The Public Spot
ಅಪರಾಧ

ಕೋಟೆ ನಾಡಿನ ಕಾಂಗ್ರೆಸ್​ ಶಾಸಕ ಪಪ್ಪಿ ಜೈಲಿನಿಂದ ರಿಲೀಸ್​.. 4 ತಿಂಗಳ ಸೆರೆವಾಸಕ್ಕೆ ರಿಲೀಫ್..

ಚಿತ್ರದುರ್ಗದ ಕಾಂಗ್ರೆಸ್​ ಶಾಸಕ ವಿರೇಂದ್ರ ಪಪ್ಪಿಗೆ ಕೋರ್ಟ್​ ಜಾಮೀನು ಮಂಜೂರು ಮಾಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಮಾಡಿದೆ. ಆನ್​ಲೈನ್​ ಗೇಮಿಂಗ್​ ಆ್ಯಪ್​ನಲ್ಲಿ ಅಕ್ರಮ ಹಣ ಹೂಡಿಕೆ ಮಾಡಿದ್ದ ಕೇಸ್​ನಲ್ಲಿ ಬಂಧನ ಮಾಡಲಾಗಿತ್ತು. ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿ ಬಂಧನ ಮಾಡಿದ್ದರು.

ಶಾಸಕ ವಿರೇಂದ್ರ ಪಪ್ಪಿಗೆ ಜಾಮೀನು ಮಂಜೂರು ಮಾಡಿದ ಕೋರ್ಟ್​, ಇಬ್ಬರು ಶೂರಿಟಿ ಹಾಗೂ 10 ಲಕ್ಷ ರೂಪಾಯಿ ಬಾಂಡ್ ಕೊಡುವಂತೆ ಆದೇಶ ಮಾಡಿತ್ತು. ಜೊತೆಗೆ ಪ್ರಕರಣ ಮುಗಿಯೋವರೆಗೂ ದೇಶ ಬಿಟ್ಟು ಹೋಗುವಂತಿಲ್ಲ, ಪಾಸ್ ಪೋರ್ಟ್ ಸರೆಂಡರ್ ಮಾಡಬೇಕು. ಸಾಕ್ಷಿಗಳು ಮೇಲೆ ಪ್ರಭಾವ ಬೀರೋ ಹಾಗಿಲ್ಲ. ಈ ಎಲ್ಲಾ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿತ್ತು. ಎಲ್ಲಾ ಷರತ್ತುಗಳನ್ನು ಪೂರೈಸಿದ ಶಾಸಕ ವಿರೇಂದ್ರ ಪಪ್ಪಿ ಜೈಲಿನಿಂದ ರಿಲೀಸ್​ ಆಗಿದ್ದಾರೆ.

ಜೈಲಿಗೆ ಆದೇಶ ಪ್ರತಿ ತಲುಪಿದ ಬಳಿಕ ಶಾಸಕ ವೀರೇಂದ್ರ ಪಪ್ಪಿಯನ್ನು ಜೈಲಿನಿಂದ ಬಿಡುಗಡೆ ಮಾಡಲಾಯ್ತು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಹೊರ ಬಂದ ಶಾಸಕ ವೀರೇಂದ್ರ ಪಪ್ಪಿಯನ್ನು ಹೂವಿನ ಹಾರ ಹಾಕಿ ಅಭಿಮಾನಿಗಳು ಬರಮಾಡಿಕೊಂಡರು. ವೀರೇಂದ್ರ ಪಪ್ಪಿ ಪರವಾಗಿ ಘೋಷಣೆ ಕೂಗಿ ಸ್ವಾಗತಿಸಿದ್ದಾರೆ.

ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಅವರ ಮನೆ ಚಳ್ಳಕೆರೆ ಸೇರಿದಂತೆ ಚಿತ್ರದುರ್ಗ ಹಾಗೂ ಬೆಂಗಳೂರು ನಿವಾಸದ ಮೇಲೂ ದಾಳಿ ಮಾಡಲಾಗಿತ್ತು. ಅಕ್ರಮವಾಗಿ ಹಣ ವರ್ಗಾವಣೆ ಆಗಿರುವುದಕ್ಕೆ ಸಾಕ್ಷಿಯನ್ನೂ ಸಂಗ್ರಹಿಸಲಾಗಿತ್ತು. ಇದೀಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ನೀಡಿದ್ದು, ಬರೋಬ್ಬರಿ 4 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಬಳಿಕ ಶಾಸಕ ವೀರೇಂದ್ರ ಪಪ್ಪಿ ಜೈಲಿನಿಂದ ರಿಲೀಸ್​ ಆಗಿದ್ದಾರೆ.

Related posts

ಬ್ಯಾಂಕ್ ಮ್ಯಾನೇಜರ್‌ನ ಮರ್ಡರ್ ಮಾಡಿದ್ಯಾಕೆ ಗಂಡ.. ಇಬ್ಬರು ಇಲ್ಲ ಇಬ್ಬರೂ ಅನಾಥ..

Publicspot

MASK MEN FRIEND: ಅನಾಮಿಕ ಹೇಳ್ತಿರೋದೆಲ್ಲಾ ಸುಳ್ಳಾ..? ಫ್ರೆಂಡ್‌ ಬಿಚ್ಚಿಟ್ಟ ರಹಸ್ಯ

Publicspot

Mother Murder ; ಪ್ರೀತಿಗಾಗಿ ತಾಯಿಯನ್ನೇ ಕೊಂದ ಅಪ್ರಾಪ್ತ ಹುಡುಗಿ..!

Publicspot

ಹೆಂಡತಿ ಜೊತೆಗೆ ಸ್ನೇಹಿತನ ಸಲುಗೆ.. ಪ್ರಶ್ನೆ ಮಾಡಿದ್ದಕ್ಕೆ ನಡೀತಾ ಮರ್ಡರ್..?​

ಯಶವಂತಿ

ನಟ ದರ್ಶನ್​ಗೆ ಅನುಕೂಲ ಆಗುವಂತೆ ಸಾಕ್ಷಿ ಹೇಳಿದ್ರಾ ರೇಣುಕಾಸ್ವಾಮಿ ತಾಯಿ..!?

Publicspot

ಅಮಾವಾಸ್ಯೆ ದಿನ 9 ಬಲಿ ಪಡೆದ ಜವರಾಯ.. 24 ಗಂಟೆಯಲ್ಲಿ 17 ಜನರ ದುರ್ಮರಣ..

Publicspot