The Public Spot
ಅಪರಾಧ

ಓರಗಿತ್ತಿರ ವಾರ್​.. ಇದು ಸೀರಿಯಲ್​ ಕಥೆ.. ನಟಿ ಮಣಿಯ ವ್ಯಥೆ..

ರಾಧ ರಮಣ ಸೀರಿಯಲ್ ಖ್ಯಾತಿಯ ನಟಿ ಕಾವ್ಯಗೌಡ ಕೌಟುಂಬಿಕ ಕಲಹ ಬೀದಿಗೆ ಬಂದಿದೆ. ಸೋಮಶೇಖರ್ ಹಾಗೂ ನಂದೀಶ್​ ಸಹೋದರರು. ಸೋಮಶೇಖರ್​ ಪತ್ನಿ ಆಗಿರುವ ನಟಿ ಕಾವ್ಯಗೌಡ ಹಾಗೂ ನಂದೀಶ್ ಪತ್ನಿ ಪ್ರೇಮಾ ಮಧ್ಯೆ ಎದುರಾದ ಸಣ್ಣ ಪುಟ್ಟ ಜಗಳ ವಿಕೋಪಕ್ಕೆ ತಿರುಗಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಜಗಳದ ಮಧ್ಯೆ ಪ್ರೇಮಾಗೆ ಕಾವ್ಯಾಗೌಡ ಹಾಗೂ ಆಕೆಯ ಗಂಡ ಸೋಮಶೇಖರ್​ ಚಪ್ಪಲಿಯಿಂದ ಹೊಡೆದ ಆರೋಪ ಕೇಳಿ ಬಂದಿದೆ. ಗಲಾಟೆ ಬಿಡಿಸಲು ಮಧ್ಯಪ್ರವೇಶ ಮಾಡಿದ ಪ್ರೇಮಾ ತಂದೆ ರವಿ ಕಲ್ಕೆರೆ ಮೇಲೂ ನಟಿ ಕಾವ್ಯಾಗೌಡ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ರಾಮಮೂರ್ತಿ ನಗರ ಪೊಲೀಸ್​ ಠಾಣೆಗೆ ಪ್ರೇಮಾ ಹಾಗೂ ನಟಿ ಕಾವ್ಯಗೌಡ ಆಗಮಿಸಿ ಪ್ರತ್ಯೇಕವಾಗಿ ದೂರು ಪ್ರತಿದೂರು ದಾಖಲಿಸಿದ್ದಾರೆ. ನಟಿ ಕಾವ್ಯಾ ಗೌಡ ಕನ್ನಡದ ಗಾಂಧಾರಿ, ರಾಧಾ ರಮಣ ಸೀರಿಯಲ್​ ಮೂಲಕ ಉತ್ತಮ ಖ್ಯಾತಿ ಪಡೆದುಕೊಂಡಿದ್ದ ನಟಿ. ಧಾರವಾಹಿಗಳ ನಂತ್ರ ಸೋಮಶೇಖರ್ ಅನ್ನೋರನ್ನ ಪ್ರೀತಿಸಿ ಮದುವೆನೂ ಆಗಿದ್ರು. ಸೋಮಶೇಖರ್​ ಎಂಬ ಒಬ್ಬ ಅಣ್ಣನಿದ್ದ. ಅವರೇ ನಂದೀಶ್. ನಂದೀಶ್​​ ಸಂಬಂಧಿ ಪ್ರೇಮಾ ಎಂಬುವರ ಜೊತೆ ಮದುವೆ ಆಗಿತ್ತು. ಅಣ್ಣ ತಮ್ಮಂದಿರು ಇಬ್ಬರು ಒಂದೇ ಮನೆಯಲ್ಲಿದ್ರು. ಹೀಗಾಗಿ ಅವರ ಪತ್ನಿಯರು ಕೂಡಾ ಕಲ್ಕೆರೆ ಬಳಿ ಇರುವ 3 ಅಂತಸ್ತಿನ ಕಟ್ಟಡದಲ್ಲಿ ಜೀವನ ನಡೆಸುತ್ತಿದ್ದರು. ಗ್ರೌಂಡ್​ ಫ್ಲೋರ್​ ನಲ್ಲಿ ಅತ್ತೆ- ಮಾವ ಇದ್ರೆ, ಮೊದಲ ಮಹಡಿಯಲ್ಲಿ ನಂದೀಶ್ – ಪ್ರೇಮ. 2ನೇ ಮಹಡಿಯಲ್ಲಿ ಸೋಮಶೇಖರ್ – ಕಾವ್ಯ ದಂಪತಿ ಸಂಸಾರ ನಡೆಸ್ತಿದ್ರು.. ಈಗ ಇದೇ ಮನೆಯಲ್ಲಿ ಓರಗಿತ್ತಿಯರ ವಾರ್​ ಶುರುವಾಗಿದೆ.

ಕಾವ್ಯಾಗೌಡ ಮನೆಯಲ್ಲಿ ಕೆಲಸ ಮಾಡೋ ಹೆಣ್ಮಗಳು, ಪ್ರೇಮಾರ ಮನೆಯ ಅಡುಗೆ ಕೋಣೆಗೆ ಹೋಗಿದ್ರಂತೆ. ಇದು ಪ್ರೇಮಾಳ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಈ ಬಗ್ಗೆ ಪ್ರಶ್ನೆ ಮಾಡ್ತಿದ್ದಂತೆ ಸಿಟ್ಟಿಗೆದ್ದ ಕಾವ್ಯಗೌಡ, ಜಗಳ ಶುರು ಮಾಡಿದ್ದಳು. ಊಟ ಮಾಡ್ತಿದ್ದ ತಟ್ಟೆಯನ್ನೇ ಕಿತ್ತೆಸೆದು, ಇದು ನನ್ನ ಮನೆ ಹೊರಗೆ ಹೋಗಿ ಅಂತಾ ಆವಾಜ್‌ ಹಾಕಿದ್ರಂತೆ. ಇದನ್ನ ಪ್ರಶ್ನೆ ಮಾಡೋಕೆ ಬಂದ ಪ್ರೇಮಾ ತಂದೆ ಮೇಲೂ ಹಲ್ಲೆ ಮಾಡಿ, ನನ್ನ ಮಾಂಗಲ್ಯ ಸರವನ್ನ ಕಿತ್ತಾಕಿದ್ದಾರೆ ಅಂತಾ ಪ್ರೇಮಾ ದೂರು ನೀಡಿದ್ದಾರೆ.

ನಂದೀಶ್​ ಪತ್ನಿ ಪ್ರೇಮಾ ಇಷ್ಟೆಲ್ಲಾ ಆರೋಪ ಮಾಡ್ತಿದ್ರೆ, ಕಾವ್ಯಾಗೌಡ ಬೇರೆಯದ್ದೇ ಸ್ಟೋರಿ ಹೇಳಿದ್ದಾರೆ. ಪ್ರೇಮಾ ತಂದೆ ರವಿಕುಮಾರ್​ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಪ್ರೇಮಾ ಕುಟುಂಬಸ್ಥರೇ ನನ್ನ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ. ಆಕೆಯ ತಂದೆ ನನ್ನನ್ನು ಅತ್ಯಾಚಾರ ಮಾಡೋದಾಗಿ ಬೆದರಿಕೆ ಹಾಕಿದ್ರು. ಇದನ್ನ ಪ್ರಶ್ನೆ ಮಾಡಿದಕ್ಕೆ ನಾನೇ ಆಸ್ತಿ ವಿಷ್ಯಕ್ಕೆ ಗಲಾಟೆ ಮಾಡ್ತಿದ್ದೀನಿ ಅಂತಾ ಬಿಂಬಿಸ್ತಿದ್ದಾರೆ ಅಂತಾ ಪ್ರತಿ ದೂರು ದಾಖಲಿಸಿದ್ದಾರೆ. ತಂಗಿ ಮನೆ ಗಲಾಟೆ ಬಗ್ಗೆ ಮಾತನಾಡಿದ ನಟಿ ಕಾವ್ಯ ಸಹೋದರಿ ಭವ್ಯ, ನನ್ನ ತಂಗಿ ಮೇಲೆ ಅವರೇ ಹಲ್ಲೆ ಮಾಡಿದ್ದಾರೆ. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ನಂದೀಶ್ ಅವರು ಮತ್ತೆ ಹಲ್ಲೆ ಮಾಡೋದಕ್ಕೆ ಬಂದರು. ಆದ್ರೀಗ ನಮ್ಮ ಮೇಲೆಯೇ ದೂರು ಕೊಟ್ಟಿದ್ದಾರೆ ಅಂತಾ ಆರೋಪಿಸಿದ್ದಾರೆ.

ಯಾರು ಹಲ್ಲೆ ಮಾಡಿದ್ರು..? ಯಾರು ದೂರು ಕೊಟ್ಟು ನಕರ ಮಾಡ್ತಿದ್ದಾರೆ ಅನ್ನೋದು ಪೊಲೀಸ್ರ ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಬೇಕಿದೆ. ಆದರೆ ಓರಗಿತ್ತಿಯರ ವಾರ್​​ನಲ್ಲಿ ಕೆಲವೊಂದು ವಿಡಿಯೋಗಳು ರಿಲೀಸ್​ ಆಗಿದ್ದು, ಕಾವ್ಯಾಗೌಡ ಹಾಗೂ ಆಕೆಯ ಗಂಡ ಸೋಮಶೇಖರ್​ ಮೇಲೆ ದೆವ್ವ ಬಂದವರಂತೆ ಆಡುತ್ತಿರುವುದು ಗೊತ್ತಾಗ್ತಿದೆ. ಇನ್ನೂ ಮಾಧ್ಯಮಗಳು ಈ ಬಗ್ಗೆ ಪ್ರಶ್ನಿಸುತ್ತಿದ್ದ ಹಾಗೆ ನನಗೆ ನ್ಯಾಯ ಸಿಗುವ ಭರವಸೆ ಇದೆ. ನಾನು ಕಾನೂನು ಮೂಲಕ ನೋಡಿಕೊಳ್ತೇನೆ. ನಿಮ್ಮ ಬಳಿ ಮಾತನಾಡಿದ್ರೆ ಏನು ಪ್ರಯೋಜನ ಎಂದು ಮನೆ ಕಡೆಗೆ ಎಸ್ಕೇಪ್​ ಆದ್ರು. ಮಾಧ್ಯಮದವರು ಏನಾದ್ರೂ ಕೇಳಿ, ತಾನೆಲ್ಲಿ ಸತ್ಯವನ್ನು ಹೇಳಿಬಿಡ್ತೀನೋ ಅನ್ನೋ ಭಯ ಅವರಲ್ಲಿ ಇದ್ದಂತಿತ್ತು ಎನ್ನಬಹುದು.

Related posts

DHARMASTHALA BJP RALLY: ಧರ್ಮಸ್ಥಳಲ್ಲಿ ಶುರುವಾಗಿದೆ ಧರ್ಮ ರಾಜಕಾರಣ..

Publicspot

ED RAID: ಕಾಂಗ್ರೆಸ್​ ಶಾಸಕನ ಮನೆ ಮೇಲೆ ED ರೇಡ್​.. ಸಿಕ್ಕಿಂನಲ್ಲಿ ಲಾಕ್​ ಆದ ವೀರೇಂದ್ರ ಪಪ್ಪಿ..

Publicspot

IT Raid on PES Colleges; ಆದಾಯ ತೆರಿಗೆ ಇಲಾಖೆಯಿಂದ ಲೆಕ್ಕಪತ್ರ ಶೋಧ..

Publicspot

You Tuber Sameer house Raid: ಸಮೀರ್​ ಬಗ್ಗೆ ಮಟ್ಟಣ್ಣವರ್​ ಕೊಟ್ಟ ಸ್ಪಷ್ಟನೆ ಏನು..?

Publicspot

ಅಮಾವಾಸ್ಯೆ ದಿನ 9 ಬಲಿ ಪಡೆದ ಜವರಾಯ.. 24 ಗಂಟೆಯಲ್ಲಿ 17 ಜನರ ದುರ್ಮರಣ..

Publicspot

ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ ಆರೋಪ, ಕೇರಳದ ಚೇಟ ಬಂಧನ..

Publicspot