The Public Spot
ರಾಜಕೀಯ

ಸಿಎಂ ಡಿನ್ನರ್‌ ಮೀಟ್‌.. ಸಚಿವರ ಸಭೆ.. ಡಿಕೆಶಿ ಸಿಎಂ ಆಗ್ತಾರೆ.. ಆಗ್ಬೇಕು..!!

ಸಿಎಂ ಡಿನ್ನರ್ ಮೀಟಿಂಗ್ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ಮಾತನಾಡಿ, ಸಿಎಂ ಈ ಹಿಂದೆ ಯಾವತ್ತು ಊಟಕ್ಕೆ ಕರೆದೆ ಇಲ್ವಾ? ಕ್ಯಾಶುವಲ್ ಮೀಟಿಂಗ್ ಅಷ್ಟೇ. ಬಹಳ ದಿನಗಳಾಗಿತ್ತು ಒಟ್ಟಿಗೆ ಊಟ ಮಾಡಿ. ಅದಕ್ಕೆ ಊಟಕ್ಕೆ ಕರೆದಿದ್ದಾರೆ. ಬೇರೆ ಯಾವುದೇ ವಿಚಾರಗಳು ಚರ್ಚೆಯಾಗಲ್ಲ ಎಂದಿದ್ದಾರೆ. ಇನ್ನು ದಲಿತ ಸಚಿವರ ಬ್ರೇಕ್ ಫಾಸ್ಟ್ ಮೀಟಿಂಗ್ ವಿಚಾರವಾಗಿಯೂ ಮಾತನಾಡಿ, ಬ್ರೇಕ್ ಫಾಸ್ಟ್ ಮೀಟಿಂಗ್ ಮೊದಲ ಬಾರಿ ‌ಮಾಡಿದ್ದೇವಾ? ಮೀಟಿಂಗ್ ನಿಮಗೆ ಹೇಗೆ ಕಾಣಿಸುತ್ತೊ ಗೊತ್ತಿಲ್ಲ. ಮೊದಲ ಬಾರಿ ನಾವು ತಿಂಡಿಗೆ ಸೇರಿದ್ದಲ್ಲ. ನಾವು ಬೇಕಾದ ಸ್ನೇಹಿತರು ಏನೆಲ್ಲ ವಿಚಾರ ಚರ್ಚೆ ಮಾಡಬೇಕು ಮಾಡ್ತೇವೆ. ಇದೆಲ್ಲ ಪೊಲಿಟಿಕಲ್ ಮೀಟಿಂಗ್ ಅಲ್ಲ ಎಂದಿದ್ದಾರೆ. ಇನ್ನು ರಾಜಣ್ಣ ಕ್ಯಾಬಿನೆಟ್‌ನಲ್ಲೇ ಇಲ್ಲ ಅದಕ್ಕೆ ‌ಮೀಟಿಂಗೆ ಬಂದಿಲ್ಲ. ಇದೇನು ಮೊದಲು ‌ಮೀಟಿಂಗ್ ಅಲ್ಲ, ಸಾಕಷ್ಟು ಬಾರಿ ಮೀಟಿಂಗ್ ‌ಮಾಡಿದ್ದೇವೆ. ಸತೀಶ್ ಜಾರಕಿಹೊಳಿ, ಮಹದೇವಪ್ಪ ಮನೆಯಲ್ಲೂ ಮೀಟಿಂಗ್ ಮಾಡಿದ್ದೇವೆ ಎಂದಿದ್ದಾರೆ.

ಕ್ಯಾಬಿನೆಟ್ ಪುನಾರಚನೆ ಬಗ್ಗೆ ಸಚಿವ ಹೆಚ್ ಸಿ ಮಹದೇವಪ್ಪ ಮಾತನಾಡಿ, ಎಲ್ಲವೂ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು, ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಮುಂದುವರಿಯುತ್ತಾರೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ. ಹಾಗಾದರೆ ಹೀಗಾದರೆ ಎಂಬುದಕ್ಕೆಲ್ಲ ಈಗ ಉತ್ತರ ಕೊಡಲು ಸಾಧ್ಯವಿಲ್ಲ. ನಾವು ಮೂರು ಜನ ಸೇರಿದ್ದು ರಹಸ್ಯ ಸಭೆ ಅಲ್ಲ, ನಿಮ್ಮ ಎದುರಿಗೇ ಗುಂಡುಕಲ್ಲಿನ ಹಾಗೆ ನಿಂತಿದ್ವಲ್ಲ ಎಂದಿರುವ ಮಹದೇವಪ್ಪ, ಸಭೆಯ ಒಳಗೆ ಆಗಿದ್ದು ದೋಸೆ ಇಡ್ಲಿ ಉಪ್ಪಿಟ್ಟು ಮಾಡಿಸಿದ್ರು ರುಚಿಯಾಗಿತ್ತು. ಸಿಎಂ ಡಿನ್ನರ್ ಕರೆದಿರುವುದು ಯಾರ ಬೀಳ್ಗೊಡುಗೆಗೂ ಅಲ್ಲ ಯಾರ ಸ್ವಾಗತಕ್ಕೂ ಅಲ್ಲ. ಸಹಜವಾಗಿಯೇ ಸರ್ಕಾರದ ಸಚಿವರನ್ನು ಡಿನ್ನರ್ ಗೆ ಸಿಎಂ ಕರೆದಿದ್ದಾರೆ ಅಷ್ಟೇ ಎನ್ನುವ ಮೂಲಲ ಹೈಕಮಾಂಡ್‌ ಯಾವುದೇ ನಿರ್ಧಾರ ಮಾಡಿದ್ರೂ ಬದ್ಧ ಎನ್ನುತ್ತಲೇ ಸಿಎಂ ಸಿದ್ದರಾಮಯ್ಯ ಸದ್ಯಕ್ಕೆ ಸಿಎಂ ಆಗಿದ್ದಾರೆ ಎನ್ನುವ ಮೂಲಕ ನಮಗೇನು ಗೊತ್ತಿಲ್ಲ ಅನ್ನೋದನ್ನು ಸೂಚ್ಯವಾಗಿ ತಿಳಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ, ಔತಣ ಕೂಟ ವಿಚಾರದ ಬಗ್ಗೆ ಉಡುಪಿಯಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್. ಪ್ರತಿ ವರ್ಷ ಔತಣಕೂಟ ಕರೆಯುತ್ತಾರೆ. ಇದೇನು ಹೊಸತಲ್ಲ. ಸಿಎಂ ವೈಯಕ್ತಿಕವಾಗಿ ಮಾತನಾಡ್ತಾರೆ. ಸಂಪುಟ ವಿಸ್ತರಣೆ ಆಗುವುದು ಸಹಜ ಪ್ರಕ್ರಿಯೆ. ಯಾವಾಗ ಮಾಡಬೇಕು ಅನ್ನೊದನ್ನ ಸಿಎಂ, ಡಿಸಿಎಂ ಹಾಗೂ ಹೈಕಮಾಂಡ್​ ತೀರ್ಮಾನ ಮಾಡ್ತಾರೆ ಎಂದಿದ್ದಾರೆ. 13 ನೇ ತಾರೀಕು ಸಚಿವರೆಲ್ಲರೂ ಊಟಕ್ಕೆ ಬನ್ನಿ ಅಂತ ಹೇಳಿದ್ದಾರೆ. ಇದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದಿದ್ದಾರೆ ಸಚಿವ ಹೆಚ್‌.ಕೆ ಪಾಟೀಲ್‌. ಶಿವರಾಜ್ ತಂಗಡಗಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ಕರೆದಿರುವುದರಲ್ಲಿ ವಿಶೇಷ ಏನಿದೆ..? ನೀವೇ ನವೆಂಬರ್ ಕ್ರಾಂತಿ, ಡಿಸೆಂಬರ್ ಕ್ರಾಂತಿ ಅಂತ ಮಾಡುತ್ತಿದ್ದೀರಾ..? ಕ್ರಾಂತಿನೂ ಇಲ್ಲ ವಾಂತಿನೂ ಇಲ್ಲ. ಕೆಲಸ ಹೇಗೆ ಮಾಡ್ತಿದ್ದೀರಾ ಅಂತ ಸಿಎಂ ಸಲಹೆಗಳನ್ನು ಕೊಡಬಹುದು. ಕ್ಯಾಬಿನೆಟ್ ಪುನರ್ರಚನೆ ಬಗ್ಗೆ ಸಿಎಂ ಇದಾರೆ, ಹೈಕಮಾಂಡ್‌ ಇದೆ ಅವರು ತೀರ್ಮಾನ ಮಾಡ್ತಾರೆ. ಆ ತೀರ್ಮಾನವನ್ನು ನಾನು ಫಾಲೋ ಮಾಡಬೇಕು, ಎಲ್ರೂ ಫಾಲೋ ಮಾಡಬೇಕು ಎಂದಿದ್ದಾರೆ.

ಡಿ.ಕೆ.ಶಿವಕುಮಾರ್ ಸಿಎಂ‌ ಆಗ್ತಾರೆ ಅಂತಾ ಶಾಸಕ ಇಕ್ಬಾಲ್ ಹುಸೇನ್‌ ಪುನರುಚ್ಛರಿಸಿದ್ದಾರೆ. ಡಿ.ಕೆ ಶಿವಕುಮಾರ್ ಅವರು ಖಂಡಿತವಾಗಿಯೂ ಮುಖ್ಯಮಂತ್ರಿ ಆಗ್ತಾರೆ ಎಂದಿದ್ದಾರೆ. ರಾಯಚೂರಿನಲ್ಲಿ ಮಾತನಾಡಿರುವ ಶಾಸಕ ಇಕ್ಬಾಲ್ ಹುಸೇನ್, ಸಿಎಂ ಸಿದ್ದರಾಮಯ್ಯ ಡಿನ್ನರ್ ಪಾರ್ಟಿ ವಿಚಾರ ಪ್ರತಿಕ್ರಿಯೆ ನೀಡಿದ್ದು, ನನಗೂ ಸಿಎಂ, 224 ಶಾಸಕರಿಗೂ ಸಿಎಂ.. ಅವರು ಸಂತೋಷದಿಂದ ಊಟ ಕೊಡುತ್ತಾರೆ, ಅದರಲ್ಲಿ ಏನು ರಾಜಕಾರಣ ಇಲ್ಲ.. ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿ, ಎಲ್ಲ ಶಾಸಕರಿಗೂ ಅವಕಾಶ ಬೇಕು.. ಸಿಎಂ ಏನು ತೀರ್ಮಾನ ತಗೋತಾರೆ, ನಮ್ಮ ಹೈ ಕಮಾಡ್ ಏನ್ ತಗೊಳ್ತದೋ ಅದಕ್ಕೆ ಬದ್ಧರಾಗಿರುತ್ತೇವೆ ಎಂದಿದ್ದಾರೆ. ಸಾಕಷ್ಟು ಜನ ಶಾಸಕರು ಅವರ ಆಸೆ, ಅಭಿಲಾಷೆ ತೋಡಿಕೊಂಡಿದ್ದಾರೆ.. ಪ್ರೀತಿ ವಿಶ್ವಾಸ ಅವರ ಮೇಲೆ ಇರಲಿ, ಅವರಿಗೂ ಒಂದು ಅವಕಾಶ ಕೊಡಬೇಕು ಅಲ್ವಾ..? ಎಂದಿದ್ದು, ಡಿ.ಕೆ ಶಿವಕುಮಾರ್ ಖಂಡಿತವಾಗಿಯೂ ಮುಖ್ಯಮಂತ್ರಿ ಆಗ್ತಾರೆ ಎಂದಿದ್ದಾರೆ. ಚರ್ಚೆ ಏನು ಆಗಿಲ್ಲ ರಾಜಕಾರಣದಲ್ಲಿ ಒಂದು ಅವಕಾಶ ಬೇಕಲ್ವಾ..? ಅವಕಾಶ ಸಿಕ್ಕಾಗ, ಅವಕಾಶ ಕೊಡ್ತಾರೆ, ಅವಕಾಶ ಆಗ್ತದೆ. ಹೈಕಮಾಂಡ್ ತೀರ್ಮಾನ ತಗೋತಾರೆ ಎಂದಿದ್ದಾರೆ.

ಒಟ್ಟಾರೆ ಕಾಂಗ್ರೆಸ್‌ ಪಕ್ಷದಲ್ಲಿ ಏನೋ ರಾಜಕೀಯ ಬೆಳವಣಿಗೆ ನಡೀತಿದೆ ಅನ್ನೋದು ಮೇಲ್ನೋಟಕ್ಕೇ ಗೊತ್ತಾಗ್ತಿದೆ. ಆದರೆ ಅದು ಬಿಹಾರ ಚುನಾವಣೆ ಮುಗಿದ ಬಳಿಕ ಶುರುವಾಗುತ್ತಾ..? ಅನ್ನೋದಷ್ಟೇ ಈಗ ಇರುವ ಕಾತುರ. ಯಾಕಂದ್ರೆ ಎರಡೂವರೆ ವರ್ಷ ಅಂತಾ ಹಂಚಿಕೆ ಆಗಿದೆ ಅನ್ನೋದು ಡಿಕೆ ಶಿವಕುಮಾರ್‌ ಆಪ್ತ ವಲಯದ ಮಾತು. ಅಂದ್ರೆ ಈ ವರ್ಷಾಂತ್ಯಕ್ಕೆ ಬದಲಾವಣೆ ಆಗಬೇಕಿದೆ. ಆದರೆ ಸಿಎಂ ಸಿದ್ದರಾಮಯ್ಯ ಅವರನ್ನು ಮನವೊಲಿಸುವುದು ಹೇಗೆ..? ಸಿಎಂ ಸ್ಥಾನವನ್ನು ವಾಪಸ್‌ ಪಡೆದುಕೊಂಡ ಬಳಿಕ ಸಿದ್ದರಾಮಯ್ಯ ರಾಜಕೀಯ ಪರಿಸ್ಥಿತಿ ಏನು..? ಯಾವ ಸ್ಥಾನದಲ್ಲಿ ಸಿದ್ದರಾಮಯ್ಯ ಅವರನ್ನು ಕೂರಿಸುವುದು ಅನ್ನೋದು ಹೈಕಮಾಂಡ್‌ ಟೆನ್ಷನ್‌. ಒಂದು ವೇಳೆ ಆಗಿರುವ ಮಾತುಕತೆಯಂತೆ ಡಿಸಿಎಂ ಡಿಕೆ ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ಕೊಡದೆ ಇದ್ದರೂ ಕಾಂಗ್ರೆಸ್‌ ಪಕ್ಷಕ್ಕೆ ಹಾನಿಯಾಗುವ ಸಾಧ್ಯತೆಯೂ ಇದೆ ಅನ್ನೋದು ಹೈಕಮಾಂಡ್‌ಗೆ ಟೆನ್ಷನ್‌ ಹೆಚ್ಚಾಗುವಂತೆ ಮಾಡಿದೆ ಅನ್ಬಹುದು.

Related posts

Vachana VV ‘ಪುರೋಹಿತ ಶಾಹಿಗಳು ಶರಣರನ್ನು ಕೊಂದರು.. ಬಲಿದಾನಕ್ಕೆ ವಚನ ವಿವಿ ಸ್ಥಾಪಿಸಿ’

Publicspot

Cabinet List; ಸಂಪುಟ ಪುನಾರಚನೆ ಚರ್ಚೆ.. ದೆಹಲಿಯಲ್ಲಿ ಸಿಎಂ ಕಸರತ್ತು.. ಯಾರು ಔಟ್‌..? ಯಾರು ಇನ್..?

Publicspot

ಅಡ್ಡ ಮತದಾನ ಮಾಡಿದ್ದು ವೈಯಕ್ತಿಕ ಲಾಭಕ್ಕೋ..? ನಾಯಕತ್ವದ ಸೇಡಿಗೋ..?

Publicspot

ಮಧ್ಯರಾತ್ರಿ ಮೀಟಿಂಗ್ ಮಾಡಿದ ಸಿದ್ದರಾಮಯ್ಯ ನಾಳೆ ರಾಜೀನಾಮೆ ಕೊಡ್ತಾರಾ..?

Publicspot

ಡಿಕೆ ಬ್ರದರ್ಸ್​ ಒತ್ತಡಕ್ಕೆ ಹೈಕಮಾಂಡ್​​ ಮಣಿದರೆ ಉಳಿಯುತ್ತಾ ಸರ್ಕಾರ..?

Publicspot

2 ದಿನದಲ್ಲಿ ಹೊಸ ವರ್ಷ.. ಹೊಸ ಮನೆ ಕೊಡ್ತೀವಿ.. ಸಿಂಗಲ್‌ ರೂಮ್‌ ಮನೆ..

Publicspot