The Public Spot
ರಾಜಕೀಯ

ಮುಂದಿನ ಮುಖ್ಯಮಂತ್ರಿ ಯಾರು..? ಕಾಂಗ್ರೆಸ್‌ ನಾಯಕರೇ ಕುಮಾರಣ್ಣ ಎಂದಿದ್ಯಾಕೆ..?

ರಾಜ್ಯ ವಿಧಾನಸಭೆಯಲ್ಲಿ ಬಜೆಟ್‌ ಅಧಿವೇಶ ನಡೆಯುತ್ತಿದ್ದು, ಬಜೆಟ್ ಮೇಲಿನ ಚರ್ಚೆ ವೇಳೆ ಮೈತ್ರಿಯಲ್ಲಿ ಮುಂದಿನ ಸಿಎಂ ಕುಮಾರಸ್ವಾಮಿ ಅನ್ನೋ ಬಗ್ಗೆ ಜಟಾಪಟಿ ನಡೆದಿದೆ. ಮುಂದೆ ಕಾಂಗ್ರೆಸ್ ಮುಕ್ತ ರಾಜ್ಯವಾಗಲಿದೆ ಎಂದು ಬಿಜೆಪಿ ಶಾಸಕ ಸಿದ್ದು ಸವದಿ ಹೇಳಿದ ಮಾತಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಜೆಡಿಎಸ್‌ನ ಕುಮಾರಸ್ವಾಮಿಯನ್ನು ನರೇಂದ್ರ ಮೋದಿ, ಅಮಿತ್ ಶಾ ಸಿಎಂ ಮಾಡ್ತಾರಂತೆ..! ನಿಮ್ಮ ಹಣೆಬರಹ ಏನಾಗಿದೆ ರೀ ರಾಜ್ಯದಲ್ಲಿ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.

ಈ ಚರ್ಚೆ ವೇಳೆ ನಿಮ್ಮಲ್ಲಿ ಯಾರು ಮುಖ್ಯಮಂತ್ರಿ ಅಂತಾ ಮೊದಲು ಹೇಳಿ..? ಎಂದಿರುವ ಪ್ರಿಯಾಂಕ್‌ ಖರ್ಗೆಗೆ, ಇವರೇ ಇರುತ್ತಾರಾ..? ಅಥವಾ ಬದಲಾವಣೆ ಆಗ್ತಾರಾ ? 2028ಕ್ಕೆ ಬಿಜೆಪಿಯವರೇ ಮುಖ್ಯಮಂತ್ರಿ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ನಮ್ಮ ಹಣೆಬರಹ 2028ಕ್ಕೆ, ಇವಾಗ ನಿಮ್ಮ ಹಣೆಬರಹ ಏನೆಂದು ನೋಡಿಕೊಳ್ಳಿ ಎಂದು ಬಿಜೆಪಿ ಸದಸ್ಯರು ತಿರುಗೇಟು ಕೊಟ್ಟಿದ್ದಾರೆ. ಜೆಡಿಎಸ್ ಜೊತೆ ಹೋಗಿದ್ದೀರಲ್ಲ, ಜೆಡಿಎಸ್‌ಗೆ ಎಷ್ಟು ಸೀಟು ಬಿಡ್ತೀರಾ..? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಬಿಜೆಪಿ ಶಾಸಕ ಸಿದ್ದು ಸವದಿ ಮಾತ್ರ ಇದೇ ನಿಮ್ಮದು ಕೊನೆ, ಮುಂದೆ ಭವಿಷ್ಯದಲ್ಲಿ ಅಧಿಕಾರಕ್ಕೆ ಬರೋದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತವಾಗಲಿದೆ ಎಂದಿದ್ದಾರೆ. ಎಲ್ಲಾ ಸರ್ವೆಯಲ್ಲೂ ಅದೇ ಇದೆ ಎಂದಿದ್ದಾರೆ ಸಿದ್ದು ಸವದಿ. ಈ ವೇಳೆ ಮಧ್ಯ ಪ್ರವೇಶಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ಬಗ್ಗೆ ಸರ್ವೇ ಏನೇಳ್ತಿದೆ ಎಂದಿದ್ದಾರೆ. ಮುಂದಿನ ಸಿಎಂ ಕುಮಾರಸ್ವಾಮಿ ಅಂತಿದ್ದಾರೆ ಜೆಡಿಎಸ್‌ನವರು. ಆದರೆ ನೀವು ಯಾರು ಚಕರಾನೇ ಎತ್ತುತ್ತಿಲ್ಲವಲ್ಲ. ಮೋದಿ, ಅಮಿತ್ ಶಾ ಕುಮಾರಸ್ವಾಮಿಯನ್ನು ಸಿಎಂ ಮಾಡ್ತಾರಂತೆ ಎಂದು ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.

ಪ್ರಮಾಣ ವಚನಕ್ಕೆ ನಿಮ್ಮನ್ನೂ ಕರೆಯುತ್ತೀವಿ. ಯಾರು ಮುಖ್ಯಮಂತ್ರಿ ಆಗಿರುತ್ತಾರೆ ಅಂತಾ ಅವಾಗ ನೋಡಿ ಎಂದು ಶಾಸಕ ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದಾರೆ. ಈ ವೇಳೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡ್ತೀರಾ ಹೇಳ್ರಿ ಎಂದಿದ್ದಾರೆ ಸಚಿವ ಪ್ರಿಯಾಂಕ್ ಖರ್ಗೆ. ಕುಮಾರಸ್ವಾಮಿ ಸಿಎಂ ಆಗೋದಿಲ್ಲ, ಬಿಜೆಪಿಯೇ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುತ್ತದೆ, ಬಿಜೆಪಿಯವರೇ ಸಿಎಂ ಆಗುತ್ತಾರೆ ಅಂತಾ ಮಾಧ್ಯಮಗಳ ಮುಂದೆ ಹೇಳಿ ನೋಡೋಣ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಎಸೆದಿದ್ದಾರೆ.

ಈ ವೇಳೆ ಬಿಜೆಪಿಯವರೇ ಮುಖ್ಯಮಂತ್ರಿ ಆಗುತ್ತಾರೆ. ಇವಾಗ ನಿಮ್ಮಲ್ಲಿ ಇವರೇ ಇರುತ್ತಾರಾ, ಬದಲಾಗ್ತಾರಾ..? ಅಂತಾ ಹೇಳಿ ನೋಡೋಣ ಎಂದು ಸುನೀಲ್ ಕುಮಾರ್‌ ತಿರುಗೇಟು ನೀಡಿದ್ದಾರೆ. ಇದನ್ನು ನೀವೆಲ್ಲರು ಹೋಗಿ ಮೋದಿಗೆ ಹೇಳಿ. ಮತ್ತೆ ನಮ್ಮ ಸರ್ಕಾರನೇ ಬರೋದು, ನೀವೆಲ್ಲ ಹಗಲು ಕನಸು ಕಾಣಬೇಡಿ ಎಂದಿದ್ದಾರೆ ಸಚಿವ ಪ್ರಿಯಾಂಕ್ ಖರ್ಗೆ. ಆದರೆ ಯಾರ ನೇತೃತ್ವದಲ್ಲಿ ಚುನಾವಣೆ ಹೋಗ್ತಿದ್ದೀರಿ ಹೇಳಿ ಎಂದು ಪ್ರಿಯಾಂಕ್ ಬಿಜೆಪಿಯನ್ನು ಛೇಡಿಸಿದ್ದಾರೆ.

ಜಿಬಿಎ ಚುನಾವಣೆ, ತಾಲ್ಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ಬರುತ್ತಿವೆ. ಅದರಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆನೋ..? ಇಲ್ಲವೋ..? ಅನ್ನೋ ಕ್ಲಾರಿಟಿಯೇ ಇಲ್ಲ. ನಿಮ್ಮ ಹಣೆಬರಹ ನಿಮಗೆ ಗೊತ್ತಿಲ್ಲದಿರುವಾಗ ನಮ್ಮ ಹಣೆಬರಹ ಬಗ್ಗೆ ಮಾತಾಡ್ತೀರಲ್ಲ ಎಂದು ಪ್ರಿಯಾಂಕ್ ಖರ್ಗೆ ಟಾಂಗ್‌ ಕೊಟ್ಟಿದ್ದರೆ. ಈ ಚುನಾವಣೆಗಳಲ್ಲಿ ಜೆಡಿಎಸ್‌ಗೆ ಎಷ್ಟು ಸೀಟು ಬಿಡ್ತೀರಾ ಹೇಳಿ..? ಎಂದು ಮರು ಪ್ರಶ್ನೆ ಎಸೆದಾಗ ಅದೆಲ್ಲವನ್ನು ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಬಿಜೆಪಿ ಶಾಸಕ ವೇದವ್ಯಾಸ್‌ ಕಾಮತ್ ಹೇಳಿದ್ದಾರೆ. ಮುಂದೆ ಯಾವ ಸರ್ಕಾರ ಬರುತ್ತದೆ ಎಂದು ಅಲ್ಲಿರುವ ಶಾಸಕರೇ ಹೇಳ್ತಾರೆ ಎಂದು ಆಡಳಿತ ಪಕ್ಷದ ಶಾಸಕರ ಕಡೆ ತೋರಿಸಿ ಶಾಸಕ ಸಿಸಿ ಪಾಟೀಲ್ ಕೌಂಟರ್ ಕೊಟ್ಟ ಪ್ರಸಂಗ ನಡೆದಿದೆ.

ಒಟ್ಟಾರೆ, ಬಿಜೆಪಿ ಕಾಂಗ್ರೆಸ್‌ ಸೇರಿದಂತೆ ಮುಂದಿನ ಮುಖ್ಯಮಂತ್ರಿಕುಮಾರಸ್ವಾಮಿ ಅನ್ನೋದು ಚಾಲನೆಗೆ ಬಂದಿದೆ. ಇಲ್ಲ ಎನ್ನುವ ಧೈರ್ಯ ಸದಯಕ್ಕಂತು ಬಿಜೆಪಿಗೆ ಇಲ್ಲ. ಕಾಂಗ್ರೆಸ್‌ನಲ್ಲಿ ಮೇಲ್ನೋಟಕ್ಕೆ ನಮ್ಮದೇ ಸರ್ಕಾರ ಎಂದರೂ ‌ಮತ್ತೆ ಅಧಿಕಾರಕ್ಕೆ ಬರುವ ಹುಮ್ಮಸ್ಸು ಕಾಣ್ತಿಲ್ಲ. ಜೆಡಿಎಸ್‌ ಬಿಜೆಪಿ ಜೊತೆಗೆ ಸೀಟು ಹಚಿಕೆಯಲ್ಲಿ ಪೈಪೋಟಿ ನಡೆಸಿ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಧೂಳೀಪಟ ಮಾಡಿಕೊಂಡು ಮತ್ತೊಮ್ಮೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವ ದಿನಗಳು ಹತ್ತಿರ ಬಂದಂತೆ ಕಾಣ್ತಿದೆ ಎನ್ನಬಹುದು.

Related posts

D.K Shivakumar Mistake: ಸದನವನ್ನೇ ಪ್ರಶ್ನೆ ಮಾಡಿದ ಕಾಂಗ್ರೆಸ್​.. ಸಂವಿಧಾನಕ್ಕೂ ಗೌರವ ಇಲ್ಲವೇ..?

Publicspot

ಮುಸ್ಲಿಮರು ಸತ್ತಾಗ ಪರಿಹಾರ.. ಹಿಂದೂಗಳು ಸತ್ತಾಗ ಮುನಿಸೇಕೆ ಸಿದ್ದರಾಮಯ್ಯ..?

Publicspot

ಪಾವಗಡದಲ್ಲಿ ವಿದ್ಯುತ್ ಉತ್ಪಾದನೆ ಪ್ಲಾಂಟ್ ಏಷ್ಯಾದಲ್ಲೇ ನಂ 1 ಎಂದ ಸಿಎಂ ಸಿದ್ದರಾಮಯ್ಯ

admin

Cabinet Fight; ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕಾಂಗ್ರೆಸ್‌ನಲ್ಲಿ ಪರ ವಿರೋಧ ಮಾತು..!

Publicspot

ರಾಜ್ಯಮಟ್ಟದ ಸ್ವಾತಂತ್ರ‍್ಯ ದಿನಾಚರಣೆಗೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಿ: ಮಹೇಶ್ವರ್ ರಾವ್.

admin

Cong MP Trouble: ಹಾಸನದ ಕಾಂಗ್ರೆಸ್​ ಸಂಸದನಿಗೆ ಸಂಕಷ್ಟ..! ಸುಪ್ರೀಂ ಶಾಕ್..

Publicspot