The Public Spot
ರಾಜಕೀಯ

RSS ಗಣವೇಶಧಾರಿಯನ್ನು ಕರಿ ಟೋಪಿ MLA ಅಂದಿದ್ದಕ್ಕೆ ಕೋಪವೋ..? ನಿರ್ಲಕ್ಷ್ಯದ ಕಿಡಿಯೋ..?

ಬೆಂಗಳೂರಿನ ಜೆಪಿ ಪಾರ್ಕ್​ನಲ್ಲಿ ಡಿ.ಕೆ ಶಿವಕುಮಾರ್​ 2ನೇ ದಿನದ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಸಭೆಗೆ ಆರ್​ಎಸ್​ಎಸ್ ಕಾರ್ಯಕ್ರಮ ಮುಗಿಸಿ ಗಣವೇಷದಲ್ಲೇ ಬಂದಿದ್ದ ಶಾಸಕ ಮುನಿರತ್ನ ಸಾಮಾನ್ಯ ಜನರ ಜೊತೆಗೆ ಕುಳಿತಿದ್ದರು. ಈ ವೇಳೆ ಮುನಿರತ್ನ ಅವರನ್ನು ಗಮನಿಸಿದ ಡಿಸಿಎಂ ಡಿ.ಕೆ ಶಿವಕುಮಾರ್​, ರೀ ಎಂಎಲ್​ಎ, ಇಲ್ಲಿಗೆ ಬಾ.. ಕರಿ ಟೋಪಿ ಎಂಎಲ್​ಎ ಎಂದು ಪಕ್ಕದ ಚೇರ್​ ತೋರಿಸಿದ್ರು. ಅಲ್ಲಿಂದ ಶುರುವಾಗಿದ್ದು ಹೈಡ್ರಾಮಾ. ವೇದಿಕೆಗೆ ಬರುತ್ತಿದ್ದ ಹಾಗೆ ಮೈಕ್​ ಕೊಡಿ ಎಂದು ಡಿಸಿಎಂ ಬಳಿ ಕೇಳಿದ ಮುನಿರತ್ನ, ಮೈಕ್​ಗಾಗಿ ಡಿಕೆಶಿ ಜೊತೆಗೆ ಕಿತ್ತಾಡಿ, ಮೈಕ್​ ಕಸಿದುಕೊಳ್ಳುವಲ್ಲಿ ಯಶಸ್ವಿ ಆದರು. ಆ ಬಳಿಕ ವೇದಿಕೆ ಮೇಲೆ ಗಲಾಟೆ ಮಾಡಿದ ಮುನಿರತ್ನ, ಶಾಸಕರಿಗೆ, ಸಂಸದರಿಗೆ ಆಹ್ವಾನ ನೀಡಿಲ್ಲ ಎಂದು ಮುನಿರತ್ನ ಆಕ್ರೋಶ ಹೊರಹಾಕಿದ್ರು. ಇದೊಂದು ಸರ್ಕಾರಿ ಕಾರ್ಯಕ್ರಮ ಕ್ಷೇತ್ರದ ಶಾಸನನ್ನು ಕರೆಯದೆ ಸಭೆ ಮಾಡ್ತಿದ್ದೀರಿ ಎಂದು ಅಧಿಕಾರಿಗಳ ವಿರುದ್ಧವೂ ಆಕ್ರೋಶ ಹೊರ ಹಾಕಿದ್ರು. ಆ ಬಳಿಕ ಅವರನ್ನು ಸಭೆಯಿಂದ ಹೊರಕ್ಕೆ ಪೊಲೀಸರು ಎತ್ತುಕೊಂಡು ಹೋದರು.

ಪಾರ್ಕ್​ನಿಂದ ಹೊರಕ್ಕೆ ಮುನಿರತ್ನ ಅವರನ್ನು ಕರೆದುಕೊಂಡು ಬಂದ ಬಳಿಕ ಜೆಪಿ ಪಾರ್ಕ್ ಗೇಟ್ ಬಳಿ ಧರಣಿ ಕುಳಿತು ಪ್ರತಿಭಟಿಸಿದ್ದಾರೆ. ನನ್ನ ಮೇಲೆ ಉದ್ದೇಶ ಪೂರ್ವಕವಾಗಿ ಹಲ್ಲೆ ಮಾಡಿದ್ದಾರೆ ಮುನಿರತ್ನ ಆರೋಪ ಮಾಡಿದ್ದಾರೆ. RSS ಟೋಪಿ ಕಿತ್ತು, ಒದ್ದಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡೋಕೆ ಕನಕಪುರ, ರಾಮನಗರದಿಂದ ರೌಡಿಗಳನ್ನು ಕರ್ಕೊಂಡು ಬಂದಿದ್ದಾರೆ. ಆರ್​.ಎಸ್.ಎಸ್ ಬಟ್ಟೆ ಹಿಡಿದು ಎಳೆದಾಡಿದ್ದಾರೆ. ಆರ್.ಎಸ್.ಎಸ್ ವೇಷಕ್ಕೆ ಗೌರವ ಕೊಟ್ಟಿಲ್ಲ. ಶಾಸಕನಿಗೆ ಏನು ಮರ್ಯಾದ ಕೊಡಬೇಕು ಎಂದು ಗೊತ್ತಿಲ್ವಾ? ಎಂದು ಪ್ರಶ್ನಿಸಿ ಜೆಪಿ ಪಾರ್ಕ್ ಗೇಟ್ ಬಳಿ ಒಬ್ಬಂಟಿಯಾಗಿ ಕುಳಿತು ಶಾಸಕ ಮುನಿರತ್ನ ಪ್ರತಿಭಟನೆ ಮಾಡಿದ್ದಾರೆ. ಗಣವೇಷಧಾರಿ ಆಗಿಯೇ ಗೇಟ್ ಮುಂಭಾಗದಲ್ಲಿ ಧರಣಿ ಮಾಡಿದ್ದಾರೆ.

ನನ್ನ ಕ್ಷೇತ್ರದಲ್ಲಿ ನನಗೆ ಆಹ್ವಾನ ಕೊಡದೇ ಕಾರ್ಯಕ್ರಮ ಮಾಡ್ತಿದ್ದಾರೆ. ಸುತ್ತಮುತ್ತ ಬರೀ ಕಾಂಗ್ರೇಸ್ ಫ್ಲೆಕ್ಸ್ ಹಾಕಿದ್ದಾರೆ. ನನ್ನ ರಾಜೀನಾಮೆ ಕೊಡಿಸಬೇಕು ಅನ್ನೋದು ಅವರ ಟಾರ್ಗೆಟ್. ಅವರ ಜೊತೆ ಬೆಳಗ್ಗೆಯಿಂದ ಯಾರಿದ್ರೂ ಅವರನ್ನ ಈ ಕ್ಷೇತ್ರಕ್ಕೆ ತರೋ ಪ್ಲಾನ್ ಇದೆ ಎಂದು ಪರೋಕ್ಷವಾಗಿ ಕುಸುಮಾಗೆ ಸಪೋರ್ಟ್ ಕೊಡಲಾಗ್ತಿದೆ ಅಂತಾ ಕಿಡಿಕಾರಿದ್ದಾರೆ. ಇವತ್ತು ಪೊಲೀಸರು ಇಲ್ಲ ಅಂದಿದ್ರೆ ನನ್ನ ಇಲ್ಲೇ ಕೊಲೆ ಮಾಡ್ತಿದ್ರು. ಸಿದ್ದರಾಮಯ್ಯ ಒಂದು ಸಾರಿ ಶಾಸಕರಿಗೆ ಆಹ್ವಾನ ಕೊಡಿ ಅಂತಾ ಕಳಿಸಿದ್ರು. ಈಗ ಡಿಸಿಎಂ ಅಹ್ವಾನ ಕೊಡೋದಿರಲಿ ಗೌರವವನ್ನೂ ಕೊಟ್ಟಿಲ್ಲ. ಸಿಎಂ ಸಿದ್ದರಾಮಯ್ಯ ಮೊದಲು ಖಡಕ್ ಆಗಿ ಇದ್ರು. ಈಗ ಸಿಎಂ ಬದಲಾಗಿಬಿಟ್ಟಿದ್ದಾರೆ. ಡಿಸಿಎಂ ಅವರ ತಮ್ಮನನ್ನ ಸೋಲಿಸಿದ್ದಕ್ಕೆ ದ್ವೇಷ ತೀರಿಸೋಕೆ ರಾಜಕಾರಣ ಮಾಡ್ತಿದ್ದಾರೆ. ಈಗ ರೌಂಡ್ಸ್ ಮಾಡ್ತಿರೋದು ಮುಂದಿನ ಚುನಾವಣೆಯ ಟಾರ್ಗೆಟ್ ಹೊರತು ಜನರಿಗಾಗಿ ಅಲ್ಲ ಎಂದು ಕಿಡಿಕಾರಿದ್ದಾರೆ.

ಇದೆಲ್ಲ ಜಿಬಿಎ ಚುನಾವಣೆಗಾಗಿ ಮಾಡ್ತಿರೋ ಗಿಮಿಕ್ ಅಂತಾ ಕಿಡಿಕಾರಿರುವ ಮುನಿರತ್ನ, ಪೊಲೀಸ್ ಇಲಾಖೆಯಲ್ಲಿ ಸೀಟ್​ಗಳನ್ನು ಹರಾಜಿಗಿಟ್ಟಿದ್ದಾರೆ. ಇವರು ಮಾಡ್ತಿರೋ ಪಾಪಗಳನ್ನ ದೇವರು ನೋಡ್ತಿದ್ದಾನೆ. ಇವರ ಅಧಿಕಾರ ಬಹಳ ದಿನ ನಡೆಯಲ್ಲ, ನಾನು RSS ಗಣವೇಷದಲ್ಲಿ ಬಂದ್ರೆ ಕರಿಟೋಪಿ MLA ಅಂತಾ ಕರೀತಾರೆ. ನಾನೊಬ್ಬ ಶಾಸಕ ಅಂತಾ ಕೂಡ ಗೌರವ ಕೊಡ್ತಿಲ್ಲ. ಇಲ್ಲಿ ಪಕ್ಷದ ಕಾರ್ಯಕ್ರಮ ಮಾಡ್ತಿದ್ದಾರೆ ಅಂತಾ ಆಕ್ರೋಶ ಹೊರಹಾಕಿದ್ದು, ನನ್ನ ಮೇಲೆ ಇನ್ನೊಂದು ರೇಪ್ ಕೇಸ್ ಹಾಕೋಕೆ ರೆಡಿ ಆಗ್ತಿದ್ದಾರೆ. ತೆರೆಮರೆಯಲ್ಲಿ ಮತ್ತೊಬ್ಬಳು ಹೆಂಗಸನ್ನು ರೆಡಿ ಮಾಡ್ತಿದ್ದಾರೆ. ಇನ್ನೊಂದು ಪೋಕ್ಸೋ ಕೇಸ್ ಹಾಕೋಕೂ ರೆಡಿ ಮಾಡಿದ್ದಾರೆ. ಇವತ್ತು ನನ್ನ ಕೊಲೆ ಆಗೋಗಿ ಬಿಡ್ತಿತ್ತು. ಪೊಲೀಸರು ಇಲ್ಲಾಂದ್ರೆ ಇಲ್ಲೇ ಕೊಲೆ ಮಾಡ್ತಿದ್ರು ಎಂದು ಗಾಂಧೀಜಿ ಭಾವಚಿತ್ರ ಹಿಡಿದು ಗಣವೇಷಧಾರಿಯಾಗಿ ಧರಣಿ ಕುಳಿತ ಶಾಸಕ ಮುನಿರತ್ನ ಪ್ರತಿಭಟನೆ ಮಾಡಿದ್ದಾರೆ.

Related posts

Congress MP Opposed Cm Decision; ಸಿದ್ದರಾಮಯ್ಯ ಆಸೆಗೆ ತಣ್ಣೀರು ಎರಚಿದ ಕಾಂಗ್ರೆಸ್‌ ಸಂಸದ

Publicspot

November Action; ದೆಹಲಿಯಿಂದ ಬಂದ ಸತೀಶ್​ ಜಾರಕಿಹೊಳಿ ಹೇಳಿದ್ದೇನು..?

Publicspot

ಮಾಜಿ ಮಿನಿಸ್ಟರ್​ ರಾಜಣ್ಣ.. ಮತ್ತು ಆ ಮೂರು ತಪ್ಪುಗಳು.. ಡಿಕೆಶಿಗೆ ಕೈ ಜೋಡಿಸಿದ್ರಾ ಸಿಎಂ..?

Publicspot

ಲಾಡ್ಲೆ ಮಶಾಕ್‌ ದರ್ಗಾ ಕೇಸ್‌.. ಆರೋಪಿಗಳ ವಿರುದ್ಧ ಕೇಸ್‌ ಮನ್ನಾ..

Publicspot

Hello Karge Here; ಬೆಳಗ್ಗೆ ಮನೆಗೆ ಬನ್ನಿ ಮಾತನಾಡ್ಬೇಕು..! ಸಿಎಂ ಮನವೊಲಿಸ್ತಾರಾ ಖರ್ಗೆ..?

Publicspot

NDA Win, New VP In India: ಭಾರತದ ಉಪರಾಷ್ಟ್ರಪತಿ ಆಯ್ಕೆ.. ಸೀಕ್ರೆಟ್ ಬ್ಯಾಲೆಟ್ನಲ್ಲಿ ವಿನ್..

Publicspot