The Public Spot
ಅಪರಾಧ

ಅಪ್ರಾಪ್ತ ವಯಸ್ಸಲ್ಲಿ ಪ್ರೀತಿ.. ಪ್ರೇಮ.. ಇಷ್ಟೆ ಇಷ್ಟೆ.. ಎಚ್ಚರ ತಪ್ಪಿದ್ರೆ ಫಿನಿಷ್..!!

ಪ್ರೀತಿ ಅನ್ನೋ ಜೀವನ ಪದ್ದತಿಗೆ ಇತ್ತೀಚಿನ ಯುವ ಜನಾಂಗ ಮಾರು ಹೋಗಿದೆ. ಪ್ರೀತಿಯಲ್ಲಿ ಜೀವಕ್ಕೆ ಜೀವ ಕೊಡ್ತೇನೆ ಅಂತಾ ಪ್ರೀತಿ ಮಾಡೋ ಜನ ಸಾಕಷ್ಟು ಕಡಿಮೆ ಆಗಿದ್ದಾರೆ. ಬಹುತೇಕ ಮಂದಿ ಲವ್ ಹೆಸ್ರಲ್ಲಿ ಕಾಮದಾಟ ಮುಗಿಸಿ ಎಷ್ಕೇಪ್​ ಆಗುವ ಖದೀಮರೇ ಹೆಚ್ಚಾಗಿ ಇರ್ತಾರೆ. ಮೊದಲಿಗೆ ಚಿನ್ನ, ರನ್ನ ಅಂತಾ ಸುತ್ತಾಡೋದು. ತಮ್ಮ ತೆವಲು ತೀರಿದ್ಮೇಲೆ ಕೈ ಕೊಟ್ಟು ಎಸ್ಕೇಪ್‌ ಆಗೋದು ಕಾಮನ್​ ಆಗ್ಬಿಟ್ಟಿದೆ. ಮಂಗಳೂರಲ್ಲಿ ಅಪ್ರಾಪ್ತೆ ಬಾಲಕಿಯೊಬ್ಬಳನ್ನ ಪ್ರೀತಿ, ಪ್ರೇಮದ ಹೆಸರಲ್ಲಿ ಮೋಡಿ ಮಾಡಿ ಅಟ್ಟಹಾಸ ಮೆರೆಯೋದಕ್ಕೆ ಹೊಂಚು ಹಾಕಿದ್ದ ಕಿಡಿಗೇಡಿ ಲಾಕ್​ ಆಗಿದ್ದಾನೆ. ಮನೆಯಲ್ಲಿ ಯಾರೂ ಇಲ್ಲ ಬಾ ಅಂತಾ ಕರೆಸಿಕೊಂಡು ಗ್ಯಾಂಗ್​ರೇಪ್‌ಗೆ ಸಂಚು ರೂಪಿಸಿದ್ದ ಇಡೀ ಗ್ಯಾಂಗ್​ ಖಾಕಿ ಬಲೆಯಲ್ಲಿ ಲಾಕ್‌‌ ಆಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಕಟೀಲು ಸಮೀಪದ ನಿಡ್ಡೋಡಿ ನಿವಾಸಿ ಮಹೇಶ್ ಎಂಬಾತ, ಹದಿಹರೆಯದ ಹೆಣ್ಣುಮಕ್ಕಳನ್ನು ತನ್ನ ಕಾಮಬಾಣದಿಂದ ಬುಟ್ಟಿಗೆ ಬೀಳಿಸಿಕೊಂಡಿದ್ದ. ಪ್ರೀತಿ ಪ್ರೇಮ ಅಂತೆಲ್ಲಾ ಮಾತನಾಡಿ ಮಂಕುಬೂದಿ ಎರಚಿದ ಬಳಿಕ ಪ್ರೀತಿ ಹೆಸರಲ್ಲಿ ಕಾಮದ ಆಟ ಆಡುತ್ತಿದ್ದ. ತನ್ನ ಕಾಮತೃಷೆ ತೀರಿಸಿಕೊಳ್ಳುವ ಜೊತೆಗೆ ತನ್ನ ಸ್ನೇಹಿತರನ್ನ ಸೇರಿಸಿಕೊಂಡು ಹೆಣ್ಣು ಮಕ್ಕಳನ್ನು ಹುರಿದು ಮುಕ್ಕೋದಕ್ಕೆ ಪ್ಲ್ಯಾನ್​ ಮಾಡಿದ್ದ. ಮನೆಯಲ್ಲಿ ಯಾರೂ ಇಲ್ಲ ಬಾ ಅಂತಾ ಅಪ್ರಾಪ್ತ ಹೆಣ್ಣು ಮಗಳನ್ನು ಕರೆಸಿಕೊಂಡು ಅಟ್ಟಹಾಸ ಮೆರೆಯೋದಕ್ಕೂ ಮುಂಚೆಯೇ ಅಂದರ್​ ಆಗಿದ್ದಾನೆ.

ಅಪ್ರಾಪ್ತ ಹೆಣ್ಣು ಮಗಳನ್ನು ಬಾ ಮನೆಗೆ ಎನ್ನುವ ವಿಚಾರ ಪೊಲೀಸರ ಕಿವಿಗೆ ಬಿದ್ದಿತ್ತು. ಯಾವ ಮೂಲದಿಂದ ಅನ್ನೋದನ್ನು ಪೊಲೀಸರು ಗೌಪ್ಯವಾಗಿರಿಸಿದ್ದು, ಮೂಲದ ಬಗ್ಗೆ ಮಾಹಿತಿ ಇಲ್ಲ. ಆದರೆ ಅಪ್ರಾಪ್ತ ಹೆಣ್ಣು ಮಗಳನ್ನು ತಮ್ಮ ತೆವಲಿಗೆ ಬಳಿಸಿಕೊಳ್ಳುವ ಮುಂಚೆ ಪೊಲೀಸರು ಸ್ಥಳದಲ್ಲಿ ಇದ್ದರು ಅನ್ನೋದೇ ಸಂತೋಷದ ವಿಚಾರ. ಮೂಡಬಿದರೆ ಪೊಲೀಸರು ಕಾಮುಕರ ಮನೆಗೆ ಎಂಟ್ರಿ ಕೊಡ್ತಿದ್ದ ಹಾಗೆ ಹುಮ್ಮಸಿನಲ್ಲಿ ಮಂದಸ್ಮಿತರಾಗಿದ್ದವರು ಕರಗಿ ನೀರಾಗಿದ್ದರು.

ಅಪ್ರಾಪ್ತೆ ಹುಡುಗಿಯನ್ನ ಹುರಿದು ಮುಕ್ಕಲು ಸಜ್ಜಾಗಿದ್ದವರು ತೊಡೆಗಳು ನಡುಗಿದ್ದವು. ಮೈಯೆಲ್ಲಾ ಬೆವರು ಹರಿಯಲು ಶುರುವಾಗಿತ್ತು. ನಿಂತಲ್ಲೇ ಗಢಗಢ ನಡುಗಿ ಹೋಗಿದ್ದರು. ಎಲ್ಲಾ ಆರೋಪಿಗಳನ್ನ ಒಟ್ಟಿಗೆ ಪೊಲೀಸ್​ ಜೀಪಿಗೆ ಹತ್ತಿಸಿಕೊಂಡ ಮೂಡಬಿದಿರೆ ಪೊಲೀಸ್ರು, ಎಲ್ಲರ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಾಡಿದ್ದಾರೆ. ಪೊಲೀಸರ ಸಮಯ ಪ್ರಜ್ಞೆಯಿಂದ ಒಬ್ಬಳು ಅಪ್ರಾಪ್ತ ಬಾಲಕಿ ಕಾಮುಕ ಕೈಯಿಂದ ಬಚಾವ್​ ಆಗಿದ್ದಾಳೆ ಎನ್ನಬಹುದು. ಇನ್ನೊಂದು ವಿಶೇಷ ಏನು ಅಂದರೆ ಈ ಮಹೇಶ ಈ ಹಿಂದೆಯೂ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ್ದ ಅನ್ನೋ ಸಂಗತಿಯೂ ಬಯಲಾಗಿದೆ. ಜೊತೆಗೆ ವೇಶ್ಯಾವಾಟಿಕೆ ಅಡ್ಡೆಗೂ ಬಳಸಿಕೊಳ್ತಿದ್ರು ಅನ್ನೋದು ಗೊತ್ತಾಗಿದೆ.

Related posts

ಡಾಕ್ಟರ್​ ಕೊಲೆಗಾರ ಆಗಿದ್ದು ಸತ್ಯನಾ..? 12 ವರ್ಷ ನರಳಿದ ನತದೃಷ್ಟ ಹೆಣ್ಣು

Publicspot

Darshan Bail Order: ನಟ ದರ್ಶನ್ ಮತ್ತು ಪವಿತ್ರ ಗೌಡ ಬೇಲ್ ರದ್ದಾಗುತ್ತಾ..?

ಯಶವಂತಿ

Dharmasthala Issue: ಧರ್ಮಸ್ಥಳ ವಿಚಾರದಲ್ಲಿ ಸರ್ಕಾರ ಮತ್ತೆ ಎಡವಟ್ಟುಗಳು..

Publicspot

2023 Video Leak; ಚಿನ್ನಯ್ಯ ಹೇಳಿದ ಮಾತುಗಳು ಎಷ್ಟು ಸತ್ಯ..? ಎಷ್ಟು ಸುಳ್ಳು.. ಹೊಸ ವಿಡಿಯೋ ಲೀಕ್‌..

Publicspot

SIT ತನಿಖೆ NIAಗೆ ವರ್ಗಾವಣೆ ಆಗುತ್ತಾ..? ಏನಿದು BJP ಆಗ್ರಹ..?

Publicspot

SBI Bank Looted ; ಭೀಮಾ ತೀರದಲ್ಲಿ ರಕ್ತಪಾತವಿಲ್ಲದೆ ಬ್ಯಾಂಕ್‌ ದರೋಡೆ..

Publicspot