The Public Spot
ರಾಜಕೀಯ

ಚಿಕ್ಕಮಗಳೂರಿನ ಶೃಂಗೇರಿ ಶಾಸಕರು ಯಾರು..? ಮರ ಮತ ಎಣಿಕೆ ಏನಾಯ್ತು..?

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023ರಲ್ಲಿ ನಡೆದಿತ್ತು. ಆಗ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಿಂದ ಕಾಂಗ್ರೆಸ್​​ನ ಡಿ.ಟಿ ರಾಜೇಗೌಡ ಗೆಲುವು ಸಾಧಿಸಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು. ಆದರೆ ಮತ ಎಣಿಕೆಯಲ್ಲಿ ಲೋಪ ಆಗಿದೆ ಎಂದು ಆರೋಪಿಸಿದ್ದ ಬಿಜೆಪಿ ಅಭ್ಯರ್ಥಿ ಡಿ.ಎನ್​ ಜೀವರಾಜ್​ ಹೈಕೋರ್ಟ್​ ಮೆಟ್ಟಿಲೇರಿದ್ದರು. ಪೋಸ್ಟಲ್​ ಮತಗಳನ್ನು ಮರು ಎಣಿಕೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದರು. ಜೀವರಾಜ್​ ವಾದವನ್ನು ಮಾನ್ಯ ಮಾಡಿದ ಹೈಕೋರ್ಟ್​ ಪೋಸ್ಟಲ್​ ಮತಗಳ ಮರು ಎಣಿಗೆ ಆದೇಶ ಮಾಡಿತ್ತು. ಅದರಂತೆ ಶನಿವಾರ ಮರು ಎಣಿಕೆ ಆರಂಭವಾಗಿ ಮಧ್ಯರಾತ್ರಿ ತನಕ ಹೈಡ್ರಾಮವೇ ನಡೆದಿತ್ತು.

ಬೆಳಗ್ಗಿನ ಜಾವ ಸುದ್ದಿಗೋಷ್ಟಿ ನಡೆಸಿದ ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದ್ದು, ಏಪ್ರಿಲ್ 6 ರಂದು ಹೈಕೋರ್ಟ್ ತೀರ್ಪು ಕೊಟ್ಟಿದ್ದು, ಆ ತೀರ್ಪಿನ ಪ್ರಕಾರ ಮರು ಪರಿಶೀಲನೆ, ಮರು ಎಣಿಕೆ ಮಾಡಲಾಗಿದೆ. ಸಂಪೂರ್ಣ ಹೈಕೋರ್ಟ್ ಆದೇಶದಂತೆ ಮಾಡಲಾಗಿದೆ. ತೀರ್ಪು ಘೋಷಣೆ ಮಾಡುವಂತೆ ಹೈಕೋರ್ಟ್ ಆದೇಶದಲ್ಲಿ ಇರಲಿಲ್ಲ. ಹೀಗಾಗಿ ತೀರ್ಪು ಘೋಷಣೆ ಮಾಡುತ್ತಿಲ್ಲ. 279 ಅಂಚೆ ಮತಗಳನ್ನ ಮರು ಪರಿಶೀಲನೆ ಮಾಡಿ ಬಾಕಿ ಉಳಿದ 1,543 ಅಂಚೆ ಮತಗಳನ್ನ ಮರು ಎಣಿಕೆ ಮಾಡಲು ಆದೇಶ ನೀಡಿತ್ತು. ಅದರಂತೆ ಮರು ಮತ ಎಣಿಕೆ ಆಗಿದೆ. ಇವರಿಬ್ಬರ ವೋಟ್​ನಲ್ಲಿ ವ್ಯತ್ಯಾಸವಿದ್ದರೆ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಿದೆ ಎಂದಿದ್ದಾರೆ.

2023ರಲ್ಲಿ ಇಬ್ಬರು ಪಡೆದ ಅಂಚೆ ಮತಗಳ ವಿವರ ಈ ರೀತಿ ಇದ್ದು, ಡಿ.ಎನ್ ಜೀವರಾಜ್ 692 ಅಂಚೆ ಮತಗಳನ್ನು ಪಡೆದಿದ್ದಾರೆ. ಟಿ.ಡಿ‌ ರಾಜೇಗೌಡ 569 ಮತಗಳನ್ನು ಪಡೆದಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಮರು ಎಣಿಕೆ ಬಳಿಕ ಡಿ.ಎನ್ ಜೀವರಾಜ್ ಅವರಿಗೆ 690 ಮತಗಳು ಚಲಾವಣೆ ಆಗಿವೆ. ಟಿ.ಡಿ ರಾಜೇಗೌಡ ಅವರಿಗೆ 314 ಮತಗಳು ಚಲಾವಣೆಯಾಗಿದೆ. ಮತಗಳಲ್ಲಿ ವ್ಯತ್ಯಾಸವಾಗಿದೆ. ಡಿ.ಎನ್ ಜೀವರಾಜ್ ಅವರ ಅಂಚೆ ಮತಗಳಲ್ಲಿ 2 ಕಡಿಮೆಯಾಗಿದೆ. ಅದೇ ರೀತಿ ರಾಜೇಗೌಡ ಅವರಿಗೆ 569 ಇತ್ತು, ಮರು ಎಣಿಕೆ ಬಳಿಕ 314 ಆಗಿದೆ, 255 ಮತಗಳು ಕಡಿಮೆ ಆಗಿವೆ. ಹೈಕೋರ್ಟ್ ಆದೇಶದಂತೆ ಮರು ಎಣಿಕೆ ಕಾರ್ಯ ಮುಗಿಸಿ ಸ್ಟ್ರಾಂಗ್ ರೂಮ್ ಕ್ಲೋಸ್ ಮಾಡಲಾಗಿದೆ. ನಮ್ಮ ವ್ಯಾಪ್ತಿಯಲ್ಲಿ ನಾವು ನಮ್ಮ ಕೆಲಸ ಮಾಡಿದ್ದೇವೆ. ಟ್ಯಾಂಪರಿಂಗ್ ಕ್ರಿಮಿನಲ್ ಅಪರಾಧವಾಗಿದ್ದು, ಚುನಾವಣಾ ಹ್ಯಾಂಡ್ ಬುಕ್ ಆಫ್ ಕಾಯ್ದೆಗಳ ಪ್ರಕಾರ ವೋಟ್ ಅನ್ನು ಸಿಂಧು, ಅಸಿಂಧು ಮಾಡುವ ಸ್ಪಷ್ಟವಾದ ನಿರ್ದೇಶನವಿದೆ. ವರದಿಯನ್ನ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ ಎಂದಿದ್ದಾರೆ.

ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಮಾತನಾಡಿ, ನಾವು ಬೆಳಗ್ಗೆ ಸ್ಟ್ರಾಂಗ್ ರೂಂ ಓಪನ್ ಮಾಡಿದಾಗ ಕೆಲವು ಟ್ರಂಕ್ ಲಾಕ್ ಹೊಡೆದಿದ್ರು. ಸೀಲ್ ಓಪನ್ ಆಗಿತ್ತು. ಟ್ರಂಕ್​ಗಳಿಗೆ ಸಬ್ಬಲ್ ಹಾಕಿರೋ ರೀತಿನೂ ಕಂಡು ಬಂತು. ಹೈಕೋರ್ಟ್ ತಿರಸ್ಕೃತ ಮತಗಳ ಪುನರ್ ಪರಿಶೀಲನೆ ಮಾಡುವಂತೆ ಆದೇಶ ನೀಡಿತ್ತು‌. ಅದರಂತೆ ತಿರಸ್ಕೃತ ಮತಗಳ ಪರಿಶೀಲನೆ ನಡೆಸಿದ್ರು. ಈ ಹಿಂದೆ ಏನು ಬಂಡಲ್ ಮಾಡಿದ್ರು. ಆ ಬಂಡಲ್ ಬಂಡಲ್​ಗಳನ್ನೇ ಟ್ಯಾಂಪರಿಂಗ್ ಮಾಡಿದ್ದಾರೆ. ರಾಜೇಗೌಡ ಅಂತಾ ವೋಟ್ ಹಾಕಿದ್ರು ಅದಕ್ಕೆ ಮತ್ತೊಬ್ಬ ಅಭ್ಯರ್ಥಿಗೆ ಮಾರ್ಕ್ ಮಾಡಿದ್ದಾರೆ. ಇಂಕ್ ಕೂಡ ಬೇರೆ ಬೇರೆ ಆಗಿದೆ. ಟ್ಯಾಂಪರಿಂಗ್ ಅವಾಗಲೇ ಮಾಡಿರೋದು, ಮೂರು ವರ್ಷ ಆಯ್ತು. ನಾವು ಜೀವರಾಜ್ ಮತ್ತು ಸಂಗಡಿಗರ ವಿರುದ್ಧ ದೂರು ನೀಡಿದ್ದೇವೆ. 258 ಮತಗಳು ವ್ಯಾಲಿಡ್​ ಆಗಿತ್ತು, ಆದ್ರೆ ಇಂದು ಇನ್ ವ್ಯಾಲಿಡ್ ಮಾಡಲಾಗಿದೆ. ನನಗೆ ಬಂದಿದ್ದ ಅಂಚೆ ಮತಗಳನ್ನ ಇನ್ ವ್ಯಾಲಿಡ್ ಮಾಡಿದ್ದಾರೆ ಎಂದು ದೂರಿದ್ದಾರೆ.

ಬೆಂಗಳೂರಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ ಶೃಂಗೇರಿಯ ಫಲಿತಾಂಶ ಬಂದಿದೆ. 52 ವೋಟ್ ಹೆಚ್ಚು ಬಿಜೆಪಿಗೆ ಬಂದಿದೆ ಎನ್ನುವುದು ನನಗಿರುವ ಮಾಹಿತಿ. ಈಗಾಗಲೇ ನ್ಯಾಯಾಲಯ ಡೈರೆಕ್ಷನ್ ಕೊಟ್ಟಿದೆ. ಯಾರಿಗೆ ಬಹುಮತ ಬರುತ್ತೆ ಅವರನ್ನ ಅನೌನ್ಸ್ ಮಾಡ್ಬೇಕು. ಆದರೆ ಕಾಂಗ್ರೆಸ್ ಪಕ್ಷ ರಿಟರ್ನಿಂಗ್ ಆಫಿಸರ್ ಮೇಲೆ ಒತ್ತಡ ಹಾಕಿ ಘೋಷಣೆ ಮಾಡದೆ ಪೆಂಡಿಂಗ್ ಇಟ್ಟಿದ್ದಾರೆ. ನ್ಯಾಯಾಲಯ ಆದೇಶಕ್ಕೆ ಅಗೌರವ ಮಾಡಿದ್ದಾರೆ. ಪ್ರತಿ ಭಾರಿ ಪೋಸ್ಟಲ್ ವೋಟ್ ಮೊದಲು‌ ಎಣಿಕೆ ಮಾಡುತ್ತಾರೆ. ಆದರೆ ಶೃಂಗೇರಿಯಲ್ಲಿ ಕೊನೆಗೆ ಪೋಸ್ಟಲ್ ವೋಟ್ ಎಣಿಕೆ ಮಾಡಿದ್ರು. ಅಷ್ಟರಲ್ಲಿ ಕಾಂಗ್ರೆಸ್ ಹೆಚ್ಚು ಸೀಟ್ ಗಳಿಸಿದೆ ಎನ್ನುವುದಿತ್ತು. ಈಗ ಈ ರಿಸಲ್ಟ್ ಫೆಂಡಿಂಗ್ ಇಟ್ಟಿರೋದು ರಾಜಕೀಯ ದುರುಪಯೋಗ ಎಂದು ಕಿಡಿಕಾರಿದ್ದಾರೆ.

Related posts

‘ಕರ್ನಾಟಕದಲ್ಲಿ ಒಂದು ಕ್ಷೇತ್ರವನ್ನು ಕಳವು ಮಾಡಿದೆ ಬಿಜೆಪಿ’

Publicspot

Hate Speach Act; ದ್ವೇಷ ಭಾಷಣಕ್ಕೆ ನೂತನ ಕಾನೂನು..! ಬಿಜೆಪಿ ನಾಯಕರಿಗೆ ಇದು ಲಗಾಮು..?

Publicspot

Congress MP Opposed Cm Decision; ಸಿದ್ದರಾಮಯ್ಯ ಆಸೆಗೆ ತಣ್ಣೀರು ಎರಚಿದ ಕಾಂಗ್ರೆಸ್‌ ಸಂಸದ

Publicspot

ಚುನಾವಣೆಗೆ ಸಜ್ಜಾಗ್ತಿದ್ಯಾ JDS..? ಇವತ್ತಿನ ಸಮಾವೇಶದ ಉದ್ದೇಶ ಏನು..?

Publicspot

‘ಸಿದ್ದರಾಮಯ್ಯ ಇರೋ ತನಕ ನನ್ನ ಭವಿಷ್ಯಕ್ಕೆ ಏನೂ ಆಗಲ್ಲ’ ರಾಜಣ್ಣ ಸವಾಲು..

Publicspot

JDS ಪಾಲಿಗೆ GT ದೇವೇಗೌಡರದ್ದೇ ಚಿಂತೆ.. ಅತ್ಮ ಸಾಕ್ಷಿ ಅಂದ್ರೆ ಏನು..?

Publicspot