The Public Spot
ರಾಜಕೀಯ

2 ದಿನದಲ್ಲಿ ಹೊಸ ವರ್ಷ.. ಹೊಸ ಮನೆ ಕೊಡ್ತೀವಿ.. ಸಿಂಗಲ್‌ ರೂಮ್‌ ಮನೆ..

ಬೆಂಗಳೂರಿನ ಯಲಹಂಕ ಬಳಿಯ ಕೋಗಿಲು ಕ್ರಾಸ್‌ ಬಳಿ ಮನೆಗಳ ತೆರವು ಮಾಡಲಾಗಿತ್ತು. ಇದೀಗ ರಾಜ್ಯ ಸರ್ಕಾರ ಎಲ್ಲರಿಗೂ ಮನೆ ನೀಡಲು ನಿರ್ಧಾರ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಮಾತನಾಡಿ, ಅ ಭಾಗದ ಅಧಿಕಾರಿಗಳ ಮೇಲೆ ಎಲ್ಲಾ ಕ್ರಮ ತಗೊಳ್ಳಬೇಕೆಂದು ಹೇಳಿದ್ದೇನೆ. ಅಲ್ಲಿರುವ ತಹಶೀಲ್ದಾರ್ ಸೇರಿ ಅಧಿಕಾರಿಗಳಿಗೆ ಗೊತ್ತಿರುವ ಸಾಧ್ಯತೆ ಇಲ್ಲ. ಇನ್ಮುಂದೆ ಯಾವುದೇ ಕಾರಣಕ್ಕೂ ಅಕ್ರಮವಾಗಿ ವಾಸ ಮಾಡಲು ಅವಕಾಶ ಕೊಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದಿದ್ದಾರೆ. ಇನ್ಮುಂದೆ ಬೇರೆ ಎಲ್ಲಾದರೂ ಈ ರೀತಿ ಕಟ್ಟಿದ್ರೆ ಅಲ್ಲಿನ ಸಂಬಂಧಿಸಿದ ಅಧಿಕಾರಿಗಳೇ ಜವಾಬ್ದಾರರು ಎಂದಿದ್ದಾರೆ.

ಅಕ್ರಮವಾಗಿ ಶೆಡ್‌ಗಳನ್ನು ಯಾರು ಯಾರು ಮಾಡ್ಕೊಂಡಿದ್ರು, ಜಿಲ್ಲಾಧಿಕಾರಿ ಹಾಗೂ ಕಾರ್ಪೊರೇಷನ್ ಕಮಿಷನರ್‌ಗೆ ಹೇಳಿದ್ದೇನೆ. ಮಂಗಳವಾರ, ಬುಧವಾರ ಪರಿಶೀಲನೆ ಮಾಡಿ ನೈಜ ವ್ಯಕ್ತಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲು ಸರ್ಕಾರ ತೀರ್ಮಾನ ಮಾಡಿದೆ. ಡಿಸಿ ಹಾಗೂ ಕಾರ್ಪೋರೇಷನ್ ಅವರು ಲಿಸ್ಟ್ ಕೊಡುತ್ತಾರೆ. ಯಾರು ಯಾರು ಅರ್ಹರು ಇದ್ದಾರೆ ಅವರ ಲಿಸ್ಟ್ ಕೊಡುತ್ತಾರೆ. ಅಧಿಕಾರಿಗಳ ಪರಿಶೀಲನೆಯ ಲಿಸ್ಟ್ ಆಧಾರದ ಮೇಲೆ ಅವರ ಎಲ್ಲರಿಗೂ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಈ ವಿಷಯದ ಬಗ್ಗೆ ನನ್ನ ಜೊತೆ ಕೆ.ಸಿ ವೇಣುಗೋಪಾಲ್ ಚರ್ಚೆ ಮಾಡಿದ್ದಾರೆ. ಡಿಕೆ ಶಿವಕುಮಾರ್ ಜೊತೆಗೂ ಚರ್ಚೆ ಮಾಡಿದ್ದಾರೆ. ನಾನು ದೆಹಲಿಗೆ ಹೋಗಿದ್ದಾಗ ಕೆ.ಸಿ ವೇಣುಗೋಪಾಲ್‌ ಚರ್ಚೆ ಮಾಡಿದ್ರು. ಅದೇ ಜಾಗದಲ್ಲಿ ಅವರಿಗೆ ಶೆಡ್ ನಿರ್ಮಿಸಲು ಆಗಲ್ಲ. ಆದರೆ ಬೇರೆ ಕಡೆ ಪರ್ಯಾಯ ವ್ಯವಸ್ಥೆ ಮಾಡಿಕೊಡ್ತೀವಿ ಅಂತಾ ಹೇಳಿದ್ದೆ ಎಂದಿದ್ದಾರೆ.

GBA ಕಮಿಷನರ್ ಹಾಗೂ ನಗರಾಭಿವೃದ್ಧಿ ಇಲಾಖೆಯ ತುಷರ್ ಗಿರಿನಾಥ್‌ಗೆ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿ ಅಂತಾ ಹೇಳಿದ್ದೇನೆ. ಆದರೆ ಅವರು ಯಾರು ಕೂಡ ಅಲ್ಲಿಗೆ ಊಟಕ್ಕೆ ಹೋಗಿಲ್ಲ. ನಾನು ಡಿಕೆ ಶಿವಕುಮಾರ್ ಮತ್ತೆ ಜಮ್ಮೀರ್ ಅಹಮದ್, ಕೃಷ್ಣ ಭೈರೇಗೌಡರ ಜೊತೆಗೂ ಮಾತಾಡಿದ್ದೇನೆ. ಜಮ್ಮೀರ್ ಅಹಮದ್ ಖಾನ್ ಅವರಿಗೆ ಹೇಳಿದ್ದೆ. ತಾತ್ಕಾಲಿಕ ವ್ಯವಸ್ಥೆ ಮಾಡಬೇಕೆಂದು, ಅಲ್ಲೇ ಬೈಯಪ್ಪನಹಳ್ಳಿ ಸರ್ವೆ ನಂಬರ್ 21 ರಲ್ಲಿ 1,187 ಮನೆಗಳನ್ನು ನಿರ್ಮಾಣ ಮಾಡಿದ್ದೇವೆ. ಯಾರು ನೈಜವಾಗಿ ಮನೆ ಕಳೆದುಕೊಂಡಿದ್ದಾರೋ ಅವರಿಗೆ ಇಲ್ಲಿ ಮನೆ ಹಂಚಿಕೆ ಮಾಡ್ತೀವಿ. ಅಧಿಕಾರಿಗಳು ಲಿಸ್ಟ್ ಕೊಟ್ಟ ನಂತರ ಅವರಿಗೆ ಮನೆ ಕೊಡುತ್ತೇವೆ. ಬೈಯಪ್ಪನಹಳ್ಳಿ ಅವರಿಗೆ ಸುಮಾರು 7 ಕಿಲೋಮೀಟರ್ ಇದೆ. ಒಂದು ಮನೆಗೆ ಸುಮಾರು 11.20 ಲಕ್ಷದ ಮನೆಗಳನ್ನು ಅಲಾಟ್ ಮಾಡ್ತಿದ್ದೇವೆ. ಜನರಲ್ ಹಾಗೂ ಎಸ್ಸಿ ಎಸ್ಟಿ ವರ್ಗದವರಿಗೆ ಕೇಂದ್ರ ಸರ್ಕಾರದಿಂದ ಬೇರೆ ಬೇರೆ ಸಬ್ಸಿಡಿಗಳಿವೆ. ಅದರ ಆಧಾರದ ಮೇಲೆ ಮನೆ ಕೊಡಲಾಗುತ್ತದೆ ಎಂದಿದ್ದಾರೆ.

11.20 ಲಕ್ಷದ ಮನೆಗೆ GBA ಪಾಲಿಕೆ ವತಿಯಿಂದ ಒಂದು ಮನೆಗೆ 5 ಲಕ್ಷ ರೂಪಾಯಿ ಕೊಡಬೇಕು ಅಂತ ಹೇಳಿದ್ದೇನೆ. ಜನರಲ್ ಅವರಿಗೆ ಸಬ್ಸಿಡಿ ಸೇರಿ 8.70 ಲಕ್ಷ ಬರುತ್ತದೆ. ಎಸ್‌ಸಿ, ಎಸ್‌ಟಿಗಳಿಗೆ 4.5 ಲಕ್ಷ ಸಬ್ಸಿಡಿ ಪ್ಲಸ್ 5 ಲಕ್ಷ ಕಾರ್ಪೊರೇಷನ್ ಸಬ್ಸಿಡಿ ಸೇರಿ 9.5 ಲಕ್ಷ ಬರುತ್ತದೆ. ಜನರಲ್ ಅವರಿಗೆ ಎರಡೂವರೆ ಲಕ್ಷ ಸಾಲದ‌ ರೂಪದಲ್ಲಿ ಜಮೀರ್ ಅಹಮದ್ ಅವರು ಕೊಡಿಸ್ತಾರೆ. ಎಸ್‌ಎಸಿ, ಎಸ್‌ಟಿಗೆ ಒಂದೂವರೆ ಲಕ್ಷ ಸಾಲ ಕೊಡಿಸುವ ವ್ಯವಸ್ಥೆಯೂ ಆಗುತ್ತದೆ ಎಂದಿದ್ದಾರೆ. 2 ದಿನದಲ್ಲಿ ಪರಿಶೀಲನೆ ಮಾಡಿ ಹೊಸ ವರ್ಷದ ಪ್ರಾರಂಭದ ದಿನ ವಸತಿಗೆ ಕೊಡಲಾಗುತ್ತದೆ ಎಂದಿದ್ದಾರೆ. ಕೇರಳ ಸರ್ಕಾರ ಈ ವಿಚಾರದಲ್ಲಿ ರಾಜಕೀಯ ಮಾಡಿದ್ದಾರೆ. ಅಸೆಂಬ್ಲಿ ಎಲೆಕ್ಷನ್ ಮಾರ್ಚ್ ಅಥವಾ ಏಪ್ರಿಲ್‌ಗೆ ಬರುತ್ತಿದೆ. ಅದಕ್ಕಾಗಿ ಇದನ್ನು ರಾಜಕೀಯಕ್ಕಾಗಿ ತಗೊಂಡಿದ್ದಾರೆ. ಕೆ ಸಿ ವೇಣುಗೋಪಾಲ್ ಹಸ್ತಕ್ಷೇಪದ ಬಗ್ಗೆ ಬಿಜೆಪಿ ಆರೋಪಕ್ಕೆ ಉತ್ತರಿಸಿ, ಅವರು ನಮಗೆ ನಿರ್ದೇಶನ ಕೊಟ್ಟಿಲ್ಲ. ಈ ರೀತಿ ಆಗಿದೆ ನೋಡಿ ಏನಾದರೂ ಮಾಡಿ ಅಂದ್ರು. ನಾವು ಮಾನವೀಯದ ದೃಷ್ಟಿಯಿಂದ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ ಎಂದಿದ್ದಾರೆ.

Related posts

ವಾಲ್ಮೀಕಿ ಪ್ರತಿಮೆ ನೆಪದಲ್ಲಿ ಬಳ್ಳಾರಿಯಲ್ಲಿ ರಕ್ತ ರಾಜಕೀಯ.. ತಪ್ಪು ಯಾರದ್ದು..?

Publicspot

ನಾನು ಹಣ ಆಸ್ತಿ ಹಿಂದೆ ಎಂದೂ ಹೋಗಲಿಲ್ಲ..! – ಸಿಎಂ ಸಿದ್ದರಾಮಯ್ಯ

Publicspot

Vote Theft.. ರಾಹುಲ್​ ಆರೋಪಕ್ಕೆ ಟೀಕೆ ಮಾಡಿದವರಿಗೆ ಪ್ರಿಯಾಂಕ್​ ತಿರುಗೇಟು..

Publicspot

ಅಪ್ಪನ ಕ್ಷೇತ್ರದಲ್ಲಿ ಮಗನ ಅಬ್ಬರ.. ಕುರುಬರು ಕಾಂಗ್ರೆಸ್‌ಗೆ ಮೀಸಲಲ್ಲ – HDK

Publicspot

ವೀರಶೈವ ಲಿಂಗಾಯತರಿಗೆ ದಾವಣಗೆರೆಯಿಂದ ಹೊಸ ದಿಕ್ಸೂಚಿ ಸಿಕ್ಕಿದೆ: ಬಸವರಾಜ ಬೊಮ್ಮಾಯಿ

admin

ರಾಜಣ್ಣನ ಬಳಿ ರಾಜೀನಾಮೆ ಕೇಳಿದ್ರೂ ಕೊಡ್ತಿದ್ರು.. ಆದರೆ ವಜಾ ಮಾಡಿದ್ಯಾಕೆ..?

Publicspot