The Public Spot
ರಾಜಕೀಯ

ಕಾಂಗ್ರೆಸ್​ ಜಗಳದಲ್ಲಿ ಬಿಜೆಪಿ ಸುಲಭವಾಗಿ ಗೆದ್ದುಕೊಳ್ಳುತ್ತಾ..? ಜಮೀರ್​ ತಂತ್ರ ಏನು..?

ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ, ನಿಧನದ ಬಳಿಕ ಕಾಂಗ್ರೆಸ್​ ಮತ್ತೆ ಆ ಕ್ಷೇತ್ರವನ್ನು ಗೆದ್ದು ಕೈವಶ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ. ಅದೇ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಒಂದೇ ಕ್ಷೇತ್ರಕ್ಕೆ 100 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಆದರೆ ಕಳೆದ ಬಾರಿ ಶಾಮನೂರು ಶಿವಶಂಕರಪ್ಪ ವಿರುದ್ಧ ಸೋಲುಂಡು ವಿಧಾನಸಭೆ ಪ್ರವೇಶಿಸಲು ಕಾಯುತ್ತಿರುವ ಬಿಜೆಪಿ ಅಭ್ಯರ್ಥಿಗೆ ಈ ಬಾರಿ ಉಪಚುನಾವಣೆಯಲ್ಲಿ ಗೆಲ್ಲುವ ಅವಕಾಶವನ್ನು ಕಾಂಗ್ರೆಸ್​ ಪಕ್ಷವೇ ಮಾಡಿಕೊಡುತ್ತಿದೆ ಎಂದರೆ ಸುಳ್ಳಲ್ಲ. ಯಾಕಂದ್ರೆ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ವಿಚಾರವಾಗಿ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಸಚಿವ ಜಮೀರ್ ಆಹ್ಮದ್​ ಖಾನ್​ ನಡುವೆ ವಾಗ್ವಾದವೇ ಏರ್ಪಟ್ಟಿದೆ.

ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ನಾನು ಟಿಕೆಟ್ ಕೊಡಲು ಆಗುತ್ತಾ..? ಟಿಕೆಟ್ ಯಾರು ಕೊಡೋದು ನಮ್ಮ ಹೈಕಮಾಂಡ್, ಶಾಮನೂರು ಶಿವಶಂಕರಪ್ಪ ಇದ್ದಾಗ ಇದು ನನ್ನ ಕೊನೆ ಚುನಾವಣೆ, ಇದಾದ ಮೇಲೆ ಅಲ್ಪಸಂಖ್ಯಾತರಿಗೆ ನಾನೇ ಟಿಕೆಟ್​ ಕೊಡಿಸಿ, ನಿಲ್ಲಿಸಿ ಗೆಲ್ಲಿಸಿಕೊಂಡು ಬರ್ತೀನಿ ಅಂತ ಹೇಳಿದ್ರಂತೆ. ಹೀಗಾಗಿ ನಾಯಕರು ಬಂದು ನಮ್ಮ ಅಲ್ಪಸಂಖ್ಯಾತರದ್ದು 80 ಸಾವಿರ ವೋಟು ಇದೆ. ಶಾಮನೂರು ಶಿವಶಂಕಪ್ಪ ಕಳೆದ ಚುನಾವಣೆಯಲ್ಲಿ‌ ಮಾತು ಕೊಟ್ಟಿದ್ರು. ಈ ಬಾರಿ ಬೈ ಎಲೆಕ್ಷನ್​ನಲ್ಲಿ ನಮ್ಮ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಿಸಬೇಕು ಅಂತ ಕೇಳಿದ್ದಾರೆ.

ನಾನು ಅಲ್ಪಸಂಖ್ಯಾತ ನಾಯಕ ಅಂತ ನನ್ನ ಬಳಿ ಕೇಳಿದ್ದಾರೆ. ನನ್ನ ಹತ್ತಿರ ಅಲ್ಲದೇ ಇನ್ನು ಯಾರ ಹತ್ತಿರ ಹೋಗಿ ಕೇಳ್ತಾರೆ..? ನನ್ನ ಹತ್ತಿರ ತಾನೇ ಬಂದು ಕೇಳಬೇಕು. ನನ್ನದು ಏನಿದೆ ನನ್ನ ವರದಿಯನ್ನ ಹೈಕಮಾಂಡ್​ಗೆ ಕೋಡ್ತೀನಿ. ತೀರ್ಮಾನ ಮಾಡೋದು ಯಾರು ಹೈಕಮಾಂಡ್, ನಾನು ಕೊಡೋಕೆ ಆಗುತ್ತಾ..? ನಮ್ಮ ಸಮುದಾಯದ ಮುಖಂಡರು ಬಂದು ಕೇಳಿದ್ದಾರೆ. ನಾನು ದಾವಣಗೆರೆಗೆ ಹೋದಾಗಲು ಕೇಳಿದ್ದಾರೆ. ಶಾಮನೂರು ಶಿವಶಂಕರಪ್ಪ 2023 ನನ್ನ ಕೊನೆ ಚುನಾವಣೆ ಎಂದಿದ್ದರು. ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬರುತ್ತೇನೆ ಅಂತ ಹೇಳಿದ್ರು. ಈ ಕಾರಣಕ್ಕೆ ಅಲ್ಪಸಂಖ್ಯಾತರಿಗೆ ಕೊಡಿ ಅಂತ ಕೇಳುತ್ತಿದ್ದಾರೆ.

ನಮ್ಮ ಕ್ಷೇತ್ರದಲ್ಲಿ ಅವರ್ಯಾರು ಬಂದು ಮಾತನಾಡೋಕೆ ಅಂತಾ ಎಸ್​.ಎಸ್​ ಮಲ್ಲಿಕಾರ್ಜುನ್ ಹೇಳಿದ್ದಾರೆ ಅನ್ನೋ ವಿಚಾರವಾಗಿ ಮಾತನಾಡಿ, ನಮ್ಮ ಕ್ಷೇತ್ರ ಅವರ ಕ್ಷೇತ್ರ ಯಾರದ್ದು ಇಲ್ಲ. ಚಾಮರಾಜಪೇಟೆ ನನ್ನ ಕ್ಷೇತ್ರ ಅಂತ ಹೇಳೋಕೆ ಆಗುತ್ತಾ..? ನಮ್ಮ ಪಕ್ಷ ಹೈಕಮಾಂಡ್ ಪಕ್ಷ. 224 ಕ್ಷೇತ್ರನೂ ಕಾಂಗ್ರೆಸ್ ಕ್ಷೇತ್ರ, ಹೈಕಮಾಂಡ್. ನಾವು ಕಾಂಗ್ರೆಸ್​ನ ಶಿಸ್ತಿನ ಸಿಪಾಯಿಗಳು. ನಾನು ತೀರ್ಮಾನ ಮಾಡೋಕೆ ಆಗಲ್ಲ ಮಲ್ಲಿಕಾರ್ಜುನನೂ ತೀರ್ಮಾನ ಮಾಡೋಕೆ ಆಗಲ್ಲ. ಹೈಕಮಾಂಡ್ ತೀರ್ಮಾನ ಮಾಡಬೇಕು. ಟಿಕೆಟ್ ಕೇಳಿದ್ದೇವೆ ಕೇಳೋದ್ರಲ್ಲಿ ತಪ್ಪೇನಿದೆ..? ಅಂದ್ರೆ ನಾನು ಕೇಳಲೇಬಾರದ..? ಒತ್ತಾಯ ಮಾಡಲೇಬಾರದಾ..? ನಮ್ಮ ಹಕ್ಕು ನಾವು ಕೇಳುತ್ತಿದ್ದೇವೆ. ಟಿಕೆಟ್​ ಕೊಡೋದು ಬಿಡೋದು ಯಾರಿಗೆ ಬಿಟ್ಟಿದ್ದು ಹೈಕಮಾಂಡ್​ಗೆ ಬಿಟ್ಟಿದ್ದು. ಅವರು ಹಿರಿಯರಿದ್ದಾರೆ.. ನಾಯಕರಿದ್ದಾರೆ, ನನ್ನ ಆತ್ಮೀಯ ಸ್ನೇಹಿತರು ಅವರು ಮಾತನಾಡಲಿ ಎಂದಿದ್ದಾರೆ.

ಜಮೀರ್ ಅಹ್ಮದ್​ ಖಾನ್​ ಮಾತಿಗೆ ಸಚಿವ ಎಸ್​.ಎಸ್​ ಮಲ್ಲಿಕಾರ್ಜುನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಸಚಿವ ಮಲ್ಲಿಕಾರ್ಜುನ್, ಮುಸ್ಲಿಮರಿಗೆ ಟಿಕೆಟ್ ಕೊಡಬೇಕು ಅಂತ ನಮ್ಮ ತಂದೆಯವರು ಯಾರು ಬಳಿ ಹೇಳಿದ್ದಾರೆ..? ಜಬ್ಬಾರ್​ಗಷ್ಟೆ ನಮ್ಮ ತಂದೆಯವರು ಹೇಳಿದ್ದಾರಾ..? ನಾವೆಲ್ಲ ಒಂದೇ, ಇದನ್ನ ಕೂತು ಬಗೆಹರಿಸಿಕೊಳ್ಳಬೇಕು. ನಾವು ದಾವಣಗೆರೆ ದಕ್ಷಿಣ ಕ್ಷೇತ್ರ ಗೆಲ್ಲಬೇಕು ಅಷ್ಟೆ. ಆಕಾಂಕ್ಷಿಗಳು ಯಾರು ಇದ್ದಾರೆ ಅವರೆಲ್ಲರನ್ನ ಕರೆದು ಮಾತನಾಡ್ತಾರೆ. ಗೆಲ್ಲುವ ಅಭ್ಯರ್ಥಿಯನ್ನ ಆಯ್ಕೆ ಮಾಡ್ತೇವೆ. MLC ಅಬ್ದುಲ್ ಜಬ್ಬಾರ್ ಮುಸ್ಲಿಂ ಮುಖಂಡರನ್ನ ಸೇರಿಸಿ ಸಭೆ ಮಾಡುತ್ತಿರುವ ವಿಚಾರವಾಗಿ ಮಾತನಾಡಿ, ಅವನೊಬ್ಬನಿಂದ ಊರು ಹಾಳಾಗೋದು ಬೇಡ. ಇದು ಕಾರ್ಯಕರ್ತರ ಪಕ್ಷ ಅವರ ಅಭಿಪ್ರಾಯ ತಗೊಳಣ. ಕಾರ್ಯಕರ್ತರಿಲ್ಲದೇ ಏನು ನಡೆಯಲ್ಲ. ಇದು ಜೋಕರ್​ಗಳ ಪಕ್ಷ ಆಗಿದೆ. ಜಮೀರ್ ಅಲ್ಲಿಂದ ಬಂದು ಇಲ್ಲಿ ಮಾತನಾಡೋದು ಏನಿದೆ..? ಅವನು ಮಾತನಾಡಿರೋದರಿಂದಲೇ ಈ ಎಲ್ಲ ಗೊಂದಲ ಆಗಿದ್ದು. ನನ್ನ ಹತ್ತಿರ ಬಂದು ಮಾತನಾಡಬೇಕಿತ್ತು ನಾನೇ ಎಲ್ಲ ಹೇಳ್ತಾ ಇದ್ದೆ ಎಂದಿದ್ದಾರೆ.

Related posts

2 ದಿನದಲ್ಲಿ ಹೊಸ ವರ್ಷ.. ಹೊಸ ಮನೆ ಕೊಡ್ತೀವಿ.. ಸಿಂಗಲ್‌ ರೂಮ್‌ ಮನೆ..

Publicspot

Congress Protest Vote Chori; ಮತಗಳ್ಳತನ ವಿರುದ್ಧ ಕಾಂಗ್ರೆಸ್‌ ತೀವ್ರ ಹೋರಾಟ..

Publicspot

ಕಾಂಗ್ರೆಸ್​ನಲ್ಲಿ ಡಿನ್ನರ್​ ಪಾಲಿ‘ಟ್ರಿಕ್ಸ್​’ ಡಿಕೆಶಿ ಉದ್ದೇಶ ಏನು..? ಸಿಎಂ ಆಗ್ತಾರಾ..?

Publicspot

ಮಾಜಿ ಮಿನಿಸ್ಟರ್​ ರಾಜಣ್ಣ.. ಮತ್ತು ಆ ಮೂರು ತಪ್ಪುಗಳು.. ಡಿಕೆಶಿಗೆ ಕೈ ಜೋಡಿಸಿದ್ರಾ ಸಿಎಂ..?

Publicspot

ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವಕ್ಕೆ ಇರುವ ಅಧಿಕೃತ ದಾಖಲೆ

admin

Hate Speach Act; ದ್ವೇಷ ಭಾಷಣಕ್ಕೆ ನೂತನ ಕಾನೂನು..! ಬಿಜೆಪಿ ನಾಯಕರಿಗೆ ಇದು ಲಗಾಮು..?

Publicspot