The Public Spot
ರಾಜಕೀಯ

ಪದಗ್ರಹಣ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನ.. ರಸ್ತೆಗಳನ್ನೇ ಬಂದ್‌ ಮಾಡಿದ ಖಾಕಿ..!

ಲೋಕಭವನದಲ್ಲಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಬಾರಿ ಲೋಕಭವನದ ಗಾಜಿನ ಮನೆಯಲ್ಲಿ ಪೂರ್ವಾಭಿಮುಖವಾಗಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಪೂರ್ವಾಭಿಮುಖವಾಗಿ ಸಿಎಂ ಮತ್ತು ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈವರೆಗೂ ಗಾಜಿನ ಮನೆಯಲ್ಲಿ ಪಶ್ಚಿಮಾಭಿಮುಖವಾಗಿರುವ ವೇದಿಕೆಯಲ್ಲೇ ಎಲ್ಲಾ ಕಾರ್ಯಕ್ರಮಗಳೂ ನಡೆಯುತ್ತಿದ್ದವು. ಆದರೆ ಈ ಬಾರಿ ಪೂರ್ವಾಭಿಮುಖವಾಗಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಪದಗ್ರಹಣದ ವೇದಿಕೆ ಮೇಲೆ 20 ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಲೋಕಭವನದ ಗಾಜಿನ ಮನೆಯಲ್ಲಿ ಪದಗ್ರಹಣ ಸಮಾರಂಭಕ್ಕೆ 3,500 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸ್ವಾಮೀಜಿಗಳು, ಧರ್ಮಗುರುಗಳು, ನ್ಯಾಯಾಧೀಶರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಪದಗ್ರಹಣದಲ್ಲಿ 55ಕ್ಕೂ ಹೆಚ್ಚು ವಿವಿಧ ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ. ಹಾಗೆಯೇ ಕ್ರಿಶ್ಚಿಯನ್‌ ಧರ್ಮದ ಫಾದರ್ ಹಾಗೂ ಮುಸ್ಲಿಂ ಧರ್ಮದ ಮೌಲ್ವಿಗಳಿಗೆ ಆಹ್ವಾನ ನೀಡಲಾಗಿದೆ. 2 ಸಾವಿರಕ್ಕೂ ಹೆಚ್ಚು ವಿಐಪಿ ಪಾಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪದಗ್ರಹಣ ಮಾಡುವ ಕಾರ್ಯಕ್ರಮಕ್ಕೆ ಅಕ್ಕಪಕ್ಕದ ರಾಜ್ಯಗಳ ಸಿಎಂಗಳಿಗೂ ಡಿ.ಕೆ ಶಿವಕುಮಾರ್‌ ಆಹ್ವಾನ ಕೊಟ್ಟಿದ್ದಾರೆ. ಕೇರಳ ಸಿಎಂ ವಿ.ಡಿ ಸತೀಶನ್, ತಮಿಳುನಾಡು ಸಿಎಂ ಜೋಸೆಫ್ ವಿಜಯ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹಾಗೂ ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್‌ ಸಿಂಗ್‌ಗೆ ಡಿ.ಕೆ ಶಿವಕುಮಾರ್‌ ಆಹ್ವಾನ ಕೊಟ್ಟಿದ್ದು, ಕೇರಳಂ ಸಿಎಂ ವಿ.ಡಿ ಸತೀಶನ್‌ ನಿನ್ನೆ ರಾತ್ರಿಯೇ ಬೆಂಗಳೂರಿಗೆ ಬಂದಿಳಿದಿದ್ದಾರೆ.

ಡಿ.ಕೆ ಶಿವಕುಮಾರ್‌‌ ಸಿಎಂ ಆಗಿ ಪದಗ್ರಹಣ ಹಿನ್ನೆಲೆ ಪೊಲೀಸರು ಬಂದೋಬಸ್ತ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ವಿಧಾನಸೌದ, ಲೋಕಭವನದ ಸುತ್ತಮುತ್ತಾ ಹೆಚ್ಚು ಜನ ಸೇರುವ ಸಾಧ್ಯತೆ ಇದೆ. ಹೀಗಾಗಿ ಹೆಚ್ಚಿನ ಬಂದೋಬಸ್ತ್ ಮಾಡಿದ್ದೇವೆ ಎಂದಿದ್ದಾರೆ. ಇನ್ನು ಪಾಸ್‌ಗಳು ಇದ್ರೆ ಮಾತ್ರ ಲೋಕಭವನಕ್ಕೆ ಬಿಡ್ತೇವೆ. ಪಾಸ್ ಇಲ್ಲದಿದ್ದರೆ ಬಿಡಲ್ಲ ಎಂದಿದ್ದಾರೆ.

ಡಿ.ಕೆ ಶಿವಕುಮಾರ್ ಪದಗ್ರಹಣ ಹಿನ್ನೆಲೆ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನ 12 ರಿಂದ ರಾತ್ರಿ 8:00ರವರೆಗೆ ನಗರದ ಕೇಂದ್ರ ಭಾಗದಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಕಬ್ಬನ್ ರಸ್ತೆ, ಬಾಳೆಕುಂದ್ರಿ ಜಂಕ್ಷನ್‌ನಿಂದ ಡಾ.ಬಿ.ಆರ್ ಅಂಬೇಡ್ಕರ್ ರಸ್ತೆ, ಕೆ.ಆರ್. ವೃತ್ತದಿಂದ ಕಾಫಿ ಬೋರ್ಡ್ ಜಂಕ್ಷನ್ ಕಡೆ ರಸ್ತೆ ಬಂದ್ ಮಾಡಲಾಗಿದೆ. ಇನ್ನು ಸಂಚಾರ ದಟ್ಟಣೆ ತಪ್ಪಿಸಲು ಶಿವಾಜಿನಗರ, ಕನ್ನಿಂಗ್‌ಹ್ಯಾಮ್‌ ರಸ್ತೆ, ನೃಪತುಂಗ ರಸ್ತೆ, ಶಿವಾನಂದ ವೃತ್ತ, ಔಟರ್ ರಿಂಗ್ ರಸ್ತೆ, ಹೆಬ್ಬಾಳ ಹಾಗೂ ಇತರೆ ಮಾರ್ಗಗಳನ್ನು ಬಳಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.

Related posts

ಮಣಿಪಾಲ್​ ಆಸ್ಪತ್ರೆಯಲ್ಲಿ ದೇವೇಗೌಡರನ್ನು ಭೇಟಿಯಾದ ಜಮೀರ್.. ಸ್ಪಷ್ಟನೆ..

Publicspot

ಚಿತ್ತಾಪುರದಲ್ಲಿ RSS ಪಥ ಸಂಚಲನ VS ಭೀಮ್‌ ಆರ್ಮಿ ಫೈಟ್‌ ಸಂಚಲನ..!!

Publicspot

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆಸಿದ ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು:

admin

ಚಿಕ್ಕಮಗಳೂರಿನ ಶೃಂಗೇರಿ ಶಾಸಕರು ಯಾರು..? ಮರ ಮತ ಎಣಿಕೆ ಏನಾಯ್ತು..?

Publicspot

ಮಹಾರಾಷ್ಟ್ರದಲ್ಲಿ ವಿಮಾನ ಅಪಘಾತವೋ.. ಉದ್ದೇಶ ಪೂರ್ವಕ ದುರಂತವೋ..?

Publicspot

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸಿಡಿದೆದ್ದ ಉತ್ತರ ಕರ್ನಾಟಕ ಶಾಸಕರು..! ಪ್ರತ್ಯೇಕ ರಾಜ್ಯ..

Publicspot