The Public Spot
ಅಪರಾಧ

Minors delivery: ಹೊಟ್ಟೆ ನೋವು ಎಂದ ಶಾಲಾ ಬಾಲಕಿಗೆ ಮಗು ಹುಟ್ಟಿದ್ದೇಗೆ..?

ಶಿವಮೊಗ್ಗ: ಬಾಗಲಕೋಟೆ ಬಳಿಕ ಶಿವಮೊಗ್ಗದಲ್ಲೂ 9ನೇ ತರಗತಿ ಬಾಲಕಿ ಮಗುವಿಗೆ ಜನ್ಮ ನೀಡಿದ ಪ್ರಕರಣ ನಡೆದಿದೆ. 15 ವರ್ಷದ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ಹೊಟ್ಟೆ ನೋವಿನ ಕಾರಣಕ್ಕೆ ಶಾಲೆಗೆ ರಜೆ ಹಾಕಿದ್ದ 9ನೇ ತರಗತಿ ಬಾಲಕಿ, ಎರಡು ದಿನದ ಬಳಿಕ ಮನೆಯಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ತಕ್ಷಣವೇ ಆಕೆಯನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಕುಟುಂಬಸ್ಥರು. 7 ತಿಂಗಳಿಗೆ ಮಗು ಜನಿಸಿದ್ದು, ಮಗುವಿನ ತೂಕ 1.8 ಕೆ.ಜಿ ಆಗಿದೆ.

ಬಾಲಕಿ ಹಾಗೂ ಮಗು ಪ್ರಸ್ತುತ ಆರೋಗ್ಯದಿಂದ ಇದ್ದು, ಘಟನೆ ಬೆಳಕಿಗೆ ಬಂದ ಬೆನ್ನಲ್ಲೆ, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಪೊಲೀಸರು ಅಲರ್ಟ್ ಆಗಿದ್ದಾರೆ. ಘಟನೆ ಸಂಬಂಧ ಬಾಲಕಿಯ ವಿಚಾರಣೆ ನಡೆಸಿರುವ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು. ಯಾರು..? ಎನ್ನುವುದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಹೆರಿಗೆ ಆಗಿರುವ ಬಾಲಕಿ ಸಮಿತಿ ಹಾಗೂ ಪೊಲೀಸರ ಮುಂದೆ ಗೊಂದಲಕಾರಿ ಹೇಳಿಕೆ ನೀಡುತ್ತಿದ್ದಾಳೆ. ಬಾಲಕಿಯ ಕೌನ್ಸೆಲಿಂಗ್ ನಡೆಸಿದ ಬಳಿಕ ಹೆಚ್ಚಿನ ವಿಚಾರಣೆ ನಡೆಸಲು ನಿರ್ಧಾರ ಮಾಡಲಾಗಿದೆ. ಇಂದೂ ಕೂಡ ಬಾಲಕಿಯ ಕೌನ್ಸೆಲಿಂಗ್ ನಡೆಸಲಿದ್ದಾರೆ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು. ಬಾಲಕಿ ಹಾಗೂ ಮಗು ಮೇಲೆ ತೀವ್ರ ನಿಗಾ ವಹಿಸಿದ್ದಾರೆ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು.

Related posts

ಬಳ್ಳಾರಿ ಗಲಾಟೆ.. SP ಅಮಾನತು.. ಆತ್ಮಹತ್ಯೆ ಯತ್ನ.. ಸರ್ಕಾರ ಹೇಳಿದ್ದೇನು..?

Publicspot

Ananya Mother: ನಾನು ಸಾಯಲು ಸಿದ್ಧಳಿದ್ದೇನೆ.. ರಸ್ತೆಯಲ್ಲಿ ಬೆತ್ತಲೆ ನಿಲ್ತೇನೆ..!

Publicspot

ಪ್ರೀತಿ ಮಾಡು.. ಇಲ್ಲದಿದ್ರೆ ನೋಡು.. ಇದು ಪ್ರೇಮಿಗಳ ದಿನದ ವಿಶೇಷ..

Publicspot

Darshan File a Case; ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ನಟ ದರ್ಶನ್..

Publicspot

ಕಾನ್ಫಿಡೆಂಟ್‌ ಗ್ರೂಪ್‌ ಮಾಲೀಕನ ಸಾವಿಗೆ ಕಾರಣ ಏನು..? ಅದೂ ಕೂಡ ಈ ರೀತಿ ಸಾವಾ..?

Publicspot

MASK MEN FRIEND: ಅನಾಮಿಕ ಹೇಳ್ತಿರೋದೆಲ್ಲಾ ಸುಳ್ಳಾ..? ಫ್ರೆಂಡ್‌ ಬಿಚ್ಚಿಟ್ಟ ರಹಸ್ಯ

Publicspot