ಭಾರತ್ ರೈಲನ್ನು ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಹೀಗಾಗಿ ಮೆಜೆಸ್ಟಿಕ್ ಸುತ್ತಮುತ್ತ ಫ್ಲೆಕ್ಸ್, ಬ್ಯಾನರ್ ಅಳವಡಿಕೆ ಮಾಡಲಾಗಿದೆ. ರಸ್ತೆ ಉದ್ದಕ್ಕೂ ಬ್ಯಾರಿಕೇಡ್ ಅಳವಡಿಸಿರುವ ಪೊಲೀಸ್ ಇಲಾಖೆ ಭದ್ರತಾ ಲೋಪ ಆಗದಂತೆ ಕಟ್ಟೆಚ್ಚರ ವಹಿಸಿದ್ದಾರೆ. ನಾಳೆ ಬೆಳಗ್ಗೆ 11:30 ಸುಮಾರಿಗೆ ಬೆಂಗಳೂರು – ಬೆಳಗಾವಿ ನಡುವಿನ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.

ಬೆಂಗಳೂರಿನಲ್ಲಿ ನಾಳೆ ನಮ್ಮ ಮೆಟ್ರೋ ಯೆಲ್ಲೊ ಮಾರ್ಗಕ್ಕೂ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ನಾಳೆ ಬೆಂಗಳೂರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಚಾರ ಮಾಡಲಿದ್ದು, ಪ್ರಧಾನಮಂತ್ರಿಗಳ ಭೇಟಿ ಹಿನ್ನೆಲೆಯಲ್ಲಿ ಜಯನಗರ, ಹೊಸೂರು ರಸ್ತೆಯಲ್ಲಿ ಸಂಚಾರ ಮಾರ್ಪಾಡು ಮಾಡಲಾಗಿದೆ. ವಾಹನ ಸಂಚಾರ ನಿರ್ಬಂಧ ಮಾಡಿರುವ ರಸ್ತೆಗಳ ಬಗ್ಗೆ ನೋಡೋದಾರೆ, ಮಾರೇನಹಳ್ಳಿ ರಾಜಲಕ್ಷ್ಮೀ ಜಂಕ್ಷನ್​ನಿಂದ 18ನೇ ಮುಖ್ಯ ರಸ್ತೆ ತನಕ. ಈಸ್ಟ್ ಎಂಡ್ ಸರ್ಕಲ್​ನಿಂದ ಅರವಿಂದ ಜಂಕ್ಷನ್ ತನಕ. ಬೆಳಗ್ಗೆ 8.30 ರಿಂದ ಮಧ್ಯಾಹ್ನ 12ರವರೆಗೆ ಸಂಚಾರ ನಿರ್ಬಂಧ ಮಾಡಲಾಗಿದೆ.

ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈ ಓವರ್, ಹೊಸೂರು ಕಡೆಯಿಂದ ನಗರದ ಕಡೆಗೆ ಬರುವ ಮಾರ್ಗಗಳಾದ ಇನ್ಫೋಸಿಸ್​ಅವೆನ್ಯೂ, ವೇಲಾಂಕಣಿ ರಸ್ತೆಗಳಲ್ಲೂ ಸಂಚಾರ ನಿರ್ಬಂಧ ಮಾಡಲಾಗಿದೆ. ಬೆಳಗ್ಗೆ 9:30 ರಿಂದ ಮಧ್ಯಾಹ್ನ 2:30 ರವರೆಗೆ ಈ ರಸ್ತೆಗಳಲ್ಲಿ ನಿರ್ಬಂಧ ಮಾಡಿದ್ದಾರೆ ಪೊಲೀಸರು. ನಿರ್ಬಂಧಿತ ರಸ್ತೆಗಳಿಗೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಸೂಚನೆ ನೀಡಿದ್ದು, ಮಾರೇನಹಳ್ಳಿ ರಾಜಲಕ್ಷ್ಮಿ ಜಂಕ್ಷನ್​ನಿಂದ ಜಯದೇವ ಕಡೆಗೆ ಸಂಚರಿಸುವ ವಾಹನಗಳು, ಬನಶಂಕರಿ ಬಸ್ ನಿಲ್ದಾಣ, ಸಾರಕ್ಕಿ ಮಾರ್ಕೆಟ್, ಆರ್.ವಿ. ಡೆಂಟಲ್ ಜಂಕ್ಷನ್, 9ನೇ ಕ್ರಾಸ್ ರಸ್ತೆ ಮೂಲಕ ಜಯದೇವ ಕಡೆಗೆ ಸಾಗಬೇಕಿದೆ.

ಸಾರಕ್ಕಿ ಜಂಕ್ಷನ್ ಔಟರ್ ರಿಂಗ್ ರಸ್ತೆ ಮೂಲಕ ಸಹ ಬನ್ನೇರುಘಟ್ಟ ರಸ್ತೆ ಕಡೆಗೆ ಸಂಚಾರ ಮಾಡಬಹುದಾಗಿದೆ. ಈಸ್ಟ್ ಎಂಡ್ ಸರ್ಕಲ್​ನಿಂದ ಬನಶಂಕರಿ ಕಡೆಗೆ ಸಂಚರಿಸುವ ವಾಹನಗಳು, 28ನೇ ಮುಖ್ಯ ರಸ್ತೆಯಲ್ಲಿ ಎಡ ತಿರುವು ಪಡೆದು, 9ನೇ ಕ್ರಾಸ್ ಜಂಕ್ಷನ್, ಡಾಲಿಯಾ ಜಂಕ್ಷನ್, ಔಟರ್ ರಿಂಗ್ ರಸ್ತೆ ಮೂಲಕ ಸಾರಕ್ಕಿ ಜಂಕ್ಷನ್, ಕನಕಪುರ ರಸ್ತೆ ಹಾಗೂ ಬನಶಂಕರಿ ಕಡೆಗೆ ಸಂಚಾರ ಮಾಡಬಹುದಾಗಿದೆ. ಹೊಸೂರು ರಸ್ತೆಯಿಂದ ಕನಕಪುರ ರಸ್ತೆ, ಮೈಸೂರು ರಸ್ತೆ ಮತ್ತು ತುಮಕೂರು ಕಡೆ ಹೋಗುವ ವಾಹನಗಳು ನೈಸ್‌ ರಸ್ತೆ ಬಳಸಿ ಸಂಚರಿಸಲು ಪೊಲೀಸರು ಸೂಚನೆ ಕೊಟ್ಟಿದ್ದಾರೆ. ನೈಸ್ ರಸ್ತೆಯಿಂದ ಬರುವ ವಾಹನಗಳು, ಬನ್ನೇರುಘಟ್ಟ ಜಂಕ್ಷನ್, ಜಿಗಣಿ ರಸ್ತೆ, ಬೊಮ್ಮಸಂದ್ರ ಜಂಕ್ಷನ್, ಹೊಸೂರು ರಸ್ತೆ ಕಡೆಗೆ ಸಂಚಾರ ಮಾಡಬಹುದಾಗಿದೆ.

Related posts

ಹಾಸನಾಂಬೆ ದರ್ಶನಕ್ಕೆ ಹೋಗುವ ಮುನ್ನ ಹುಷಾರು.. ಜನಸಂಖ್ಯೆ ನಿಯಂತ್ರಣಕ್ಕೆ ಪರದಾಟ..!

Publicspot

ಬೆಂಗಳೂರಲ್ಲಿ ಮಳೆಯ ರೌದ್ರನರ್ತನ..!

Publicspot

ಹೊಸ ವರ್ಷ 2026ರ ಸ್ವಾಗತಕ್ಕೆ ಹೇಗಿದೆ ಬೆಂಗಳೂರು ಖಾಕಿ ತಯಾರಿ..?

Publicspot

RAIN DAMAGES IN KARNATAKA: ಕರ್ನಾಟಕದಲ್ಲಿ ಮಳೆ ಅಬ್ಬರದ ಎಫೆಕ್ಟ್‌ ಹೇಗಿದೆ..?

Publicspot

ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವಕ್ಕೆ ಇರುವ ಅಧಿಕೃತ ದಾಖಲೆ

admin

Caste Censes; ಇಂದಿನಿಂದ ಶುರುವಾಗುತ್ತದೆ ಜಾತಿ ಜನಗಣತಿ..! ನಿಮ್ಮ ಧರ್ಮ, ಜಾತಿ ಗೊಂದಲ ಬೇಡ..

Publicspot