The Public Spot
ಅಪರಾಧ

ಶಾಸಕ ಚಂದ್ರು ಲಮಾಣಿಯನ್ನು ಟ್ರ್ಯಾಪ್‌ನಲ್ಲಿ ಸಿಲುಕಿಸಿದ್ರಾ..? ಬಂಜಾರ ಬೆಂಬಲ..!!

ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಟ್ರ್ಯಾಪ್‌ನಲ್ಲಿ ಸಿಲುಕಿ ಜೈಲು ಪಾಲಾಗಿದ್ದಾರೆ. ಈ ನಡುವೆ ಲೋಕಾಯುಕ್ತ ಟ್ರ್ಯಾಫ್ ಮಾಡಲು ಕಾಂಗ್ರೆಸ್ ಷಡ್ಯಂತರ ಮಾಡಿದ ಆರೋಪ ಕೇಳಿ ಬಂದಿದೆ. ಲಕ್ಷ್ಮೇಶ್ವರದಲ್ಲಿ ಬೃಹತ ಹೋರಾಟಕ್ಕೂ ಬಿಜೆಪಿ ಪ್ಲಾನ್ ಮಾಡಿದ್ದು, ಶಿರಹಟ್ಟಿ ವಿಧಾನಸಭೆ ಕ್ಷೇತ್ರದ ಎರಡು ಮಂಡಲ ಕಾರ್ಯಕರ್ತರು ಹೋರಾಟಕ್ಕೆ ಯೋಜನೆ ರೂಪಿಸಿದ್ದಾರೆ. ಲಕ್ಷ್ಮೇಶ್ವರದಲ್ಲಿ ಬಿಜೆಪಿ ಬೃಹತ್ ಹೋರಾಟ ಮಾಡಲು ಲಕ್ಷ್ಮೇಶ್ವರ-ಮುಂಡರಗಿ-ಶಿರಹಟ್ಟಿಯಲ್ಲಿ ಪೂರ್ವಭಾವಿ ಸಭೆ ಮಾಡಿದ್ದು, ಕಾಂಗ್ರೆಸ್‌ನ ಕೈಗೊಂಬೆ ರೀತಿಯಲ್ಲಿ ಲೋಕಾಯುಕ್ತರು ಕೆಲಸ ಮಾಡಿದ್ದಾರೆ. ಕಾಂಗ್ರೆಸ್‌ನ ಗುತ್ತಿಗೆದಾರ ವಿಜಯರಾಜ್ ಪೂಜಾರನನ್ನು ಬಳಸಿಕೊಂಡು ಟ್ರ್ಯಾಪ್ ಮಾಡಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ದ ಬಿಜೆಪಿ ಕಾರ್ಯಕರ್ತರು ಹೋರಾಟಕ್ಕೆ ಸಜ್ಜಾಗಿದ್ದಾರೆ. ಲಕ್ಷ್ಮೇಶ್ವರದಲ್ಲಿ ಸಾವಿರಾರು ಕಾರ್ಯಕರ್ತರನ್ನ ಸೇರಿಸಿ ಪ್ರತಿಭಟನೆ ಮಾಡಲು ಭರ್ಜರಿ ತಯಾರಿ ನಡೆದಿದೆ.

ಶಾಸಕ ಡಾ. ಚಂದ್ರು ಲಮಾಣಿ ಲೋಕಾಯುಕ್ತಕ್ಕೆ ಟ್ರ್ಯಾಪ್ ಆದ ಬಳಿಕ ಶಾಸಕ ಡಾ. ಚಂದ್ರು‌ ಲಮಾಣಿ ಬೆನ್ನಿಗೆ ಬಂಜಾರ ಸಮುದಾಯ ನಿಂತಿದೆ. ಶಾಸಕ ಚಂದ್ರು ಲಮಾಣಿ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ. ಬಂಜಾರ ಸಮಾಜದ ವಿದ್ಯಾವಂತ ಶಾಸಕ ಚಂದ್ರು. ವಿಧಾನಸೌಧದಲ್ಲಿ ಒಳಮೀಸಲಾತಿ ಬಗ್ಗೆ ಧ್ವನಿ ಎತ್ತಿದ್ದಾರೆ. ಸಾಕಷ್ಟು ಹೋರಾಟ ಮಾಡಿದ್ದಾರೆ. ಹೀಗಾಗಿ ದಲಿತ ಶಾಸಕ ಬೆಳೆಯಬಾರದು ಅಂತ ಕುತಂತ್ರ ಮಾಡಿದ್ದಾರೆ. ಶಾಸಕ ಚಂದ್ರು ಲಮಾಣಿ ಹೆದರಬಾರದು, ಇಡೀ ಸಮಾಜ ಚಂದ್ರುಗೆ ನೈತಿಕ ಬೆಂಬಲ ನೀಡುತ್ತದೆ. ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆಯುವ ಹೋರಾಟದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗುತ್ತೇವೆ ಎಂದಿದ್ದಾರೆ.

ಶಾಸಕ ಡಾ. ಚಂದ್ರು ಲಮಾಣಿ ವಿರುದ್ಧ ಕುಮಾರ ಮಹಾರಾಜ ಷಡ್ಯಂತ್ರ ಮಾಡಿರುವ ವಿಚಾರವಾಗಿ ಮಾತನಾಡಿ, ಕುಮಾರ ಮಹಾರಾಜ್ ವಿರುದ್ಧ ಬಂಜಾರ ಸಮಾಜ ಮುಖಂಡರ ಆಕ್ರೋಶ ಹೊರಹಾಕಿದ್ದಾರೆ. ಕುಮಾರ ಮಹಾರಾಜರನ್ನು ಬಹಿಷ್ಕಾರ ಮಾಡಲು ಬಂಜಾರ ಸಮಾಜ ಮುಂದಾಗಿದೆ. ಕುಮಾರ ಮಹಾರಾಜ ನಮ್ಮ ಸಮಾಜದ ಸ್ವಾಮಿಯೇ ಅಲ್ಲ ಎನ್ನುವ ಮೂಲಕ ಬಂಜಾರ ಸಮಾಜ ಹಾಗೂ ಕುಮಾರ‌ ಮಹಾರಾಜರ ನಡುವೆ ಜಂಗಿ ಕುಸ್ತಿ ಏರ್ಪಟ್ಟಿದೆ. ಈತ ಗುರುಪುತ್ರನೇ ಅಲ್ಲ, ನಮಗೆ ಸ್ವಾಮಿನೇ ಅಲ್ಲ ಅಂತ ಕಿಡಿಕಾರಿದ್ದಾರೆ. ನಮ್ಮ ಸಮಾಜದ ಶಾಸಕ ಚಂದ್ರು ಲಮಾಣಿ ವಿರುದ್ಧ ಕುಮಾರ ಮಹಾರಾಜ್ ಷಡ್ಯಂತ್ರ ಮಾಡಿದ್ದಾರೆ ಅಂತ ಬಂಜಾರ ಸಮುದಾಯದ ಹಿರಿಯ ಮುಖಂಡ ಕುಬೇರಪ್ಪ ಪವಾರ್ ಕಿಡಿಕಾರಿದ್ದಾರೆ.

ಲಂಬಾಣಿ ಸಮಾಜದ ನಾಯಕ, ಕಾರಭಾರಿ, ಢಾವ್ ಎಲ್ಲರೂ ಶೀಘ್ರವೇ ಸಭೆ ಮಾಡಿ ಈ ಬಗ್ಗೆ ನಿರ್ಧಾರ ಮಾಡುತ್ತೇವೆ. ನಮ್ಮ ಸಮಾಜದಲ್ಲಿ ಸ್ವಾಮೀಜಿ ಇರಲ್ಲ. ಈವ ನಮ್ಮ ಜಾತಿಯವೇ ಅಲ್ಲ. ನಮ್ಮ ಗುರುನೇ ಅಲ್ಲ. ನಮ್ಮ ಜಾತಿ ಬಗ್ಗೆ ಮಾತನಾಡದಂತೆ ತಾಕೀತು ಮಾಡ್ತೀವಿ. ಬಂಜಾರ ಸಂಸ್ಕೃತಿನೇ ಗೋತ್ತಿಲ್ಲ. ಬಂಜಾರನೇ ಅಲ್ಲ, ಬಹಿಷ್ಕಾರ ಮಾಡ್ತೀವಿ. ಸಮಾಜದ ಬಗ್ಗೆ ಅಪಪ್ರಚಾರ ಮಾಡ್ತಿದ್ದಾನೆ. ಶೀಘ್ರದಲ್ಲೇ ಬಹಿಷ್ಕಾರ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ. ಒಟ್ಟಾರೆ ಶಾಸಕರನ್ನು ಬೆಂಬಲಿಸಿರುವ ಬಂಜಾರ ಸಮುದಾಯ, ಹೋರಾಟಕ್ಕೆ ಯೋಜನೆ ರೂಪಿಸಿದೆ. ಜೊತೆಗೆ ಸ್ವಾಮೀಜಿಯನ್ನು ಬಹಿಷ್ಕಾರ ಮಾಡಲು ನಿರ್ಧಾರ ಮಾಡಿದ್ದಾರೆ. ಆದರೆ ಶಾಸಕರು ಲಂಚ ಸ್ವೀಕಾರ ಮಾಡಿದ್ದು ತಪ್ಪಲ್ಲವೇ..? ಯಾರೋ ಟ್ರ್ಯಾಪ್‌ ಮಾಡ್ತಿದ್ದಾರೆ ಅಂದಾಗ ಪೊಲೀಸರಿಗೆ ಹಿಡಿದು ಕೊಟ್ಟು ಹೀರೋ ಆಗಬಹುದಿತ್ತಲ್ಲವೇ..? ಇದಕ್ಕೆ ಯಾರು ಉತ್ತರ ಕೊಡಲ್ಲ. ಇದು ಜಾತಿ ಪ್ರೇಮ ಅಂತಾ ಹೇಳಬಹುದು.

Related posts

Brother murder: ಅಕ್ಕನ ಅಕ್ರಮ ಸಂಬಂಧಕ್ಕೆ ಬಲಿಯಾದ ತಮ್ಮ..

Publicspot

Dating App: ಡೇಟಿಂಗ್​ ಆ್ಯಪ್​ನಲ್ಲಿ ಬಲೆ.. ಸುಲಿಗೆ ಮಾಡಿ ಹುಡುಗಿ ಎಸ್ಕೇಪ್​..

Publicspot

Lectuer – Student Love: ಮನೆಯಲ್ಲಿ ಮದುವೆ ತಯಾರಿ.. ಮಗಳು ಪ್ರಾಧ್ಯಾಪಕನ ಜೊತೆ ಪರಾರಿ..

ಯಶವಂತಿ

Actress Ranya Rao: ನಟಿ ರನ್ಯಾ ರಾವ್​ ಗೆ ಕೋರ್ಟ್ ನಿಂದ ಭಾರೀ ದಂಡ..

Publicspot

Dharmasthala Twist; ಬುರುಡೆ ಹಿಂದೆ ಹೊರಟ SIT ಗೆ ಟ್ವಿಸ್ಟ್​ ಮೇಲೆ ಟ್ವಿಸ್ಟ್​..

Publicspot

RAMYA REACTION: ನಟ ದರ್ಶನ್​ ಜೈಲಿಗೆ ಹೋಗಿದ್ದಕ್ಕೆ ರಮ್ಯಾ ಬೇಸರ.. ಟ್ರೋಲರ್ಸ್​ ಭೀತಿನಾ..?

Publicspot