The Public Spot
ರಾಜಕೀಯ

ಕಾಂಗ್ರೆಸ್​ನಲ್ಲಿ ಸಂಪುಟ ಪುನಾರಚನೆ ಒತ್ತಡ.. ಹೈಕಮಾಂಡ್​ ಹಾದಿ ಏನು..?

ರಾಜ್ಯದಲ್ಲಿ ಎರಡೂವರೆ ವರ್ಷಕ್ಕೆ ಮುಖ್ಯಮಂತ್ರಿ ಹುದ್ದೆ ಬದಲಾವಣೆ ಬಗ್ಗೆ ಚರ್ಚೆ ಆಗಿತ್ತು ಅನ್ನೋದು ಕಾಂಗ್ರೆಸ್​ ಒಳಗೇ ಚರ್ಚೆ ಆಗಿರುವ ವಿಚಾರ. ಈ ನಡುವೆ ಕಾಂಗ್ರೆಸ್ ವರಿಷ್ಠರನ್ನ ಭೇಟಿಯಾಗಲು ದೆಹಲಿಗೆ ಹೋಗಿರುವ ಹಿರಿಯ ಶಾಸಕರ ತಂಡ ಹೈಕಮಾಂಡ್​ ನಾಯಕರನ್ನು ಭೇಟಿ ಮಾಡಿ ತಮ್ಮ ಆಗ್ರಹ ಮುಂದಿಡಲಿದ್ದಾರೆ. ದೆಹಲಿಗೆ ತೆರಳುವ ಮುನ್ನ ಮಾತನಾಡಿದ ಶಿರಾ ಶಾಸಕ ಟಿ.ಬಿ ಜಯಚಂದ್ರ , ಪಕ್ಷದ ಕೆಲವು ವಿಚಾರಗಳನ್ನ ಚರ್ಚೆ ಮಾಡುತ್ತೇವೆ. ಸುಮಾರು 38 ಶಾಸಕರು ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದೇವೆ. ಎಐಸಿಸಿ ಅಧ್ಯಕ್ಷರನ್ನ ಭೇಟಿಯಾಗುತ್ತೇವೆ. ಅವಕಾಶ ಸಿಕ್ಕರೆ ರಾಹುಲ್ ಗಾಂಧಿಯನ್ನೂ ಭೇಟಿಯಾಗ್ತೇವೆ ಎಂದಿದ್ದಾರೆ.

ಈ ಹಿಂದೆ 38 ಜನ ಶಾಸಕರು ಒಂದೆಡೆ ಸೇರಿಕೊಂಡು ಚರ್ಚೆ ಮಾಡಿದ್ದೆವು. ಎಲ್ಲರೂ ದೆಹಲಿಗೆ ಬರಲಿದ್ದಾರೆ. ಈಗಿನವರು ಮಂತ್ರಿಗಳಾಗಿ ಮೂರು ವರ್ಷ ಕಳೆಯುತ್ತಿದೆ. ನಮಗೂ ಅವಕಾಶ ಕೊಡಿ ಅಂತಾ ಕೇಳ್ತೇವೆ. ಕೇವಲ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತ್ರ ನಾವು ಕೇಳ್ತೇವೆ. ನಾನು ಕೂಡ ಪಕ್ಷದ ಹಿರಿಯ ಶಾಸಕ, ಈ ಹಿಂದೆಯೂ‌ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಮತ್ತೆ ಅವಕಾಶ ಕೇಳ್ತೇನೆ ಎಂದಿದ್ದಾರೆ. ಶಾಸಕ ಅಶೋಕ್ ಪಟ್ಟಣ್ ಮಾತನಾಡಿ ನಮ್ಮದು ಒಂದೇ ಅಜೆಂಡಾ, ಸಂಪುಟ ಪುನರ್ ರಚನೆ ಆಗಬೇಕು. ಎರಡೂವರೆ ವರ್ಷಕ್ಕೆ ಮಾಡ್ತೀವಿ ಎಂದು ಸುರ್ಜೇವಾಲ ಭರವಸೆ ನೀಡಿದ್ದರು. ಮೂರು ವರ್ಷ ಆಗಿದೆ, ನಮಗೂ ಅವಕಾಶ ಸಿಗಬೇಕಿದೆ ಎಂದಿದ್ದಾರೆ.

ಸಂಪುಟ ಪುನಾರಚನೆಗೆ ಒಂದು ತಂಡ ಹೈಕಮಾಂಡ್​ ನಾಯಕರ ಮೇಲೆ ಒತ್ತಡ ಹೇರಲು ಮುಂದಾಗ್ತಿದ್ದ ಹಾಗೆ ಮತ್ತೊಂದು ತಂಡ ಡಿಸಿಎಂ ಡಿ.ಕೆ ಶಿವಕುಮಾರ್​​ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಆಗ್ರಹ ಮಾಡಲು ಸಜ್ಜಾಗುತ್ತಿದೆ. ಮಾಗಡಿ ಶಾಸಕ ಹೆಚ್​.ಸಿ ಬಾಲಕೃಷ್ಣ ಈಗಾಗಲೇ ಹೈಕಮಾಂಡ್​ ನಾಯಕರ ಮೇಲೆ ಒತ್ತಡ ಹೇರುವ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಹೊಸದಾಗಿ ಆಯ್ಕೆ ಆಗಿರುವ ನೂತನ ಶಾಸಕರಿಗೂ ಸಚಿವ ಸ್ಥಾನ ಕೊಡಬೇಕು ಅನ್ನೋ ಆಗ್ರಹವನ್ನು ಮಂಡ್ಯ ಶಾಸಕ ಗಣಿಗ ರವಿಕುಮಾರ್​ ಮಾಡಿದ್ದಾರೆ. ಒಟ್ಟಾರೆ ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್​​ ಬಣದ ನಾಯಕರು ಬೇರೆ ಬೇರೆ ಮಾರ್ಗದಲ್ಲಿ ರಾಜಕೀಯ ಶುರು ಮಾಡಿದ್ದಾರೆ.

ಇದೀಗ ಕಾಂಗ್ರೆಸ್​ ಹೈಕಮಾಂಡ್​ ನಾಯಕರು ಉಪಚುನಾವಣೆ ನೆಪದಲ್ಲಿ ಮೇ ತನಕ ಕಾಲ ಮುಂದೂಡಿದ್ದಾರೆ. ಆ ಬಳಿಕ ಬಂಡಾಯ ಹೆಚ್ಚಾಗುವ ಸಾಧ್ಯತೆಯಿದ್ದು, ಸಂಪುಟ ಪುನಾರಚನೆಗೆ ಅವಕಾಶ ನೀಡಿದರೆ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಇಲ್ಲ ಅನ್ನೋ ಸಂದೇಶ ಸಿಗಲಿದೆ. ಒಂದು ವೇಳೆ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಮಾಡುವ ಇಚ್ಛೆ ಇದ್ದರೆ ಸಂಪುಟ ಪುನಾರಚನೆಗೆ ಹೈಕಮಾಂಡ್​ ಅವಕಾಶ ನೀಡುವುದಿಲ್ಲ. ಒಟ್ಟಾರೆ, ಎರಡೂವರೆ ವರ್ಷದಿಂದ ರಾಜಕೀಯ ಚರ್ಚೆಗಳು ಶುರುವಾಗಿದ್ದು, ಹೈಕಮಾಂಡ್​ ದಿದೂಡುವ ಕೆಲಸ ಮಾಡುತ್ತಿದೆ. ಇದಿಗ ನಿರ್ಣಾಯಕ ಕಾಲಘಟ್ಟಕ್ಕೆ ಬಂದು ನಿಂತಿದ್ದು, ಮುಂದಿನ ನಿರ್ಧಾರ ಏನು ಅನ್ನೋದು ಶೀಘ್ರದಲ್ಲೇ ಹೊರ ಬೀಳಲಿದೆ. ಸೂಕ್ತ ದಾರಿ ಹುಡುಕದಿದ್ದರೆ ಸರ್ಕಾರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.

Related posts

ಮಾಜಿ ಮಿನಿಸ್ಟರ್​ ರಾಜಣ್ಣ.. ಮತ್ತು ಆ ಮೂರು ತಪ್ಪುಗಳು.. ಡಿಕೆಶಿಗೆ ಕೈ ಜೋಡಿಸಿದ್ರಾ ಸಿಎಂ..?

Publicspot

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆಸಿದ ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು:

admin

CM Finally; ಸಿಎಂ ಆಗಲು ಪಟ್ಟು ಹಿಡಿದು ಕುಳಿತ ಡಿ.ಕೆ ಶಿವಕುಮಾರ್​.. ಶಕ್ತಿ ವೃದ್ಧಿಗೆ ಸರ್ಕಸ್​..

Publicspot

ಚುನಾವಣೆಯಲ್ಲಿ ಮುಸ್ಲಿಮರಿಗೇ ಟಿಕೆಟ್‌ ಕೊಡ್ಬೇಕು ಎಂದು ಆಗ್ರಹ..

Publicspot

Congress Protest Vote Chori; ಮತಗಳ್ಳತನ ವಿರುದ್ಧ ಕಾಂಗ್ರೆಸ್‌ ತೀವ್ರ ಹೋರಾಟ..

Publicspot

Vachana VV ‘ಪುರೋಹಿತ ಶಾಹಿಗಳು ಶರಣರನ್ನು ಕೊಂದರು.. ಬಲಿದಾನಕ್ಕೆ ವಚನ ವಿವಿ ಸ್ಥಾಪಿಸಿ’

Publicspot