September 14, 2026
The Public Spot
ಅಪರಾಧ

ಜಾರ್ಖಂಡ್​ ಮೂಲದ ಯುವತಿಯ ಬೆತ್ತಲೆ ದೇಹ ಪತ್ತೆ..! ಕೊಲೆ ಶಂಕೆ..

ಬೆಂಗಳೂರಿನ ಆಡುಗೋಡಿಯ ಮುನಿಕೃಷ್ಣಪ್ಪ ಲೇಔಟ್​ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ 34 ವರ್ಷದ ಪೂಜಾ ದತ್ತಾ ಎಂಬ ಯುವತಿ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದಾರೆ. ಜಾರ್ಖಂಡ್ ಮೂಲದ ಪೂಜಾ ದತ್ತಾ, ಕಳೆದ ಎರಡೂವರೆ ವರ್ಷದಿಂದ ಆಡುಗೋಡಿಯಲ್ಲಿ ಏಕಾಂಗಿಯಾಗಿ ವಾಸವಿದ್ದರು. ಈ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪೂಜಾ ದತ್ತಾ, ಇತ್ತೀಚಿಗೆ ಎಲ್ಲಿಯೂ ಕೆಲಸ ಮಾಡುತ್ತಿರಲಿಲ್ಲ ಎನ್ನಲಾಗಿದೆ. ಆಡುಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾಗ, ಪೂಜಾ ದತ್ತಾ ಮೃತದೇಹ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳದಲ್ಲೇ ಖಾಸಗಿ ಕಂಪನಿಯ ಐ.ಡಿ ಕೂಡ ಕಾರ್ಡ್ ಪತ್ತೆಯಾಗಿದೆ.

ಮನೆಯ ತುಂಬಾ ಹರಿದು ಬಿಸಾಡಿರುವ ಪೇಪರ್​ಗಳು ಪತ್ತೆಯಾಗಿದ್ದು, ಎರಡ್ಮೂರು ದಿನಗಳ ಹಿಂದೆ‌ ಸಾವನ್ನಪ್ಪಿರಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರೋ ಯುವತಿಯ ಮೃತದೇಹ ಅಕ್ಕಪಕ್ಕದ ಮನೆಯವರಿಗೆ ವಾಸನೆ ಬಂದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಆಡುಗೋಡಿ ಪೊಲೀಸರು, ಯುವತಿಯ ನಿಗೂಢ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪೂಜಾ ದತ್ತಾ ಕೈ ಮತ್ತು ಕುತ್ತಿಗೆ ಬಳಿ ಗಾಯದ ಗುರುತು ಪತ್ತೆಯಾಗಿದ್ದು, ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಪ್ರಶ್ನೆ ಮೂಡಿದೆ.

ಪ್ರೇಮ ವೈಫಲ್ಯದಿಂದ ಪೂಜಾ ದತ್ತಾ ಡಿಪ್ರೆಶನ್​ನಲ್ಲಿ ಇದ್ದಳಾ..? ಅನ್ನೋ ಶಂಕೆಯೂ ವ್ಯಕ್ತವಾಗಿದೆ. ಡ್ರಾಯಿಂಗ್ ಪೇಪರ್​ನಲ್ಲಿ ಯುವಕನ ಹೆಸರು ಬರೆದಿಟ್ಟಿರುವುದು ಪತ್ತೆಯಾಗಿದೆ. ಯುವತಿ ಸ್ನೇಹಿತರು, ಪೋಷಕರ ಮಾಹಿತಿ ಕಲೆ ಹಾಕಲು ಆಡುಗೋಡಿ ಪೊಲೀಸರು ಮುಂದಾಗಿದ್ದಾರೆ. ಆದರೆ ಪೂಜಾ ದತ್ತ ಪೋಷಕರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಜಾರ್ಖಂಡ್​ನಲ್ಲಿರೋ ಪೋಷಕರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಸದ್ಯ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿರೋ ಪೂಜಾ ಮೃತದೇಹವನ್ನು ಕುಟುಂಬಸ್ಥರು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ. ಈ ನಡುವೆ ಮನೆ ಮಾಲೀಕರ ಹೇಳಿಕೆಯಂತೆ ಪೂಜಾ ಮನೆಗೆ ಬಂದು ಹೋಗ್ತಿದ್ದ ಹುಡುಗರ ಪತ್ತೆಗೂ ಪೊಲೀಸರು ಮುಂದಾಗಿದ್ದಾರೆ.

    2025 ರಲ್ಲಿಯೇ ಕೆಲಸ ಬಿಟ್ಟಿದ್ದ ಟೆಕ್ಕಿ ಪೂಜಾ ದತ್ತಾ, ಆ ಬಳಿಕ ಎಲ್ಲಿ ಕೆಲಸ ಮಾಡುತ್ತಿದ್ದಳು ಅನ್ನೋ ಮಾಹಿತಿ ಇಲ್ಲ. ಸದ್ಯ ಮನೆ ಮಾಲೀಕರು ಸೇರಿದಂತೆ ಹಲವರನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಪೂಜಾ ಮನೆಗೆ ಬಂದು ಹುಡುಗರು ಬಂದು ಹೋಗ್ತಿದ್ರು ಎಂದು ಮನೆ ಮಾಲಕಿ ಜಾನಕಮ್ಮ ಮಾಹಿತಿ ನೀಡಿದ್ದಾರೆ. ಸಮೀಪದ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಗುರುವಾರ ನಾನು ಮಾತಾಡಿಸಿದ್ದೆ. ಆ ನಂತರ ಕಾಣಿಸಿರಲಿಲ್ಲ. ಒಬ್ಬಳೇ ಎರಡೂವರೆ ವರ್ಷದಿಂದ ವಾಸವಾಗಿದ್ರು. ಅವರ ಮನೆಗೆ ಕೆಲವು ಹುಡುಗರು ಬರ್ತಾ ಇದ್ರು. ಅವರ ಜೊತೆ ಜೋರಾಗಿ ಮಾತಾಡ್ತಿದ್ರು. ಅಮೇಲೆ ಏನಾಯ್ತೊ ಗೊತ್ತಿಲ್ಲ. ಇವತ್ತು ಪಕ್ಕದ ಮನೆಯವರು ವಾಸನೆ ಬರ್ತಿದೆ ಅಂದ್ರು. ಆ ನಾವು ಹೋಗಿ ನೋಡಿದಾಗ ಕೆಟ್ಟ ವಾಸನೆ ಇತ್ತು. ಆ ನಂತರ ಪೊಲೀಸರಿಗೆ ಪೋನ್ ಮಾಡಿ ಹೇಳಿದ್ದೇವೆ ಅಷ್ಟೆ ಎಂದಿದ್ದಾರೆ.

    Related posts

    Mahesh Thimarodi Arrest: ಮಹೇಶ್‌ ತಿಮರೋಡಿ ಅರೆಸ್ಟ್‌.. ಕಾರಣ ಏನು ಗೊತ್ತಾ..?

    Publicspot

    Hassan Tragedy most of the Students Deaths: ಹಾಸನ‌ ದುರಂತದಲ್ಲಿ ಸತ್ತವರೆಲ್ಲಾ ಸ್ಟೂಡೆಂಟ್ಸ್​.. ಯಾಕೆ..?

    Publicspot

    Mahesh Thimarodi house search: ತಿಮರೋಡಿ ಮನೆ ಮೇಲಿನ ದಾಳಿ.. ಪರಮೇಶ್ವರ್​ ಏನಂದ್ರು..?

    Publicspot

    ಡಾಕ್ಟರ್​ ಕೊಲೆಗಾರ ಆಗಿದ್ದು ಸತ್ಯನಾ..? 12 ವರ್ಷ ನರಳಿದ ನತದೃಷ್ಟ ಹೆಣ್ಣು

    Publicspot

    ಬಡ್ಡಿ ಕೊಡೋಕೆ ಆಗದೆ ಕೊಲೆ ಮಾಡೋಕೆ ಸ್ಕೆಚ್​.. ಆರೋಪಿಗಳು ಸಿಕ್ಕಿ ಬಿದ್ದಿದ್ಹೇಗೆ..?

    Publicspot

    ಕೋರ್ಟ್​ನಲ್ಲಿ ಇಂದಿನಿಂದ ದರ್ಶನ್​ ಕೊಲೆ ಕೇಸ್​ ವಿಚಾರಣೆ!!

    Publicspot