The Public Spot
ಕ್ರೀಡೆ

T-20 ವಿಶ್ವಕಪ್‌ ಫೈನಲ್‌ಗೆ ಲಗ್ಗೆ ಹಾಕಿದ ಟೀಂ ಇಂಡಿಯಾ..!

ಟಿ-20 ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಭರ್ಜರಿ ಜಯ ದಾಖಲಿಸಿದ ಟೀಂ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಭರ್ಜರಿ ಜಯ ದಾಖಲಿಸಿದೆ. ಸೂಪರ್ 8 ಹಂತದ ಕೊನೇ ಪಂದ್ಯದಲ್ಲಿ ಮಾಡು ಇಲ್ಲವೇ ಮಡಿ ಎನ್ನುವ ಸ್ಥಿತಿಯಲ್ಲಿದ್ದಾಗ 97 ರನ್‌ ಗಳಿಸಿ ಭಾರತಕ್ಕೆ ನೆರವಾಗಿದ್ದ ಸಂಜು ಸ್ಯಾಮ್ಸನ್‌ ಸೆಮಿಫೈನಲ್‌ನಲ್ಲೂ ಸ್ಯಾಮ್ಸನ್‌ ಸಿಡಿಲಬ್ಬರದ ಆಟವಾಡಿ ಭಾರತ ಬೃಹತ್‌ ಮೊತ್ತ ಪೇರಿಸಿ ಜಯಲಕ್ಷ್ಮೀಯನ್ನು ಒಲಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದ್ರು.

ಸಂಜು ಸ್ಯಾಮ್ಸನ್‌ ಅಬ್ಬರದ ಆಟದಿಂದ ಭಾರತ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 253 ಬೃಹತ್‌ ಮೊತ್ತ ಕಲೆ ಹಾಕುವಲ್ಲಿ ಯಶಸ್ವಿಯಾಗಿತ್ತು. 254 ರನ್‌ ಟಾರ್ಗೆಟ್‌ ಪಡೆದ ಇಂಗ್ಲೆಂಡ್‌ ಟೀಂ ಕೂಡ ಆರಂಭದಿಂದಲೇ ಅಬ್ಬರಿಸುತ್ತ ಬ್ಯಾಟಿಂಗ್‌ ಮಾಡಿದರೂ ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 246 ರನ್‌ ಗಳಿಸಲಷ್ಟೇ ಶಕ್ತವಾಯ್ತು. ಹೀಗಾಗಿ ಭಾರತ 7 ರನ್‌ಗಳಿಂದ ಗೆಲುವು ಕಾಣುವ ಮೂಲಕ ಫೈನಲ್‌ ಪ್ರವೇಶಿಸಿದೆ. ಭಾನುವಾರ ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಕಪ್‌ಗಾಗಿ ಹಣಾಹಣಿ ನಡೆಸಲಿದ್ದಾರೆ.

ಇಂಗ್ಲೆಂಡ್‌ ಪರವಾಗಿ ಜಾಕೊಬ್‌ ಬೆಥೆಲ್‌ ಏಕಾಂಗಿ ಹೋರಾಟ ನಡೆಸಿದ್ದು, 48 ಎಸೆತಗಳಲ್ಲಿ 105 ರನ್‌ ಗಳಿಸಿ ರನ್‌ ಔಟ್‌ ಆಗಿದ್ದಾರೆ. ಭಾರತದ ಪರವಾಗಿ ಹಾರ್ದಿಕ್‌ ಪಾಂಡ್ಯಗೆ 2 ವಿಕೆಟ್‌ ಲಭಿಸಿದ್ರೆ ಅರ್ಷದೀಪ್‌, ಜಸ್‌ಪ್ರೀತ್‌‌ ಬುಮ್ರಾ, ವರುಣ್‌ ಚಕ್ರವರ್ತಿ, ಅಕ್ಷರ್‌ ಪಟೇಲ್‌ಗೆ ತಲಾ 1 ವಿಕೆಟ್‌ ಕಬಳಿಸಿದ್ರು. ಮೊದಲಿಗೆ ಟಾಸ್ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ ಲೆಕ್ಕಾಚಾರ ಬುಡಮೇಲು ಆಗಿತ್ತು. ಸಂಜು ಸ್ಯಾಮ್ಸನ್‌ 89, ಅಭಿಷೇಕ್‌ ಶರ್ಮಾ 09, ಇಶಾನ್‌ ಕಿಶನ್‌ 39, ಶಿವಂ ದುಬೆ 43, ಸೂರ್ಯಕುಮಾರ್‌ ಯಾದವ್‌ 11, ಹಾರ್ದಿಕ್‌ ಪಾಂಡ್ಯ 27, ತಿಲಕ್‌ ವರ್ಮಾ 21, ಅಕ್ಷರ್‌ ಪಟೇಲ್‌ 02, ವರುಣ್‌ ಚಕ್ರವರ್ತಿ ನಾಟ್‌ಔಟ್‌ ಆಗಿ ಉಳಿದರು.

ಇಂಗ್ಲೆಂಡ್‌ ಪರ ಜಾಕೊಬ್‌ ಬೆಥೆಲ್‌ 105 ರನ್‌ ಗಳಿಸಿ ಗೆಲುವಿನ ಆಸೆ ಹುಟ್ಟಿಸಿದ್ರೆ ವಿಲ್‌ ಜಾಕ್ಸ್‌ 35, ಜಾಸ್‌ ಬಟ್ಲರ್‌ 25 ರನ್‌ ಗಳಿಸಿದ್ರು. ಇಂಗ್ಲೆಂಡ್‌ ಪರವಾಗಿ ವಿಲ್‌ ಜಾಕ್ಸ್‌, ಅದಿಲ್‌ ರಶೀದ್‌ ತಲಾ ಎರಡು ವಿಕೆಟ್‌ ಗಳಿಸಿದ್ರೆ ಜೋಫ್ರಾ ಅರ್ಚರ್‌ 01 ವಿಕೆಟ್‌ ಕಬಳಿಸಿದ್ರು. ಭಾರತದ ಪರ ಫೀಲ್ಡಿಂಗ್‌ನಲ್ಲಿ ಅಕ್ಷರ್‌‌ ಪಟೇಲ್‌ ತೆಗೆದುಕೊಂಡ 2 ಕ್ಯಾಚ್‌ಗಳು ನಯನ ಮನೋಹರವಾಗಿತ್ತು. ತಿಲಕ್‌ ವರ್ಮ, ಶಿವಂ ದುಬೆ ಕೂಡ ಉತ್ತಮ ಕ್ಯಾಚ್‌ ಪಡೆದಿದ್ದು, ಇಂಗ್ಲೆಂಡ್‌ನ ಮಣಿಸಲು ಸಾಧ್ಯವಾಯ್ತು. ಕೊನೆಯದಾಗಿ ಬೌಲರ್‌ಗಳು ಕಕ್ಕಾಬಿಕ್ಕಿ ಆಗುವಂತೆ ಮ್ಯಾಚ್ ಟರ್ನ್‌ ತೆಗೆದುಕೊಳ್ಳುವ ಸಾಧ್ಯತೆ ಇತ್ತು ಎಂದೇ ಕ್ರಿಕೆಟ್‌ ಪ್ರೇಮಿಗಳು ತಿಳಿಯುವಂತೆ ಇಂಗ್ಲೆಂಡ್‌ ಟೀಂನ ಆಟಗಾರರು ಆಡಿದರು ಅನ್ನೋದು ಮಾತ್ರ ಸುಳ್ಳಲ್ಲ.

Related posts

India Wins Women’s WorldCup: ಚೊಚ್ಚಲ ವಿಶ್ವಕಪ್​ಗೆ ಮುತ್ತಿಟ್ಟ “ಭಾರತಾಂಬೆ” ಮಕ್ಕಳು

Publicspot

ಚಿನ್ನಸ್ವಾಮಿ ಸ್ಟೇಡಿಯಂ ವಿಚಾರದಲ್ಲೂ ರಾಜಕೀಯ ನಡೀತಿದ್ಯಾ..? ನಾಳಿನ ಪಂದ್ಯ ಕ್ಯಾನ್ಸಲ್​..!!

Publicspot

19 ವರ್ಷದ ಒಳಗಿನ ಹುಡುಗರಲ್ಲೂ ಭಾರತವೇ ಲೀಡರ್‌.. 6ನೇ ವಿಶ್ವಕಪ್‌..

Publicspot

Indo – Pak T-20 Cricket; ವಿರೋಧದ ನಡುವೆ ದೇಶದ ಜನರ ಮನಸ್ಸು ಗೆದ್ದ ಕ್ರಿಕೆಟ್ ಆಟಗಾರರು..!

Publicspot

India Win; ಅಂಗಳದಲ್ಲಿ ಆಪರೇಷನ್​ ಸಿಂದೂರ್​.. ಪಾಕಿಸ್ತಾನಕ್ಕೆ ಮೋದಿ ಗುದ್ದು..

Publicspot

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚಿನ್ನದಂತ ಆಟವಾಡಿದ RCB ಹುಡುಗರು.. ಚೆನ್ನೈ ಪಲ್ಟಿ..

Publicspot