The Public Spot
ಅಪರಾಧ

ವರ್ಷದ ಹಿಂದೆ DOCTOR ಮದುವೆ.. 6 ತಿಂಗಳ ಹಿಂದೆ ಕೊಲೆ.. ಈಗ ರಹಸ್ಯ ಬಯಲು..!

ಬೆಂಗಳೂರಿನಲ್ಲಿ ಅಪರೂಪದಲ್ಲಿ ಅಪರೂಪ ಎನ್ನುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಳೆದ ಆರು ತಿಂಗಳ ಹಿಂದೆ ಸಾವನ್ನಪ್ಪಿದ್ದ ವಿಕ್ಟೋರಿಯಾ ಆಸ್ಪತ್ರೆ ಸ್ಕಿನ್​ ಡಾಕ್ಟರ್​​ ಕೃತಿಕಾ ರೆಡ್ಡಿ ಸಾವು ಆಕಸ್ಮಿಕವಲ್ಲ, ಅದೊಂದು ಕೊಲೆ ಅನ್ನೋದನ್ನು FSL ವರದಿ ಬಹಿರಂಗ ಮಾಡಿದೆ. ಸಾವಿನ ರಹಸ್ಯ ಬಯಲಾದ ಬಳಿಕ ಗಂಡ ಡಾ ಮಹೇಂದ್ರ ರೆಡ್ಡಿಯನ್ನು ಪೊಲೀಸರು ಬಂಧಿಸಿ, ಕೋರ್ಟ್​ ಎದುರು ಹಾಜರು ಮಾಡಿ 7 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಅನಾರೋಗ್ಯ ಪೀಡಿತ ಪತ್ನಿಗೆ ಇಂಜೆಕ್ಷನ್​ ಕೊಡುವ ನೆಪದಲ್ಲಿ ಹೈಡೋಸ್​ ಅನಾಸ್ತೇಷಿಯಾ ರೀತಿಯ ಇಂಜೆಕ್ಷನ್​ ಕೊಟ್ಟು ಕೊಲೆ ಮಾಡಿದ್ದಾನೆ ಅನ್ನೋದು ಬಯಲಾಗಿದೆ.

ಪತ್ನಿಗೆ ಅನಸ್ತೇಷಿಯಾ ಕೊಟ್ಟು ಕೊಲೆ ಮಾಡಿದ್ದ ಆರೋಪದ ಮೇಲೆ ಡಾ. ಮಹೇಂದ್ರ ರೆಡ್ಡಿಯನ್ನು ಬಂಧನ ಮಾಡಲಾಗಿದೆ. ಮಾರತಹಳ್ಳಿಯಲ್ಲಿ ನಡೆದಿದ್ದ ವೈದ್ಯೆ ಕೃತಿಕಾ ರೆಡ್ಡಿ ಸಾವಿಗೆ ಬಿಗ್​ ಟ್ವಿಸ್ಟ್ ಸಿಕ್ಕಂತಾಗಿದೆ. ಗ್ಯಾಸ್ಟ್ರಿಕ್‌ ನಿವಾರಣೆಗೆ ಔಷಧಿ ನೀಡಿದ್ದ ಗಂಡ ಡಾ. ಮಹೇಂದ್ರ ರೆಡ್ಡಿ, ಮೂರು ದಿನಗಳ ಕಾಲ ಕಾಲಿಗೆ ಐವಿ ಇಂಜೆಕ್ಷನ್​ ನೀಡಿದ್ದ. ಆ ಬಳಿಕ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು 72 ಗಂಟೆಗಳ ಪಾಸ್ಟಿಂಗ್ ಟೆಸ್ಟ್‌ ‌ಚಿಕಿತ್ಸೆಗೆ ಸಲಹೆ ನೀಡಿದ್ದರು. ಆದರೆ ಕೇವಲ 36 ಗಂಟೆಗಳ ಒಳಗೆ ಹೆಂಡತಿಯನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಹೋಗಿದ್ದ ಮಹೇಂದ್ರ ರೆಡ್ಡಿ, ಐವಿ ಕ್ಯಾನ್ಯೂಲ ಮೂಲಕ ಡಾ ಮಹೇಂದ್ರ ರೆಡ್ಡಿಯೇ ಕಾಲಿಗೆ ಚುಚ್ಚಿದ್ದ. ಕಳೆದ 23/04/25 ರಂದು ಡಾ.ಕೃತಿಕಾ ರೆಡ್ಡಿ ಸಾವನ್ನಪ್ಪಿದ್ದರು. ಎಲ್ಲರೂ ಇದನ್ನು ಸ್ವಾಭಾವಿಕ ಸಾವು ಎಂದೇ ಪರಿಗಣಿಸಿದ್ದರು. ಆದರೂ UDR ದಾಖಲಿಸಿಕೊಂಡಿದ್ದ ಪೊಲೀಸರು, ಮರಣೋತ್ತರ ಪರೀಕ್ಷೆ ಮಾಡಿಸಿದ್ದರು. ಆಕೆಯ ದೇಹದ ಅಂಗಾಂಗಗಳನ್ನು FSL ಗೆ ರವಾನೆ ಮಾಡಲಾಗಿತ್ತು. ಇದೀಗ ವರದಿ ಬಂದಿದ್ದು ಕೊಲೆ ಅನ್ನೋದು ಬಯಲಾಗಿದೆ.

ಮಾರತಹಳ್ಳಿಯ ಮುನೆಕೊಳಾಲ್​ನಲ್ಲಿ ವಾಸವಾಗಿದ್ರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಹೇಂದ್ರ ರೆಡ್ಡಿ ಫೆಲೋಷಿಪ್ ಮಾಡುತ್ತಿದ್ದರೆ, ಗುಂಜೂರಿನ ನಿವಾಸಿಯಾಗಿದ್ದ ಮುನಿರೆಡ್ಡಿ ತನ್ನ ಮಗಳು ಕೃತಿಕಾ ರೆಡ್ಡಿಯ ಮದುವೆಯನ್ನು ಅದ್ದೂರಿಯಾಗಿ ಮಾಡಿಕೊಟ್ಟಿದ್ದರು. ಮದುವೆಯ ಸಮಯದಲ್ಲಿ ಭರ್ಜರಿ ಆರ್ಥಿಕ ಸಹಾಯ ಮಾಡಿದ್ದರು. ಅಳಿಯ ಆಸ್ಪತ್ರೆ ತೆರೆಯಬೇಕೆಂದು ಹೆಂಡತಿಗೆ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ. ಅದಕ್ಕಾಗಿಯೇ ಒಂದು ಕ್ಲಿನಿಕ್ ಕೂಡ ಓಪನ್ ಮಾಡಿಕೊಟ್ಟಿದ್ದರು. ಇಬ್ಬರು ಕೂಡ ಇದೇ ಕ್ಲಿನಿಕ್ ನಡೆಸುತ್ತಿದ್ದರು. ಡಾ. ಕೃತಿಕಾ ರೆಡ್ಡಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ರು. ಮಾರತಹಳ್ಳಿ ಠಾಣೆಯಲ್ಲಿ ಯುಡಿಆರ್ ಕೇಸ್ ದಾಖಲಾಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಎಫ್​ಎಸ್​ಎಲ್ ವರದಿಯಲ್ಲಿ ಕೊಲೆ ಅನ್ನೋದು ಧೃಡವಾಗಿದೆ.

ಡಾ ಮಹೇಂದ್ರ ರೆಡ್ಡಿಗೆ ಬೇರೆ ಬೇರೆ ಯುವತಿಯರ ಜೊತೆ ಸಲುಗೆ ಹೊಂದಿದ್ದ ಅನ್ನೋ ಆರೋಪ ಕೇಳಿಬಂದಿದೆ. ಆದರೆ ಕೃತಿಕಾ ರೆಡ್ಡಿ ಸಾವನ್ನಪ್ಪಿದಾಗ ಯಾವುದೇ ಅನುಮಾನ ಬಂದಿರಲಿಲ್ಲ. ಕೃತಿಕಾ ಕುಟುಂಬಸ್ಥರು ಕೂಡ ಅಳಿಯನ ಮೇಲೆ ಯಾವುದೇ ಅನುಮಾನ ವ್ಯಕ್ತಪಡಿಸಿರಲಿಲ್ಲ. ಇದೀಗ ಹೆಂಡತಿಗೆ ಕಿರುಕುಳ ‌ಕೊಡ್ತಿದ್ದ ಎಂದು ಆರೋಪ ಮಾಡಿದ್ದಾರೆ. ಹಣ, ಒಡವೆಗೆ ಡಿಮ್ಯಾಂಡ್ ಮಾಡಿ ಹಲ್ಲೆ ಮಾಡುತ್ತಿದ್ದ ಎನ್ನಲಾಗಿದೆ. ಆದರೆ ಕೃತಿಕಾ ರೆಡ್ಡಿಗೆ ಗ್ಯಾಸ್ಟ್ರಿಕ್​, ಲೋ ಬಿಪಿ ಸೇರಿದಂತೆ ಸಾಕಷ್ಟು ಅನಾರೋಗ್ಯ ಸಮಸ್ಯೆ ಇತ್ತು. ಆದರೆ ಅದನ್ನು ಮುಚ್ಚಿಟ್ಟು ಮದುವೆ ಮಾಡಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಕೋಪಗೊಂಡು ಕೊಲೆ ಮಾಡಿದ್ದಾನೆ ಅನ್ನೋ ಮಾಹಿತಿ ಸಿಗುತ್ತಿದೆ.

ಅದೇನೇ ಇರಲಿ, ಒಂದು ಜೀವವನ್ನು ಉಳಿಸುವ ಶಕ್ತಿ ಇರುವ ವೈದ್ಯನು, ತಾನೇ ಕೊಲೆಗಾರನಾಗಿ ನಿಲ್ಲುವುದು ಎಂದರೆ ತನ್ನ ಆತ್ಮಕ್ಕೆ ವಂಚನೆ ಮಾಡಿಕೊಂಡಂತೆಯೇ ಸರಿ. ಡಾ ಮಹೇಂದ್ರ ರೆಡ್ಡಿ ಕೊಲೆ ಮಾಡಿದ್ದು ಹೇಗೆ ಅನ್ನೋದನ್ನು ಇನ್ನು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ. ಅಸಹಜ ಸಾವು ಪ್ರಕರಣ ದಾಖಲಿಸಿದ ಬಳಿಕ ಇದೊಂದು ಸಹಜ ಸಾವು ಅಲ್ಲ ಅನ್ನೋದು ಖಚಿತವಾಗಿದೆ. ಆದರೆ ಅನಸ್ತೇಷಿಯಾ ಮಾದರಿ ಇಂಜೆಕ್ಷನ್​ ನೀಡಲಾಗಿದೆ ಎನ್ನಲಾಗಿದ್ದು, ಯಾವ ಔಷಧಿ, ಎಷ್ಟು ಪ್ರಮಾಣದಲ್ಲಿ ನೀಡಿದ್ದನು ಅನ್ನೋದು ಖಚಿತ ಆಗಿಲ್ಲ.

Related posts

Ananya Mother: ನಾನು ಸಾಯಲು ಸಿದ್ಧಳಿದ್ದೇನೆ.. ರಸ್ತೆಯಲ್ಲಿ ಬೆತ್ತಲೆ ನಿಲ್ತೇನೆ..!

Publicspot

ಓರಗಿತ್ತಿರ ವಾರ್​.. ಇದು ಸೀರಿಯಲ್​ ಕಥೆ.. ನಟಿ ಮಣಿಯ ವ್ಯಥೆ..

Publicspot

Online Game Murder; ಜೂಜಿನ ಚಟಕ್ಕೆ ಬಿದ್ದವನು ಕೊಲೆಗಾರನಾಗ ಕಥೆ.. ಬಾಡಿಗೆ ಮನೆ ದುರಂತ..

Publicspot

PG, Sexual Assult: ಮಹಿಳಾ ಪಿಜಿಗೆ ಕಳ್ಳತನಕ್ಕೆ ಬಂದವನಿಂದ ಲೈಂಗಿಕ ದೌರ್ಜನ್ಯ..

Publicspot

ಕಮಲಾಕರ ಭಟ್‌ ಕೊಲೆ ಮಾಡಿದ್ರಾ..? ಆಂಟಿ ಜೊತೆ ಅಕ್ರಮ ಸಂಬಂಧ ಸತ್ಯನಾ..?

Publicspot

Drunk Drive; ಪೊಲೀಸರ ದಂಡ ದಾಹಕ್ಕೆ ಆಟೋ ಡ್ರೈವರ್​ ಆತ್ಮಹತ್ಯೆ ಯತ್ನ..

Publicspot