The Public Spot
ರಾಜ್ಯ

SSLC ಪರೀಕ್ಷೆ ಮತ್ತು ಶಿಕ್ಷಣ ಇಲಾಖೆ ಹಾಗೂ ಸಚಿವರ ಎಡವಟ್ಟುಗಳು..

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸುವ ನಡೆಸುವ ಅಂತಿಮ ಪರೀಕ್ಷೆ ಇವತ್ತಿನಿಂದ ಆರಂಭ ಆಗಿದ್ದು, ಮೊದಲ ಭಾಷೆ ಪರೀಕ್ಷೆ ಮುಕ್ತಾಯವಾಗಿದೆ. ಪ್ರಥಮ ಭಾಷೆಯನ್ನಾಗಿ ಕನ್ನಡ ಆಯ್ಕೆ ಮಾಡಿಕೊಂಡಿದ್ದ ಮಕ್ಕಳು ಕನ್ನಡ ಪರೀಕ್ಷೆ ಹಾಗೂ ಇಂಗ್ಲೀಷ್​ ಆಯ್ಕೆ ಮಾಡಿಕೊಂಡಿದ್ದರೆ ಇಂಗ್ಲೀಷ್​, ಅದೇ ರೀತಿ ಸಂಸ್ಕೃತ, ಹಿಂದಿ, ತಮಿಳು, ಮರಾಠಿ, ತೆಲುಗು ಸೇರಿದಂತೆ ತಮ್ಮ ತಮ್ಮ ಭಾಷೆಯ ಪರೀಕ್ಷೆಯನ್ನು ನೂರು ಅಂಕಗಳಿಗೆ ಬರೆಯಲಾಗಿದೆ. ಮೊದಲ ದಿನದ ಪರೀಕ್ಷೆ ಯಾವುದೇ ಅಡ್ಡಿ ಆತಂಕ ಇಲ್ಲದೆ ಮುಗಿದಿದೆ. ಆದರೆ ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಮಂಡಳಿಯವರ ಎಡವಟ್ಟುಗಳ ಬಗ್ಗೆ ಪೋಷಕರು ಮಾತನಾಡಿಕೊಳ್ಳುವಂತಾಗಿದೆ.

SSLC ಪರೀಕ್ಷೆಯಲ್ಲಿ ಯಾವುದೇ ನಕಲು ಆಗದಂತೆ ಶಿಕ್ಷಣ ಇಲಾಖೆ ಕ್ರಮ ವಹಿಸಿದೆ. ಕೆಲವು ಸೋಶಿಯಲ್ ಮೀಡಿಯಾ ಪೇಜ್​ಗಳ ಮೇಲೆ ಪೊಲೀಸ್ ಇಲಾಖೆ ಕಣ್ಣು ಇಟ್ಟಿದ್ದು, ಕಳೆದ ಬಾರಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದ ಜಾಲತಾಣಗಳ ಅಕೌಂಟ್ ಡೀ ಆ್ಯಕ್ಟೀವ್ ಮಾಡಲಾಗಿದೆ. ಆ್ಯಕ್ಟಿವ್ ಆಗಿರುವ ಪೇಜ್‌ಗಳ ಮೇಲೆ ನಿಗಾ ಇಡಲಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ, ಮಾರಾಟ ಕುರಿತಂತೆ ಪೋಸ್ಟ್ ಹಾಕುವವರ ಮೇಲೆ ಕ್ರಮಕ್ಕೂ ಪೊಲೀಸರು ಮುಂದಾಗಿದ್ದರು. ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ನಿಷೇದಾಜ್ಞೆ ಜಾರಿ ಮಾಡಲಾಗಿತ್ತು. ಜೆರಾಕ್ಸ್ ಅಂಗಡಿ ಸೈಬರ್ ಸೆಂಟರ್ ಬಂದ್ ಮಾಡಿಸಲಾಗಿತ್ತು. ಸೂಕ್ಷ್ಮಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲು ಹಾಗೂ ವೆಬ್ ಕಾಸ್ಟಿಂಗ್ ಮೂಲಕ ಮೇಲ್ವಿಚಾರಣೆ ಮಾಡಲಾಯ್ತು. ಮೊಬೈಲ್‌, ಎಲೆಕ್ಟ್ರಾನಿಕ್ ಉಪಕರಣಕ್ಕೆ ನಿಷೇಧ, ಪರ್ಸ್, ಬ್ಯಾಗ್, ಸ್ಮಾರ್ಟ್ ವಾಚ್ ಬಳಕೆ ನಿಷೇಧ ಮಾಡಲಾಗಿತ್ತು.

ಏಪ್ರಿಲ್ 2ರವರೆಗೆ ನಡೆಯಲಿರುವ ಪರೀಕ್ಷೆಗೆ 8 ಲಕ್ಷದ 65 ಸಾವಿರದ 988 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ 7 ಲಕ್ಷದ 75 ಸಾವಿರದ 979 ಮಂದಿ ಹೊಸಬರು, 62,938 ಪುನಾವರ್ತಿತ ವಿದ್ಯಾರ್ಥಿಗಳು ನೋಂದಣಿ ಆಗಿದ್ದರು. ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರ ತನಕ ಪರೀಕ್ಷೆ ನಡೆಲಾಯ್ತು. 2,870 ಪರೀಕ್ಷಾ ‌ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ ಸಮಯದ ಬಗ್ಗೆ ಭಾರೀ ಚರ್ಚೆ ಆಯ್ತು. ಭಾಷಾ ಪರೀಕ್ಷೆ 125 ಅಂಕಗಳಿಗೆ ನಡೆಯಲಿದ್ದು, 100 ಅಂಕಗಳ ಪರೀಕ್ಷೆಯನ್ನು ಮಕ್ಕಳು ಬರೆಯಬೇಕಿದ್ದು, ಉಳಿಕೆ 25 ಅಂಕಗಳನ್ನು ಆಂತರಿಕ ಮೌಲ್ಯಮಾಪನದ ಮೂಲಕ ನೀಡಲಾಗುತ್ತದೆ. ಉಳಿಕೆ 5 ಪರೀಕ್ಷೆಗಳನ್ನು 80 ಅಂಕಗಳಿಗೆ ನಡೆಯಲಿದೆ.

ವಿಶೇಷ ಅಂದ್ರೆ 100 ಅಂಕದ ಪ್ರಥಮ ಭಾಷೆಗೂ ಕೇವಲ 3 ಗಂಟೆ ಗಳ ಕಾಲ ಸಮಯ ಕೊಟ್ಟಿದ್ದರೆ, ದ್ವಿತೀಯ ಭಾಷೆ ಮತ್ತು ತೃತೀಯ ಭಾಷೆ ಪರೀಕ್ಷೆಗೆ 3 ಗಂಟೆ ಕಾಲಾವಕಾಶ ನೀಡಲಾಗಿದೆ. ಉಳಿದ ಎಲ್ಲಾ ವಿಷಯ 3 ಗಂಟೆ 15 ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ಅಂದರೆ 80 ಅಂಕಗಳಿಗೂ 3 ಗಂಟೆ 15 ನಿಮಿಷ.. 80 ಅಂಕಗಳ ಪರೀಕ್ಷೆಗೂ 3 ಗಂಟೆ 15 ನಿಮಿಷಗಳು ಅಂದರೆ ಸರೀನಾ..? ಎನ್ನುವುದು ಪೋಷಕರ ಪ್ರಶ್ನೆ ಆಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, SSLC ಎಕ್ಸಾಂ ಬರೆಯುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ‌ ವ್ಯತ್ಯಾಸ ಆಗಿರುವ ವಿಚಾರವಾಗಿ ಒಂದು ತಿಂಗಳ ಹಿಂದೆ ಪ್ರೆಸ್ ಮೀಟ್‌ನಲ್ಲಿ 9 ಲಕ್ಷಕ್ಕೂ ಅಧಿಕ ಮಕ್ಕಳು ಬರೆಯಬಹುದೆಂದು ಹೇಳಿದ್ದೆ. ಇದೀಗ 8.65 ಸಾವಿರ ಅಂತ ಇದೆ. ಕೆಲವೊಮ್ಮೆ ವೇರಿಯೇಷನ್ ಆಗುತ್ತದೆ. ಸಂಖ್ಯೆಯಲ್ಲಿ ಸ್ವಲ್ಪ ವ್ಯತ್ಯಾಸ ಇರ್ಬೋದು ಎಂದಿದ್ದಾರೆ.

Related posts

ಅಪರೂಪದ ಸಮಾಗಮ, ಅಚ್ಚರಿಯ ಬೆಳವಣಿಗೆಗೆ ಕಾರಣವಾದ ಮೋದಿ..!

ಯಶವಂತಿ

ರಾಜ್ಯದಲ್ಲಿ ವರುಣಾರ್ಭಟ ಹೆಚ್ಚಾಗುತ್ತೆ.. ಅಪಾಯವೂ ಕಾದಿದೆ..

Publicspot

High Court Dismissed PIL ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಇನ್ನಿಲ್ಲ ತಡೆ..

Publicspot

ಕಸದ ಸಮಸ್ಯೆಗೆ ಸಿಗುತ್ತಾ ಪರಿಹಾರ..? ಕೃಷ್ಣಬೈರೇಗೌಡರು ಏನಂದ್ರು..?

Publicspot

ಬಿಜೆಪಿಯವರು ಕರ್ನಾಟಕದಲ್ಲಿ ಇಂತಹ ಜನೋಪಯೋಗಿ ಯೋಜನೆಯನ್ನು ಜಾರಿಗೆ ತಂದಿದ್ದಾರೆಯೇ?

admin

Ration Card Cancel; ನಿಮ್ಮ ರೇಷನ್ ಕಾರ್ಡ್ ರದ್ದು ಆಗಬಹುದು.. ರಾಜ್ಯ ಸರ್ಕಾರ ಪ್ಲ್ಯಾನಿಂಗ್..

Publicspot