The Public Spot
Uncategorizedರಾಜ್ಯ

ಬೆಂಗಳೂರಲ್ಲಿ ಮಳೆಯ ರೌದ್ರನರ್ತನ..!

ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಜೋರು ಮಳೆ ಆಗಿದೆ.. ಆರ್.ಟಿ ನಗರ, ಮೆಜೆಸ್ಟಿಕ್, ಕಾರ್ಪೋರೇಷನ್, ಜಯನಗರ, ಪ್ಯಾಲೇಸ್ ಗುಟ್ಟಹಳ್ಳಿ, ಜೆ.ಪಿ ನಗರ, ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ, ವಿಜಯನಗರ, ಕೆ.ಆರ್ ಸರ್ಕಲ್ ಸೇರಿದಂತೆ ನಗರದಾದ್ಯಂತ ಭಾರೀ ಗಾಳಿ ಸಮೇತ ಧಾರಾಕಾರವಾಗಿ ಮಳೆ ಸುರಿದಿದೆ.. ಕೆ.ಆರ್ ಪುರಂ, ವೈಟ್ಫಿಲ್ಡ್ ಭಾಗದಲ್ಲಿ ಆಲಿಕಲ್ಲು ಮಳೆ ಆಗಿದೆ.. ಅರಮನೆ ರಸ್ತೆಯಲ್ಲಿ ಹೊಳೆಯಂತೆ ನೀರು ಹರಿದಿದೆ.. ಇನ್ನು, ತಗ್ಗುಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಮಳೆಯ ನಡುವೆ ಟ್ರಾಫಿಕ್ನಲ್ಲಿ ಸಿಲುಕಿ ವಾಹನ ಸವಾರರು ಪರದಾಡಿದ್ರು.

ಇನ್ನು ಭಾರೀ ಮಳೆಯಿಂದ ಮಾಗಡಿ ರೋಡ್ ಮೆಟ್ರೋ ಸ್ಟೇಷನ್ ಒಳಗೆಡೆ ಮಳೆ ನೀರು ನುಗ್ಗಿತ್ತು.. ಬಿರುಗಾಳಿಗೆ ಬ್ಯಾರಿಕೇಡ್ಗಳು ಕೆಳಗಿಬಿದ್ದಿದ್ವು.. ಮಳೆಯಿಂದ ಮೆಟ್ರೋ ಪ್ರಯಾಣಿಕರು ಪರದಾಡಿದ್ದಾರೆ..ಇನ್ನು, ಮೇಕ್ರಿ ಸರ್ಕಲ್ ರಸ್ತೆ ಅಂತೂ ಸಂಪೂರ್ಣ ಜಲಾವೃತ ಆಗಿತ್ತು.. ಬಿಡಿಎ ಬಿಡ್ಜ್ ಬಳಿ 4 ಕಡೆಯೂ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ಹರಿದು, ವಾಹನಗಳು ನೀರಲ್ಲಿ ಸಿಲುಕಿದ್ವು.. ದ್ವಿಚಕ್ರ ಸವಾರನೊಬ್ಬ ನೀರಲ್ಲಿ ಆಯಾತಪ್ಪಿ ಕೆಳಗೆ ಬಿದ್ದಿದ್ದ.. ಈ ವೇಳೆ ನ್ಯೂಸ್18 ಸಿಬ್ಬಂದಿ ಆತನನ್ನ ರಕ್ಷಣೆ ಮಾಡಿದ್ರು..

ಸಿಕ್ಕಾಪಟ್ಟೆ ಮಳೆಯಿಂದ ಬೆಂಗಳೂರಲ್ಲಿ ರಸ್ತೆಗಳು ಕೆರೆಯಂತಾಗಿವೆ.. ಶೇಷಾದ್ರಿಪುರಂ ಮುಖ್ಯ ರಸ್ತೆ ಜಲಾವೃತ ಆಗಿದೆ.. ರಸ್ತೆ ತುಂಬಾ ಹರಿಯುತ್ತಿದ್ದು, ನೀರಲ್ಲಿ ಹೋಗಲಾಗದೇ ವಾಹನ ಸವಾರರು ಒದ್ದಾಡ್ತಿದ್ದಾರೆ..ಇನ್ನು, ಜಯನಗರದ 4ನೇ ಬ್ಲಾಕ್‌ನಲ್ಲಿ ಮರ ಧರೆಗೆ ಉರುಳಿದೆ.. ಬಿರುಗಾಳಿಗೆ ಮರ ಬಿದ್ದಿದ್ದಕ್ಕೆ ರಸ್ತೆ ಕಂಪ್ಲೀಟ್ ಬ್ಲಾಕ್ ಆಗಿತ್ತು.. ಬಿದ್ದ ಮರದ ಕೆಳಗಡೆಯೇ ಸ್ಥಳೀಯರು ಓಡಾಡಿದ್ದಾರೆ.. ಘಟನೆ ಸ್ಥಳಕ್ಕೆ ಬಾರದ ಜಿಬಿಎ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ರು..

ಇನ್ನು ಮಳೆಯಲ್ಲಿ ಟ್ರಾಫಿಕ್ ಪೊಲೀಸರೊಬ್ಬರು ಮಾನವೀಯತೆ ಮರೆದ ದೃಶ್ಯ ಕಂಡುಬಂತು.. ಮೈಸೂರು ರಸ್ತೆಯ ಕೆಎಸ್ಆರ್ಟಿಸಿ ಬಸ್ ಸ್ಟಾಂಡ್ ಬಳಿ ಈ ಘಟನೆ ನಡೆದಿದೆ.. ಮಳೆ ನೀರಲ್ಲಿ ರಸ್ತೆ ದಾಟಲು ಒದ್ದಾಡುತ್ತಿದ್ದ ವಿಶೇಷ ಚೇತನ ವ್ಯಕ್ತಿಯನ್ನ ಭುಜದ ಮೇಲೆ ಟ್ರಾಫಿಕ್ ಪೊಲೀಸ್ ಹೊತ್ತಿಕೊಂಡು ಹೋಗಿ ರಸ್ತೆ ದಾಟಿಸಿದ್ದಾರೆ.. ಬ್ಯಾಟರಾಯನಪುರ ಸಂಚಾರಿ ಠಾಣೆಯ ಕಾನ್ಸ್ ಟೇಬಲ್ ಅನಿಲ್ ಮಾನವೀಯತೆ‌‌ ಮರೆದಿದ್ದು, ಸಾರ್ವಜನಿಕರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ..

Related posts

ಜಾತಿ ಜನಗಣತಿ ಆರಂಭ.. ಇವತ್ತು ಹೈಕೋರ್ಟ್‌ನಲ್ಲಿ ಸಿಗುತ್ತಾ ಮಧ್ಯಂತರ ತಡೆ..?

Publicspot

ಬಸ್‌ ಪಾಸ್‌ ಫ್ರೀ ಕೊಡ್ತೀವಿ ಅಂತಾ ಸರ್ಕಾರದ ವಿಳಂಬ ಧೋರಣೆ..!

Publicspot

ಕಾಂಗ್ರೆಸ್‌ ಸರ್ಕಾರಕ್ಕೆ ನೇಮಕಾತಿ ಬೇಕಿಲ್ವಾ..? ಬಿಜೆಪಿ ರಾಜಕೀಯ ಲಾಭನಾ..?

Publicspot

ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ.. ಯಾವ ಯಾವ ಜಿಲ್ಲೆಯಲ್ಲಿ ಹೆಚ್ಚು..?

Publicspot

ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಮರುಬಳಕೆ ಘಟಕದಿಂದ ವಿದ್ಯುತ್ ಉತ್ಪಾದನೆ, ಉನ್ನತ ಶಿಕ್ಷಣದಲ್ಲಿ ಪರಿಸರ ಪಠ್ಯಕ್ರಮ

admin

ಅಡ್ಡ ಮತದಾನ ಮಾಡಿದ್ದು ವೈಯಕ್ತಿಕ ಲಾಭಕ್ಕೋ..? ನಾಯಕತ್ವದ ಸೇಡಿಗೋ..?

Publicspot