The Public Spot
ಅಪರಾಧ

ಬಳ್ಳಾರಿ ಗಲಾಟೆ.. SP ಅಮಾನತು.. ಆತ್ಮಹತ್ಯೆ ಯತ್ನ.. ಸರ್ಕಾರ ಹೇಳಿದ್ದೇನು..?

ಬಳ್ಳಾರಿ ಘರ್ಷಣೆ ಬಳಿಕ ಕರ್ತವ್ಯ ಲೋಪ ಆರೋಪದ ಮೇಲೆ ಬಳ್ಳಾರಿ ಎಸ್‌ಪಿ ಪವನ್‌ ನೆಜ್ಜೂರ್ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ವಿಶೇಷ ಅಂದ್ರೆ ಲೋಕಾಯುಕ್ತ ಎಸ್‌ಪಿ ಆಗಿದ್ದ ಪವನ್‌ ನೆಜ್ಜೂರ್, ಮೊದಲ ಬಾರಿಗೆ ಲಾ ಅಂಡ್‌ ಆರ್ಡರ್‌ ಎಸ್‌ಪಿ ಆಗಿ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರ ಸ್ವೀಕರಿಸಿ ಕೆಲವೇ ಗಂಟೆಗಳಲ್ಲಿ ಘರ್ಷಣೆ ಸಂಭವಿಸಿತ್ತು. ಅಧಿಕಾರಿಗಳ ಸಭೆಯನ್ನೂ ಮಾಡಿರಲಿಲ್ಲ. ಅಷ್ಟರಲ್ಲೇ ಅನಾಹುತ ಸಂಭವಿಸಿದ್ದಕ್ಕೆ ಎಸ್‌ಪಿ ಪವನ್‌ ನೆಜ್ಜೂರ್ ಅವರನ್ನು ಹೊಣೆ ಮಾಡಲಾಗಿತ್ತು. ಸರ್ಕಾರ ಅಮಾನರು ಮಾಡಿದ್ದರಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಪವನ್‌ ನೆಜ್ಜೂರ್, ಅವರಿಗೆ ಆಸ್ಪತ್ರೆಯಲ್ಲಿ ಸ್ಟಮಕ್‌ ವಾಷ್‌ ಮಾಡಿಸಿಕೊಂಡು ಸ್ನೇಹಿತರ ಫಾರ್ಮ್‌ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ.

ಬಳ್ಳಾರಿ ಎಸ್‌ಪಿಯನ್ನ ಸಸ್ಪೆಂಡ್ ಮಾಡಿರೊ ವಿಚಾರವಾಗಿ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ಅಧಿಕಾರಿಗಳು ಮಾನಸಿಕ ಒತ್ತಡದಲ್ಲಿದ್ದಾರೆ. ಎಸ್‌ಪಿ ಪವನ್‌ ನೆಜ್ಜೂರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಾಂಗ್ರೆಸ್‌ ನಾಯಕರ ಆಪ್ತರು ಗುಂಡು ಹಾರಿಸಿದ್ದು, ಶಾಸಕ ಜನಾರ್ದನ ರೆಡ್ಡಿಯನ್ನ ಮುಗಿಸಲು ಯತ್ನಿಸಿದ್ರು. ಆ ಎಸ್‌ಪಿ ಪವನ್‌ ನೆಜ್ಜೂರ್ ಚಾರ್ಜ್ ತೆಗೆದುಕೊಂಡು ಎರಡು ಗಂಟೆಯೂ ಆಗಿರಲಿಲ್ಲ. ಅವರಿಗೆ ಅಲ್ಲಿನ ಪರಿಸ್ಥಿತಿ ತಿಳಿದುಕೊಳ್ಳಲು ಸಮಯ ನೀಡಿಲ್ಲ. ಎಸ್‌ಪಿಗೆ ಬ್ರೀಫಿಂಗ್‌ ಸಹ ಆಗಿರಲಿಲ್ಲ. ಆ ಎಸ್‌ಪಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ಧಾರೆ. IPS ಅಧಿಕಾರಿಗೆ ಮಾನಸಿಕವಾಗಿ ನೋವಾಗಿದೆ. ಅಧಿಕಾರಿಯನ್ನ ಹೊಣೆ ಮಾಡಿದ್ದು ತಪ್ಪು. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಹೋಗಬೇಕು. ಆತ್ಮಹತ್ಯೆಗೆ ಯತ್ನಿಸಿರೋದು ನನಗೆ ನೋವಾಗ್ತಿದೆ ಎಂದಿದ್ದಾರೆ.

ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ, ಪಿಎಸ್‌ಐ ಆತ್ಮಹತ್ಯೆಯೂ ಆಯ್ತು. ಈ ಸರ್ಕಾರ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯವನ್ನು ಕೊಟ್ಟಿದೆ ಎಂದಿರುವ ಆರ್‌. ಅಶೋಕ್‌, ಕ್ರಿಕೆಟ್ ಸ್ಟೇಡಿಯಂ ಕಾಲ್ತಿಳಿತ ಪ್ರಕರಣದಲ್ಲೂ ಕಮೀಷನರ್‌ ಸೇರಿದಂತೆ ಪೊಲೀಸ್ ಅಧಿಕಾರಿಗಳ ಅಮಾನತು ಮಾಡಿದ್ರು. ಅಧಿಕಾರಿಗಳನ್ನ ಹೊಣೆ ಮಾಡ್ತಿದ್ದಾರೆ. ನೀವು ಸಚಿವರು ಹೊಣೆಯಾಗಬೇಕು. ನಿಮ್ಮನ್ನು ಅಮಾನತು ಮಾಡಬೇಕು ಎಂದು ಆರ್‌.ಅಶೋಕ್‌ ಆಗ್ರಹ ಮಾಡಿದ್ದಾರೆ. ತುಮಕೂರಿನಲ್ಲಿ ಐಪಿಎಸ್ ಅಧಿಕಾರಿ ಪವನ್ ನೆಜ್ಜೂರ್ ಆತ್ಮಹತ್ಯೆ ಯತ್ನ ವಿಚಾರವಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ದು, ಸ್ವಾಭಾವಿಕವಾಗಿ ಸ್ವಲ್ಪ ಡಿಪ್ರೆಶನ್ ಹೋಗಿರ್ತಾರೆ. ಈಗ ಸರಿ ಹೋಗಿದ್ದಾರೆ‌, ಬಳ್ಳಾರಿಯಿಂದ ಬೆಂಗಳೂರು ಕಡೆಗೆ ತೆರಳಿದ್ದಾರೆ. ಸದ್ಯ ಯಾವುದೇ‌ ಸಮಸ್ಯೆ ಇಲ್ಲ ಎಂದು ಗೃಹ ಸಚಿವರು ಮಾಹಿತಿ ನೀಡಿದ್ದಾರೆ.

ಐಪಿಎಸ್ ಅಧಿಕಾರಿ ಪವನ್ ನಜ್ಜೂರ್ ಅತ್ಮಹತ್ಯೆಗೆ ಯತ್ನ ವಿಚಾರವಾಗಿ ಪವನ್‌ ನಜ್ಜೂರು ಆಪ್ತ ವಲಯ ಮಾಹಿತಿ ನೀಡಿದ್ದು, ಸದ್ಯ ಪವನ್ ನಜ್ಜೂರ್ ಫಾರ್ಮ್ ಹೌಸ್‌ನಲ್ಲೇ ಇದ್ದಾರೆ. ಎಳನೀರು ಸೇವಿಸಿಕೊಂಡು‌ ಆರಾಮಾಗಿ ಇದ್ದಾರೆ. ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಠಾಣಾ ವ್ಯಾಪ್ತಿಯ ಬರಗೂರು ಗ್ರಾಮದ ಹಂದಿಗುಂಟೆಯಲ್ಲಿ ಸಿಸಿಬಿ ಡಿಸಿಪಿ ಶ್ರೀಹರಿ ಅವರ ಫಾರ್ಮ್ ಹೌಸ್ ಇದ್ದು, ಸ್ನೇಹಿತನ ಫಾರ್ಮ್ ಹೌಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಪವನ್‌ ನೆಜ್ಜೂರು ಆತ್ಮಹತ್ಯೆ ಯತ್ನ ಅನ್ನೋದು ವದಂತಿ. ಬಳ್ಳಾರಿ ಎಸ್‌ಪಿ ಆದ 12 ಗಂಟೆಯಲ್ಲೇ ಅಮಾನತು ಆಗಿದ್ದರು. ಅಮಾನತು ಆಗಿರುವುದಕ್ಕೆ ಬೇಸರಗೊಂಡಿದ್ದಾರೆ. ಆತ್ಮಹತ್ಯೆ ಅನ್ನೋ ಸುದ್ದಿ ಕೇಳಿ ಶಾಕ್‌ಗೆ ಒಳಗಾದರು. ಸ್ನೇಹಿತನ‌ ಜೊತೆ ಬೇಸರ ವ್ಯಕ್ತಪಡಿಸಿದ್ರು ಎನ್ನಲಾಗಿದೆ. ಪವನ್ ನೆಜ್ಜೂರು ಜೊತೆಯಲ್ಲೇ ಇಬ್ಬರು ಆಪ್ತ ಸ್ನೇಹಿತರು ಇದ್ದು, ಇಬ್ಬರು ಆಪ್ತ ಸ್ನೇಹಿತರಲ್ಲಿ ಒಬ್ಬರು ಐಪಿಎಸ್ ಅಧಿಕಾರಿಯೂ ಜೊತೆಗಿದ್ದಾರೆ ಎನ್ನಲಾಗಿದೆ.

ಒಟ್ಟಾರೆ, ಪೊಲೀಸ್‌ ಅಧಿಕಾರಿ ಅಧಿಕಾರ ಸ್ವೀಕಾರ ಮಾಡಿ ಎರಡು ಗಂಟೆಯಲ್ಲಿ ಗಲಾಟೆ ನಡೆದಿದೆ. ರಾಜಕಾರಣಿಗಳು ಮಾಡಿದ ಕೊಬ್ಬಿನ ಗಲಾಟೆಯಲ್ಲಿ ಮಾನ ಉಳಿಸಿಕೊಳ್ಳಲು ಪೊಲೀಸ್‌ ಅಧಿಕಾರಿಗನ್ನು ಸಸ್ಪೆಂಡ್‌ ಮಾಡಲಾಗಿದೆ. ಆದರೆ ಓರ್ವ IPS ಅಧಿಕಾರಿಯಾಗಿ ಪವನ್‌ ನೆಜ್ಜೂರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನುವುದು ನಾಚಿಕೆಗೇಡಿನ ಸಂಗತಿ. AIS, IPS ಅಧಿಕಾರಿಗಳಿಗೆ ತರಬೇತಿ ಅವಧಿಯಲ್ಲೇ ಸಾಕಷ್ಟು ಕಠಿಣ ತರಬೇತಿ ನೀಡಲಾಗಿರುತ್ತದೆ. ಆದರೂ ಅಮಾನತು ಅನ್ನೋ ಸಣ್ಣ ವಿಚಾರಕ್ಕೆ ಆತ್ಮಹತ್ಯೆ ಮೊರೆ ಹೋಗುವುದು ಸರಿಯಲ್ಲ. ಆತ್ಮಹತ್ಯೆ ಎನ್ನುವುದು ವದಂತಿ ಎನ್ನಲಾಗಿದೆ. ಈ ವಿಚಾರವೇ ಸತ್ಯವಾಗಿರಲಿ ಎನ್ನುವುದು Public Spot ಆಶಯ.

Related posts

You Tuber Sameer house Raid: ಸಮೀರ್​ ಬಗ್ಗೆ ಮಟ್ಟಣ್ಣವರ್​ ಕೊಟ್ಟ ಸ್ಪಷ್ಟನೆ ಏನು..?

Publicspot

Actress Ranya Rao: ನಟಿ ರನ್ಯಾ ರಾವ್​ ಗೆ ಕೋರ್ಟ್ ನಿಂದ ಭಾರೀ ದಂಡ..

Publicspot

ವರ್ಷದ ಹಿಂದೆ DOCTOR ಮದುವೆ.. 6 ತಿಂಗಳ ಹಿಂದೆ ಕೊಲೆ.. ಈಗ ರಹಸ್ಯ ಬಯಲು..!

Publicspot

BENGALURU FIRE ACCIDENT: ಬೆಂಕಿ ಅವಘಡಕ್ಕೆ ನಿನ್ನೆ ಒಂದು.. ಇವತ್ತು ಐವರ ಸಜೀವ ದಹನ..

Publicspot

Bus Driver Ask Kiss for mobile charging: ಬಸ್​ ಡ್ರೈವರ್​ಗೆ ಬಿತ್ತು ಬೇಜಾನ್​ ಗೂಸಾ..

Publicspot

ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ.. ಬಂಡಾರದ ಲೆಕ್ಕಾಚಾರ..

Publicspot