ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಮೂಲದ ಜ್ಯೋತಿಷಿ ಕಮಲಾಕರ ಭಟ್, ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮಠ ಕಟ್ಟಿಕೊಂಡು ವಾಸವಾಗಿದ್ದರು. ದಿನನಿತ್ಯ ಟಿವಿ ಮಾಧ್ಯಮಗಳಲ್ಲಿ ಕುಳಿತು ರಾಜ್ಯದ ಜನರಿಗೆ ಭವಿಷ್ಯ ಹೇಳುತ್ತಿದ್ದರು. ಆದರ ಜೊತೆಗೆ ಸಿದ್ದಾಪುರ ತಾಲೂಕಿನ ಅವರಗುಪ್ಪ ಮೂಲದ ಮಹಿಳೆ ಸುಚಿತ್ರಾ ಎಂಬಾಕೆ ಜೊತೆಗೆ ಆತ್ಮೀಯ ಸ್ನೇಹ ಸಂಬಂಧವಿತ್ತು ಎನ್ನಲಾಗ್ತಿದೆ. 15 ವರ್ಷದ ಹಿಂದೆ ಮಹೇಶ್ ನಾಯ್ಕ್ ಎಂಬುವರನ್ನು ಪ್ರೀತಿಸಿ ಮದ್ವೆಯಾಗಿದ್ದಳು. ದಾಂಪತ್ಯದ ಫಲವಾಗಿ ಮುದ್ದಾದ ಮಕ್ಕಳೂ ಇವೆ. ಈ ನಡುವೆ ಕಮಲಾಕರ ಭಟ್ ಕಣ್ಣಿಗೆ ಬಿದ್ದಿದ್ದು, ಸ್ನೇಹ ಪ್ರೀತಿಗೆ ತಿರುಗಿತ್ತು. ಸುಚಿತ್ರಾ ತನ್ನ ಗಂಡನ ಮನೆಯನ್ನೇ ಬಿಟ್ಟು ಕಮಲಾಕರ ಭಟ್ ಜೊತೆಗೆ ವಾಸ ಮಾಡುತ್ತಿದ್ದಳು ಎನ್ನಲಾಗಿದೆ. ಆ ಬಳಿಕ ನಡೆದ ಗಲಾಟೆಯಲ್ಲಿ ಮಹೇಶ್ ನಾಯ್ಕ್ ಸಹೋದರ ವಸಂತ್ ನಾಯ್ಕ್ ಕೊಲೆ ಮಾಡಲಾಗಿದೆ.


ಅನೈತಿಕ ಸಂಬಂಧಕ್ಕೆ ಕೊಲೆ ನಡೆದ ಬಳಿಕ ಕೊಲೆಪಾತಕರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಎಸ್‌ಪಿ ದೀಪನ್‌ಗೆ ಒತ್ತಾಯ ಮಾಡಿದ್ದಾರೆ. ಸಿದ್ದಾಪುರ ಪೋಲಿಸ್ ಠಾಣೆ ಎದುರು ಜಮಾಯಿಸಿದ ಸ್ಥಳೀಯರು, ಯಾವುದೇ ಪ್ರಭಾವಿ ವ್ಯಕ್ತಿ ಇರಲಿ, ಕಠಿಣ ಕಾನೂನು ಕ್ರಮ ಜರುಗಿಸಲು ಆಗ್ರಹ ಮಾಡಿದ್ದಾರೆ. ಗಂಡನನ್ನ ಕೊಲೆ ಮಾಡಲು ಯತ್ನ ಮಾಡಿದಾಗ ಮದ್ಯವೇಶ ಮಾಡಿದ ಸಹೋದರ ಕೊಲೆ ಮಾಡಲಾಗಿದೆ. ಮೃತ ವಸಂತ ನಾಯ್ಕ್ ಕುಟುಂಬಕ್ಕೆ ಸ್ಥಳದಲ್ಲಿಯೇ ಸೂಕ್ತ ಪರಿಹಾರ ಕೊಡಬೇಕು ಎಂದು ಪ್ರತಿಭಟನೆಕಾರರು ಪಟ್ಟು ಹಿಡಿದಿದ್ದಾರೆ. ಪರಿಹಾರ ಕೊಡುವ ತನಕ ಶವವನ್ನು ನಾವು ಮುಟ್ಟುವದಿಲ್ಲ, ಯಾರಿಗೂ ಮುಟ್ಟಲು ಬಿಡುವುದಿಲ್ಲವೆಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಂಡ ಮಹೇಶ್ ನಾಯ್ಕ್‌ನನ್ನು ಬಿಟ್ಟ ಸುಚಿತ್ರ, ಮಕ್ಕಳನ್ನ ಕರ್ಕೊಂಡು ನಾಲ್ಕೈದು ತಿಂಗಳ ಹಿಂದೆಯೇ ಮನೆ ಬಿಟ್ಟು ಎಸ್ಕೇಪ್ ಆಗಿದ್ದಳು. ಆದರೆ ಮಕ್ಕಳನ್ನ ಕರ್ಕೊಂಡು ಕಮಲಾಕರ ಭಟ್ ಜೊತೆಗೆ ಸೇರಿಕೊಂಡ ಬಳಿಕ ಬೆಂಗಳೂರಲ್ಲಿದ್ದ ಮಹೇಶ್ ನಾಯ್ಕ್, ಅಣ್ಣ ವಸಂತ್ ನಾಯ್ಕ್ ಮನೆಗೆ ಬಂದಿದ್ದರು. ಹುಟ್ಟೂರಿನಲ್ಲೇ ಅಣ್ಣನ ಮನೆಯಲ್ಲೇ ಉಳ್ಕೊಂಡು ಕೆಲಸ ಮಾಡ್ತಿದ್ರು. ಎರಡು ದಿನಗಳ ಹಿಂದೆ ಮಹೇಶ್ ನಾಯ್ಕ್ ಮಗಳು ಸುಮಶ್ರೀ, ಅಪ್ಪನಿಗೆ ಮೆಸೇಜ್ ಮಾಡಿದ್ದಾಳೆ.. ಪ್ಲೀಸ್ ಪಪ್ಪಾ, ನನ್ನನ್ನ ಕರ್ಕೊಂಡು ಹೋಗು. ಮಮ್ಮಿ ನನಗೆ ತುಂಬಾ ಟಾರ್ಚರ್ ಕೊಡ್ತಿದ್ದಾರೆ.. ನನ್ನ ಕರ್ಕೊಂಡು ಹೋಗದಿದ್ರೆ ಸತ್ತೇ ಹೋಗ್ತೀನಿ ಎಂದಿದ್ದಳು.. ಮಗಳ ಮೆಸೇಜ್ ನೋಡಿದ ಮಹೇಶ್, ಬಸ್ ಹತ್ಕೊಂಡು ಸಿದ್ದಾಪುರಕ್ಕೆ ಬಂದ್ಬಿಡು. ನಾನೇ ನಿನ್ನನ್ನು ಕರ್ಕೊಂಡು ಹೋಗ್ತೀನಿ ಎಂದಿದ್ದರು. ಹೀಗಾಗಿ ತಾಯಿಗೆ ಹೇಳದೆ ಕೇಳದೆ ಸುಮಶ್ರೀ ಅಪ್ಪನ ಮನೆಗೆ ಓಡಿ ಬಂದಿದ್ದಳು.


ಮಗಳು ಊರಿಗೆ ಬರ್ತಿದ್ದಂತೆ ನೇರವಾಗಿ ಸಿದ್ದಾಪುರ ಪೊಲೀಸ್ ಸ್ಟೇಷನ್‌ಗೆ ಕರ್ಕೊಂಡು ಹೋದ ತಂದೆ ಮಹೇಶ್ ನಾಯ್ಕ್, ತನ್ನ ಪತ್ನಿ ಕೊಟ್ಟ ಕಾಟದ ಬಗ್ಗೆ ಎಳೆ ಎಳೆಯಾಗಿ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದರು. ಪೊಲೀಸ್ರ ಸೂಚನೆ ಮೇರೆಗೆ ಶಿರಸಿಯ ಮಕ್ಕಳ ಕಲ್ಯಾಣ ಅಧಿಕಾರಿಗಳ ಎದುರು ಹಾಜರುಪಡಿಸಿದ್ರು. ಗುರುವಾರ ಬರೋದಕ್ಕೆ ಹೇಳಿದ್ರಿಂದ ಮಗಳನ್ನ ಕರ್ಕೊಂಡು ತಮ್ಮ ಮನೆಗೆ ವಾಪಸ್ ಆಗಿದ್ದರು. ಈ ವಿಚಾರ ಸುಚಿತ್ರಾಗೂ ಗೊತ್ತಾಗಿತ್ತು. ನಮ್ಮ ಮೇಲೆಯೇ ದೂರು ಕೊಡ್ತಿದ್ದಾರೆ ಅಂತಾ ಸಿಡಿದೆದ್ದ ಸುಚಿತ್ರಾ, ಸಿಡಿಮಿಡಿಗೊಂಡು ಇವರಿಗೊಂದು ಗತಿ ಕಾಣಿಸ್ಬೇಕು ಅನ್ನೋ ಪ್ಲ್ಯಾನ್ ಮಾಡಿದ್ದಳು. ಗ್ಯಾಂಗ್ ಕಟ್ಕೊಂಡು ಬಂದವಳು ಸೀದಾ ಗಂಡನ ಮನೆಗೆ ನುಗ್ಗಿದ್ದಳು. ಮಹೇಶ್ ನಾಯ್ಕ್‌ನನ್ನ ಮುಗಿಸಬೇಕು ಅಂತಾ ಸಿಕ್ಕಸಿಕ್ಕವ್ರ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಅಡ್ಡ ಬಂದ ವಸಂತ್ ನಾಯ್ಕ್ ಮೇಲೆ ದಾಳಿ ಮಾಡಿದ್ರಿಂದ ಅಲ್ಲೇ ಕುಸಿದು ಬಿದ್ದಿದ್ದು, ಯಾವಾಗ ಮಹೇಶ್ ನಾಯ್ಕ್ ಅಣ್ಣ ವಸಂತ್ ನಾಯ್ಕ್ ರಕ್ತದ ಮಡುವಲ್ಲಿ ಬಿದ್ದ ಕೂಡಲೇ ಅಲ್ಲಿಂದ ಎಲ್ಲರೂ ಕಾಲ್ಕಿತ್ತಿದ್ದರು.. ಪೊಲೀಸ್ರು ಸುಚಿತ್ರ, ಆಕೆಯ ತಂದೆ ಹಾಗೂ ಕಮಲಾಕರ ಭಟ್ ಸೇರಿದಂತೆ ಏಳು ಮಂದಿಯನ್ನ ಅರೆಸ್ಟ್ ಮಾಡಿದ್ದಾರೆ.

ಆದರೆ ಈ ಕೊಲೆ ಕೇಸ್‌ನಲ್ಲಿ ಕಮಲಾಕರ್ ಭಟ್ ಸಿಕ್ಕಿ ಬಿದ್ದಿದ್ದು ಹೇಗೆ ಅನ್ನೋದು ಎಲ್ಲರನ್ನೂ ಕಾಡುತ್ತಿರುವ ಏಕೈಕ ಪ್ರಶ್ನೆ. ಕಮಲಾಕರ್ ಭಟ್ ಮಾಹಿತಿ ಪ್ರಕಾರ ಘಟನಾ ಸ್ಥಳಕ್ಕೆ ಹೋಗಿಯೇ ಇಲ್ಲ. ಆದರೆ ಸುಚಿತ್ರಾ ಕಮಲಾಕರ್ ಭಟ್ ಜೊತೆಗೆ ಇದ್ದ ವಿಚಾರ ತಿಳಿದ ಪೊಲೀಸರು ಆತನನ್ನೂ ಕರೆ ಮಾಡಿ ಕರೆಸಿದ್ದಾರೆ ಎನ್ನಲಾಗಿದೆ. ಪೊಲೀಸ್ ಠಾಣೆಗೆ ಬಂದ ಕೂಡಲೇ ಸ್ಥಳೀಯರು ಕಮಲಾಕರ್ ಭಟ್ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಕಮಲಾಕರ್ ಭಟ್ ಬಂಧನಕ್ಕೆ ಪೊಲೀಸರ ಬಳಿ ಇರುವ ಸಾಕ್ಷ್ಯ ಏನು..? ಗಲಾಟೆಗೂ ಕೊಲೆಗೂ ಕಮಲಾಕರ್ ಭಟ್‌ಗೆ ಲಿಂಕ್ ಇದ್ಯಾ..? ಅನ್ನೋ ಬಗ್ಗೆ ಇನ್ನಷ್ಟೇ ಮಾಹಿತಿ ಹೊರ ಬೀಳಬೇಕಿದೆ. ನನ್ನ ಹೆಂಡತಿಗೆ ದೀಪು ಎನ್ನುವನ ಜೊತೆಗೆ ಸಂಬಂಧವಿತ್ತು. ಈ ನಡುವೆ ಕಳೆದ 5 ತಿಂಗಳಿಂದ ಜೋತಿಷಿ ಚಂದ್ರಶೇಖರ್ ಎಂಬುವನ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಗಂಡ ಮಹೇಶ್ ನಾಯ್ಕ್ ತಿಳಿಸಿದ್ದಾರೆ. ಕೋರ್ಟ್‌ನಲ್ಲಿ ಈ ಎಲ್ಲಾ ವಿಚಾರಗಳು ಹೊರಬಿದ್ದ ಬಳಿಕ ಕಮಲಾಕರ್ ಭಟ್ ಭವಿಷ್ಯ ಹೊರ ಬೀಳಲಿದೆ. ಆದರೆ ಕಮಲಾಕರ್ ಭಟ್ ಮಹಿಳೆ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದು, ತಪ್ಪೇ ಎಂದರೆ ಕಾನೂನು ಪ್ರಕಾರ ತಪ್ಪಲ್ಲ. ನೈತಿಕತೆ ವಿಚಾರವಾಗಿ ತಪ್ಪು.


