The Public Spot
ರಾಜಕೀಯರಾಜ್ಯ

ಬಿಡದಿ ಭೂ ಸ್ವಾಧೀನ ವಿಚಾರವಾಗಿ ಪೋಸ್ಟರ್​ ವಾಕ್ಸಮರ..! HDK ಕಿಡಿ..

ಬಿಡದಿಯಲ್ಲಿ ಟೌನ್​ಶಿಪ್​ ಮಾಡುವ ಉದ್ದೇಶದಿಂದ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆ ಶುರು ಮಾಡಿದ್ದು, ಜೆಡಿಎಸ್​ ಹಾಗೂ ಬಿಜೆಪಿ ರೈತರ ಹೋರಾಟಕ್ಕೆ ಬೆಂಬಲ ಕೊಟ್ಟಿವೆ. ಇವತ್ತು ಬಿಜೆಪಿ ನಿಯೋಗ ಬಿಡದಿಗೆ ಭೇಟಿ ನೀಡಿ, ರೈತರ ಅಹವಾಲು ಆಲಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಬಿಡದಿಯಲ್ಲಿ ಜೆಡಿಎಸ್, ಬಿಜೆಪಿ ನಾಯಕರ ವಿರುದ್ಧ ಪೋಸ್ಟರ್ ಅಂಟಿಸಿದ ವಿಚಾರವಾಗಿ ಬೆಂಗಳೂರಲ್ಲಿ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದ ಸಿಎಂ ಆದ ಮೇಲೆ ಆದರೂ, ಈ ಪೋಸ್ಟರ್ ಅಂಟಿಸೋದು, ಬ್ಲೂ ಫಿಲ್ಮ್ ಮಾಡಿಸೋದು ಬಿಡ್ತಾರೆ ಎಂದುಕೊಂಡಿದ್ದೆ, ಆ ಖಾಯಾಲಿ ಇನ್ನೂ ಹೋಗಿಲ್ಲ ಎಂದು ನೇರವಾಗಿ ಡಿ,ಕೆ ಶಿವಕುಮಾರ್​ ವಿರುದ್ಧ ಗುಡುಗಿದ್ದಾರೆ.

ಇದೆಲ್ಲವೂ ಪೋಸ್ಟರ್ ಅಂಟಿಸಿ ಪ್ರಚಾರ ಮಾಡುವಂತಹ ವಿಚಾರವೇ..? ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, ನನ್ನದು, ನಿಖಿಲ್​ ಹಾಗೂ ಅನಿತಾ ಫೋಸ್ಟರ್ ಹಾಕಿದ್ದಾರೆ. 46 ಎಕರೆ 40 ವರ್ಷಗಳ ಹಿಂದೆ ನಾನು ಕಷ್ಟಪಟ್ಟು ಸಂಪಾದಿಸಿರುವ ಜಮೀನು. ಅದು ಬಿಟ್ಟು ನನಗೆ ಬೇರೆ ಯಾವುದು ಜಮೀನು ಇದೆ..? ಆ ಪೋಸ್ಟರ್​ನಲ್ಲಿ ನೂರು ಎಕರೆ ಅಂತಾ ಹಾಕೊಂಡಿದ್ದಾರಲ್ಲ..? ಅನಿತಾ ಕುಮಾರಸ್ವಾಮಿ 36-37 ಎಕರೆ ಜಮೀನು ಖರೀದಿ ಮಾಡಿರೋದು. ಖರೀದಿ ಮಾಡಿರುವ ಜಮೀನನ್ನು ಫೋಸ್ಟರ್​ನಲ್ಲಿ ಹಾಕುತ್ತಾರಾ..? ಬೆನ್ನಗಾನಹಳ್ಳಿಯಲ್ಲಿ ಸತ್ತವರ ಹೆಬ್ಬೆಟ್ಟು ತೋರಿಸಿ ಜಮೀನು ತಗೊಂಡಿರುವ ವ್ಯಕ್ತಿ ಇವರು, ಇಂತವರು ಪೋಸ್ಟರ್ ಅಂಟಿಸಿ ಪ್ರಚಾರ ಮಾಡಿದ್ರೆ ಜನರು ನಂಬುತ್ತಾರಾ..? ಎಂದು ಕಿಡಿಕಾರಿದ್ದಾರೆ.

ರಾಜ್ಯದ ಸಿಎಂ ಆದಂತವರಿಗೆ ಒಂದು ಸ್ಟ್ಯಾಂಡರ್ಡ್ ಬೇಡವಾ..? ಎಂದು ಗುಡುಗಿರುವ ಕೇಂದ್ರ ಸಚಿವ ಕುಮಾರಸ್ವಾಮಿ, ಈ ರೀತಿ ನಡೆದುಕೊಂಡರೆ ರಾಜ್ಯದ ಪರಿಸ್ಥಿತಿ ಏನಾಗುತ್ತೆ ಎಂದು ಯೋಚಿಸಬೇಕು ಎಂದು ಕಿವಿಹಿಂಡಿದ್ದಾರೆ. ಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನೇರವಾಗಿ ವಾಗ್ದಾಳಿ ಮಾಡಿದ್ದು, ಒಂದು ರೀತಿ ವಿಕೃತ ಮನಸ್ಥಿತಿ. ಇವರು ಮೊದಲಿಂದಲೂ ಹೀಗೆ ಬಂದಿದ್ದಾರೆ. ಸಿಎಂ ಕುರ್ಚಿಗಾದ್ರು ಗೌರವ ಬೇಡವಾ..? ಈ ರೀತಿ ಪೋಸ್ಟರ್ ಹಾಕೊಂಡು ಅಪಪ್ರಚಾರ ಮಾಡ್ಕೊಂಡು, ಅಶೋಕ್, ವಿಜಯೇಂದ್ರ, ನಾರಾಯಣಸ್ವಾಮಿ ಮೇಲೂ ಪೋಸ್ಟರ್​ ಹಾಕಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.

ನಾವು ಏನಾದರೂ ತಪ್ಪು ಮಾಡಿದ್ರೆ ಆಕ್ಷನ್ ತಗೊಳ್ಳಲಿ. ಇಲ್ಲಿಯವರೆಗೆ ಕಾಂಗ್ರೆಸ್​ನ ಶಾಸಕರು ಮಂತ್ರಿಗಳದ್ದೇ ನಡೆದು ಹೋಯ್ತು. ವಿಧಾನಸಭೆ ಕಲಾಪದಲ್ಲಿ ನಡೆದೋಯ್ತು, ಮತ್ತೆ ಅವರ ಬಾಯನ್ನು ಮುಚ್ಚಿಸಿದ್ರು. ಸತ್ಯ ಹೇಳ್ತೀವಿ ಅಂತಾ ಅವ್ರು ಬಾಯನ್ನೇ ತೆಗೆದಿಲ್ಲ. ನನ್ನದು ತೆರೆದ ಪುಸ್ತಕ ನನ್ನ ಬಗ್ಗೆ ನನ್ನ ಕಾರ್ಯಕರ್ತರಿಗೂ ಗೊತ್ತು. ಜನತೆಗೂ ಗೊತ್ತು, ಈ ರೀತಿಯ ಬೆದರಿಕೆಗೆಲ್ಲ ಹೆದರುವ ಪ್ರಶ್ನೆ ಇಲ್ಲ. ಇಂತಹ ಪೋಸ್ಟರ್​ಗಳಿಗೆಲ್ಲ ಹೆದರುವುದಿಲ್ಲ. ಬಿಡದಿ ಟೌನ್ ಶಿಪ್​ ನಾನು ಮಾಡಿದ್ದು ಅಂತಾರೆ. ಹೌದಪ್ಪ ನನ್ನ ಕಾಲದಲ್ಲಿ ಮಾಡಬೇಕು ಅಂತಾ ಹೊರಟಿದ್ದು ನಿಜ. ನಾನು ಮಾಡಲೇಬೇಕು ಅಂತಿದ್ರೆ ಎರಡನೇ ಬಾರಿ ಸಿಎಂ ಆಗಿದ್ದಾಗ ತಕ್ಷಣವೇ ಕ್ರಮ ತಗೊಳ್ತಿದ್ದೆ. ಮಾಡೋದಾಗಿದ್ರೆ ನಾನು ಅವಾಗ್ಲೇ ಮಾಡುತ್ತಿದ್ದೆ. ನನ್ನ ಹೆಸರು ಹೇಳ್ಕೊಂಡು ದುಡ್ಡು ಹೊಡೆಯುವ, ಭೂಮಿ ಲಪಾಟಿಯಿಸೋಕೆ ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇವರು ಮಾಡುವ ಕೆಲಸ ಏನಾದರೂ ಒಳ್ಳೆಯದು ಇದ್ದರೆ ನಾವು ಬೆಂಬಲ ಕೊಡೋಣ. ಇವರಿಗೆ ಯಾವುದರಲ್ಲಿ ಒಳ್ಳೆಯದು ಇದೆ. ಯಾವುದನ್ನೇ ಮಾಡಿದ್ರು ಬರೀ ದುಡ್ಡೇ ನೋಡ್ತಾರೆ. ಇಂತಹ ವ್ಯಕ್ತಿಯ ಬಗ್ಗೆ ನಾನು ಎಷ್ಟು ಅಂತಾ ಮಾತಾಡಲಿ ಎಂದು ಸಿಎಂ ಡಿ.ಕೆ ಶಿವಕುಮಾರ್​ ವಿರುದ್ಧ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ಅತ್ತ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್​ ಮಾತನಾಡಿ, ಬಿಡದಿ ಟೌನ್ ಶಿಪ್ ಮಾಡೋಕೆ‌ ಚಾಲನೆ ಕೊಟ್ಟಿದ್ದೇ ಕುಮಾರಸ್ವಾಮಿ. 2006ರಲ್ಲಿ, ಆಗ ನಾನು ಮಂತ್ರಿ ಆಗಿದ್ದೆ. ಈಗ ವಿರೋಧ ಮಾಡ್ತಿದ್ದಾರೆ ಅಂದ್ರೆ ಕುಮಾರಸ್ವಾಮಿಗೆ ಸಹಿಸಿಕೊಳ್ಳೋಕೆ ಆಗ್ತಿಲ್ಲ. ರೈತರಿಗೆ ಅನುಕೂಲ ಆಗುತ್ತೆ, ಒಳ್ಳೆಯ ಕೆಲಸ ಆಗುತ್ತೆ ಅಂತಾ ಸಹಿಸಿಕೊಳ್ಳೋಕೆ ಆಗ್ತಿಲ್ಲ. ರೈತರು ಶ್ರೀಮಂತರಾಗಬಾರದು ಅನ್ನೋದು ಅವರ ಉದ್ದೇಶ ಎಂದಿದ್ದಾರೆ.

Related posts

SSLC ಫಲಿತಾಂಶ ಪ್ರಕಟ ಮತ್ತಷ್ಟು ವಿಳಂಬ.. ಹಠಕ್ಕೆ ಬಿದ್ದ ಸರ್ಕಾರ..

Publicspot

CM Seat Fight; ದೆಹಲಿಗೆ ಬರುವಂತೆ ಸತೀಶ್‌ ಜಾರಕಿಹೊಳಿಗೆ ಬುಲಾವ್.. ನಾಯಕರು ಕಂಗಾಲು..!!

Publicspot

Thimmakka; ಸಾಲು ಮರದ ತಿಮ್ಮಕ್ಕ ಇನ್ನಿಲ್ಲ.. ಬದುಕಿನ ಯಾನ ಮುಗಿಸಿದ ವೃಕ್ಷಮಾತೆ..

Publicspot

ಮೀಸಲಾತಿ ಮಸೂದೆಗೆ ಅಂಕಿತ.. ಆದರೂ ಹಳೇ ಮೀಸಲಾತಿಯಲ್ಲಿ ನೇಮಕಾತಿ ಯಾಕೆ..?

Publicspot

17.50 ಲಕ್ಷ ಜನರ ಆರೋಗ್ಯ ಖಾತ್ರಿಪಡಿಸುವ ಶುದ್ಧ ಕುಡಿಯುವ ನೀರಿನ ಯೋಜನೆ ಉದ್ಘಾಟಿಸಿದ ಸಿಎಂ

admin

ಜನರು ಫ್ಲೋರೈಡ್ ಯುಕ್ತ ನೀರನ್ನು ಕುಡಿಯುವ ಅನಿವಾರ್ಯತೆ ಇತ್ತು. ಇದರಿಂದ ಜನರಿಗೆ ಆರೋಗ್ಯದ ತೊಂದರೆ

admin