The Public Spot
ಅಪರಾಧ

Birthday party; ಹುಟ್ಟು ಹಬ್ಬದ ಪಾರ್ಟಿಯಲ್ಲಿ ಬಿಲ್ ಪೇ ಘರ್ಷಣೆ.. ಕೊಲೆಯಲ್ಲಿ ಅಂತ್ಯ..

ಬರ್ತ್ ಡೇ ಪಾರ್ಟಿ ಬಿಲ್‌ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸ್ನೇಹಿತರಿಂದಲೇ ಬರ್ತ್ ಡೇ ಬಾಯ್ ಕೊಲೆಯಾಗಿದ್ದಾನೆ. ಹಾರಗದ್ದೆ ವಡ್ಡರಪಾಳ್ಯ ನಿವಾಸಿ 23 ವರ್ಷದ ಸಂದೀಪ್ ಕೊಲೆಯಾದ ಯುವಕ. ಜಿಗಣಿ ಪೋಲೀಸ್ ಠಾಣಾ ವ್ಯಾಪ್ತಿಯ ವಡ್ಡರಪಾಳ್ಯದಲ್ಲಿ ಘಟನೆ ನಡೆದಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹಾರಗದ್ದೆ ವಡ್ಡರಪಾಳ್ಯದಲ್ಲಿ ಇದೇ ತಿಂಗಳು 16ನೇ ತಾರೀಖು ಮೃತ ಸಂದೀಪ್ ಬರ್ತ್ ಡೇ ಇತ್ತು. ಬರ್ತ್​ ಡೇ ಪಾರ್ಟಿ ಮಾಡಲು ಸ್ನೇಹಿತರನ್ನು ಬಾರ್​ಗೆ ಕರೆದುಕೊಂಡು ಹೋಗಿದ್ದ ಸಂದೀಪ್.

ಸ್ನೇಹಿತರ ಜೊತೆಯಲ್ಲಿ ಕುಡಿದು ತಿಂದು ಪಾರ್ಟಿ ಮುಗಿಸಿ ಮೊದಲು ಬಿಲ್ ಕಟ್ಟಿದ್ದ ಯುವಕ ಸಂದೀಪ್. ಆ ಬಳಿಕ ಮತ್ತೆ ಪಾರ್ಟಿ ಕಂಟಿನ್ಯೂ ಮಾಡಿದ ಸ್ನೇಹಿತರು ಎರಡನೇ ಸಲ‌ ಮತ್ತೆ ಬಿಲ್‌ ಕಟ್ಟುವಂತೆ ಒತ್ತಾಯಿಸಿದ್ದರು. ಆದರೆ ನನ್ನ ಬಳಿ ಹಣ ಇಲ್ಲ ಎಂದಿದ್ದಕ್ಕೆ ಬಾರ್ ಬಳಿ ಗಲಾಟೆ ಮಾಡಿದ್ದ ಯುವಕ ಸಂತೋಷ್. ಆ ನಂತರ ಬೇಸರಗೊಂಡು ಬರ್ತ್​​ ಡೇ ಬಾಯ್​ ಸಂದೀಪ್ ವಾಪಸ್‌ ಊರಿಗೆ ಬಂದಿದ್ದ. ಅಷ್ಟಕ್ಕೇ ಸುಮ್ಮನಾಗದ ಹುಡುಗರು, ಊರಿನ ವಾಲಿಬಾಲ್ ಕೋರ್ಟ್ ಬಳಿಗೆ ಕರೆಸಿಕೊಂಡು ಹಲ್ಲೆ ಮಾಡಿದ್ದರು.

ಪಾರ್ಟಿಯಲ್ಲಿ ಭಾಗಿಯಾಗಿದ್ದ ಸಹೋದರರಾದ ಸಂತೋಷ್ ಹಾಗು ಸಾಗರ್ ಎಂಬುವರಿಂದ ಹಲ್ಲೆ ನಡೆದಿತ್ತು. ಹಲ್ಲೆ ವೇಳೆ ಸಂದೀಪ್ ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೂರು ದಿನದ ನಂತರ ಸಂದೀಪ್ ಬ್ರೈನ್​ನಲ್ಲಿ ಬ್ಲಡ್ ಕ್ಲಾಟ್ ಆಗಿ ಸಾವು ಸಂಭವಿಸಿದೆ. ಗಲಾಟೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪೋಷಕರು ಖಾಸಗಿ ಆಸ್ಪತ್ರೆ ಗೆ ದಾಖಲು ಮಾಡಿಸಿದ್ದರು. ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ಕೋಮಾದಲ್ಲಿ ಇದ್ದ ಸಂದೀಪ್, ಎರಡು ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಜಿಗಣಿ ಪೊಲೀಸರು ಆರೋಪಿಗಳಾದ ಸಂತೋಷ್ ಹಾಗೂ ಸಾಗರ್​​ನನ್ನು ಅರೆಸ್ಟ್ ಮಾಡಿದ್ದಾರೆ.

Related posts

ಬಂಗಾರ ಮನೆಯಲ್ಲಿ ಇದ್ದರೆ ಸಂಪತ್ತು.. ಮೈಮೇಲಿದ್ದರೆ ಆಪತ್ತು..

Publicspot

PG, Sexual Assult: ಮಹಿಳಾ ಪಿಜಿಗೆ ಕಳ್ಳತನಕ್ಕೆ ಬಂದವನಿಂದ ಲೈಂಗಿಕ ದೌರ್ಜನ್ಯ..

Publicspot

ಪ್ರೀತಿಯಲ್ಲಿ ಮುಳುಗಿದ್ದವಳು ಮದುವೆ ಆಗಿ ಮಾಡಿದ ಎಡವಟ್ಟು.. ಎರಡು ಸಾವು

Publicspot

Accident Murder: ರಸ್ತೆಯಲ್ಲಿ ಗಲಾಟೆ.. ಕಾರಿನಲ್ಲಿ ಗುದ್ದಿಸಿ ಕೊಲೆ ಮಾಡಿದ ದಂಪತಿ..

Publicspot

Jail Video Case; ಮೊಬೈಲ್​ ಬಳಕೆಗೆ ಅವಕಾಶ ಕೊಟ್ಟವರು ಅಲ್ಲ.. ವಿಡಿಯೋ ಮಾಡಿದವರ ಟಾರ್ಗೆಟ್..

Publicspot

ಪೊಲೀಸರೇ ಕಳ್ಳರಾದಾಗ ನ್ಯಾಯ ಕೇಳೋದು ಯಾರನ್ನು..? ಆಗಿದ್ದೇನು..?

Publicspot