The Public Spot
ಅಪರಾಧ

ಸಿಂಗರ್‌ ಮೈಲಾರಿಗೆ 14 ದಿನ ನ್ಯಾಯಾಂಗ ಬಂಧನ.. ರೇಪ್‌ ಬಗ್ಗೆ ಆತ ಹೇಳಿದ್ದೇನು..?

ಬಾಗಲಕೋಟೆಯ ಮ್ಯೂಸಿಕ್‌ ಮೈಲಾರಿಯನ್ನು ಪೋಕ್ಸೊ ಪ್ರಕರಣದಲ್ಲಿ ಪೊಲೀಸರು ಬಂಧನ ಮಾಡಿದ್ದಾರೆ. ಬನಹಟ್ಟಿ CPI ಕಚೇರಿಯಲ್ಲಿ ಮೈಲಾರಿ ವಿಚಾರಣೆ ನಡೆಸಿದ ಬಳಿಕ ಖಾಸಗಿ ಕಾರ್‌ನಲ್ಲಿ ಕರೆದೊಯ್ದ ಪೋಲಿಸರು, ವೈದ್ಯಕೀಯ ತಪಾಸಣೆ ಮಾಡಿಸಿದ ಬಳಿಕ ಕೋರ್ಟ್‌ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್‌ ಮ್ಯೂಸಿಕ್‌ ಮೈಲಾರಿಯನ್ನು ಕೋರ್ಟ್‌ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ವಹಿಸಿದೆ.

ಸೈದಾಪುರ ಗ್ರಾಮದ ಲಾಡ್ಜ್‌ನಲ್ಲಿ ಅತ್ಯಾಚಾರ ನಡೆದಿದೆ ಎಂದು ಅಪ್ರಾಪ್ತ ಬಾಲಕಿ ದೂರು ನೀಡಿದ್ದಳು. ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪೊಲೀಸ್ರು ವಿಚಾರಣೆ ಮಾಡ್ತಿದ್ದು, ತಲೆಗೆ ಟೋಪಿ, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಹೊರ ಬಂದ ಮೈಲಾರಿಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಲಾಯ್ತು. ವೈದ್ಯಕೀಯ ತಪಾಸಣೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಬಾಗಲಕೋಟೆ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಲಾಗಿದೆ. ಕೇಂದ್ರ ಕಾರಾಗೃಹಕ್ಕೆ ಆರೋಪಿ ಮ್ಯೂಸಿಕ್ ಮೈಲಾರಿಯನ್ನು ಶಿಫ್ಟ್‌ ಮಾಡಲಾಗಿದೆ.

ಪೋಕ್ಸೊ ಪ್ರಕರಣದಲ್ಲಿ ಬಂಧನ ಆಗಿರುವ ಮ್ಯೂಸಿಕ್‌ ಮೈಲಾರಿಯನ್ನು ವೈದ್ಯಕೀಯ ತಪಾಸಣೆ ಬಳಿಕ ಕೋರ್ಟ್‌ ಕರೆದೊಯ್ಯುವ ಮುನ್ನ ಮಾಧ್ಯಗಳ ಜೊತೆಗೆ ಮ್ಯೂಸಿಕ್ ಮೈಲಾರಿ ಮಾತನಾಡಿದ್ದಾನೆ. ಟ್ರೆಂಡಿಂಗ್ ಸ್ಟಾರ್, ಮ್ಯೂಸಿಕ್ ಮೈಲಾರಿ ಅಂತ ಹೆಸರು ಮಾಡೋಕೆ ನಾನು ಎಷ್ಟು ಕಷ್ಟಪಟ್ಟಿದ್ದಿನಿ ಅಂತ ನನಗೆ ಗೊತ್ತು. ಸಾಕಷ್ಟು ಕಷ್ಟಪಟ್ಟು ಬಡತನದಿಂದ ಬಂದಿದ್ದೇನೆ. ಕೇಸ್ ಮಾಡಿದ್ದಾರೆ, ಕಾನೂನಾತ್ಮಕವಾಗಿ ಹೋರಾಟ ಮಾಡ್ತೇನೆ. ನನ್ನ ಏಳಿಗೆ ಸಹಿಸಲಾರದೆ ಹಲವು ಬಾರಿ ಈ ರೀತಿ ಮಾಡಿದ್ದಾರೆ. ಕಾನೂನು ಇದೆ, ಬಾಬಾ ಸಾಹೇಬರು ಬರೆದ ಸಂವಿಧಾನ ಇದೆ. ಎಲ್ಲರಿಗೂ ಅಲ್ಲಿ ನ್ಯಾಯ ಸಿಗುತ್ತದೆ. ನನಗೂ ನ್ಯಾಯ ಸಿಗುತ್ತದೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪೋಕ್ಸೋ ಪ್ರಕರಣದಲ್ಲಿ ನನ್ನದು ಯಾವುದೇ ತಪ್ಪಿಲ್ಲ ಎಂದಿದ್ದಾರೆ.

Related posts

Ananya Mother: ನಾನು ಸಾಯಲು ಸಿದ್ಧಳಿದ್ದೇನೆ.. ರಸ್ತೆಯಲ್ಲಿ ಬೆತ್ತಲೆ ನಿಲ್ತೇನೆ..!

Publicspot

Darshan Bail Cancel: ದರ್ಶನ್​ ಜಾಮೀನು ರದ್ದು.. ಕರ್ನಾಟಕ ಹೈಕೋರ್ಟ್​ಗೆ ಸುಪ್ರೀಂಕೋರ್ಟ್​ ಗುದ್ದು..

Publicspot

ಧರ್ಮಸ್ಥಳದಲ್ಲಿ ಇವತ್ತು ಹೈಟೆಕ್​ ತಂತ್ರಜ್ಞಾನದ ಜೊತೆಗೆ ಅಸ್ಥಿ ಆಪರೇಷನ್​..!!

Publicspot

ಬ್ಯಾಂಕ್ ಮ್ಯಾನೇಜರ್‌ನ ಮರ್ಡರ್ ಮಾಡಿದ್ಯಾಕೆ ಗಂಡ.. ಇಬ್ಬರು ಇಲ್ಲ ಇಬ್ಬರೂ ಅನಾಥ..

Publicspot

ಸೌಜನ್ಯ ಪ್ರಕರಣದ ವಿಚಾರಣೆ ಪುನಾರಂಭ ಆಯ್ತಾ..? ಏನಿದು ನಿಗೂಢತೆ..?

Publicspot

ಗಂಡನ ಜೊತೆ ವಿರಸ.. ಪ್ರಿಯಕರನ ಜೊತೆ ಸರಸ.. ಕೊಂದು ಹೋದ ರಫೀಕ್‌..

Publicspot