The Public Spot
ರಾಜಕೀಯ

DCM DKS Apologize: ಡಿಕೆ ಶಿವಕುಮಾರ್​​ ಕ್ಷಮಾಪಣೆ ಕೇಳುತ್ತಲೇ ಮೂರ್ಖರು ಎಂದಿದ್ಯಾಕೆ..?

ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ ಆರ್​​ಎಸ್​ಎಸ್​ (RSS) ಗೀತೆಯಾದ ಸದಾ ವತ್ಸಲೆ ಹಾಡನ್ನು ಹಾಡಿ ಕೆಂಗಣ್ಣಿಗೆ ಗುರಿಯಾಗಿದ್ದ ಡಿಸಿಎಂ ಡಿ.ಕೆ ಶಿವಕುಮಾರ್​ ಕ್ಷಮಾಪಣೆ ಕೇಳಿದ್ದಾರೆ. ಇತ್ತೀಚಿಗಷ್ಟೇ ಸಂಪುಟದಿಂದ ವಜಾ ಆಗಿದ್ದ ಮಾಜಿ ಸಚಿವ ಕೆ.ಎನ್​ ರಾಜಣ್ಣ, ಒಂದೊಂದೇ ವಿಚಾರಗಳನ್ನೂ ಉಲ್ಲೇಖಿಸಿ ಡಿ.ಕೆ ಶಿವಕುಮಾರ್​ ಏನು ಮಾಡಿದರೂ ಸರಿ, ನಾವು ಮಾಡಿದರೆ ಮಾತ್ರ ತಪ್ಪೇ..? ಎಂದು ಡಿಕೆಶಿ ಹೆಸರನ್ನು ಉಲ್ಲೇಖ ಮಾಡದೆ ವಾಗ್ದಾಳಿ ಮಾಡಿದ್ದರು. ಆ ಬಳಿಕ ಕಾಂಗ್ರೆಸ್ ನಾಯಕ B.K ಹರಿಪ್ರಸಾದ್ ಕೂಡ ಡಿಕಲೆ ಶಿವಕುಮಾರ್ ಆರ್‌ಎಸ್‌ಎಸ್ ಪ್ರಾರ್ಥನೆ ಹೇಳಿದ್ದು ಸರಿಯಲ್ಲ, ಕ್ಷಮಾಪಣೆ ಕೇಳಬೇಕು ಎಂದು ಆಗ್ರಹ ಮಾಡಿದ್ರು. ಆ ನಂತರ ವಿಚಾರ ಸಾಕಷ್ಟು ಚರ್ಚೆಗೆ ಬಂದಿದ್ದರಿಂದ ಡಿ.ಕೆ ಶಿವಕುಮಾರ್​ ಎಲ್ಲಾಬವಿಚಾರಕ್ಕೂ ತೆರೆ ಎಳೆದಿದ್ದಾರೆ. ಅಷ್ಟು ಮಾತ್ರವಲ್ಲದೆ ನನ್ನ ಹೇಳಿಕೆಯಿಂದ INDIA ಒಕ್ಕೂಟದ ನಾಯಕರಿಗೆ ಬೇಸರ ಆಗಿದ್ದರೆ, ನೋವಾಗಿದ್ದರೆ ಕ್ಷಮೆ ಕೇಳುವುದಕ್ಕೆ ನಾನು ಸಿದ್ಧ ಎಂದಿದ್ದಾರೆ.

ಭಗವಂತ ಮತ್ತು ಭಕ್ತನ ಸಂಬಂಧ ನಮ್ಮದು..!!

ನಾನು ಅಸೆಂಬ್ಲಿಯಲ್ಲಿ ಬಿಜೆಪಿಯವರು ಮಾತನಾಡ್ತಿದ್ದ ಸಂದರ್ಭದಲ್ಲಿ, ಅವರ ಪಕ್ಷ, ವಿರೋಧ ಪಕ್ಷದ ಅರಿವು ನನಗಿದೆ ಎಂದು ಕಾಲೆಳೆದಿದ್ದೆ, ಇದೇನು ಹೊಸದೇನು ಅಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆ, ಸಂಸದೀಯ ವ್ಯವಸ್ಥೆಯಲ್ಲಿ ನನ್ನ ಆಚಾರ ವಿಚಾರ ಮಾತಾಡಿದ್ದೇನೆ. 1979 ರಿಂದ ವಿದ್ಯಾರ್ಥಿ ಸಂಘಟನೆಯಲ್ಲಿ ಕೆಲಸ ಮಾಡ್ತಾ ಗುರುತಿಸಿಕೊಂಡವನು. ನಾನು ಯಾರಿಂದಲೂ ಪಾಠ ಕಲಿಯುವ ಅವಶ್ಯಕತೆ ಇಲ್ಲ. ನನಗೂ ಗಾಂಧಿ ಕುಟುಂಬಕ್ಕೂ ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧ. ಗಾಂಧಿ ಕುಟುಂಬದ ತ್ಯಾಗ್ಯ, ಬಲಿದಾನ, ಆಶೀರ್ವಾದ ಮಾರ್ಗದರ್ಶನ ಪಡೆದು ಕೊಂಡು ಬಂದು ರಾಜಕಾರಣ ಮಾಡುತ್ತಿದ್ದೇನೆ. ರಾಜಕಾರಣಕ್ಕೆ ಬರೋಕು ಮುನ್ನ ಎಲ್ಲಾ ಪಕ್ಷಗಳ ಅಧ್ಯಾಯ ಮಾಡಿದ್ದೇನೆ, ಬಿಜೆಪಿ, ಆರ್ ಎಸ್ ಎಸ್, ಜನತಾ ದಳ ಹಾಗೆ ಅವರ ಅಜೆಂಡಾ ತಿಳಿದಿದ್ದೇನೆ. ಒಬ್ಬರೊಬ್ಬರದ್ದು ಒಂದೊಂದು ವಿಚಾರಗಳು ಇರುತ್ತವೆ ಎಂದಿದ್ದಾರೆ.

ಬಾಯಲ್ಲಿ ಮಂತ್ರ ಬಗಲಲ್ಲಿ ದೊಣ್ಣೆ ವರಸೆ..!!

ನನ್ನ ಮಾತಿನಿಂದ ಯಾರಿಗಾದರೂ ನೋವಾದ್ದರೆ ಕ್ಷಮೆ ಕೇಳಲು ಸಿದ್ಧ ಎಂದಿರುವ ಡಿಸಿಎಂ ಡಿ.ಕೆ ಶಿವಕುಮಾರ್​, ನನ್ನ ಮೇಲೆ ಅನುಮಾನ ಪಟ್ಟವರು ಮೂರ್ಖರು, ನನ್ನ ಹತ್ತಿರಕ್ಕೆ ಬರಲು ಅವರು ಸಾಧ್ಯವಿಲ್ಲ ‌ಎನ್ನುವ ಮೂಲಕ ಗುಟುರು ಹಾಕಿದ್ದಾರೆ. ಪರಮೇಶ್ವರ್ ಗರಡಿಯಲ್ಲಿ ಬೆಳೆದೆ ಅಂತಾ ಹೇಳಿ, RSS ಬಗ್ಗೆ ಮಾತಾಡಿದೆ. ಅದನ್ನು ಕಟ್ ಕಾಫಿ ಪೇಸ್ಟ್ ಮಾಡಿ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುವಂತೆ ಮಾಡಿದ್ದಾರೆ. ಬಿಹಾರದಲ್ಲೂ ನನ್ನ ಬಗ್ಗೆ ಕೆಲವರು ಹೇಳಿದ್ರು. ಯಾರೋ ಮೀಡಿಯಾ ಮುಂದೆ ಮಾತಾಡಿದ್ದಾರೆ. ಬನ್ನಿ ಕಾಂಗ್ರೆಸ್ ಕಚೇರಿಗೆ ಮಾತಾಡೋಣ ಎಂದು ಮಾಜಿ ಮಿನಿಸ್ಟರ್​ ರಾಜಣ್ಣ ಹೆಸರನ್ನು ಪ್ರಸ್ತಾಪ ಮಾಡದೆ ಆಹ್ವಾನ ಕೊಟ್ಟಿದ್ದಾರೆ. ಯಾರ ಮನಸ್ಸಿಗೂ ನೋಯಿಸಲು ಇಷ್ಟವಿಲ್ಲ. ನನ್ನ ಜೀವನ ನಿಮ್ಮ ಜೀವನದ ಮೆಟ್ಟಿಲುಗಳಾಗಬೇಕು ಎಂದುಕೊಂಡವನು ನಾನು. ಯಾರಿಗಾದರೂ ಇದರಿಂದ ನೋವಾಗಿದ್ರು ನಾನು ಕ್ಷಮಾಪಣೆ ಕೇಳಲು ಸಿದ್ದ ಅಂತಾ ಪುನರುಚ್ಛಾರ ಮಾಡಿದ್ದಾರೆ.

ರಾಜಣ್ಣ, B.K ಹರಿಪ್ರಸಾದ್‌ಗೆ ಡಿಕೆಶಿ ಆಹ್ವಾನ.. ಬನ್ನಿ ಕಚೇರಿಗೆ..

ನನ್ನ ಮಾತಿನ ಬಗ್ಗೆ ಯಾರು ಪ್ರಶ್ನೆ ಮಾಡಿದ್ದಾರೋ ಅವರೆಲ್ಲರೂ ಮೂರ್ಖರು ಎಂದಿರುವ ಡಿ.ಕೆ ಶಿವಕುಮಾರ್​, ಸ್ವಪಕ್ಷದವರ ವಿರುದ್ಧವೇ ಗುಡುಗಿದ್ದಾರೆ. ನೂರು ವರ್ಷಕ್ಕೆ ನೂರು ಕಾಂಗ್ರೆಸ್ ಭವನ ಕಟ್ಟಬೇಕು ಅಂತ ಇದ್ದೇನೆ. ನನ್ನ ನಿಷ್ಠೆ ಬಗ್ಗೆ ಪ್ರಶ್ನೆ ಮಾಡೋರಷ್ಟು ಮೂರ್ಖರು ಯಾರೂ ಇಲ್ಲ. ಈ ಹಿಂದೆ ನನ್ನ ಕುಟುಂಬಸ್ಥರ ಮೇಲೆ 400 ಕೇಸ್ ಹಾಕಿದ್ರು. ಇಡಿ ಕೇಸ್ ಹಾಕಿ ಅರೆಸ್ಟ್ ಮಾಡಿದ್ರು, ಜೈಲಿನಲ್ಲಿದ್ದೆ, ಹೊರಗೆ ಬಂದಿದ್ದೇನೆ. ಡಿಕೆ ರಾಜಕೀಯ ‌ಮುಗಿದೇ ಹೊಯ್ತು ಅಂದ್ರು. ಹೈಕಮಾಂಡ್ ಚರ್ಚೆ ಮಾಡಿ ಕೆಪಿಸಿಸಿ ಅಧ್ಯಕ್ಷನಾಗಿ ಮಾಡಿದೆ. ಅಂದಿನಿಂದ ರಾತ್ರಿ ನಾನು ಮಲಗಿಲ್ಲ. ತಿಹಾರ್ ಜೈಲಿಗೆ ಕಳಿಸಿದ ಮೇಲೆ ಆ ಕೇಸ್ ಎನಾಯ್ತು ಗೊತ್ತಾ..? ಈ ಕೇಸನ್ನು ಸುಪ್ರೀಂ ಕೊರ್ಟ್ ಡಿಸ್ಮಿಸ್ ಮಾಡಿದೆ. ಜೈಲಿನಲ್ಲಿ ಕುರ್ಚಿ ಇರಲಿಲ್ಲ. 10-10 ಅಡಿ ಕೊಠಡಿಯಲ್ಲಿ ಇದ್ದೆ. ಅಶೋಕ್‌ ಮಾತಾಡುವಾಗ ಎರಡು ಲೈನ್ ಹೇಳಿದೆ. ನಾನು ಅಧ್ಯಯನ ಮಾಡಿದ ವಿಚಾರ ಹೇಳಿದೆ. ಅದನ್ನ ಕಟ್ ಮಾಡಿ ಪೇಸ್ಟ್ ಮಾಡಿ ನ್ಯಾಷನಲ್ ನ್ಯೂಸ್ ಮಾಡಿದ್ರು. ಹಿರಿಯ ನಾಯಕರು ನನಗೆ ಸಲಹೆ ಕೊಟ್ಟಿದ್ದಾರೆ. ಅವರನ್ನು ಗೌರವಿಸುತ್ತೆನೆ. ಯಾರು ಮೀಡಿಯಾದಲ್ಲಿ ಮಾತಾಡಬೇಡಿ, ಕಾಂಗ್ರೆಸ್ ಕಚೇರಿ ಇದೆ. ಬನ್ನಿ ನಾನು ಎಲ್ಲರಿಗೂ ಚಿಕ್ಕವನಿದ್ದೆನೆ. ನಿಮಗೆ ನನ್ನ ಕ್ಷಮೆ ಬೇಕಾದ್ರೆ ನನ್ನ ಕಾಂಗ್ರೆಸ್ ಕಾರ್ಯಕರ್ತರಿಗೆ, ಇಂಡಿ ಅಲೆಯನ್ಸ್​ಗೆ ನೋವಾಗಿದ್ರೆ ಕ್ಷಮೆ ಕೇಳುತ್ತೆನೆ. ಯಾರಿಗೋ ಹೆದರಿದೆ ಅಂತ ಅಂದುಕೊಳ್ಳೋದು ಬೇಡ ಎಂದಿದ್ದಾರೆ.

ಕ್ಷಮೆ ಕೇಳಲು ರಾಹುಲ್​ ಸೂಚಿಸಿದ್ರಾ..?

ನಾನು ಹುಟ್ಟಿದ್ದು ಕಾಂಗ್ರೆಸ್​ನಲ್ಲಿ ಸಾಯೋದು ಕಾಂಗ್ರೆಸ್​ನಲ್ಲಿ. ನನ್ನ ನಿಯತ್ತನ್ನು ಪ್ರಶ್ನೆ ಮಾಡಿದರೇ ಅದು ಮೂರ್ಖತನ ಆಗುತ್ತದೆ. ಕೃಷ್ಣ, ಚಾಣಾಕ್ಯ , ಕಮ್ಯೂನಿಸ್ಟ್ ಎಲ್ಲದರ ಬಗ್ಗೆ ಮಾತಾಡೋಣ. ನನ್ನ ಧರ್ಮ ಬಿಡೋದಕ್ಕೆ ತಯಾರಿಲ್ಲ. ಎಲ್ಲ ಧರ್ಮದವರ ಬಗ್ಗೆ ಗೌರವವಿದೆ. ಧರ್ಮ, ನ್ಯಾಯ, ನಿಷ್ಟೆ ಬಗ್ಗೆ ನನಗೆ ಗೌರವಿದೆ ಎಂದಿರುವ ಡಿಸಿಎಂ ಡಿಕೆ ಶಿವಕುಮಾರ್​, ಇಲ್ಲಿಗೆ ಬರೋಕು ಮುಂಚಿತವಾಗಿ ಧರ್ಮಸ್ಥಳದ ಕುಂಕುಮ ಇಟ್ಟುಕೊಂಡು ಬಂದಿದ್ದೇನೆ. ನನಗೆ ನನ್ನದೇ ಆದ ಆಚಾರ ವಿಚಾರಗಳು ಇವೆ. ನಾನು ಇಲ್ಲಿಗೆ ಬಂದಾಗ ನನ್ನ ಅಜ್ಜಯ್ಯನ ದರ್ಶನ ಮಾಡ್ಕೊಂಡು ಬಂದಿದ್ದೇನೆ. ನನಗೆ ನನ್ನ ಜಾತಿಯ ಮೇಲೆ‌ ನಂಬಿಕೆಯೇ ಇಲ್ಲ ಎಂದಿದ್ದಾರೆ. ಇನ್ನು RSS ವಿವಾದದ ಬಗ್ಗೆ ರಾಹುಲ್ ಗಾಂಧಿ ಕೇಳಿದ್ರಾ..? ಎಂಬ ಪ್ರಶ್ನೆಗೆ ಅವರಿಗೆ ನನ್ನ ಮೇಲೆ ನಂಬಿಕೆ ಇದೆ, ನಾನು ಎಲ್ಲಿ ಹುಟ್ಟುತ್ತೇನೆ ಎಲ್ಲಿ ಸಾಯ್ತೇನೆ ಎಂದು ಅವರಿಗೆ ಗೊತ್ತಿದೆ ಎಂದಿದ್ದಾರೆ.

Related posts

ಕಾಂಗ್ರೆಸ್​ ಜಗಳದಲ್ಲಿ ಬಿಜೆಪಿ ಸುಲಭವಾಗಿ ಗೆದ್ದುಕೊಳ್ಳುತ್ತಾ..? ಜಮೀರ್​ ತಂತ್ರ ಏನು..?

Publicspot

INTERNAL CASTE RESERVATION: ಕಾಂಗ್ರೆಸ್‌ ಪಾಲಿಗೆ ಕಬ್ಬಿಣದ ಕಡೆಲೆ ಆದ ಒಳಮೀಸಲಾತಿ..

Publicspot

ಸರ್ಕಾರ ಸಾಲ ತೀರಿಸಲು ಶಾಸಕರಿಂದ ಸಖತ್‌‌ ಐಡಿಯಾ..?

Publicspot

BJP ಬಾಣವನ್ನು ಬಿಜೆಪಿಗೇ ತಿರುಗಿಸಿದ ಸಚಿವ ಕೃಷ್ಣಬೈರೇಗೌಡ..!

Publicspot

CM Finally; ಸಿಎಂ ಆಗಲು ಪಟ್ಟು ಹಿಡಿದು ಕುಳಿತ ಡಿ.ಕೆ ಶಿವಕುಮಾರ್​.. ಶಕ್ತಿ ವೃದ್ಧಿಗೆ ಸರ್ಕಸ್​..

Publicspot

Karnataka Local Ballot Vote: ಕರ್ನಾಟಕದಲ್ಲಿ ಇನ್ಮುಂದೆ ಮತಪತ್ರ ವೋಟಿಂಗ್.. ಸರೀನಾ..? ತಪ್ಪಾ..?

Publicspot