The Public Spot
ಅಪರಾಧ

Brother murder: ಅಕ್ಕನ ಅಕ್ರಮ ಸಂಬಂಧಕ್ಕೆ ಬಲಿಯಾದ ತಮ್ಮ..

ಯಾದಗಿರಿ: ಅಕ್ಕನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತಮ್ಮನನ್ನು ಕೊಲೆ ಮಾಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಅಕ್ಕನ ಪ್ರೀಯಕರನೇ ತಮ್ಮನ ಹೆಣ ಬೀಳಿಸಿದ್ದಾನೆ. ಮೊದಲಿಗೆ ಕಂಠಪೂರ್ತಿ‌ ಕುಡಿಸಿ ಪ್ರೇಯಸಿ ತಮ್ಮನ ಕೊಲೆಗೈದಿದ್ದಾನೆ ಪಾಪಿ. ಯಾದಗಿರಿ ತಾಲೂಕಿನ ಬಾಚವಾರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

30 ವರ್ಷದ ರಾಮಸಿಂಗ್ ಅಲಿಯಾಸ್​ ಅಂಬರೀಶ್ ಕೊಲೆಯಾದ ದುರ್ದೈವಿ ಆಗಿದ್ದಾನೆ. ಯಾದಗಿರಿಯ ಗುರುಮಠಕಲ್ ಪಟ್ಟಣದ ಗಡ್ಡಿ ಮೊಹಲ್ಲಾ ನಿವಾಸಿ ರಾಮಸಿಂಗ್ ಸಹೋದರಿ ರಾಧಿಕಾಳ ಪ್ರಿಯಕರ ಯೂಸುಫ್ ಎಂಬಾತ ರಾಧಿಕಾಳ ತಮ್ಮನನ್ನೇ ಕೊಲೆ ಮಾಡಿದ್ದಾನೆ. ಯುಸಫ್​, ರಾಮಸಿಂಗನಿಗೂ ಆಪ್ತ ಸ್ನೇಹಿತನಾಗಿದ್ದ.

ಯೂಸುಫ್ ಹಾಗೂ ರಾಧಿಕಾ 8 ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ರು. ಇದಷ್ಟೇ ಅಲ್ಲದೇ ಯೂಸುಫ್ ಗೆ 6 ಲಕ್ಷ ಹಣ ಸಾಲವಾಗಿ ನೀಡಿದ್ದ ರಾಮಸಿಂಗ್. ಸಾಲದ ಹಣ ಮರುಪಾವತಿಸುವಂತೆ ಯೂಸುಫ್ ಗೆ ರಾಮಸಿಂಗ್ ಪೀಡಿಸುತ್ತಿದ್ದ. ಅಕ್ರಮ ಸಂಬಂಧಕ್ಕೆ ಅಡ್ಡಿ ಜೊತೆಗೆ ಸಾಲದ ಹಣಕ್ಕೆ ಕಿರುಕುಳ ಕೊಟ್ಟಿದ್ದ. ಇದರಿಂದ ಬೇಸತ್ತು ಕೊಲೆ ಮಾಡಿದ್ದಾನೆ.

ಆಗಸ್ಟ್​ 26ನೇ ತಾರೀಖಿನಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕುತ್ತಿಗೆಗೆ ವೈಯರ್ ನಿಂದ ಬಿಗಿದು ಕೊಲೆಗೈದಿದ್ದಾರೆ ದುರಳರು. ಕೊಲೆ ಮಾಡಿ ಕಾರ್​ ನಲ್ಲಿ ಶವ ತಂದು ಬಾಚವಾರ ಹಳ್ಳದಲ್ಲಿ ಬಿಸಾಡಿ ಹೋಗಿದ್ದರು. ಗುರುಮಠಕಲ್ ಪಟ್ಟಣದ ಯೂಸುಫ್ ಗ್ಯಾರೇಜ್ ನಲ್ಲಿ‌ ಕೊಲೆ ಮಾಡಿದ್ದಾರೆ. ಯೂಸುಫ್ ಹಾಗೂ ಆತನ ಗ್ಯಾರೇಜ್ ನಲ್ಲಿ ಕೆಲಸ ಮಾಡ್ತಿದ್ದ ಸೋಯಲ್ ಸೇರಿಕೊಂಡು ಕೊಲೆ ಮಾಡಿದ್ದಾರೆ. ಆ ಬಳಿಕ ಇಬ್ಬರು ಕಾರಿನಲ್ಲಿ ಶವ ತಂದು ಬಾಚವಾರ ಹಳ್ಳದಲ್ಲಿ ಬಿಸಾಡಿ ಯಾದಗಿರಿ ಮೂಲಕ ವಾಪಸ್ ಆಗಿದ್ದಾರೆ.

ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಯಾದಗಿರಿ ಗ್ರಾಮೀಣ ಪೊಲೀಸರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.

Related posts

DHARMASTHALA BJP RALLY: ಧರ್ಮಸ್ಥಳಲ್ಲಿ ಶುರುವಾಗಿದೆ ಧರ್ಮ ರಾಜಕಾರಣ..

Publicspot

30 ಲಕ್ಷ ಚಿನ್ನಾಭರಣ ಜೊತೆಗೆ ನಾಪತ್ತೆ.. ಕುಣಿಗಲ್‌ನಲ್ಲಿ ಮಹಿಳೆ ಪತ್ತೆ ಆಗಿದ್ಹೇಗೆ..?

Publicspot

ನಗೆಯ ಪ್ರೀತಿಗೆ ಬಲಿಕೊಟ್ಟ ಪ್ರಿಯಕರ.. ಹುಡುಗಿ ಮಾಡಿದ್ದು ಒಂದೇ ತಪ್ಪು..

Publicspot

ಸಿಂಗರ್‌ ಮೈಲಾರಿಗೆ 14 ದಿನ ನ್ಯಾಯಾಂಗ ಬಂಧನ.. ರೇಪ್‌ ಬಗ್ಗೆ ಆತ ಹೇಳಿದ್ದೇನು..?

Publicspot

RAMYA REACTION: ನಟ ದರ್ಶನ್​ ಜೈಲಿಗೆ ಹೋಗಿದ್ದಕ್ಕೆ ರಮ್ಯಾ ಬೇಸರ.. ಟ್ರೋಲರ್ಸ್​ ಭೀತಿನಾ..?

Publicspot

2023 Video Leak; ಚಿನ್ನಯ್ಯ ಹೇಳಿದ ಮಾತುಗಳು ಎಷ್ಟು ಸತ್ಯ..? ಎಷ್ಟು ಸುಳ್ಳು.. ಹೊಸ ವಿಡಿಯೋ ಲೀಕ್‌..

Publicspot