The Public Spot
Uncategorizedರಾಜಕೀಯ

ಬಿಜೆಪಿ ಗೆಲ್ಲಿಸಲು ಅಖಾಡಕ್ಕೆ ಇಳಿದ ಕೇಂದ್ರ ಸಚಿವ ಕುಮಾರಣ್ಣ!

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭಾಗಿಯಾಗಿದ್ದರು. ರಾಜ್ಯದಲ್ಲಿ ನಡೆಯುತ್ತಿರುವ 2 ಕ್ಷೇತ್ರಗಳ ಉಪ ಚುನಾವಣೆ ಹಿರಿಯ ಶಾಸಕರ ನಿಧನದಿಂದ ಈ ಚುನಾವಣೆ ಬಂದಿದೆ. ನಾನು ಇವತ್ತು ಮೊದಲನೇ ಬಾರಿ ಪ್ರಚಾರಕ್ಕೆ ಬಂದಿದ್ದೇನೆ. ನಮ್ಮ ಇಲಾಖೆ ಕಾರ್ಯಗಳಲ್ಲಿ ಭಾಗವಹಿಸಬೇಕಾದ ಹಿನ್ನೆಲೆಯಲ್ಲಿ ಬರಲು ಆಗಿರಲಿಲ್ಲ. ನಮ್ಮ ಅಭ್ಯರ್ಥಿ ಪರವಾಗಿ ಜನತೆಗೆ ಮನವಿ ಮಾಡಲು ಬಂದಿದ್ದೇನೆ. ಎರಡು ಕಡೆ ನಾವೇ ಗೆಲ್ಲುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಏನನ್ನು ನೋಡಿ ಜನ ಗೆಲುವು ಕೊಡ್ತಾರೆ..? ಜನ, ಜನಪರ ಯೋಜನೆ ನೋಡಿ ಕೊಡ್ತಾರೋ..? ಅಥವಾ ಇವರ ಹಣದ ಹೊಳೆ ಹರಿಸುತ್ತಾರಲ್ಲ ಅದನ್ನು ನೋಡಿ ಜನ ವೋಟ್ ಹಾಕ್ತಾರೋ..? ಅನ್ನೋದು ಪ್ರಶ್ನೆ ಎಂದಿದ್ದಾರೆ.

ಸಿದ್ದರಾಮಯ್ಯ ಗ್ಯಾರಂಟಿ ಕೊಟ್ಟಿದ್ದೇವೆ ಎಂಬ ವಿಷಯ ಹೇಳ್ತಾರೆ. ಆದರೆ ಯಾರ ಅಪ್ಪನ ಮನೆಯಿಂದ ಗ್ಯಾರಂಟಿ ಕೊಟ್ಟರು..? ರಾಜ್ಯದ ಜನತೆಯ ಮೇಲೆ ತೆರಿಗೆಯನ್ನು ಮೇಲಿಂದ ಮೇಲಿಂದ ಹಾಕಿ, ಜನಗಳಿಂದ ಕಿತ್ತು ಜನರಿಗೇ ಕೊಟ್ಟಿದಾರೆ. ಒಂದು ಕಡೆ ಹೇಳ್ತಾರೆ, ಈ ದೇಶದ ಆದಾಯದಲ್ಲಿ 2 ನೇ ಸ್ಥಾನದಲ್ಲಿ ಕರ್ನಾಟಕ ಇದೆ ಅಂತಾ. ಕೇಂದ್ರ ಸರ್ಕಾರಕ್ಕಿಂತಲೂ ಮೇಲಿದ್ದೀವಿ. ಆರ್ಥಿಕವಾಗಿ ಸದೃಢವಾಗಿದ್ದೇವೆ, ಅಂತೆಲ್ಲಾ ಹೇಳಿದ್ದಾರೆ. 2 ನೇ ಸ್ಥಾನದಲ್ಲಿ ಜನರು ಇದ್ದು, ಸಂಪತ್ಭರಿತವಾಗಿದ್ದಾಗ, ಸರ್ಕಾರದ ಗ್ಯಾರಂಟಿ ಸ್ಕೀಮ್ ಅವಶ್ಯಕತೆ ಇದೆಯಾ..? ಗ್ಯಾರಂಟಿ ಇಟ್ಟುಕೊಂಡು ಯಾಕೆ ಚುನಾವಣೆಗೆ ಹೋಗ್ತಿದ್ದಾರೆ. ಅಭಿವೃದ್ಧಿ ಅನ್ನೋ ಪದವೇ ಮರೆತು ಹೋಗಿದೆ ಎಂದು ಸರ್ಕಾರಕ್ಕೆ ಕುಟುಕಿದ್ದಾರೆ.

ರಾಜ್ಯದ ಜನರಿಗೆ ಗ್ಯಾರಂಟಿ ಕೊಡೋದಕ್ಕೆ ನನ್ನ ಅಬ್ಜೆಕ್ಷನ್ ಇಲ್ಲ. ನಾನು ರೈತರ ಸಾಲ ಮನ್ನಾ ಮಾಡಿದ್ದೆ. 25 ಸಾವಿರ ಕೋಟಿ ಹಣವನ್ನು ಆ ಸಂದರ್ಭದಲ್ಲಿ ನಾನು ಕೊಟ್ಟೆ. ರೈತರ ಸಾಲ ಮನ್ನ ಮಾಡಿದಿನಿ, ಒಂದು ವರ್ಷ ಅಭಿವೃದ್ಧಿ ಕೆಲಸ ಮಾಡೋಕೆ ಆಗಲ್ಲ ಅಂತಾ ನಾನು ಕೊಟ್ನಾ..? ರೈತರ ಸಾಲ ಮನ್ನಾ ಮಾಡಿ ಅದರೊಂದಿಗೆ ಅಭಿವೃದ್ಧಿ ಮಾಡಿದ್ದೇನೆ. ಕಳೆದ ಮೂರು ವರ್ಷಗಳಲ್ಲಿ ಜನರಿಗೆ ಎಷ್ಟು ಮನೆ ಕೊಟ್ಟಿದಾರೋ ಗೊತ್ತಿಲ್ಲ. ದುರ್ಬಿನ್ ಹಾಕಿ ಹುಡುಕಬೇಕು. ದಾವಣಗೆರೆ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿಗೆ ಬಂದ ದುಡ್ಡು ಎಷ್ಟು..? ರೈಲ್ವೆಯ ಹಲವಾರು ಕಾರ್ಯಕ್ರಮಗಳು ಬಂದಿವೆಯಲ್ಲ, ಹಲವಾರು ವಿಷಯದಲ್ಲಿ 8 ವರ್ಷಗಳಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಹಣವನ್ನು ಕೊಟ್ಟಿದೆ ರಾಜ್ಯಕ್ಕೆ ಎಂದು ಕೇಂದ್ರ ಸರ್ಕಾರವನ್ನು ಸಮರ್ಥಿಸಿದ್ದಾರೆ.

ಕಳೆದ ಬಾರಿ ನಡೆದ ಉಪ ಚುನಾವಣೆಯಲ್ಲಿ ಇಬ್ಬರು ಮಾಜಿ ಸಿಎಂಗಳ ಮಕ್ಕಳು ಸೋತರು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾತನಾಡಿ, ಚುನಾವಣೆ ಫಲಿತಾಂಶ ನೋಡಿದ್ದೀವಿ, ಅಧಿಕಾರ ಇದ್ದ ಸಂದರ್ಭದಲ್ಲಿ ನಡೆದಂತ ಉಪ ಚುನಾವಣೆಯಲ್ಲಿ, ಅಧಿಕಾರ ಇರುವ ಪಕ್ಷದವರು ಗೆಲ್ಲೋದು ಸಾಮಾನ್ಯ. ಅವರು ಯಾವುದೋ ಭ್ರಮೆಯಲ್ಲಿ ಮುಂದೆಯೂ ನಾವೇ 2028ಕ್ಕೂ ನಾವೇ ಅಂತಿದ್ದಾರೆ. 2028ಕ್ಕೆ ರಾಜ್ಯದ ಜನ ಯಾವ ತೀರ್ಮಾನ ಕೊಡ್ತಾರೆ ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಒಟ್ಟಾರೆ ಎರಡೂ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷ ಬಿಜೆಪಿಯನ್ನು ಗೆಲ್ಲಿಸುವುದಕ್ಕಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಅಖಾಡಕ್ಕೆ ಎಂಟ್ರಿ ಆಗಿದ್ದಾರೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿ ಸಣ್ಣ ಪ್ರಮಾಣದಲ್ಲೇ ಜೆಡಿಎಸ್‌ ಇರಬಹುದು. ಆದರೂ ಬಿಜೆಪಿಗೆ ದೊಡ್ಡ ಶಕ್ತಿ ಆಗುವುದು ಖಚಿತ.

Related posts

ಪಾವಗಡದಲ್ಲಿ ವಿದ್ಯುತ್ ಉತ್ಪಾದನೆ ಪ್ಲಾಂಟ್ ಏಷ್ಯಾದಲ್ಲೇ ನಂ 1 ಎಂದ ಸಿಎಂ ಸಿದ್ದರಾಮಯ್ಯ

admin

ಸುಪ್ರೀಂಕೋರ್ಟ್‌ನಲ್ಲಿ ತಾನೇ ವಾದ ಮಂಡಿಸಿದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ!

Publicspot

ನಟ ಧ್ರುವಾ ಸರ್ಜಾಗೆ ಬಂಧನದ ಭೀತಿ.. ಮುಂಬೈನಲ್ಲಿ FIR..

Publicspot

ರಾಜ್ಯಮಟ್ಟದ ಸ್ವಾತಂತ್ರ‍್ಯ ದಿನಾಚರಣೆಗೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಿ: ಮಹೇಶ್ವರ್ ರಾವ್.

admin

Congress MP Opposed Cm Decision; ಸಿದ್ದರಾಮಯ್ಯ ಆಸೆಗೆ ತಣ್ಣೀರು ಎರಚಿದ ಕಾಂಗ್ರೆಸ್‌ ಸಂಸದ

Publicspot

ಅರಸು ದಾಖಲೆ ಮುಟ್ಟಿದ ಸಿಎಂ ಸಿದ್ದರಾಮಯ್ಯ.. ನಾಳೆ ದೀರ್ಘಾವಧಿ ಸಿಎಂ ಅನ್ನೋ ಪಟ್ಟ..

Publicspot