The Public Spot
ರಾಜಕೀಯ

ಅಧಿಕಾರ ಹಸ್ತಾಂತರ ಬೆನ್ನಲ್ಲೇ ದಲಿತ ನಾಯಕರ ಒಗ್ಗಟ್ಟು.. ಯಾರು ಏನಂದ್ರು..?

ರಾಜ್ಯ ಸರ್ಕಾರದ ನಾಯಕತ್ವ ಬದಲಾಗುವ ನಿರೀಕ್ಷೆಗಳ ನಡುವೆ ದಲಿತ ಸಮುದಾಯದ ಸಚಿವರು ಒಟ್ಟಿಗೆ ಸೇರಿ ಚರ್ಚೆ ನಡೆಸುತ್ತಿದ್ದಾರೆ, ನಡೆಸಲಿದ್ದಾರೆ. ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಮಾಜಿ ಸಚಿವ ಕೆ.ಎನ್​ ರಾಜಣ್ಣ ಮನೆಗೆ ಊಟಕ್ಕೆ ಹೋಗೋದ್ರಲ್ಲಿ ವಿಶೇಷ ಏನಿದೆ..? ಎಂದಿದ್ದಾರೆ. ನಾಯಕತ್ವ ಬದಲಾವಣೆ ವಿಚಾರ ಪದೇ ಪದೇ ಅದನ್ನೇ ಕೇಳಿದರೆ ನಾವು ಏನು ಉತ್ತರ ಕೊಡೋದು..? ಯಾವುದನ್ನೂ ನಾವು ನಿರ್ಧಾರ ಮಾಡಲು ಆಗುವುದಿಲ್ಲ. ನೀವು ಬಂದು ಕೇಳಿದಾಗ ನಾನಾದರೂ ಏನು ಮಾಡಬೇಕು..? ಎಲ್ಲ ನಾಯಕರದ್ದೂ ಇದೇ ಪರಿಸ್ಥಿತಿಯಾಗಿದೆ ಎಂದಿದ್ದಾರೆ.

ನೀವು ಬಂದು ನಾಯಕತ್ವ ಬದಲಾವಣೆ ಬಗ್ಗೆ ಕೇಳಿದಾಗ ನಾವು ಓಡಿ ಹೋಗಲು ಆಗಲ್ಲ. ಕೇಳುವವರೂ ನೀವೇ, ಹೇಳುವವರು ನೀವೇ..! ಒಂದು ಸುಳ್ಳು ಹೇಳಿದರೆ ಹತ್ತು ಸುಳ್ಳು ಹೇಳಬೇಕು. ಸಂಪುಟ ಪುನಾರಚನೆ ನನ್ನ ವ್ಯಾಪ್ತಿಗೆ ಬರುವುದೇ ಇಲ್ಲ. ನಾನೂ ಒಬ್ಬ ಮಂತ್ರಿ ನಾನೂ ಒಬ್ಬ ಪಕ್ಷದ ಭಾಗ ಅಷ್ಟೇ ಎಂದಿದ್ದಾರೆ ಸಚಿವ ಸತೀಶ್ ಜಾರಕಿಹೊಳಿ. ರಾಜಣ್ಣ ಮನೆಗೆ ಊಟಕ್ಕೆ ಹೋಗೋದ್ರಲ್ಲಿ ವಿಶೇಷ ಏನಿದೆ..? ನಾಯಕತ್ವ ಬದಲಾವಣೆ ವಿಚಾರ ಪದೇ ಪದೇ ಅದನ್ನೇ ಕೇಳಿದರೆ ನಾವು ಏನು ಉತ್ತರ ಕೊಡೋದು..? ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಆದರೆ ರಾಜಣ್ಣ ಮನೆಯಲ್ಲಿ ಸೇರಿದ್ದ ವಿಚಾರವಾಗಿ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

ಇನ್ನು ಸಚಿವ ದಿನೇಶ್ ಗುಂಡೂರಾವ್ ದೆಹಲಿಗೆ ಹೋಗಿ ಬಂದಿರೋ ವಿಚಾರವಾಗಿ ಸ್ಪಷ್ಟನೆ ನೀಡಿದ್ದು, ಕಾರ್ಯಕ್ರಮದ ನಿಮಿತ್ತ ದೆಹಲಿಗೆ ಹೋಗಿದ್ವಿ. ಹಲವಾರು ಭಾರಿ ದೆಹಲಿ ಭೇಟಿ ನೀಡಿದ್ದೇವೆ. ಆದ್ರೆ ಈ ಭಾರಿ ಸುದ್ದಿ ಆಗಿದೆ. ಶೇಕಡ 95ರಷ್ಟು ಶಾಸಕರು ಹೈಕಮಾಂಡ್ ಸೂಚನೆಯಂತೆ ನಡೆಯುತ್ತೇವೆ. ಈಗ ಸಿದ್ದರಾಮಯ್ಯ ಸಿಎಂ ಇದ್ದಾರೆ. ಅವರು ಇರುವಾಗ ಮತ್ತೊಂದು ಸಿಎಂ ಹಾಗೂ ಅಧಿಕಾರ ಹಂಚಿಕೆ ವಿಚಾರ ಚರ್ಚೆ ಅನಾವಶ್ಯಕ ಎಂದಿದ್ದಾರೆ. ಈ ಮೂಲಕ ಕಾಂಗ್ರೆಸ್​ ಹೈಕಮಾಂಡ್​ ಏನು ಹೇಳುತ್ತೆ ಅದನ್ನು ಶಾಸಕರು ಚಾಚೂತಪ್ಪದೆ ಪಾಲಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೆ‌ಎನ್ ರಾಜಣ್ಣ ನಿವಾಸದಲ್ಲಿ‌ ಔತಣಕೂಟ ವಿಚಾರವಾಗಿ ಗೃಹ ಸಚಿವ ಡಾ ಜಿ. ಪರಮೇಶ್ವರ್​ ಪ್ರತಿಕ್ರಿಯೆ ನೀಡಿದ್ದು, ಔತಣಕೂಟ ಯಾವುದು ಇಲ್ಲ, ಅವರ ಮನೆ ಹೈವೇ ಪಕ್ಕದಲ್ಲಿಯೇ ಇದೆ. ಪ್ರತಿಸಲ ಊಟಕ್ಕೆ ಕರೆಯುತ್ತಾರೆ. ಅದೇ ರೀತಿ ಸಲನೂ ಅವರು ಕರೆದಿದ್ದಾರೆ. ಅದಕ್ಕೆ ನಾವು ಬರ್ತೇವೆ ಅಂದಿದ್ದೇವೆ. ಸಹಜವಾಗಿ ಊಟಕ್ಕೆ ಕರೆದಿದ್ದಾರೆ. ಅದಕ್ಕೆ ಎಲ್ಲರೂ ಹೋಗ್ತೇವೆ ಎಂದಿದ್ದಾರೆ. ಇನ್ನು ನಿನ್ನೆ ಸಚಿವ ಮಹದೇವಪ್ಪ ಜೊತೆಗೆ ಪ್ರತ್ಯೇಕ ಸಭೆ ವಿಚಾರವಾಗಿ ಮಾತನಾಡಿ, ನಿನ್ನೆ ಸಿಎಂ ಮೀಟಿಂಗ್ ಕರೆದಿದ್ರು ಅದು ಲೇಟಾಯ್ತು, 4 ಗಂಟೆಗೆ ಬನ್ನಿ ಅಂತಾ ಸಿಎಂ ಅಂದ್ರು. ಮಹದೇವಪ್ಪದು ನಂದು ಅಕ್ಕಪಕ್ಕ ಚೇಂಬರ್, ಅದಕ್ಕೆ‌ ಅಲ್ಲಿಯೇ ಇದ್ದು ಊಟ ಮಾಡಿದ್ವಿ ಅಷ್ಟೆ. ಒಳ್ಳೆ ಮುದ್ದೆ ಊಟ ಮಾಡಿದ್ವು ಎಂದಿದ್ದಾರೆ.

Related posts

ನಾನು ಹಣ ಆಸ್ತಿ ಹಿಂದೆ ಎಂದೂ ಹೋಗಲಿಲ್ಲ..! – ಸಿಎಂ ಸಿದ್ದರಾಮಯ್ಯ

Publicspot

ಮಾಜಿ ಮಿನಿಸ್ಟರ್​ ರಾಜಣ್ಣ.. ಮತ್ತು ಆ ಮೂರು ತಪ್ಪುಗಳು.. ಡಿಕೆಶಿಗೆ ಕೈ ಜೋಡಿಸಿದ್ರಾ ಸಿಎಂ..?

Publicspot

ಮುಂದಿನ ಮುಖ್ಯಮಂತ್ರಿ ಯಾರು..? ಕಾಂಗ್ರೆಸ್‌ ನಾಯಕರೇ ಕುಮಾರಣ್ಣ ಎಂದಿದ್ಯಾಕೆ..?

Publicspot

ನಾನೊಬ್ಬನೇ ಸಿಎಂ ಆಗ್ಬೇಕು ಅಂತ ದೇವರು ಬರೆದಿದ್ದಾನಾ..? ತಪ್ಪಲ್ವಾ..? ಸಿಎಂ ಪ್ರಶ್ನೆ..

Publicspot

CM Finally; ಸಿಎಂ ಆಗಲು ಪಟ್ಟು ಹಿಡಿದು ಕುಳಿತ ಡಿ.ಕೆ ಶಿವಕುಮಾರ್​.. ಶಕ್ತಿ ವೃದ್ಧಿಗೆ ಸರ್ಕಸ್​..

Publicspot

ಸತ್ಯ ಹೇಳಿದ್ದಕ್ಕೆ ಸಚಿವ ಸ್ಥಾನ ಕಿತ್ಕೊಳ್ತಾ ಕಾಂಗ್ರೆಸ್​ ಹೈಕಮಾಂಡ್​..?

Publicspot