The Public Spot
ಅಪರಾಧ

ಅಕ್ರಮ ಸಂಬಂಧ ಬೇಡ ಎಂದಿದ್ದಕ್ಕೆ ಅಟ್ಯಾಕ್​​ ಮಾಡಿದ್ದ ಅಡಕಮಾರನಹಳ್ಳಿ ಆಂಟಿ ಅರೆಸ್ಟ್​..

ಬೆಂಗಳೂರು ಗ್ರಾಮಾಂತರ ನೆಲಮಂಗಲದ ಅಡಕಮಾರನಹಳ್ಳಿಯ ಆಂಟಿ ದೀಪಾ ಅಕ್ರಮ ಸಂಬಂಧ ಬೇಡ ಎಂದು ದೂರ ಆಗಿದ್ದ ಹುಡುಗನ ಮೇಲೆ ಅಟ್ಯಾಕ್​ ಮಾಡಿದ್ದಳು. ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಯ್ಯನ ಅಗ್ರಹಾರ ಗ್ರಾಮದ ಯುವಕನ ಮೇಲೆ ಗ್ಯಾಂಗ್​ ಕಟ್ಟಿಕೊಂಡು ಹೋಗಿ ದಾಳಿ ಮಾಡಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ದೊಡ್ಡಬೆಳವಂಗಲ ಪೊಲೀಸರು ಮಹಿಳೆಯನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.

ಅಡಕಮಾರನಹಳ್ಳಿಯ ದೀಪಾ ಜೊತೆಗೆ ಪುಟ್ಟಯ್ಯನ ಅಗ್ರಹಾರದ ಯುವಕ ಕಾರ್ತಿಕ್​ ಕಳೆದ ಮೂರ್ನಾಲ್ಕು ವರ್ಷದಿಂದ ಅಕ್ರಮ ಸಂಬಂಧ ಇರಿಸಿಕೊಂಡಿದ್ದನು. ಮಗ ಮನೆಯಿಂದ ಹೊರಕ್ಕೆ ಹೋಗಿ ತಿಂಗಳುಗಳ ಕಾಲ ವಾಪಸ್​ ಬಾರದೆ ಇದ್ದಾಗ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು. ನಾಪತ್ತೆ ದೂರು ಕೊಟ್ಟಿದ್ದರು. ಪೊಲೀಸರ ತನಿಖೆ ವೇಳೆ ಅಕ್ರಮ ಸಂಬಂಧಕ್ಕೆ ಮಾರು ಹೋದ ಯುವಕ ಕಾರ್ತಿಕ್​ ಅನ್ನೋದು ಪೋಷಕರಿಗೆ ಗೊತ್ತಾಗಿತ್ತು. ಆಗ ಕೂರಿಸಿಕೊಂಡು ಮಗನಿಗೆ ಬುದ್ಧಿ ಹೇಳಿದ್ದರು. ಪೊಲೀಸರ ಸಮ್ಮುಖದಲ್ಲಿ ಇಬ್ಬರು ಪರಸ್ಪರ ದೂರ ಆಗುವುದಾಗಿಯೂ ಹೇಳಿಕೆ ಕೊಟ್ಟಿದ್ದರು.

ಅನೈತಿಕ ಸಂಬಂಧಕ್ಕೆ ಬೇಡ ಅಂತ ಬ್ರೇಕ್ ಹಾಕಿದಕ್ಕೆ ಕುಪಿತಗೊಂಡಿದ್ದ ಆಂಟಿ ದೀಪಾ, ಗ್ಯಾಂಗ್ ಕಟ್ಟಿಕೊಂಡು ಬಂದು ಡಿಸೆಂಬರ್​ 13ರಂದು ಲಾಂಗು, ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಳು. ಮಗನನ್ನು ಬಿಡಿಸಿಕೊಳ್ಳಲು ಬಂದಿದ್ದ ಕಾರ್ತಿಕ್​ ತಂದೆ ಮೇಲೂ ದಾಳಿ ನಡೆದಿತ್ತು. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಆರೋಪಿ ದೀಪಾಳನ್ನ ಬಂಧಿಸಿದ್ದಾರೆ. ಅಕ್ರಮ ಸಂಬಂಧ ಬೇಡವೆಂದು ಯುವಕ ಬಿಟ್ಟಿದ್ದರಿಂದಲೇ ಸಿನಿಮೀಯ ರೀತಿಯಲ್ಲಿ ಗ್ಯಾಂಗ್ ಕಟ್ಟಿಕೊಂಡು ಕಾರಿನಲ್ಲಿ ಬಂದು ಹಲ್ಲೆ ಮಾಡಿಸಿದ್ದಳು ದೀಪಾ.

ದೀಪಾ ಕಾರಿನಲ್ಲಿ ಕುಳಿತುಕೊಂಡಿದ್ರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಯುವಕ ಕಾರ್ತಿಕ್​ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿತ್ತು. ದಾಳಿ ವೇಲೆ ಗ್ರಾಮಸ್ಥರು ತಿರುಗಿಬಿದ್ದಿದ್ದರಿಂದ ಕಾರಿನಲ್ಲಿ ಎಸ್ಕೇಪ್​ ಆಗಿದ್ದರು ಕಿರಾತಕರು. ಸಾರ್ವಜನಿಕರ ಸಮಯ ಪ್ರಜ್ಞೆಯಿಂದಾಗಿ ಯುವಕ ಕಾರ್ತಿಕ್ ಪ್ರಾಣಾಪಾಯದಿಂದ ಪಾರಾಗಿದ್ದನು. ಇದೀಗ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದ ಖತರ್ನಾಕ್ ಆಂಟಿ ದೀಪಾ ಹಾಗೂ ಮತ್ತೋರ್ವ ಆರೋಪಿಯನ್ನು ದೊಡ್ಡಬೆಳವಂಗಲ ಪೊಲೀಸರು ಬಂಧನ ಮಾಡಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಒಟ್ಟಾರೆ ಅಕ್ರಮ ಸಂಬಂಧಕ್ಕೆ ಒಪ್ಪದ ಯುವಕನ ಮೇಲೆ ದಾಳಿ ನಡೆದಿದ್ದು ಅಮಾನುಷ ಸಂಗತಿ ಎನ್ನಬಹುದು.

Related posts

Love Death; ಬೆಲೆ ಕಳೆದುಕೊಂಡ ಪ್ರೀತಿ.. ಗರ್ಭಿಣಿ ಆದ ಯುವತಿಗೆ ಕೈಕೊಟ್ಟ ಪ್ರೇಮಿ..!

Publicspot

ಸಿನಿಮಾ ನಟಿಯ ಆರೋಪದ ಬಗ್ಗೆ ಅರವಿಂದ್‌ ರೆಡ್ಡಿ ಬಿಚ್ಚಿಟ್ಟ ಸೀಕ್ರೆಟ್‌ ಏನು..?

Publicspot

Dam Death; ಮಾರ್ಕೋನಹಳ್ಳಿ ಡ್ಯಾಂನಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ದುರ್ಮರಣ..

Publicspot

Jail Video Case; ಮೊಬೈಲ್​ ಬಳಕೆಗೆ ಅವಕಾಶ ಕೊಟ್ಟವರು ಅಲ್ಲ.. ವಿಡಿಯೋ ಮಾಡಿದವರ ಟಾರ್ಗೆಟ್..

Publicspot

Darshan File a Case; ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ನಟ ದರ್ಶನ್..

Publicspot

Seven Year Dreams End; 7 ವರ್ಷದ ಬಳಿಕ ತಾಯಿ ಆಗುವ ಆಸೆಗೆ ಹುಳಿ ಹಿಂಡಿದ್ದು ಯಾರು..?

Publicspot